News18 India World Cup 2019

ಮೃತ ಮರಿಯಾನೆಯನ್ನು ಹೊತ್ತೊಯ್ಯುತ್ತಿರುವ ತಾಯಿ ಆನೆ; ವಿಡಿಯೋ ವೈರಲ್

ತಾಯಿ ಆನೆಯೊಂದು ತನ್ನ ಮೃತ ಮರಿಯಾನೆಯನ್ನು ಕೊಂಡೊಯ್ಯುತ್ತಿರುವ ದೃಶ್ಯ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ. ಅರಣ್ಯ​ ಅಧಿಕಾರಿ ಪ್ರವೀಣ್​ ಕಾಸ್ವಾಸ್​ ಎಂಬವರು ಈ ದೃಶ್ಯವನ್ನು ಸೆರೆಹಿಡಿದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

news18
Updated:June 11, 2019, 8:50 PM IST
ಮೃತ ಮರಿಯಾನೆಯನ್ನು ಹೊತ್ತೊಯ್ಯುತ್ತಿರುವ ತಾಯಿ ಆನೆ; ವಿಡಿಯೋ ವೈರಲ್
ಆನೆ
news18
Updated: June 11, 2019, 8:50 PM IST
ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು. ಮಗುವನ್ನು 9 ತಿಂಗಳು ಹೊತ್ತು ಪೋಷಿಸಿ ಅವರ ಜೀವನಕ್ಕಾಗಿ ಸದಾ ದುಡಿಯುವ ತಾಯಿಯ ಪ್ರೀತಿ ಅವಿಸ್ಮರಣೀಯ. ಇದು ಮನುಷ್ಯನಾದರೂ ಪ್ರಾಣಿಗಳಲ್ಲಾದರೂ ಎಲ್ಲರಲ್ಲೂ ಒಂದೇ ಎನ್ನುವುದಕ್ಕೆ ಆನೆಯೊಂದು ಸತ್ತ ಮರಿಯನ್ನು ಹೊತ್ತೊಯ್ಯುತ್ತಿರುವ ಮನುಕುಲದ ದೃಶ್ಯ ವೈರಲ್​ ಆಗಿದೆ.

ತಾಯಿ ಆನೆಯೊಂದು ತನ್ನ ಮೃತ ಮರಿಯಾನೆಯನ್ನು ಕೊಂಡೊಯ್ಯುತ್ತಿರುವ ದೃಶ್ಯ ಟ್ವಿಟ್ಟರ್​ನಲ್ಲಿ ವೈರಲ್​ ಆಗಿದೆ. ಅರಣ್ಯ​ ಅಧಿಕಾರಿ ಪ್ರವೀಣ್​ ಕಾಸ್ವಾಸ್​ ಎಂಬವರು ಈ ದೃಶ್ಯವನ್ನು ಸೆರೆಹಿಡಿದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Cyclone Vayu: ದೇಶಾದ್ಯಂತ ‘ವಾಯು’ ಚಂಡಮಾರುತ: ಎರಡು ದಿನಗಳಲ್ಲಿ ಭಾರಿ ಮಳೆ ನಿರೀಕ್ಷೆ


Loading...





ಕಾಡಿನ ಮಧ್ಯ ಹಾದುಹೋಗುವ ರಸ್ತೆಯಲ್ಲಿ ಆನೆಯೊಂದು ತನ್ನ ಮೃತ ಮರಿಯಾನೆಯನ್ನು ಕಚ್ಚಿಕೊಂಡು ಹೋಗುತ್ತಿತ್ತು. ಈ ವೇಳೆ ಆನೆಗಳ ಹಿಂಡು ಅದರ ಹಿಂದಿನಿಂದ ಹಿಂಬಾಲಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ಮನುಕುಲುಕುವ ದೃಶ್ಯಕ್ಕೆ ಅನೇಕರು ಸಂತಾಪ ಸೂಚಿಸಿದ್ದು, ತಾಯಿ ಆನೆ ಮತ್ತು ಅದರ ಬಳಗದ ಮೂಕ ವೇದನೆ ಜನರನ್ನು ಮನಕಲುಕುವಂತೆ ಮಾಡಿದೆ.
First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...