ನಾವು ಯಾವುದಾದರೂ ದೇವಸ್ಥಾನಕ್ಕೆ (Temple) ಅಂತ ಹೋದರೆ ಅಲ್ಲಿ ಇರುವಂತಹ ಆಕಳು ಮತ್ತು ಕರುವಿಗೆ ನಾವು ತಪ್ಪದೆ ಹೋಗಿ ಅವುಗಳ ತಲೆಯನ್ನು ಮುಟ್ಟಿ ನಮಸ್ಕರಿಸಿ ಬರುತ್ತೇವೆ. ಅದೇ ರೀತಿಯಾಗಿ ಯಾವುದಾದರೂ ದೇವಸ್ಥಾನದಲ್ಲಿ ಆನೆಯನ್ನು ಕಟ್ಟಿದ್ದಾರೆ ಅಂತ ಹೇಳಿದರೆ ಆನೆಯ (Elephant) ಬಳಿ ಹೋಗಿ ಅದಕ್ಕೆ ಬಾಳೆಹಣ್ಣು (Banana) ಮತ್ತು ಇತರೆ ಆಹಾರವನ್ನು ತೆಗೆದುಕೊಂಡು ಹೋಗಿ ಕೊಟ್ಟು ನಮಸ್ಕಾರ ಮಾಡಿ ಅದರಿಂದ ಆಶೀರ್ವಾದ (Blessing) ತೆಗೆದುಕೊಂಡು ಬರುತ್ತೇವೆ.
ಕೆಲವೊಮ್ಮೆ ಆ ದೇವಸ್ಥಾನದಲ್ಲಿರುವ ಆನೆಗಳು ತನ್ನ ಮಾವುತನು ಹೇಳದೇ ಇದ್ದರೂ ಸಹ ಬಂದವರಿಗೆ ತನ್ನ ಸೊಂಡಿಲನ್ನು ಮೇಲಕ್ಕೆ ಎತ್ತಿ ನಿಧಾನವಾಗಿ ಅವರ ತಲೆಯ ಮೇಲೆ ಸವರಿ ಆಶೀರ್ವಾದ ಮಾಡುವುದನ್ನು ನಾವು ಅನೇಕ ಬಾರಿ ನೋಡಿರುತ್ತೇವೆ ಅಂತ ಹೇಳಬಹುದು. ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ನೋಡಿ.
ಇದಷ್ಟೇ ಅಲ್ಲದೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಸದಾ ಅಂತರ್ಜಾಲದಲ್ಲಿ ಲಭ್ಯವಿರುವ ಕೆಲವು ಆಕರ್ಷಕ ವಿಷಯಗಳನ್ನು ನಮ್ಮೆಲ್ಲರ ಜೊತೆ ಹಂಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಈ ಬಾರಿ, ಅವರು ಕರ್ನಾಟಕದ ದೇವಾಲಯದಿಂದ ಆನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಮಹೀಂದ್ರಾ ಅವರು ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಅಪ್ಲೋಡ್ ಮಾಡಿರುವ ಕ್ಲಿಪ್ ನಲ್ಲಿ ಸಾಂಪ್ರದಾಯಿಕ ಉಡುಪನ್ನು ಧರಿಸಿದ ಒಬ್ಬ ಯುವತಿ ಆನೆಯ ಮುಂದೆ ಅಲ್ಲಿಯೇ ಸ್ವಲ್ಪ ದೂರದಲ್ಲಿ ನಿಂತು ನೃತ್ಯ ಮಾಡುತ್ತಿರುವುದನ್ನು ವಿಡಿಯೋದ ಪ್ರಾರಂಭದಲ್ಲಿ ನಾವು ನೋಡಬಹುದು. ದೇವಾಲಯದ ಆವರಣದಲ್ಲಿ ಇರುವ ಆ ಆನೆಯು ಯುವತಿಯ ನೃತ್ಯ ನೋಡಿದ ನಂತರ ಆ ನೃತ್ಯ ಮಾಡಿದ ಯುವತಿಯ ತಲೆ ಮೇಲೆ ತನ್ನ ಸೊಂಡಿಲಿನಿಂದ ಆಶೀರ್ವಾದ ಮಾಡಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು.
Sri Durgaaparameshwari temple , Kateel, Karnataka.
Amazing. And I would like to think the Temple Elephant is bestowing a blessing on all of us for a Happier New Year! 😊 pic.twitter.com/s2xdqV8w5D
— anand mahindra (@anandmahindra) December 31, 2022
ಇದನ್ನೂ ಓದಿ: Viral Photos: ಈ ವಿಷ್ಯ ಗೊತ್ತಾದ್ರೆ ನೀವು ಸೆಲ್ಫಿ ತೆಗ್ಯೋದನ್ನೇ ಸ್ಟಾಪ್ ಮಾಡ್ತೀರ!
ನರ್ತಕಿಗೆ ಎರಡು ಬಾರಿ ಆಶೀರ್ವಾದ ಮಾಡಿದ ಆನೆ
ನಂತರ ಈ ಕ್ಲಿಪ್ ನಲ್ಲಿ ಆನೆಯು ಎರಡು ಬಾರಿ ಆ ನರ್ತಕಿಗೆ ಆಶೀರ್ವಾದ ಮಾಡುವುದನ್ನು ನಾವು ನೋಡಬಹುದು. ಅಲ್ಲದೆ, ಆ ನರ್ತಕಿಯು ನೀಡಿದ ಪ್ರದರ್ಶನವನ್ನು ನೋಡುತ್ತಾ ಆನೆಯು ತನ್ನ ತಲೆಯನ್ನು ಅಲ್ಲಾಡಿಸುತ್ತಿರುವುದನ್ನು ಸಹ ನಾವು ಇಲ್ಲಿ ನೋಡಬಹುದು. ಮಹೀಂದ್ರಾ ಗ್ರೂಪ್ ಅಧ್ಯಕ್ಷರ ಪ್ರಕಾರ, ಈ ವೀಡಿಯೋ ಕರ್ನಾಟಕದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಬಂದಿದೆ. "ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ ಕರ್ನಾಟಕದ ಕಟೀಲು ಎಂಬ ಊರಿನಲ್ಲಿದೆ. ದೇವಾಲಯದ ಆನೆಯು ಸಂತೋಷದ ಹೊಸ ವರ್ಷಕ್ಕೆ ನಮ್ಮೆಲ್ಲರಿಗೂ ಆಶೀರ್ವಾದವನ್ನು ನೀಡುತ್ತಿದೆ ಎಂದು ನಾನು ಭಾವಿಸಲು ಬಯಸುತ್ತೇನೆ" ಎಂದು ಅವರು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ವೀಡಿಯೋ ನೋಡಿ ಕಾಮೆಂಟ್ ಮಾಡಿದ ನೆಟ್ಟಿಗರು
ಈ ಕ್ಲಿಪ್ ಶೀಘ್ರದಲ್ಲಿಯೇ ಅನೇಕ ನೆಟ್ಟಿಗರನ್ನು ತನ್ನೆಡೆಗೆ ಸೆಳೆಯಲು ಪ್ರಾರಂಭಿಸಿತು ಮತ್ತು ಮತ್ತು ನೋಡುಗರಿಂದ ವಿವಿಧ ಪ್ರತಿಕ್ರಿಯೆಗಳನ್ನು ಸಹ ಪಡೆಯಿತು. "ಆನೆಗಳು ನೋಡುವುದಕ್ಕೆ ಎಷ್ಟು ಮುದ್ದಾಗಿರುತ್ತವೆ ಎಂದರೆ ನೋಡಿದ ತಕ್ಷಣ ನಮಗೆ ಅವುಗಳ ಬಗ್ಗೆ ಪೂಜೆಯ ಭಾವನೆ ಬರುತ್ತದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಇನ್ನೊಬ್ಬರು "ದೇವಾಲಯದ ಆನೆಗಳು ತುಂಬಾನೇ ಪ್ರೀತಿಯ ಜೀವಿಗಳು, ಯಾವಾಗಲೂ ಪ್ರತಿಯೊಬ್ಬ ವ್ಯಕ್ತಿಯನ್ನು ತಮ್ಮ ಸೊಂಡಿಲಿನಿಂದ ಮೃದುವಾಗಿ ಆಶೀರ್ವದಿಸುತ್ತವೆ" ಎಂದು ಹೇಳಿದ್ದಾರೆ. “ಇದು ನಿಜವಾದ ಭಾರತೀಯ ಸಂಸ್ಕೃತಿ" ಎಂದು ಮೂರನೇಯವರು ತಮ್ಮ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ. ಕೆಲವರು ಈ ವೀಡಿಯೋವನ್ನು ನೋಡಿ "ಅದ್ಭುತ" ಮತ್ತು "ಸುಂದರ" ಎಂದು ಬಣ್ಣಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ