Video: ಹಲಸಿನ ಹಣ್ಣಿನ ಸುವಾಸನೆಗೆ ಮರವೇರಿದ ಗಜರಾಜ!; ಅವನಿಗೂ ತಿನ್ನಬೇಕೆಂಬ ಆಸೆ ಇರಲ್ವೇ!

Viral Video: ಹಲಸಿನ ಹಣ್ಣಿನ ಸೀಸನ್​ನಲ್ಲಿ ಕಾಡು ಪ್ರಾಣಿಗಳು ಅದರ ಪರಿಮಳಕ್ಕೆ ಕಾಡಿನಿಂದ ಓಡಿ ನಾಡಿಗೆ ಬರುತ್ತವೆ. ಅಷ್ಟು ರುಚಿಕರವಾರ ಈ ಹಣ್ಣನ್ನು ತಿನ್ನಲು ಕೋತಿಗಳು, ಹಕ್ಕಿಗಳು, ಬಾವಲಿಗಳು ಮರದ ಬುಡದಲ್ಲಿ ತಾಂಡ ಹೂಡಿರುತ್ತವೆ. ಅಷ್ಟೇ ಏಕೆ ಆನೆಗಳು ಕೂಡ ಹಲಸಿನ ಹಣ್ಣಿಗಾಗಿ ಓಡಿ ಬರುತ್ತವೆ. ಮರಹತ್ತಿ ಹಣ್ಣು ಕಿತ್ತು ತಿನ್ನುತ್ತವೆ ಅದಕ್ಕೆ ಉದಾರಣೆ ಎಂಬಂತೆ ಇಲ್ಲೊಂದು ದೃಶ್ಯವಿದೆ ನೋಡಿ.

news18-kannada
Updated:May 26, 2020, 10:38 PM IST
Video: ಹಲಸಿನ ಹಣ್ಣಿನ ಸುವಾಸನೆಗೆ ಮರವೇರಿದ ಗಜರಾಜ!; ಅವನಿಗೂ ತಿನ್ನಬೇಕೆಂಬ ಆಸೆ ಇರಲ್ವೇ!
ಆನೆ
  • Share this:
ಬೇಸಿಗೆ ಕಾಲ, ಹಲಸಿನ ಹಣ್ಣಿನ ಸೀಸನ್​ ಬೇರೆ. ಮಲೆನಾಡಿನ ಸಾಕಷ್ಟು ಜನರ ಮನೆಯಲ್ಲಿ ಹಲಸಿನ ಕಾಯಿ ಹಪ್ಪಳ, ಸಂಡಿಗೆ ರೆಡಿಯಾಗಿರುತ್ತದೆ. ರುಚಿಕರವಾದ ಹಲಸಿನ ಹಣ್ಣು ಮತ್ತು ಅದರಿಂದ ತಯಾರಿಸುವ ಕಾದ್ಯಗಳನ್ನು ಮನುಷ್ಯರೇ ಇಷ್ಟ ಪಟ್ಟರೆ, ಇನ್ನು ಪ್ರಾಣಿಗಳು ಎಷ್ಟು ಇಷ್ಟ ಪಡಬಲ್ಲದು ಊಹನೆ ಮಾಡಿ!

ಹಲಸಿನ ಹಣ್ಣಿನ ಸೀಸನ್​ನಲ್ಲಿ ಕಾಡು ಪ್ರಾಣಿಗಳು ಅದರ ಪರಿಮಳಕ್ಕೆ ಕಾಡಿನಿಂದ ಓಡಿ ನಾಡಿಗೆ ಬರುತ್ತವೆ. ಅಷ್ಟು ರುಚಿಕರವಾರ ಈ ಹಣ್ಣನ್ನು ತಿನ್ನಲು ಕೋತಿಗಳು, ಹಕ್ಕಿಗಳು, ಬಾವಲಿಗಳು ಮರದ ಬುಡದಲ್ಲಿ ಬೀಡುಬಿಟ್ಟಿರುತ್ತವೆ. ಅಷ್ಟೇ ಏಕೆ ಆನೆಗಳು ಕೂಡ ಹಲಸಿನ ಹಣ್ಣಿಗಾಗಿ ಓಡಿ ಬರುತ್ತವೆ. ಮರಹತ್ತಿ ಹಣ್ಣು ಕಿತ್ತು ತಿನ್ನುತ್ತವೆ ಅದಕ್ಕೆ ಉದಾರಣೆ ಎಂಬಂತೆ ಇಲ್ಲೊಂದು ದೃಶ್ಯವಿದೆ ನೋಡಿ.

 




ಆನೆಯೊಂದು ಹಲಸಿನ ಪರಿಮಳಕ್ಕೆ ಓಡಿ ಬಂದು ಮರಹತ್ತಿ ಹಣ್ಣು ಕೀಳುತ್ತಿದೆ. ಸಿಹಿಯಾದ ಈ ಹಣ್ಣನ್ನು ತಿನ್ನಲು ಗಜರಾಜನಿಗೂ ಆಸೆಯಾಗಿದೆ ಎಂಬುದು ಈ ದೃಶ್ಯದಲ್ಲಿ ಘೋಚರಿಸುತ್ತದೆ. ಇತ್ತೀಚೆಗೆ ಐಎಫ್​ಎಸ್​ ಅಧಿಕಾರಿ ಸಾಕೇತ್​ ಬುಡೇಟಾ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಳೇಯ ದೃಶ್ಯವನ್ನ ಶೇರ್​ ಮಾಡಿದ್ದಾರೆ. ನಿಮಗೆ ಹಲಸಿನ ಹಣ್ಣು ಇಷ್ಟವಾದರೆ ಅದು ನಿಮ್ಮನ್ನ ಮರ ಹತ್ತುವಂತೆ ಮಾಡುತ್ತದೆ ಎಂದು ಅಡಿಬರಹ ಬರೆದಿದ್ದಾರೆ. ಸದ್ಯ ಈ ವೀಡಿಯೋ ವೈರಲ್​ ಆಗುತ್ತಿದೆ.

ಮನುಷ್ಯರಿಗೆ ಹಲಸಿನ ಹಣ್ಣು ಎಷ್ಟು ಇಷ್ಟವೋ ಅಷ್ಟೇ ಪ್ರಾಣಿಗಳಿಗೂ ಇಷ್ಟ. ಹಾಗಾಗಿ ಈ ಸೀಸನ್​ನಲ್ಲಿ ಆನೆಗಳು ನಿಮ್ಮ ಮನೆಯ ತೋಟದಲ್ಲಿ ನೆಟ್ಟಿರುವ ಹಲಸಿನ ಹಣ್ಣನ್ನು ತಿನ್ನಲು ಬಂದರು ಅಚ್ಚರಿ ಪಡಬೇಕಾದ ಅವಶ್ಯಕತೆಯೇನಿಲ್ಲ. ಅವುಗಳಿಗೂ ಮನುಷ್ಯನಂತೆ ಆಸೆ ಇರಲ್ವೇ!.
First published: May 26, 2020, 9:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading