Viral Video: ಸ್ನಾನದ ವೇಳೆ ಖುಷಿಯಲ್ಲಿ ಪಲ್ಟಿ ಹೊಡೆಯೋ ಆನೆ! ಇದರ ಸರ್ಕಸ್ ನೋಡಿ ನೆಟ್ಟಿಗರು ಫಿದಾ

ಇಲ್ಲೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಅದರಲ್ಲಿ ಒಂದು ಆನೆಗೆ ಒಬ್ಬ ವ್ಯಕ್ತಿ ಸ್ನಾನ ಮಾಡಿಸುವಾಗ, ಅದು ಒಂದು ಕ್ಷಣದಲ್ಲಿಯೇ ಅದರ ನಿಂತಿರುವ ಭಂಗಿಯನ್ನು ಬದಲಾಯಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ಚಿಕ್ಕವರಾಗಿದ್ದಾಗ ಸರ್ಕಸ್  (Circus) ನೋಡಲು ಹೋದಾಗ ಅಲ್ಲಿ ಆನೆಗಳು (Elephant) ಸೇರಿದಂತೆ ಎಲ್ಲಾ ಪ್ರಾಣಿಗಳು (Animal) ವಿಭಿನ್ನ ರೀತಿಯ ಭಂಗಿಯಲ್ಲಿ ನಿಂತುಕೊಂಡು, ಆಟವಾಡಿ (Playing) ನಮ್ಮನ್ನು ರಂಜಿಸುತ್ತಿದ್ದವು ಎನ್ನುವುದು ನಮಗೆಲ್ಲಾ ಇವತ್ತಿಗೂ ನೆನಪಿರುತ್ತದೆ. ಹೀಗೆ ಈ ಪ್ರಾಣಿಗಳು ಕೆಲವೊಮ್ಮೆ ನಾವು ಊಹಿಸದೆ ಇರುವ ಭಂಗಿಯಲ್ಲಿ (Pose) ನಿಲ್ಲುತ್ತವೆ ಅಥವಾ ಕುಳಿತುಕೊಳ್ಳುತ್ತವೆ ಎಂದು ಹೇಳಬಹುದು ಮತ್ತು ಅದನ್ನು ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲೊಂದು ಹೊಸ ವೀಡಿಯೋ (Video) ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿದೆ ನೋಡಿ. ಅದರಲ್ಲಿ ಒಂದು ಆನೆಗೆ ಒಬ್ಬ ವ್ಯಕ್ತಿ ಸ್ನಾನ ಮಾಡಿಸುವಾಗ, ಅದು ಒಂದು ಕ್ಷಣದಲ್ಲಿಯೇ ಅದರ ನಿಂತಿರುವ ಭಂಗಿಯನ್ನು ಬದಲಾಯಿಸಿದೆ.

ತಲೆ ಮೇಲೆ ನಿಂತ ಆನೆ
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಆನೆಯು ದಿಟ್ಟೋ ಸರ್ಕಸ್ ನಲ್ಲಿ ಹೇಗೆ ಒಂದು ಸ್ಟೂಲ್ ಮೇಲೆ ನಿಲ್ಲುತ್ತದೆಯೋ ಹಾಗೆ ನಿಂತುಕೊಂಡಿದೆ. ಆದರೆ ಇಲ್ಲಿ ವ್ಯತ್ಯಾಸ ಎಂದರೆ ಆನೆಯು ತನ್ನ ತಲೆಯನ್ನು ಮುಂದಕ್ಕೆ ನೆಲಕ್ಕೆ ತಾಗಿಸಿ ಅದರ ಮೇಲೆ ನಿಂತು ತನ್ನ ಹಿಂಬದಿಯ ದೇಹವನ್ನು ಸಂಪೂರ್ಣವಾಗಿ ಮೇಲಕ್ಕೆ ಎತ್ತಿದೆ ನೋಡಿ.

ವಿಡಿಯೋ ಕಂಡು ಸಿಟ್ಟಿಗೆದ್ದ ನೆಟ್ಟಿಗರು!
ಈ ವೀಡಿಯೋ ನೋಡಿ ನೀವು ವ್ಹಾರೆ ವ್ಹಾ..ಎಂತಹ ಆನೆ ಇದು ಅಂತ ನಿಮಗೆ ಅನ್ನಿಸಬಹುದು, ಆದರೆ ಈ ವೀಡಿಯೋ ನೋಡಿದ ನೆಟ್ಟಿಗರು ಮಾತ್ರ ತುಂಬಾನೇ ಸಿಟ್ಟಿಗೆದ್ದಿದ್ದಾರೆ ಎಂದು ತಿಳಿದು ಬಂದಿದೆ. ಇವರ ಈ ಸಿಟ್ಟಿಗೆ ಕಾರಣವಾದರೂ ಏನು ಎಂದು ನಿಮಗೆ ತಿಳಿದುಕೊಳ್ಳಬೇಕೆಂಬ ಹಂಬಲವಿದ್ದರೆ ಮುಂದೆ ಓದಿ.

ವೈರಲ್ ಆದ ಸರ್ಕಸ್ ವಿಡಿಯೋ
ಈ ಆನೆಯು ತನ್ನ ತಲೆಯ ಮೇಲೆ ನಿಂತಿದ್ದರೆ, ಅದರ ಮಾಲೀಕರು ಅದಕ್ಕೆ ಸ್ನಾನ ಮಾಡಿಸುತ್ತಿದ್ದಾರೆ, ಆದರೆ ಅನೇಕರು ಟ್ವಿಟ್ಟರ್ ನಲ್ಲಿ ಈ ಆನೆಗೆ ಹಾಗೆ ಮಾಡಲು ತರಬೇತಿ ನೀಡಲಾಗಿದೆ ಎಂದು ಹೇಳುತ್ತಾರೆ. ಈ ವೀಡಿಯೋವನ್ನು ಮೊರಿಸ್ಸಾ ಶ್ವಾರ್ಟ್ಜ್ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, "ಆನೆಗಳು ಇದನ್ನು ಮಾಡಬಲ್ಲವು ಎಂದು ನನಗೆ ತಿಳಿದಿರಲಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಇದನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ 3.4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13,000ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ. ಈ 7 ಸೆಕೆಂಡಿನ ವೀಡಿಯೋವನ್ನು 2,000ಕ್ಕೂ ಹೆಚ್ಚು ಬಾರಿ ಮರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Snakes: ಮಲಗಿದ್ದವನ ಮೇಲೆ ದೊಡ್ಡ ಹಾವಿನ ಓಡಾಟ, ಗೊತ್ತೇ ಆಗಲಿಲ್ವಾ?

"ಯಾವುದೇ ಅಪರಾಧವಿಲ್ಲ, ಆದರೆ ನೀವು ಪ್ರಾಣಿಯನ್ನು ಪ್ರಚೋದನೆ ಮಾಡಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ತರಬೇತಿ ನೀಡಿದ್ದಾಗ, ನೀವು ಏನು ಬೇಕಾದರೂ ಮಾಡಬಹುದು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಸರ್ಕಸ್ ನಲ್ಲಿ ಬಳಸುವ ಆನೆಗಳು ಇಂತಹದ್ದನ್ನು ಯಾವಾಗಲೂ ಮಾಡುತ್ತವೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದರು.

ಜನರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಪ್ರಾಣಿ
ಆನೆಗಳು ಸಾಮಾನ್ಯವಾಗಿ ಜನರೊಂದಿಗೆ ಸ್ನೇಹಪರವಾಗಿ ನಡೆದು ಕೊಳ್ಳುತ್ತವೆ ಎಂದು ತಿಳಿದು ಬಂದಿದೆ, ಮತ್ತು ಕಳೆದ ತಿಂಗಳು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯವಾದ ವೈರಲ್ ವೀಡಿಯೋವೊಂದರಲ್ಲಿ ಒಂದು ಮೃಗಾಲಯದಲ್ಲಿ ಮರಿ ಆನೆ ಮತ್ತು ಮೃಗಾಲಯದಲ್ಲಿ ಪ್ರಾಣಿಗಳನ್ನು ನೋಡಿಕೊಳ್ಳುವ ವ್ಯಕ್ತಿಯ ನಡುವೆ ನಡೆದ ಉಲ್ಲಾಸದ ಕ್ಷಣವನ್ನು ತೋರಿಸಿದೆ.ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಡಾ.ಸಾಮ್ರಾಟ್ ಗೌಡ ಅವರು ಟ್ವಿಟ್ಟರ್ ನಲ್ಲಿ ಹಂಚಿ ಕೊಂಡಿದ್ದರು. ಇದು ಮರಿ ಆನೆ ಬೇಲಿಯನ್ನು ದಾಟಲು ಹೆಣಗಾಡುತ್ತಿರುವುದನ್ನು ತೋರಿಸುತ್ತದೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಅದು ಆ ಬೇಲಿಯನ್ನು ದಾಟಿ ಅಂತಿಮವಾಗಿ ಆ ವ್ಯಕ್ತಿಯು ಮಲಗಿರುವ ಹಾಸಿಗೆಗೆ ನೇರವಾಗಿ ಹೋಗುತ್ತದೆ.

ಇದನ್ನೂ ಓದಿ:  Leopard Hunt: ಈ ಚಿರತೆ ಮಂಗನನ್ನು ಹೇಗೆ ಬೇಟೆಯಾಡುತ್ತೆ ಗೊತ್ತಾ! ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರೆಂಟಿ

ಆನೆಯು ಮಲಗಿರುವ ವ್ಯಕ್ತಿಯನ್ನು ಹಾಸಿಗೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತದೆ, ಆದರೆ ಆ ವ್ಯಕ್ತಿ ಮಾತ್ರ ಬಲವಂತವಾಗಿ ಎದ್ದೇಳುವ ಮೊದಲು ಪ್ರಾಣಿಯೊಂದಿಗೆ ಹಾಸಿಗೆಯನ್ನು ಹಂಚಿಕೊಳ್ಳಲು ತಮಾಷೆಯಾಗಿ ಪ್ರಯತ್ನಿಸುತ್ತಾನೆ. ಆದಾಗ್ಯೂ, ವ್ಯಕ್ತಿ ಬಿಟ್ಟು ಕೊಡದೆ, ಮತ್ತೊಮ್ಮೆ ಹಾಸಿಗೆಯ ಮೇಲೆ ಮಲಗುತ್ತಾನೆ. ಈ ವೀಡಿಯೋ ನೋಡಲು ತುಂಬಾನೇ ಮುದ್ದಾಗಿತ್ತು. ವೈರಲ್ ಆಗಿರುವ ಈ ವೀಡಿಯೋ ಸಹ ಇದುವರೆಗೆ 1.96 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 13,500ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ.
Published by:Ashwini Prabhu
First published: