ತಾಯಿ (Mother)ಎಂತಹ ಸಂದರ್ಭಲ್ಲಾದರೂ ಅಥವಾ ಎಲ್ಲೇ ಇದ್ದರೂ ಆಕೆ ಯಾವಾಗಲೂ ತನ್ನ ಮಕ್ಕಳ ರಕ್ಷಣೆಗೆ (Protection) ಮುಂದಿರುತ್ತಾಳೆ. ಸಂಕಷ್ಟದ ಸಂದರ್ಭದಲ್ಲೂ ತನ್ನ ಬಗ್ಗೆ ಚಿಂತಿಸದೆ, ತನ್ನ ಮಕ್ಕಳನ್ನು ಕಾಪಾಡಲು ಬಯಸುತ್ತಾಳೆ. ಇದಕ್ಕಾಗಿ ಎಂತಹ ಅಪಾಯದ ವಿರುದ್ಧ ಹೋರಾಡಲು ಸಿದ್ಧವಾಗುತ್ತಾಳೆ. ಇದರಲ್ಲಿ ಮನುಷ್ಯರಿಗೆ ಪ್ರಾಣಿಗಳು ಕೂಡ ಸಮಾನರಾಗಿ ನಿಲ್ಲುತ್ತವೆ. ಇಲ್ಲೊಂದು ವಿಡಿಯೋದಲ್ಲಿ (Viral Video) ತಾಯಿಯು ತನ್ನ ಮಗುವಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ದಳಾಗಿದ್ದಾಳೆ. ನಾವು ಹೇಳುತ್ತಿರುವುದು ಯಾವುದೋ ಮನುಷ್ಯರ ಬಗ್ಗೆ ಅಲ್ಲ, ಒಂದು ಆನೆಯ ಬಗ್ಗೆ. ತನ್ನ ಮರಿಯನ್ನು ಕೊಲ್ಲಲು ಯತ್ನಿಸಿದ್ದ ಮೊಸಳೆ ವಿರುದ್ಧ ಹೋರಾಡಿ ಕಾಪಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಾಡಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆನೆಯು ತನ್ನ ಮರಿ ಅಪಾಯದಲ್ಲಿರುವುದನ್ನು ಕಂಡಿದೆ. ತಕ್ಷಣ ಕೊಳಕ್ಕಿಳಿದು ಮೊಸಳೆ ಓಡಿಹೋಗುವಂತೆ ಮಾಡಿ ಪಾಠವನ್ನು ಕಲಿಸಿತು. ವೀಡಿಯೋ ನೋಡಿದ ಜನರು- 'ಮಾ ಐಸಿ ಹೈ ಹೋತಿ ಹೈ' (ಅಮ್ಮಾ ಅಂದರೆ ಹಾಗೇನೆ ಇರ್ತಾರೆ ?) ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Fish: ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ! ಜನಸಾಮ್ಯಾನರ ಹೊಟ್ಟೆ ಸೇರಲ್ಲ ಬಿಡಿ ಈ ಫಿಶ್!
ಮಗುವನ್ನು ಹಿಡಿದಿದ್ದ ಮೊಸಳೆಗೆ ಪಾಠ ಕಲಿಸಿದ ಆನೆ
ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ತನ್ನ ಮರಿಯೊಂನೊಂದಿಗೆ ಕೆರೆಯಲ್ಲಿತ್ತು. ಇದರಲ್ಲಿ ಆನೆ ಮರಿ ಅಡ್ಡಾಡುತ್ತಾ ಮೋಜು ಮಾಡುತ್ತಿತ್ತು. ಆಗ ಆನೆಯ ಕಣ್ಣುಗಳು ತನ್ನ ಮರಿಯತ್ತ ಬರುತ್ತಿದ್ದ ಮೊಸಳೆ ಮೇಲೆ ಬಿದ್ದವು. ಆಗ ಕ್ಷಣಮಾತ್ರದಲ್ಲಿ ಕ್ರಿಯಾಶೀಲವಾದ ಆನೆಯನ್ನು ತನ್ನ ಮರಿಯನ್ನು ಬಲಿಯಾಗಿಸಿಕೊಳ್ಳಲಿದ್ದ ಮೊಸಳೆಯ ಮೇಲೆ ದಾಳಿ ಮಾಡಿ ನೀರಿನಲ್ಲಿ ಇರುವಂತೆ ಮಾಡಿದೆ. ಕೊಳದಲ್ಲಿದ್ದ ಮೊಸಳೆಯ ಮೇಲೆ ನಿರಂತರವಾಗಿ ಹಲವು ಬಾರಿ ತುಳಿದಿದೆ. ಬೃಹತ್ ಪ್ರಾಣಿಯ ಪಾದದಡಿಯಲ್ಲಿ ಸಿಲುಕಿ ಸಾಯುವ ಭಯದಿಂದ ಮೊಸಳೆಯು ಕೊಳವನ್ನು ಬಿಟ್ಟು ಓಡಿಹೋಗಿದೆ.
ಮಗುವಿಗಾಗಿ ತಾಯಿ ಅಪಾಯವನ್ನು ಲೆಕ್ಕಿಸುವುದಿಲ್ಲ
ಆನೆಯೊಂದು ಮೊಸಳೆಯೊಂದಿಗೆ ಕಾದಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. 'ಆನೆಗಳು ತಮ್ಮ ಮಕ್ಕಳನ್ನು ರಕ್ಷಿಸಲು ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ, ಇದು ಮನಸ್ಸಿಗೆ ಮುದ ನೀಡುತ್ತದೆ. ಮರಿ ಆನೆಗೆ ಕೊಳದಲ್ಲಿ ಮೊಸಳೆ ಇರುವುದು ತಿಳಿದಿರಲಿಲ್ಲ, ಹಾಗಾಗಿ ಮೋಜು-ಮಸ್ತಿಯಲ್ಲಿ ತೊಡಗಿತ್ತು. ಆದರೆ ತಾಯಿ ಮಾತ್ರ ತನ್ನ ಮಕ್ಕಳ ರಕ್ಷಣೆಗೆ ಯಾವಾಗಲೂ ಸಿದ್ಧಳಾಗಿರುತ್ತಾಳೆ. ತಾಯಿಯ ಕಣ್ಣುಗಳಿಂದ ಯಾವ ಅಪಾಯವೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಡಿಯೋ ನೋಡಿರುವ ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ 'ತಾಯಿ ಯಾವಾಗಲೂ ಹೀಗೆಯೇ' ಎಂದು ಬರೆದಿದ್ದಾರೆ.
The extent to which elephants can go in protecting their calves is mind boggling. Here is a small incidence. The Crocodile had to surrender 👌 pic.twitter.com/ntbmBtZm9F
— Susanta Nanda (@susantananda3) April 14, 2023
ಪೂರ್ವ ರಾಜಸ್ಥಾನದ ಕರೌಲಿಯಲ್ಲಿ ಮೊಸಳೆಗಳ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಚಂಬಲ್ ನದಿಯಲ್ಲಿ ಮಹಿಳೆಯೊಬ್ಬಳು ತನ್ನ ಪತ್ನಿಯನ್ನು ರಕ್ಷಿಸಲು ತೋರಿದ ಶೌರ್ಯ ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆ ಈ ಸಾಹಸ ಪತಿ-ಪತ್ನಿಯರ ನಡುವಿನ ಸಂಬಂಧ ಏಳು ಜನ್ಮಗಳದ್ದ ಎಂಬುದಕ್ಕೆ ಉದಾಹರಣೆಯಾಗಿದೆ.
ಇದನ್ನೂ ಓದಿ: Elephant Death: 1 ತಿಂಗಳ ಅವಧಿಯಲ್ಲಿ 6 ಆನೆಗಳು ಮೃತ- ಸಾವಿನ ಸುತ್ತ ಅನುಮಾನದ ಹುತ್ತ
26ರ ಹರೆಯದ ದನಗಾಹಿ ಬನ್ನೆ ಸಿಂಗ್ ಮೀನಾ ಎಂಬುವವರ ಕಾಲನ್ನು ಮೊಸಳೆ ಹಿಡಿದಿದೆ. ಅಲ್ಲದೆ ಪಾದವನ್ನು ಬಾಯಿಯಲ್ಲಿ ಹಿಡಿದುಕೊಂಡಿದ್ದ ಮೊಸಳೆ ನೀರಿನೊಳಕ್ಕೆ ಎಳೆದುಕೊಂಡು ಹೋಗುತ್ತಿತ್ತು. ಈ ಸಂದರ್ಭದಲ್ಲಿ ಬನ್ನೆಸಿಂಗ್ ತಾನೂ ಜೀವಂತವಾಗಿ ಉಳಿಯುವ ಭರವಸೆಯನ್ನು ಕಳೆದುಕೊಂಡಿದ್ದರು. ಭಯದಲ್ಲಿ ಜೋರಾಗಿ ಕಿರುಚಲು ಪ್ರಾರಂಭಿದಾಗ ಸ್ವಲ್ಪ ದೂರದಲ್ಲಿ ನಿಂತಿದ್ದ ಪತ್ನಿ ನೆರವಿಗೆ ದಾವಿಸಿದ್ದಾರೆ.
ಒಂದು ಕೈಯಿಂದ ನನ್ನ ಕೈ ಹಿಡಿದುಕೊಂಡು, ಇನ್ನೊಂದು ಕೈಯಿಂದ ಮೊಸಳೆಯ ಕಣ್ಣಿಗೆ ಕೋಲಿನಿಂದ ಹೊಡೆಯಲು ಪ್ರಾರಂಭಿಸಿದಳು. ಸುಮಾರು 5 ನಿಮಿಷಗಳ ಕಾಲ ನಡೆದ ಈ ಕದನದಲ್ಲಿ ಪತ್ನಿ ಪ್ರಾಣ ರಕ್ಷಣೆಗೆ ಯಾವುದೇ ಅಂಜಿಕೆ ಇಲ್ಲದೆ ನನ್ನ ಪ್ರಾಣ ಉಳಿಸಿದಳು ಈ ಸಂಪೂರ್ಣ ವಿಷಯವನ್ನು ಬನ್ನೆ ಸಿಂಗ್ ನ್ಯೂಸ್ 18 ಗೆ ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಮಂಡ್ರಾಯಲ್ ಪ್ರದೇಶದಲ್ಲಿ ಹರಿಯುವ ಚಂಬಲ್ ನದಿಯಲ್ಲಿ ಮೊಸಳೆಗಳು ಹತ್ತಾರು ಜನರನ್ನು ನುಂಗಿ ಹಾಕಿವೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ