Viral Video: ಆನೆ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡುವುದನ್ನು ನೋಡಿದ್ದೀರಾ? ಮಿಸ್​ ಮಾಡ್ಬೇಡಿ ನೋಡಿ

Elephant Proposing to Lover: ಮುದ್ದಾದ ಬೆಕ್ಕು (Cat) ಮತ್ತು ನಾಯಿಯ ವಿಡಿಯೋಗಳಿಂದ (Dod) ಸಿಂಹಗಳು (Lion) ಮತ್ತು ಆನೆಗಳವರೆಗೆ (Elephant), ನಾವು ಯೂಟ್ಯೂಬ್  (Youtube) ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲವನ್ನೂ ನೋಡಬಹುದು. ಮತ್ತು ಇಂತಹ ವೀಡಿಯೋಗಳು ಹೆಚ್ಚಾಗಿ ವೈರಲ್ (Viral) ಆಗುವುದನ್ನು ಹೊಸ ಸಂಗತಿ ಏನಲ್ಲ. ಅಂಥದ್ದೊಂದು ಅದ್ಭುತ ವೀಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

ಫೋಟೋ: ಇನ್​ಸ್ಟಾಗ್ರಾಂ

ಫೋಟೋ: ಇನ್​ಸ್ಟಾಗ್ರಾಂ

 • Share this:
  ಇಂಟರ್ನೆಟ್ (Internet) ನಲ್ಲಿ ಕೇವಲ ಉಪಯುಕ್ತ ಮಾಹಿತಿ ಸಿಗುತ್ತದೆ ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ತಪ್ಪು ಅನ್ನೋದು ಈಗಾಗಲೇ ಬಹಳ ಸಲ ಸಾಬೀತಾಗಿದೆ. ಇಂದು ಇಂಟರ್ನೆಟ್ ಅನ್ನೋದು ಎಲ್ಲಾ ರೀತಿಯ ಮನಸ್ಸನ್ನು ಮುದಗೊಳಿಸುವ ಪೋಟೋ (Photo) ಮತ್ತು ವಿಡಿಯೋಗಳ (Video) ಭಂಡಾರವಾಗಿದೆ. ಮುದ್ದಾದ ಬೆಕ್ಕು (Cat) ಮತ್ತು ನಾಯಿಯ ವಿಡಿಯೋಗಳಿಂದ (Dod) ಸಿಂಹಗಳು (Lion) ಮತ್ತು ಆನೆಗಳವರೆಗೆ (Elephant), ನಾವು ಯೂಟ್ಯೂಬ್  (Youtube) ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲವನ್ನೂ ನೋಡಬಹುದು. ಮತ್ತು ಇಂತಹ ವೀಡಿಯೋಗಳು ಹೆಚ್ಚಾಗಿ ವೈರಲ್ (Viral) ಆಗುವುದನ್ನು ಹೊಸ ಸಂಗತಿ ಏನಲ್ಲ. ಅಂಥದ್ದೊಂದು ಅದ್ಭುತ ವೀಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

  ಈ ವಿಡಿಯೋದಲ್ಲಿ ಜೋಡಿ ಆನೆಗಳಿವೆ. ಅವುಗಳಲ್ಲಿ ಒಂದು ಆನೆ ತನ್ನ ಸೊಂಡಿಲಿನಲ್ಲಿ ಹೂವಿನ ಗೊಂಚಲನ್ನು ಹಿಡಿದುಕೊಂಡಿದ್ದು, ಆ ಹೂವಿನ ಮೂಲಕ ಹೆಣ್ಣು ಆನೆಗೆ ಪ್ರಪೋಸ್ ಮಾಡಲು ಹೊರಟಿದೆ. ಈ ಕ್ಲಿಪ್ ಅತ್ಯಂತ ಆಕರ್ಷಕವಾಗಿದೆ ಮತ್ತು ಇಂಟರ್ನೆಟ್ ನಲ್ಲಿ ಜನರು ಕೂಡಾ ಅದಕ್ಕೆ ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಪ್ರಾಣಿಗಳ ಬುದ್ಧಿವಂತಿಕೆ ಮತ್ತು ಅವುಗಳ ಕೌಶಲ್ಯಗಳನ್ನು ತೋರಿಸುವ ವೀಡಿಯೊಗಳ ಪಟ್ಟಿಯಲ್ಲಿ ಈ ವಿಡಿಯೋ ಹೆಚ್ಚು ಜನಪ್ರಿಯತೆ ಪಡೆದಿದೆ.

  ಈ ವಿಡಿಯೋವನ್ನು ನೋಡುತ್ತಿರುವ ಜನರು ಮುದ್ದಾದ ಆನೆಗಳ ಜೋಡಿಯ ಪ್ರೀತಿ ಮತ್ತು ಮುಗ್ಧತೆಯನ್ನು ಪ್ರಶಂಸೆ ಮಾಡುತ್ತಿದ್ದಾರೆ. ಪ್ರೀತಿ ತುಂಬಿದ ಪ್ರಾಣಿಗಳ ಈ ವಿಡಿಯೋವನ್ನು ಎಲ್ಲರೂ ಒಮ್ಮೆಯಾದರೂ ನೋಡಬೇಕು ಅನ್ನೋದು ಅಲ್ಲರ ಅಭಿಪ್ರಾಯವಾಗಿದೆ. ಆನೆಯು ತನ್ನ ಸೊಂಡಿಲಿನಲ್ಲಿ ಗುಲಾಬಿ ಹೂಗಳ ಕಟ್ಟು ಹಿಡಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ ಆನೆಯು ತನ್ನ ಪ್ರೇಮಿಗೆ ಪ್ರಪೋಸ್ ಮಾಡಲು ಹೊರಟಿರುವಂತೆ ತೋರುತ್ತಿದೆ. ಈ ಪ್ರಾಣಿಯು ಮನುಷ್ಯನಂತೆ ರೋಮ್ಯಾಂಟಿಕ್ ಅಥವಾ ಮನುಷ್ಯನಿಗಿಂತ ಹೆಚ್ಚು ರೊಮ್ಯಾಂಟಿಕ್ ಆಗಿ ಕಾಣಿಸುತ್ತದೆ. ನಂತರ ಆನೆಯು ತನ್ನ ಪ್ರೇಮಿಯ ಬಳಿ ಹೋಗಿ ತನ್ನ ಪ್ರೀತಿಯನ್ನು ತೋರಿಸುತ್ತದೆ ಎಂದು ಇಂಟರ್ನೆಟ್ ಪ್ರೇಕ್ಷಕರು ಈ ವೀಡಿಯೊವನ್ನು ಗ್ರಹಿಸಿದ್ದಾರೆ.

  ವಿಶೇಷ ಅಂದ್ರೆ, ಹೆಣ್ಣು ಆನೆಯು ಗಂಡು ಆನೆಯ ಈ ಪ್ರೇಮ ಪ್ರಸ್ತಾಪವನ್ನು ಬಹಳ ಪ್ರೀತಿಯಿಂದ ಸ್ವೀಕರಿಸುತ್ತದೆ. ಹಾಗಾಗಿ, ಈ ವಿಡಿಯೋ ನೋಡಿದವರು ಪ್ರಾಣಿಗಳಿಗೆ ಇಷ್ಟು ಬುದ್ಧಿವಂತಿಕೆ ಇದೆ ಎಂಬ ಅಂಶದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಲಿಫೆಂಟ್ಸ್ ಆಫ್ ದ ವರ್ಲ್ಡ್ ಎನ್ನುವ ಪುಟವೊಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಕ್ಲಿಪ್‌ಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳು ಬಂದಿವೆ.

  ಇದನ್ನು ಓದಿ:  Dolphin Lover: ಹೆಣ್ಣು ಡಾಲ್ಫಿನ್ ಜೊತೆಗೆ ಸಂಬಂಧದಲ್ಲಿದ್ದ 63 ವರ್ಷದ ವ್ಯಕ್ತಿ! ಮುಂದೇನಾಯ್ತು ಗೊತ್ತಾ?


  ಈ ಪೋಸ್ಟ್ ಗೆ ಕೆಲವು ಎಮೋಜಿಗಳೊಂದಿಗೆ ‘ಪ್ರಪೋಸಲ್ ಅಕ್ಸೆಪ್ಟೆಡ್’ ಎಂದು ಶೀರ್ಷಿಕೆ ಬರೆಯಲಾಗಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ಬಳಕೆದಾರರೊಬ್ಬರು, "ಓಹ್ ಮೈ ಗುಡ್‌ನೆಸ್", ಈ ಆನೆಗಳ ಜೋಡಿ ತುಂಬಾ ಸುಂದರವಾಗಿದೆ. ಇವು ನನ್ನ ನೆಚ್ಚಿನ ಪ್ರಾಣಿಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಇದನ್ನು ಓದಿ: Dating: ವಿವಾಹಿತ ಪುರುಷನೊಂದಿಗೆ ಡೇಟಿಂಗ್ ಮಾಡ್ತಾ ಇದ್ದೀರಾ? ಹಾಗಿದ್ರೆ, ನೀವು ಮಾಡ್ತಿರೋದು ಸರಿನಾ?

  ಇನ್ನೊಬ್ಬ ಬಳಕೆದಾರರು "ವಾಹ್!!! ಇದು ತುಂಬಾ ರೋಮ್ಯಾಂಟಿಕ್ ಆಗಿದೆ ಎಂದಿದ್ದಾರೆ. ಹೆಚ್ಚಿನ ಜನರು ವೀಡಿಯೊದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದರೂ, ಕೆಲವರು ಈ ಪ್ರಾಣಿಗಳನ್ನು ಬಲವಂತವಾಗಿ ಹೀಗೆ ಮಾಡಲು ಪ್ರೇರೇಪಿಸಲಾಗಿಲ್ಲ ತಾನೇ? ಎನ್ನುವ ಮೂಲಕ ಇದು ಪ್ಲಾನ್ಡ್ ಫೋಟೋ ಶೂಟ್ ಇರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಲ್ಲದೆ, ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.
  Published by:Harshith AS
  First published: