ಆನೆ ಮನುಷ್ಯನನ್ನು ಅಟ್ಟಾಡಿಸಿಕೊಂಡು ಬಂದ್ರೆ ಹೇಗಿರುತ್ತೆ? ನಿಜವಾದ ಘಟನೆಯ ವಿಡಿಯೋ ನೋಡಿ...

ಅರಣ್ಯ ಅಧಿಕಾರಿಗಳ ಪ್ರಕಾರ ಹಿಂಡಿನಲ್ಲಿರುವ ಯಾವುದಾದರೂ ಕಾಡಾನೆಯು ಬೇರ್ಪಟ್ಟಾಗ ಹುಚ್ಚುಚ್ಚಾಗಿ ಈ ರೀತಿ ಆಡುತ್ತವೆ ಎನ್ನಲಾಗಿದ್ದು ಈ ಪ್ರದೇಶದಲ್ಲಿ ಆನೆಗಳು ಹಿಂಡುಗಳಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ.

ಆನೆ ದಾಳಿ

ಆನೆ ದಾಳಿ

  • Share this:
ಮನುಷ್ಯನಿಗೆ ಬುದ್ಧಿ ಬಂದಾಗಿನಿಂದಲೂ ಇತರೆ ಕೆಲ ಪ್ರಾಣಿ-ಪಕ್ಷಿಗಳನ್ನು(Animals) ತನ್ನ ನಿಯಂತ್ರಣದಲ್ಲಿ (Under his control) ಇಟ್ಟುಕೊಳ್ಳುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾನೆ. ಆದರೂ ಕೆಲವೊಮ್ಮೆ ಕೆಲ ಪ್ರಾಣಿಗಳು ಆಕ್ರಮಣಕಾರಿ (Offensive behavior) ನೀತಿಯನ್ನು ಮನುಷ್ಯನ ಮುಂದೆ ತೋರದೆ ಇರಲಾರವು. ಆನೆಗಳನ್ನು ಸಾಮಾನ್ಯವಾಗಿ ಮನುಷ್ಯ ಪಳಗಿಸಲು (Domestication) ಸಮರ್ಥನಾಗಿದ್ದಾನಾದರೂ ಕೆಲವೊಮ್ಮೆ ಆನೆಗಳು (Elephants) ತಂದೊಡ್ಡುವ ಅಪಾಯ ಅಷ್ಟಿಷ್ಟಲ್ಲ. ಮೊದಲೇ ದೈತ್ಯವಾದ ಹಾಗೂ ಬಲಶಾಲಿಯಾದ ಶರೀರ ಹೊಂದಿರುವ ಆನೆ, ಮನುಷ್ಯನ ಮೇಲೆ ಆಕ್ರಮಣ (Attacked) ಮಾಡಿದರೆ ಆ ಮನುಷ್ಯನ ಸ್ಥಿತಿ ಏನಾಗಬಾರದು?

ವಿಡಿಯೋ ವೈರಲ್
ಇಂತಹುದ್ದೇ ಒಂದು ಘಟನೆಯು ಈಗ ಅಸ್ಸಾಂನಿಂದ ವರದಿಯಾಗಿದೆ. ಇದೊಂದು ವಿಡಿಯೋ ಆಗಿದ್ದು ಅದರಲ್ಲಿ ವ್ಯಕ್ತಿಯೊಬ್ಬನನ್ನು ಆನೆ ಅಟ್ಟಿಸಿಕೊಂಡು ಹೋಗುವುದಲ್ಲದೆ ಆತನ ಮೇಲೆ ಆಕ್ರಮಣ ಮಾಡಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: Viral Video: ಅಡುಗೆ ಮನೆ ಕಿಟಕಿಯಿಂದ ಸೊಂಡಿಲು ಹಾಕಿ ಆಹಾರ ಹುಡುಕಿದ ಕಾಡಾನೆ, ವಿಡಿಯೋ ಸಖತ್​ ವೈರಲ್

ದುರದೃಷ್ಟಕರ ಘಟನೆಯೊಂದರಲ್ಲಿ ಕಾಡಾನೆಯೊಂದು ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋಗಿ ಆಕ್ರಮಣ ಮಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಘಟನೆಯು ಅಸ್ಸಾಂನ ಧುಬ್ರಿ ಜಿಲ್ಲೆಯ ತಮರ್ಹತ್ ಪ್ರದೇಶದಲ್ಲಿ ಡಿಸೆಂಬರ್ 18ರಂದು ನಡೆದಿದೆ ಎನ್ನಲಾಗಿದ್ದು ಕ್ಯಾಮೆರಾ ಕಣ್ಣುಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.

ವಿಡಿಯೋ ನೋಡಿ:

ಕೋರೆಹಲ್ಲುಗಳಿಂದ ತಿವಿದ ಆನೆ
ಎ‍ಎನ್‍ಐ ಸುದ್ದಿ ಮಾಧ್ಯಮವು ತನ್ನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಇದರಲ್ಲಿ ಕಾಡಾನೆಯೊಂದು ವ್ಯಕ್ತಿಯೊಬ್ಬನ ಮೇಲೆ ಆಕ್ರಮಣ ಮಾಡುತ್ತಿರುವುದು ಕಾಣಿಸುತ್ತದೆ. ವ್ಯಕ್ತಿ ತನ್ನ ಪ್ರಾಣಕ್ಕಾಗಿ ಗೋಳಾಡುತ್ತಿದ್ದು ಆನೆ ಆ ವ್ಯಕ್ತಿಯನ್ನು ಹಿಡಿದು ನೆಲಕ್ಕೆ ಉರುಳಿಸಿ ತನ್ನ ಕೋರೆಹಲ್ಲುಗಳಿಂದ ತಿವಿಯುತ್ತಿರುವುದು ಕಂಡುಬರುತ್ತದೆ.

ಕ್ಯಾಮೆರಾ ಕಣ್ಣಿಗೆ ಬಿದ್ದ ದೃಶ್ಯ
30 ವರ್ಷ ಪ್ರಾಯದವನೆಂದು ಹೇಳಲಾಗುತ್ತಿರುವ ಆ ವ್ಯಕ್ತಿ ಕಾಡಾನೆಯಿಂದ ಆಕ್ರಮಣಕ್ಕೆ ಒಳಪಟ್ಟಾಗ ಆ ದೃಶ್ಯವನ್ನು ಹತ್ತಿರದಿಂದ ಚಿತ್ರೀಕರಿಸುತ್ತಿದ್ದವರು ಆತಂಕದಿಂದ ಕೂಗಾಡುತ್ತಿರುವುದನ್ನೂ ಗಮನಿಸಬಹುದಾಗಿದೆ. ಚಿತ್ರೀಕರಿಸುತ್ತಿರುವ ಕೆಲ ಕ್ಷಣಗಳಲ್ಲೇ ಕ್ಯಾಮೆರಾವನ್ನು ಬೇರೆಡೆ ತಿರುಗಿಸಲಾಗಿದ್ದು ಆ ಸಂದರ್ಭದಲ್ಲಿ ಉಂಟಾಗಿದ್ದ ಚೀರಾಟಗಳು ಕೇಳಿ ಬರುತ್ತವೆ. ತದನಂತರ ಅಂತಿಮವಾಗಿ ಕ್ಯಾಮೆರಾ ಕಣ್ಣಿಗೆ ಆ ಆನೆಯು ವ್ಯಕ್ತಿಯ ದೇಹವನ್ನು ಖುಲ್ಲಾ ಬಯಲಿನಲ್ಲಿ ಎಳೆದುಕೊಂಡು ಹೋಗುತ್ತಿರುವುದನ್ನು ಚಿತ್ರೀಕರಿಸಿದ್ದು ಕಾಣಬಹುದು.

ಆತಂಕ ಸೃಷ್ಟಿಸಿದ ಆಕ್ರಮಣ
ಒಟ್ಟಾರೆಯಾಗಿ ಈ ದೃಶ್ಯವು ಆತಂಕ ಸೃಷ್ಟಿ ಮಾಡುವಂತಿದ್ದು ಒಂದು ಕ್ಷಣ ಜನರು ಭಯಭೀತರಾಗುವಂತೆ ಮಾಡುವುದರಲ್ಲಿ ಸಂಶಯವೇ ಇಲ್ಲ. 14 ಕ್ಷಣಗಳ ಈ ವಿಡಿಯೋ ಹಂಚಿಕೊಂಡಿರುವ ಎ‍ಎನ್‍ಐ ಸುದ್ದಿ ಮಾಧ್ಯಮವು ಇದಕ್ಕೊಂದು ಬರಹವನ್ನು ಹೀಗೆ ನೀಡಿದೆ. "ಡಿಸೆಂಬರ್ 18ರಂದು ಅಸ್ಸಾಂನ ಧುಬ್ರಿ ಜಿಲ್ಲೆಯ ತಮರ್ಹತ್ ಪ್ರದೇಶದ ಹಳ್ಳಿಯೊಂದರಲ್ಲಿ 30 ವರ್ಷ ಪ್ರಾಯದ ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಆಕ್ರಮಣ ಮಾಡಿರುವ ಕಾಡಾನೆ".

ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್‌ ಒಂದನ್ನೂ ಮಾಡಲಾಗಿದ್ದು ಅದರಲ್ಲಿ, "ಅರಣ್ಯ ಅಧಿಕಾರಿಗಳ ಪ್ರಕಾರ, ಈ ಘಟನೆಯ ನಂತರ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾಡಾನೆಯನ್ನು ಮತ್ತೆ ಕಾಡಿನತ್ತ ಓಡಿಸಲಾಗಿದೆ" ಎಂದು ಬರೆಯಲಾಗಿದೆ.

ಇದನ್ನೂ ಓದಿ: Viral Video: ಆನೆ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡುವುದನ್ನು ನೋಡಿದ್ದೀರಾ? ಮಿಸ್​ ಮಾಡ್ಬೇಡಿ ನೋಡಿ

ಕಾಡಾನೆಯು ಬೇರ್ಪಟ್ಟಾಗ ದಾಳಿ
ಇದಕ್ಕೂ ಮುಂಚೆ ಹಿಂದಿನ ತಿಂಗಳು ಪಕ್ಕದ ಮೇಘಾಲಯದಿಂದಲೂ ಆನೆಯೊಂದು ಆಕ್ರಮಣ ಮಾಡಿದ್ದ ಸುದ್ದಿಯಾಗಿತ್ತು. ಪಶ್ಚಿಮಗ್ಯಾರೋ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಕಾಡಾನೆಯ ಆಕ್ರಮಣದಿಂದ ಇಬ್ಬರು ವ್ಯಕ್ತಿಗಳು ಅಸು ನೀಗಿದ್ದರು ಹಾಗೂ ಒಬ್ಬ ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದನು. ಅರಣ್ಯ ಅಧಿಕಾರಿಗಳ ಪ್ರಕಾರ ಹಿಂಡಿನಲ್ಲಿರುವ ಯಾವುದಾದರೂ ಕಾಡಾನೆಯು ಬೇರ್ಪಟ್ಟಾಗ ಹುಚ್ಚುಚ್ಚಾಗಿ ಈ ರೀತಿ ಆಡುತ್ತವೆ ಎನ್ನಲಾಗಿದ್ದು ಈ ಪ್ರದೇಶದಲ್ಲಿ ಆನೆಗಳು ಹಿಂಡುಗಳಲ್ಲಿ ಅಲೆದಾಡುವುದು ಸಾಮಾನ್ಯವಾಗಿದೆ.
Published by:vanithasanjevani vanithasanjevani
First published: