ಪ್ರಾಣಿಗಳೆಂದರೆ (Animals) ಯಾರಿಗೆ ಇಷ್ಟ ಇಲ್ಲ ಹೇಳಿ. ಈಗ ಎಲ್ಲರ ಮನೆಯಲ್ಲೂ ಯಾವುದಾದರೊಂದು ಪ್ರಾಣಿ ಇದ್ದೇ ಇರುತ್ತದೆ. ಇನ್ನು ವಿಶೇಷವಾಗಿ ಈಗಿನ ಪ್ರಾಣಿಗಳೆಲ್ಲವೂ ಬಹುತೇಕ ಮಾನವರಂತೆಯೇ ವರ್ತಿಸುತ್ತದೆ. ನಾವೆಲ್ಲಾ ಸಿನಿಮಾಗಳಲ್ಲಿ ಆನೆಗಳು (Elephant) ಕ್ರಿಕೆಟ್ ಆಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಇಂತಹದೇ ನೈಜ ಘಟನೆ ಮಂಗಳೂರಿನಲ್ಲಿ ನಡೆದಿದೆ. ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿದುಕೊಂಡು ಒಂದಿಷ್ಟು ಹುಡುಗರ ಜೊತೆಗೆ ಕ್ರಿಕೆಟ್ (Cricket) ಆಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆನೆಯ ವಿಡಿಯೋ ವೈರಲ್ ಆಗಿದೆ. ಈ ಮುದ್ದಾದ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಬಹಳಷ್ಟು ವೈರಲ್ ಆಗಿದ್ದು. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಇರುವಂತಹ ಭಾಂದವ್ಯವನ್ನು ತೋರಿಸುತ್ತದೆ.
ಸಾಮಾನ್ಯವಾಗಿ ಸಂಜೆಯ ಹೊತ್ತಿಗೆ ಮನೆಯ ಪಕ್ಕದ ಗ್ರೌಂಡ್ನಲ್ಲಿ ಯುವಕರು ಸೇರಿ ಕ್ರಿಕೆಟ್, ಕಬಡ್ಡಿ ಆಟವಾಡುತ್ತಿರುತ್ತಾರೆ. ಆದರೆ ಇಲ್ಲೊಂದಿಷ್ಟು ಜನರು ದೇವಾಲಯದಲ್ಲಿರುವ ಆನೆಯ ಜೊತೆಗೆ ಕ್ರಿಕೆಟ್ ಆಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಮಂಗಳೂರಿನ ಪ್ರಸಿದ್ಧ ದೇವಾಲಯ
ಮಂಗಳೂರಿನಲ್ಲಿ ಜನಪ್ರಿಯತೆ ಪಡೆದ ಹಲವಾರು ದೇವಾಲಯಗಳಿವೆ. ಅದರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವೂ ಒಂದು. ಈ ದೇವಾಸ್ಥಾನದಲ್ಲಿ ಪ್ರತಿನಿತ್ಯವೂ ಒಂದು ಆನೆ ಇದ್ದೇ ಇರುತ್ತದೆ. ಕಟೀಲು ದೇವಾಲಯಕ್ಕೆ ಹೋದವರು ಈ ಆನೆಗೆ ಬಾಳೆಹಣ್ಣು, ತೆಂಗಿನಕಾಯಿ ನೀಡಿ ಆಶೀರ್ವಾದ ಪಡೆದೇ ಬರುತ್ತಾರೆ. ಆದರೆ ಇದೀಗ ಸ್ವಲ್ಪ ಜನ ಸೇರಿಕೊಂಡು ಈ ಆನೆಯ ಜೊತೆ ಕ್ರಿಕೆಟ್ ಆಡಿದ್ದಾರೆ.
ಇದನ್ನೂ ಓದಿ: ಇದು ಜಗತ್ತಿನ ದುಬಾರಿ ನೈಲ್ ಪಾಲಿಶ್ ಅಂತೆ, ಇದ್ರ ಬೆಲೆ ಬರೋಬ್ಬರಿ 1 ಕೋಟಿ 90 ಲಕ್ಷ!
ವಿಡಿಯೋದಲ್ಲಿ ಏನಿದೆ?
ಹೌದು, ಇಲ್ಲಿ ಕಟೀಲು ದೇವಾಲಯದ ಆನೆಯ ಜೊತೆಗೆ ಕೆಲ ಜನರು ಕ್ರಿಕೆಟ್ ಆಡಿದ್ದು, ಇಲ್ಲಿ ಆನೆಯು ತನ್ನ ಸೊಂಡಿಲಿನಲ್ಲಿ ಬ್ಯಾಟ್ ಹಿಡಿದುಕೊಂಡು ಹುಡುಗರು ಎಸೆಯುತ್ತಿದ್ದ ಚೆಂಡಿಗೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿದೆ. ಈ ದೃಶ್ಯ ಮೊಬೈಲ್ನ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ನಾವು ಈ ಆನೆಯ ಮುಗ್ಧತೆಯನ್ನು ಕಾಣಬಹುದು. ಇನ್ನು ಈ ವಿಡಿಯೋದಲ್ಲಿ ಕೆಲವೊಂದಿಷ್ಟು ಜನರು ಕ್ರಿಕೆಟ್ ಆಡಿದ್ರೆ, ಇನ್ನೂ ಕೆಲವರು ಆನೆಯನ್ನು ನೋಡಿ ವಿಡಿಯೋ ಮಾಡಲು ಮಾಡಿದ್ದಾರೆ. ಈ ವಿಡಿಯೋ ಕೆಲವೇ ಸೆಕೆಂಡುಗಳ ವಿಡಿಯೋ ಆದ್ರೂ ನೋಡುಗರ ಮುಖದಲ್ಲಿ ಒಮ್ಮೆ ನಗು ಬರಿಸುತ್ತೆ.
ಇನ್ಸ್ಟಾಗ್ರಾಮ್ನಲ್ಲಿ ಫುಲ್ ವೈರಲ್
ಈ ಆನೆಯ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್ನಲ್ಲಿ ಫುಲ್ ವೈರಲ್ ಆಗಿದ್ದು ಇನ್ಸ್ಟಾಗ್ರಾಮ್ನಲ್ಲಿ 22.4 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಈ ವಿಡಿಯೋಗೆ 2,207 ಜನರು ಲೈಕ್ ಮಾಡಿದ್ದಾರೆ. ಇನ್ನು ಈ ಆನೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ಮಾಡಿದೆ ಎಂದೂ ಹೇಳ್ಬಹುದು.
ಈ ಆನೆಗೆ ಟೀ ಅಂದ್ರೆ ಪಂಚಪ್ರಾಣ
ಚಹಾವನ್ನು ಇಷ್ಟಪಡುವ ಈ ಗಜರಾಜ ಮಧ್ಯಪ್ರದೇಶದ ರತ್ಲಾಮ್ನಲ್ಲಿದೆ. ಈ ಆನೆ ಬೆಳಗ್ಗೆಯೇ ಟೀ ಅಂಗಡಿಗೆ ಹೋಗಿ ಚಹಾ ಕುಡಿಯುವುದನ್ನು ರೂಢಿಸಿಕೊಂಡಿದೆ. ಈ ಗಜ ಮಾರುಕಟ್ಟೆಯಲ್ಲಿರುವ ಟೀ ಅಂಗಡಿಯವನನ್ನು ಬೆದರಿಸಿ ಟೀ ಕುಡಿಯುತ್ತದೆ. ನೀವು ಅನೇಕ ಚಹಾ ಪ್ರಿಯರನ್ನು ನೋಡುತ್ತೀರಿ. ಆದರೆ ಹಾಥಿ ದಾದಾ ಎಂದು ಕರೆಯಲ್ಪಡುವ ಈ ಆನೆಗೆ ಟೀ ಅಂದರೆ ಪಂಚಪ್ರಾಣ. ಪ್ರತಿದಿನ ಒಂದೆರಡು ಗುಟುಕು ಟೀ ಬೀಳಲಿಲ್ಲ ಎಂದರೆ ಆ ಆನೆಗೆ ಸಮಾಧಾನವೇ ಇರಲ್ಲ.
View this post on Instagram
ಆನೆಯೊಂದು ಚಹಾವನ್ನು ಹುಡುಕಿಕೊಂಡು ಹೋಗುವುದೆಂದರೆ ಅದು ವಿಚಿತ್ರ ಎನಿಸಬಹುದು. ಈ ಆನೆ ಟೀ ಚಟಕ್ಕೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯರು. ಇತರ ಗ್ರಾಹಕರಂತೆ ಈ ಆನೆ ಕೂಡ ಪ್ರತಿದಿನ ಟೀ ಅಂಗಡಿ ಮುಂದೆ ಕಾಣಿಸಿಕೊಂಡು ಅವರನ್ನು ರಂಜಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ