Mother elephant killed crocodile:
ಸಾಮಾನ್ಯವಾಗಿ ಕೆಲವೊಂದು ಪ್ರಾಣಿಗಳು(Animals) ಯಾವುದೇ ಪ್ರಾಣಿಗಳ ಮೇಲೆ ದಾಳಿ(Attack) ಮಾಡದೆ ಆರಾಮಾಗಿ ತಮ್ಮ ಪಾಡಿಗೆ ತಾವು ಆಹಾರ(Food) ತಿನ್ನುತ್ತಾ ತನ್ನ ಮರಿಗಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತೆ. ಹಾಗೂ ತಮ್ಮ ಮರಿಗಳನ್ನು ಸಂರಕ್ಷಿಸುತ್ತ ಜಾಗರೂಕತೆಯಿಂದ ಇರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಸಾಮಾನ್ಯವಾಗಿ ಆನೆಗಳು(Elephants) ಶಾಂತ ಪ್ರಾಣಿಯೇ ಆದರೂ, ಒಮ್ಮೊಮ್ಮೆ ಎಷ್ಟು ಶಾಂತವಾಗಿರುತ್ತವೆಯೋ ಅದರ ದುಪ್ಪಟ್ಟು ಅಪಾಯಕಾರಿ(Danger) ಆಗುವುದು ಅವುಗಳು ತಾಯಿಯಾದಾಗ ಎಂದು ಹೇಳಲಾಗುತ್ತದೆ. ಈ ಆನೆಯ ಬಗ್ಗೆ ಇಲ್ಲಿ ಏಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು. ಇಲ್ಲೊಂದು 1 ನಿಮಿಷದ 41 ಸೆಕೆಂಡಿನ ವಿಡಿಯೋ(Video) ಸಾಮಾಜಿಕ ಮಾಧ್ಯಮ(Social media)ದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮೊಸಳೆ(Crocodile)ಯನ್ನು ತಾಯಿ ಆನೆಯೊಂದು(Mother Elephant) ತನ್ನ ಕಾಲಿನಿಂದ ಹಿಸುಕಿ ಕೊಂದಿರುವ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್(Viral) ಆಗುತ್ತಿದೆ. ತಾಯಿ ಪ್ರೀತಿ ಅಂದರೆ ಏನು ಅರ್ಥವಾಗಬೇಕೆಂದರೆ ಈ ವಿಡಿಯೋ ನೋಡಿ ಅನ್ನುತ್ತಿದ್ದಾರೆ ನೆಟ್ಟಿಗರು
ಕಾಲಿನಿಂದ ತುಳಿದು ಮರಿಯಾನೆ ರಕ್ಷಿಸಿದ ಆನೆ
ಈ ಘಟನೆ ನಡೆದದ್ದು ನಮ್ಮ ದೇಶದಲ್ಲಿ ಅಲ್ಲ, ಇದು ಆಫ್ರಿಕಾದ ಜಾಂಬಿಯಾದ ಸಫಾರಿಯಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. ಸಫಾರಿಗೆ ಬಂದಿರುವ ಒಬ್ಬ ವ್ಯಕ್ತಿ ಈ ಘಟನೆಯನ್ನು ಚಿತ್ರೀಕರಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಆಫ್ರಿಕಾದ ಹೆಣ್ಣು ಆನೆಯೊಂದು ತನ್ನ ಎಲ್ಲಾ ಶಕ್ತಿ ಬಳಸಿಕೊಂಡು ನೀರಿನಲ್ಲಿರುವ ಮೊಸಳೆಯನ್ನು ತನ್ನ ಸೊಂಡಿಲಿನಿಂದ ಎಳೆದು ಹಿಡಿದು ಕಾಲಿನಿಂದ ಮೊಸಳೆಯನ್ನು ತುಳಿಯುವುದನ್ನು ನೋಡಬಹುದು. ಈ ಘಟನೆಯ ಹಿಂದಿನ ಕಾರಣವೆಂದರೆ ಸರೀಸೃಪವು ತನ್ನ ಮರಿ ಆನೆಯ ಕಡೆಗೆ ಬರುತ್ತಿರುವುದನ್ನು ತಾಯಿ ಆನೆ ಸಹಿಸಲಿಲ್ಲ. ಹೀಗಾಗಿ ಮೊಸಳೆ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ.
ಇದನ್ನು ಓದಿ :
ವೆದರ್ ರಿಪೋರ್ಟ್ ವೇಳೆ ಪೋರ್ನ್ ವಿಡಿಯೋ ಲೈವ್ ಟೆಲಿಕಾಸ್ಟ್: ಕ್ಷಮೆಯಾಚಿಸಿದ ನ್ಯೂಸ್ ಚಾನೆಲ್
ಆನೆಯಿಂದ ಬಿಡಿಸಿಕೊಳ್ಳಲಾಗದೇ ಮೊಸಳೆ ಪರದಾಟ
ಹ್ಯಾನ್ಸ್ ಹೆನ್ರಿಕ್ ಹಾರ್ ಎಂಬುವವರು ಇಂತಹ ಅಪರೂಪದ ದೃಶ್ಯ ನೋಡಿ ಆಶ್ಚರ್ಯಚಕಿತರಾಗಿ ವಿಡಿಯೋ ಮಾಡಿದ್ದಾರೆ. ಜಾಂಬೆಜಿ ಕಣಿವೆಯ ಬೈನ್ಸ್ ನದಿಯ ಹತ್ತಿರ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಹೆಣ್ಣು ಆನೆಯೊಂದು ತನ್ನ ದೈತ್ಯ ಕಾಲಿನಿಂದ ಮೊಸಳೆ ಕೊಲ್ಲಲು ತನ್ನ ಸೊಂಡಿಲನ್ನು ಬಳಸುತ್ತಿರುವುದರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಮೊಸಳೆಯು ಸಹ ಆನೆಯ ಕಾಲಿನ ಕೆಳಗೆ ಸಿಲುಕಿಕೊಂಡಿರುವುದರಿಂದ ಯಾವುದೇ ರೀತಿಯಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ಆಗದೆ ಸ್ವಲ್ಪವೂ ಅಲುಗಾಡದೆ ಹಾಗೆ ನೀರಿನಲ್ಲಿರುವುದನ್ನು ಇಲ್ಲಿ ನೋಡಬಹುದು. ಕೊನೆಯಲ್ಲಿ, ಆನೆ ತನ್ನ ಸೊಂಡಿಲನ್ನು ಬಳಸಿ ಮೊಸಳೆಯ ಬಾಲ ಎತ್ತಿಕೊಂಡು ಅದನ್ನು ಕಚ್ಚಿ ಮೊಸಳೆಯನ್ನು ನೀರಿನಿಂದ ಹೊರಗೆ ಎಳೆಯಲು ಪ್ರಯತ್ನಿಸುತ್ತದೆ. ಆನೆಯ ಭಾರಿ ತೂಕವು ಮೊಸಳೆಯನ್ನು ಕೊಂದೇ ಬಿಟ್ಟಿತ್ತು.
ಇದನ್ನು ಓದಿ :
ಕೈ ಬಿಟ್ಟು ಹಿಂಬದಿ ಸೀಟ್ನಲ್ಲಿ ಕೂತು ಬೈಕ್ ರೈಡಿಂಗ್: ಟೆಸ್ಲಾಗೆ ಕಾಂಪಿಟೇಶನ್ ಅಂದಿದ್ಯಾಕ್ಕೆ ನೆಟ್ಟಿಗರು?
ಎಂದಿಗೂ ಆನೆಯ ತಂಟೆಗೆ ಹೋಗಬೇಡಿ
ಆನೆಯ ಇಂತಹ ಅಪಾಯಕಾರಿ ಸ್ವಭಾವ ನೋಡಿ ನೆಟ್ಟಿಗರು ಆಶ್ಚರ್ಯ ಚಕಿತರಾಗಿದ್ದಾರೆ. ಒಬ್ಬರು "ಸಸ್ಯಾಹಾರಿಗಳಾಗಿ, ಆನೆಗಳು ಇತರ ಪ್ರಭೇದಗಳನ್ನು ಕೊಲ್ಲುವ ಪ್ರವೃತ್ತಿ ಹೊಂದಿಲ್ಲದಿರಬಹುದು, ಆದರೆ ಈ ಆನೆಗೆ ಖಂಡಿತವಾಗಿಯೂ 'ಸಾವು' ಎಂದರೇನು ಎಂಬುದನ್ನು ಅರ್ಥ ಮಾಡಿಕೊಂಡಂತೆ ತೋರುತ್ತದೆ” ಎಂದು ಬರೆದಿದ್ದಾರೆ. ಇನ್ನೊಬ್ಬರು "ಈ ಕಥೆಯ ನೀತಿ: ಎಂದಿಗೂ ಆನೆಯ ತಂಟೆಗೆ ಹೋಗಬೇಡಿ ಅಂತ" ಎಂದು ಪ್ರತಿಕ್ರಿಯಿಸಿದ್ದಾರೆ. ತಾಯಿ ಎಂದರೇ ಹಾಗೇ ಅದು ಮನುಷ್ಯರಾಗಲಿ, ಪ್ರಾಣಿಗಳಾಗಲಿ ತಾಯಿ ಪ್ರೀತಿ ಒಂದೆ. ತನ್ನ ಮಕ್ಕಳಿಗೆ ತೊಂದರೆ ಕೊಡಲು ಬಂದರೆ, ಈ ರೀತಿ ರೌದ್ರ ಅವತಾರ ತಾಳಿ ಎದುರಾಳಿಯನ್ನು ಸಂಹಾರ ಮಾಡುತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ