ಜಗತ್ತಿನಲ್ಲಿ ಪ್ರತಿನಿತ್ಯವೂ ನೂರಾರು ಅಚ್ಚರಿಗಳು ಸೃಷ್ಟಿಯಾಗುತ್ತಲೇ ಇರುತ್ತೆ ಅಂತಹ ಒಂದು ಸೃಷ್ಟಿಯಲ್ಲಿ ಈ ಮಗುವೂ (Baby) ಒಂದು ಏಕೆಂದರೆ ಈ ಮಗು ಸಾಮಾನ್ಯ ಮಗುವಿನ ರೀತಿ ಕಾಣುವುದಿಲ್ಲ. ದೇವ ಗಣೇಶನ (Lord Ganesha) ರೀತಿ ಉದ್ದನೇ ಸೊಂಡಿಲಿನಂತ ಮೂಗನ್ನು ಹೊಂದಿದೆ. ಹಾಗಾದರೆ ನಿಜವಾಗಲೂ ಈ ಮಗು ಜನಿಸಿದ್ಯಾ? ಅಥವಾ ಯಾರಾದರೂ ಈ ಚಿತ್ರವನ್ನ (Art) ಸೃಷ್ಟಿ ಮಾಡಿದ್ದಾರಾ ಎಂಬ ಅನುಮಾನ ಇದ್ದವರು ಇದನ್ನು ಪೂರ್ತಿಯಾಗಿ ಓದಲೇ ಬೇಕು. ಈ ಚಿತ್ರ ಮೊದಲು ಸಂಚಲನ ಸೃಷ್ಟಿಸಿದ್ದು 2021 ಜೂನ್ ತಿಂಗಳಲ್ಲಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡಿದ್ದ ಈ ಚಿತ್ರ ಈಗ ಮತ್ತೆ ಸಂಚಲನ ಸೇಷ್ಟಿಸಿದೆ.
ಆನೆಯಂತೆ ಸೊಂಡಿಲು ಹೊಂದಿರುವ ಮಗುವಿನ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾರೂ ಸಹ ಒಂದೇ ಬಾರಿ ಈ ಚಿತ್ರವನ್ನು ನೋಡಿ ಇದು ನಿಜವಾದ ಮಗು ಎಂದು ನಂಬುವುದಿಲ್ಲ ಎಲ್ಲರಿಗೂ ಅನುಮಾನ ಬಂದೇ ಬರುತ್ತದೆ. ಆದ್ದರಿಂದ ಈ ಚಿತ್ರ ನಿಜವಾ? ಅಥವಾ ಸುಳ್ಳಾ? ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.
ನಾರ್ವೆಯ ದಂಪತಿಗಳು ಇತ್ತೀಚೆಗೆ ಅರ್ಧ-ಮಾನವ/ಅರ್ಧ-ಆನೆ ಮುಖ ಇರುವ ಈ ಮಗುವಿಗೆ ಜನ್ಮ ನೀಡಿದರು ಎಂಬ ಸುದ್ದಿ ಹರಿದಾಡುತ್ತಿತ್ತು ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದರ ಕುರಿತು ಅನುಮಾನ ಇಟ್ಟುಕೊಂಡು ಅದನ್ನು ಪರಿಶೀಲಿಸಿದಾಗ ಬಹುಷಃ ಇದು ಫೇಕ್ ಇರಬಹುದು ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: White Bat: ಅಚ್ಚರಿ ಎನಿಸುವ ಅಪರೂಪದ ಬಿಳಿ ಬಾವಲಿಗಳ ಫೋಟೋಸ್ ಇಲ್ಲಿದೆ ನೋಡಿ
ಜೂನ್ 12, 2021 ರಂದು ಪ್ರಕಟವಾದ ಫೇಸ್‌ಬುಕ್ ಪೋಸ್ಟ್ ನಲ್ಲಿ ಈ ಮಗುವಿನ ಕುರಿತು ಹಲವಾರು ಕಮೆಂಟ್ಗಳು ಬಂದಿದ್ದವು. ನೆಯ ಸೊಂಡಿಲಿಗೆ ಹೋಲುವ ಉದ್ದನೆಯ ಮೂಗಿನೊಂದಿಗೆ ಶಿಶುವಿನ ಚಿತ್ರವನ್ನು ನೋಡಿದ ಎಲ್ಲರೂ ಕೂಡಾ ತಮ್ಮ ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿದ್ದರು. ಇನ್ನು ಅನೇಕ ಭಾರತೀಯರು ಈ ಮಗುವನ್ನು ದೇವ ಗಣೇಶನ ಪ್ರತಿರೂಪ ಎಂದು ನಮಸ್ಕಾರ ಮಾಡಿದ್ದಾರೆ.
ಜನಪ್ರಿಯ ದೇವತೆಯಾದ ಗಣೇಶನ ಪುನರ್ಜನ್ಮವೇ ಈ ಮಗು ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಗಣೇಶನನ್ನು ಸಾಮಾನ್ಯವಾಗಿ ಹಲವಾರು ಕೈಕಾಲುಗಳು ಮತ್ತು ಆನೆಯ ತಲೆಯನ್ನು ಹೊಂದಿರುವ ವ್ಯಕ್ತಿಯಾಗಿ ಚಿತ್ರಿಸಿಕೊಂಡು ಅದೇ ರೀತಿಯಲ್ಲಿ ಮೂರ್ತಿ ಸ್ಥಾಪನೆ ಮಾಡಿ ಪೂಜಿಸುವುದು ನಿಮಗೆಲ್ಲಾ ತಿಳಿದೇ ಇದೇ ಈ ಮಗುವನ್ನೂ ಅದೇ ರೀತಿ ಕಲ್ಪಿಸಿಕೊಂಡವರು ಹಲವರಿದ್ದಾರೆ.
ನಿಜ ಸಂಗತಿ ಏನಿರಬಹುದು? ಇಲ್ಲಿದೆ ನೋಡಿ ಮಾಹಿತಿ
ಆನೆಯ ಜೀನ್‌ನೊಂದಿಗೆ ಮಾನವನ ವಂಶವಾಹಿ ಬೆರೆತಿರುವುದರಿಂದ ಈ ಮಗು ಹುಟ್ಟಿದೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಕಲಾವಿದನೊಬ್ಬ ಸೃಷ್ಟಿಸಿದ ಶಿಲ್ಪ ಇದಾಗಿದೆ. ಈ ಶಿಲ್ಪದ ಚಿತ್ರವು ಫೇಸ್‌ಬುಕ್ ಪೋಸ್ಟ್‌ನಲ್ಲಿರುವಂತೆಯೇ ಇದೆ. ಈ ಶಿಲ್ಪವು ದಶಕದ ಹಳೆಯ ಕಲಾ ಪ್ರದರ್ಶನಕ್ಕಾಗಿ ಮಾಡಲಾಗತ್ತು. ಈ ಶಿಲ್ಪವನ್ನು ಸಿಲಿಕೋನ್, ಫೈಬರ್ಗ್ಲಾಸ್, ಮಾನವ ಕೂದಲು ಮತ್ತು ಫೆರೆಲ್ ನ್ಯೂಜಿಲೆಂಡ್ ಪೊಸಮ್ ಪೆಲ್ಟ್‌ನಿಂದ ಮಾಡಲಾಗಿತ್ತು ಮತ್ತು ಇದನ್ನು ನವೆಂಬರ್ 11 ರಿಂದ ಡಿಸೆಂಬರ್ 4, 2010 ರವರೆಗೆ ಸಿಡ್ನಿಯ ರೋಸ್ಲಿನ್ ಆಕ್ಸ್ಲೆ 9 ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿತ್ತು. ಇದೇ ನಿಜವಾದ ಸಂಗತಯಾಗಿದೆ. ಫ್ಯಾಕ್ಟ್ ಚೆಕ್ ಲೈಬ್ರರಿ ಎಂಬ ಜಾಲತಾಣ ಈ ಕುರಿತು ವರದಿ ಬಿಡುಗಡೆ ಮಾಡಿತ್ತು.
ಇದು ಯಾರಿಗೂ ಜನಿಸಿದ ಮಗುವಲ್ಲ
ಇದು ಯಾರಿಗೂ ಜನಿಸಿದ ಮಗುವಲ್ಲ ಇದು ಕೇವಲ ಒಂದು ಕಲಾ ಪ್ರಕಾರದ ಮಾದರಿಯಾಗಿದೆ. 2021ರಿಂದ ಇಂದಿನವರೆಗೂ ಈ ಆಕೃತಿಯ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಹನ್ನೆರಡು ವರ್ಷಗಳ ಹಿಂದೇ ಸೃಷ್ಟಿಸಿದ ಈ ಕಲಾಕೃತಿ ಇಂದಿಗೂ ಇಷ್ಟು ಸದ್ದು ಮಾಡುತ್ತಿದೆ ಎಂದರೆ ನಿಜಕ್ಕೂ ಕಲಾವಿರನಿಗೊಂದು ಸಲಾಂ ಹೇಳಲೇ ಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ