ಆಸ್ಪತ್ರೆ ( Hospital )ಎಂದರೆ ಕೆಲವರಿಗೆ ಭಯ. ಅಲ್ಲಿ ಇರುವ ರೋಗಿಗಳನ್ನು ನೋಡಿ ಕೆಲವರು ಭಯ ಪಡುತ್ತಾರೆ. ಅದರಲ್ಲೂ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಹೋಗುವುದೆಂದರೆ ಇನ್ನೂ ಭಯವಾಗುತ್ತದೆ. ಮನುಷ್ಯರಾದವರು ಆಸ್ಪತ್ರೆಗೆ ಹೋಗುವುದು ಸರ್ವೇ ಸಾಮಾನ್ಯ ಆದ್ರೆ ಪ್ರಾಣಿಗಳು ಅದರಲ್ಲೂ, ಕಾಡಿನ ಪ್ರಾಣಿಗಳು ಆಸ್ಪತ್ರೆಗೆ ಹೋಗುತ್ತವೆ ಎಂದರೆ ನಿಮಗೆ ನಂಬಲು ಸಾಧ್ಯನಾ ಹೇಳಿ? ಅಸಾಧ್ಯವಾದ್ರೂ ನೀವು ನಂಬಲೇ ಬೇಕು. ಯಾಕಂದ್ರೆ ಇಲ್ಲೊಂದು ಆನೆ ಆಸ್ಪತ್ರೆಗೆ ಹೋಗಿ ಎಕ್ಸ್ರೇ (X-ray ) ತೆಗೆಸಿಕೊಂಡು ಬಂದಿದೆ. ಆದರೆ ಈ ವಿಡಿಯೋ ನೋಡಿದಾಗ ಮನುಷ್ಯರಿಗೆ ಕೋಪ ಅಥವಾ ತಾಳ್ಮೆ ಕೆಡುವುದು ಬೇಗನೆ ಆಗುತ್ತದೆ. ಆದ್ರೆ ಈ ವಿಡಿಯೋದಲ್ಲಿ ಆನೆ (Elephant) ಮಾತ್ರ ತೋರಿದ ತಾಳ್ಮೆ ನಿಜಕ್ಕೂ ಗ್ರೇಟ್. ಇದೀಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ( Social media ) ಸಕತ್ ಸದ್ದು ಮಾಡುತ್ತಿದೆ.
ವಿಡಿಯೋದಲ್ಲಿ ಇರುವುದೇನು ?
ವೈರಲ್ ಆಗಿರುವ ವಿಡಿಯೋದಲ್ಲಿ ಇರುವಂತೆ ಆನೆಯೊಂದು ಆಸ್ಪತ್ರೆಯ ಪ್ರಯೋಗಾಲಯಕ್ಕೆ ಸಮಾಧಾನದಿಂದ, ನಮ್ರತೆಯಿಂದ ಹೋಗುತ್ತದೆ. ಯಂತ್ರಗಳನ್ನು, ಮನುಷ್ಯರನ್ನು ನೋಡಿ ಈ ಆನೆ ಭಯ ಪಡುವುದಿಲ್ಲ, ಕಂಗಾಲಾಗುವುದಿಲ್ಲ. ಅಲ್ಲಿ ಹೇಗೆ ಹೇಳುತ್ತಾರೋ ಹಾಗೆ ಕೇಳುತ್ತದೆ. ಎಕ್ಸ್ರೇ ತೆಗೆಸಿಕೊಳ್ಳುವಾಗ ಅದು ನೀಡುವ ಸಹಕಾರ ಮಾತ್ರ ಮೆಚ್ಚುವಂತಹದು.
I am sure you have never seen such a cooperative patient coming in for an X-Ray pic.twitter.com/UNmhSIrXOr
— Kaveri 🇮🇳 (@ikaveri) December 7, 2022
ಇದನ್ನೂ ಓದಿ: Floating School: ಈ ದೇಶದಲ್ಲಿದೆ ತೇಲುವ ಶಾಲೆ! ಮಕ್ಕಳು ಶಾಲೆಗೆ ಹೋಗದಿದ್ದರೆ ಶಾಲೆಯೇ ಅವರ ಬಳಿ ಬುರತ್ತೆ
ಮಾನವ ರೋಗಿಗಳೂ ಸಹ ಈ ರೀತಿಯ ಸೌಮ್ಯ ಸ್ವಾಭಾವಿಲ್ಲ. ಆನೆಯ ಸೌಮ್ಯ ವರ್ತನೆಯನ್ನು ಕಂಡು ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಈ ಆನೆಗೆ ಇರುವಷ್ಟು ಸೌಮ್ಯ ಸ್ವಭಾವ ನಮ್ಮಲಿ ಇಲ್ಲ. ನಾವೆಲ್ಲ ಬುದ್ದಿವಂತ ಜೀವಿಗಳು ಆದರೆ ನಾವು ಈ ಆನೆಯ ವಿಶ್ವಾಸ ಮತ್ತು ವಾತ್ಸಲ್ಯಕ್ಕೆ ಅರ್ಹರಾಗುವಷ್ಟು ಬುದ್ದಿವಂತರಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಒಹ್ ..ನನ್ನ ಯಾವುದೇ ರೋಗಿಗಳು ಅಷ್ಟು ಸಹಕಾರಿಯಾಗುವುದಿಲ್ಲ.'' ಮೂರನೆಯವರು ''ಸುಂದರರಾಗಿದ್ದಾರೆ. ಎಂತಹ ಸುಂದರ ಜೀವಿಗಳು. ಅವರಿಗೆ ಹಾನಿ ಮಾಡುವ ಬಗ್ಗೆ ನಾವು ಹೇಗೆ ಯೋಚಿಸಬಹುದು? ಪ್ರಾಣಿಗಳಿಗೆ ಹಾನಿ ಮಾಡಿದಾಗ ನಾವು ಮನುಷ್ಯರು ದುಷ್ಟ ಜಾತಿಯಾಗಿದ್ದೇವೆ ಎಂದಿದ್ದಾರೆ ಇನ್ನೊಬ್ಬ ನೆಟ್ಟಿಗರು. ಅಂತಹ ಸೌಮ್ಯ ಆನೆಗೆ ನಾವೆಲ್ಲರೂ ವಿಶ್ವಾಸ ಮತ್ತು ವಾತ್ಸಲ್ಯಕ್ಕೆ ಅರ್ಹರಾಗಬಹುದು ಎಂದು ನಾನು ಭಾವಿಸುತ್ತೇನೆ.'' ''ಇನ್ಕ್ರೆಡಿಬಲ್. ಅವಳು ತುಂಬಾ ಸಹಕಾರಿ,'' ಎಂದು ಮತ್ತೊಬ್ಬರು ಬರೆದಿದ್ದಾರೆ.
ಇಲ್ಲಿ ತನಕ ಈ ವಿಡಿಯೋ ವನ್ನು ಸುಮಾರು 8,000 ಜನರು ವೀಕ್ಷಣೆ ಮಾಡಿದ್ದಾರೆ. ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಈ ವಿಡಿಯೋವನ್ನು ಕಾವೇರಿ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, "ಇಂತಹ ಸಹಕಾರಿ ರೋಗಿಯು ಎಕ್ಸ್-ರೇಗಾಗಿ ಬರುವುದನ್ನು ನೀವು ನೋಡಿಲ್ಲ ಎಂದು ನನಗೆ ಖಾತ್ರಿಯಿದೆ" ಎಂದು ಈ ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ.
ಇದನ್ನೂ ಓದಿ: Video Viral: ನೋವಾಗದಂತೆ ಇಂಜೆಕ್ಷನ್ ಕೊಡೋ ಡಾಕ್ಟರ್ ಇವರು, ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
ಒಟ್ಟಾರೆಯಾಗಿ ಹೇಳುವುದಾದರೆ ಈ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಮಾಡಿದ್ದು, ಆನೆಯ ಸೌಮ್ಯ, ಬುದ್ಧಿಶಕ್ತಿ, ವಿಶ್ವಾಸವನ್ನು ಹೊಗಳಿದ್ದಾರೆ. ಈ ವಿಡಿಯೋ ನೋಡಿದಾಗ ಆನೆಯ ತಾಳ್ಮೆ, ಬುದ್ದಿವಂತಿಕೆ, ನಮ್ರತೆಯ ಮುಂದೆ ಮನುಷ್ಯನ ಬುದ್ಧಿವಂತಿಕೆಯ ಏನು ಇಲ್ಲ ಎಂದು ಅನಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ