HOME » NEWS » Trend » ELEPHANT CUB CHILLING DURING A COOL SUMMER BATH IN VIRAL VIDEO IS A VIRAL ONLINE STG HG

ನೀರಿನಲ್ಲಿ ಆಡುತ್ತಾ ಬಿಸಿಲ ಧಗೆಯ ದಣಿವಾರಿಸಿಕೊಂಡ ಆನೆ ಮರಿಯ ವಿಡಿಯೋ ವೈರಲ್: ಕೂಲ್ ಎಂದ ನೆಟ್ಟಿಗರು

ಈ ವಿಡಿಯೋದಲ್ಲಿ ಮರಿ ಆನೆಯೊಂದು ನೀರಿನೊಳಗೆ ಎದ್ದು ಬಿದ್ದು, ಇರುವ ಜಾಗದಲ್ಲೇ ಮುಳುಗೇಳುತ್ತಿದೆ. ಸುಮಾರು 51 ಸೆಕೆಂಡ್ಸ್ ಇರುವ ವಿಡಿಯೋದಲ್ಲಿ ಆನೆ ಮರಿಯ ತುಂಟತನ ಎಲ್ಲರ ಗಮನ ಸೆಳೆದಿದೆ.

news18-kannada
Updated:April 13, 2021, 6:25 PM IST
ನೀರಿನಲ್ಲಿ ಆಡುತ್ತಾ ಬಿಸಿಲ ಧಗೆಯ ದಣಿವಾರಿಸಿಕೊಂಡ ಆನೆ ಮರಿಯ ವಿಡಿಯೋ ವೈರಲ್: ಕೂಲ್ ಎಂದ ನೆಟ್ಟಿಗರು
(Credit: Twitter)
  • Share this:
ಅಬ್ಬಬ್ಬಾ! ಏನ್ ಶೆಕೆನಪ್ಪಾ ಎಂದು ತಣ್ಣಗಿನ ಪಾನಕ ಕುಡಿದು ನಾವೆಲ್ಲಾ ದಣಿವು ಆರಿಸಿಕೊಳ್ತಿದ್ದೀವಿ. ಆ ಕಡೆ ಮೂಕ ಪ್ರಾಣಿಗಳು ನೀರಿನಲ್ಲಿ ಈಜಾಡ್ತಾ ಬಿಸಿಲ ಧಗೆ ತಣಿಸಿಕೊಳ್ತಿವೆ. ಅದರಲ್ಲೂ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳ ಒಂದೊಂದು ಕ್ಷಣಗಳು ಕೂಡ ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಾನೇ ಇರುತ್ತದೆ. ಈಗ ಅಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದು, ನೆಟ್ಟಿಗರು ಕ್ಯೂಟ್ ಎಂದು ಉದ್ಘಾರ ಮಾಡುವಂತೆ ಮಾಡಿದೆ. ಹೌದು, ಪುಟಾಣೆ ಆನೆ ಮರಿಯೊಂದು ಬಿಸಿಲ ತಾಪ ತಾಳಲಾರದೇ ನೀರಿನ ಕೊಳದೊಳಗೆ ಬಿಂದಾಸ್ ಆಗಿ ಈಜಾಡ್ತಾ ಬೇಸಿಗೆಯನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಶಾಂತ್ ನಂದ ಅವರು ಈ ವೀಡಿಯೋವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು ಸದ್ಯ ನೆಟ್ಟಿಗರು ಈ ವಿಡಿಯೋ ನೊಡಿ ಫುಲ್ ಖುಷಿ ಪಡ್ತಿದ್ದಾರೆ.

ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ 16,000 ವೀಕ್ಷಣೆ ಪಡೆದಿರುವ ಈ ವಿಡಿಯೋ ಇನ್ನೂ ವೈರಲ್‌ ಆಗುತ್ತಲೇ ಇದೆ. ಈ ವಿಡಿಯೋದಲ್ಲಿ ಮರಿ ಆನೆಯೊಂದು ನೀರಿನೊಳಗೆ ಎದ್ದು ಬಿದ್ದು, ಇರುವ ಜಾಗದಲ್ಲೇ ಮುಳುಗೇಳುತ್ತಿದೆ. ಸುಮಾರು 51 ಸೆಕೆಂಡ್ಸ್ ಇರುವ ವಿಡಿಯೋದಲ್ಲಿ ಆನೆ ಮರಿಯ ತುಂಟತನ ಎಲ್ಲರ ಗಮನ ಸೆಳೆದಿದೆ. ನೀರಿನೊಳಗೆ ಹೊರಳಾಡಿಕೊಂಡು ಬಿಸಿಲ ಧಗೆಯನ್ನು ತಣಿಸಿಕೊಳ್ಳುತ್ತಿರುವ ಗಜರಾಜ ನೋಡುಗರನ್ನು ಕೂಲ್ ಎನ್ನುವಂತೆ ಮಾಡಿದೆ.

ಇನ್ನು ಈ ವೀಡಿಯೋ 250 ಬಾರಿ ರೀ ಟ್ವೀಟ್ ಆಗಿದ್ದು, 1,950 ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಮರಿ ಆನೆಯ ಜೊತೆಗೆ ಅದರ ಅಮ್ಮ ಕೂಡ ಇದ್ದು, ತನ್ನ ಮರಿಯ ತುಂಟಾಟವನ್ನು ಕಣ್ತುಂಬಿಕೊಳ್ಳುತ್ತಿದೆ. ಆನೆ ಮರಿಯಂತೂ ನೀರಿನೊಳಗೆ ಪ್ರತಿಕ್ಷಣವನ್ನು ಫುಲ್ ಜೋಷ್‌ನಿಂದಲೇ ಎಂಜಾಯ್ ಮಾಡ್ತಿದೆ. ಹೇಳಿ ಕೇಳಿ ಆನೆ ಕೊಂಚ ತುಂಟ ಪ್ರಾಣಿ. ಅದರಲ್ಲೂ ಆನೆಯ ಮರಿಗಳಂತೂ ತಮ್ಮ ಮುದ್ದುತನದಿಂದಲೇ ಜನರನ್ನು ಸೆಳೆಯುತ್ತವೆ. ಅಲ್ಲದೇ ಆಗಾಗ ನೀರು, ನದಿಯ ಬಳಿ ತಮ್ಮ ಕ್ಯೂಟ್​ನೆಸ್ ಪ್ರದರ್ಶಿಸುತ್ತಾ ಎಷ್ಟೋ ಬಾರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತವೆ. ಹಾಗೆಯೇ ಈ ವಿಡಿಯೋ ಸಹ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ ಆಗಿ ಎಲ್ಲರಿಗೂ ಬಿಸಿಲಲ್ಲಿ ಬೆಲ್ಲ ತಿಂದಷ್ಟು ಖುಷಿ ನೀಡುತ್ತಿದೆ.

ಪ್ರಾಣಿಗಳು ಅದರಲ್ಲೂ ವಿಶೇಷವಾಗಿ ಆನೆಗಳಿಗೆ ನೀರೆಂದರೆ ಬಹಳ ಪ್ರೀತಿ. ಸದಾ ನೀರಿನಲ್ಲಿ ಕಾಣಿಸಿಕೊಳ್ಳುವ ಆನೆಯ ಹಿಂಡು ಸೊಂಡಿಲಿನ ಮೂಲಕ ನೀರನ್ನು ಎರಚುತ್ತಾ ತನ್ನ ಬಳಗದೊಂದಿಗೆ ಅದ್ಭುತವಾದ ಸಮಯ ಕಳೆಯುತ್ತವೆ. ಆನೆಗಳ ಇಂತಹ ಸ್ನಾನದ ವಿಡಿಯೋ ವನ್ಯ ಬದುಕಿನ ಸೊಬಗನ್ನು ತೋರುವ ಮೂಲಕ ಮನುಷ್ಯರಲ್ಲೊಂದು ಆಪ್ತ ಭಾವ ಸೃಷ್ಟಿಸಿರುವುದಂತೂ ಸುಳ್ಳಲ್ಲ.




ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಆಗಾಗ ಇಂತಹ ಹೃದಯಸ್ಪರ್ಶಿ ವೀಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ವನ್ಯಜೀವಿಗಳ ಬಗ್ಗೆ ಮಾನವ ಸಮುದಾಯದ ಒಲವು ಹೆಚ್ಚುವಂತೆ ಮಾಡುತ್ತಿರುತ್ತಾರೆ.







ಅವರು ಪೋಸ್ಟ್ ಮಾಡಿದ್ದ ಸಿಂಹ, ಬಾತು ಕೋಳಿಯ ವೀಡಿಯೋ ಕೂಡ 10,000 ವೀಕ್ಷಣೆಯನ್ನು ಗಳಿಸಿತ್ತು. ಸಿಂಹವು ಹಸಿದಾಗ ಮಾತ್ರವೇ ಬೇಟೆಯಾಡುವುದು. ಉಳಿದಂತೆ ಅದಕ್ಕೂ ಪ್ರೀತಿ ಇದೆ' ಎನ್ನು ಸಂದೇಶದೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
First published: April 13, 2021, 6:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories