ಪ್ರಾಣಿಗಳೆಂದರೆ (Animals) ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರಾಣಿಗಳ ಮುಗ್ಧತೆಯನ್ನು ನೋಡಿದ್ರೆ ಯಾರು ಸಹ ಒಮ್ಮೆಗೆ ಮನಸೋಲ್ತಾರೆ. ಅದ್ರಲ್ಲೂ ಕೆಲವೊಬ್ಬರಂತೂ ಪ್ರಾಣಿಗಳನ್ನೇ ಬೆಸ್ಟ್ ಫ್ರೆಂಡ್ (Best Friend) ಆಗಿ ಮಾಡಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ (Social Media) ನೋಡಿದ್ರೆ ಸಾಕು ಪ್ರಾಣಿಗಳು ಮತ್ತು ಮನುಷ್ಯರು ಇರುವಂತಹ ಫೋಟೋಗಳೇ, ವಿಡಿಯೋಗಳೇ ಕಾಣಲು ಸಿಗುತ್ತದೆ. ಆದರೆ ಯಾರೇ ಆಗಲಿ ಪ್ರಾಣಿಗಳ ಜೊತೆ ಆಟವಾಡಬೇಕಾದ್ರೆ, ಜೊತೆಯಲ್ಲಿರ್ಬೇಕಾದ್ರೆ ಬಹಳ ಜಾಗರೂಕತೆಯಿಂದಿರಬೇಕು. ಏಕೆಂದರೆ ಪ್ರಾಣಿಗಳ ಭಾವನೆಗಳು ಯಾವಾಗ ಬದಲಾಗುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ಕಾಡುಪ್ರಾಣಿಗಳನ್ನು (Wild Animal) ಕಂಡಾಗ ಅದರ ಬಳಿಗೆ ಹೋಗುವುದು, ಏನಾದರು ತಿಂಡಿ ನೀಡುವುದು ಈ ರೀತಿ ಮಾಡಲೇ ಬಾರದು.
ಈ ಮಾತನ್ನು ಈಗ ಏಕೆ ಹೇಳುತ್ತಿದ್ದೇವೆ ಎಂದು ನಿಮ್ಮಲ್ಲಿ ಕುತೂಹಲ ಮೂಡಬಹುದು. ಹೌದು, ಇಲ್ಲೊಬ್ಬಳು ಹುಡುಗಿ ಅದೇ ರೀತಿ ಆನೆಯನ್ನು ನೋಡಿ ಹತ್ತಿರಕ್ಕೆ ಕರೆದಿದ್ದಾಳೆ. ಆಮೇಲೇನಾಯ್ತು ಎಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಫುಲ್ ಓದಿ.
ಆನೆಗೆ ಬಾಳೆಹಣ್ಣು ತಿನ್ನಿಸಲು ಹೋದ ಹುಡುಗಿ
ಮಹಿಳೆಯ ಕೈಯಲ್ಲಿದ್ದ ಬಾಳೆಹಣ್ಣನ್ನು ತೋರಿಸಿ ಆನೆಯನ್ನು ಕರೆತರಲಾಯಿತು. ಒಂದು ಕೈಯಲ್ಲಿ ಬಾಳೆಹಣ್ಣು, ಇನ್ನೊಂದು ಕೈಯಲ್ಲಿ ಬಾಳೆಗೊನೆಯೊಂದಿಗೆ ನಿಂತಿದ್ದ ಯುವತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ.
You can’t fool an elephant even though he is tamed. They are one of the most intelligent animals to be in captivity. pic.twitter.com/rQXS6KYskN
— Susanta Nanda (@susantananda3) April 27, 2023
ಇದನ್ನೂ ಓದಿ: ಶಿಕ್ಷಕರು ಕೆಂಪು ಪೆನ್, ವಿದ್ಯಾರ್ಥಿಗಳು ಕಪ್ಪು-ನೀಲಿ ಬಣ್ಣದ ಪೆನ್ನನ್ನೇ ಯಾಕೆ ಬಳಸುತ್ತಾರೆ?
ತನ್ನ ಮರಿಯನ್ನು ರಕ್ಷಿಸಲು ಹೋದ ಆನೆ
ತಾಯಿ ಎಂತಹ ಸಂದರ್ಭಲ್ಲಾದರೂ ಅಥವಾ ಎಲ್ಲೇ ಇದ್ದರೂ ಆಕೆ ಯಾವಾಗಲೂ ತನ್ನ ಮಕ್ಕಳ ರಕ್ಷಣೆಗೆ ಮುಂದಿರುತ್ತಾಳೆ. ಸಂಕಷ್ಟದ ಸಂದರ್ಭದಲ್ಲೂ ತನ್ನ ಬಗ್ಗೆ ಚಿಂತಿಸದೆ, ತನ್ನ ಮಕ್ಕಳನ್ನು ಕಾಪಾಡಲು ಬಯಸುತ್ತಾಳೆ. ಇದಕ್ಕಾಗಿ ಎಂತಹ ಅಪಾಯದ ವಿರುದ್ಧ ಹೋರಾಡಲು ಸಿದ್ಧವಾಗುತ್ತಾಳೆ.
ಇದರಲ್ಲಿ ಮನುಷ್ಯರಿಗೆ ಪ್ರಾಣಿಗಳು ಕೂಡ ಸಮಾನರಾಗಿ ನಿಲ್ಲುತ್ತವೆ. ಇಲ್ಲೊಂದು ವಿಡಿಯೋದಲ್ಲಿ ತಾಯಿಯು ತನ್ನ ಮಗುವಿಗಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಲು ಸಿದ್ದಳಾಗಿದ್ದಾಳೆ. ನಾವು ಹೇಳುತ್ತಿರುವುದು ಯಾವುದೋ ಮನುಷ್ಯರ ಬಗ್ಗೆ ಅಲ್ಲ, ಒಂದು ಆನೆಯ ಬಗ್ಗೆ. ತನ್ನ ಮರಿಯನ್ನು ಕೊಲ್ಲಲು ಯತ್ನಿಸಿದ್ದ ಮೊಸಳೆ ವಿರುದ್ಧ ಹೋರಾಡಿ ಕಾಪಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
The extent to which elephants can go in protecting their calves is mind boggling. Here is a small incidence. The Crocodile had to surrender 👌 pic.twitter.com/ntbmBtZm9F
— Susanta Nanda (@susantananda3) April 14, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ