First Love: ಹೊಂಬಣ್ಣದ ಕೂದಲು, ನೀಲಿ ಕಣ್ಣು- ತನ್ನ ಮೊದಲ ಪ್ರೀತಿಯನ್ನು ನೆನಪಿಸಿಕೊಂಡ ವೃದ್ಧೆ, ವಿಡಿಯೋ ವೈರಲ್

ಓ ನನ್ನ ದೇವರೇ, ಅವರು ತುಂಬಾನೇ ಮುದ್ದಾಗಿದ್ದರು. ಅವರು ದೊಡ್ಡ ಫುಟ್ಬಾಲ್ ಆಟಗಾರರಾಗಿದ್ದರು. ಅವರು ಹೊಂಬಣ್ಣದ, ಗುಂಗುರು ಕೂದಲು, ನೀಲಿ ಕಣ್ಣುಗಳು ಮತ್ತು ಯಾರನ್ನಾದರೂ ಸೆಳೆಯುವ ಮುಗುಳ್ನಗೆಯನ್ನು ಹೊಂದಿದ್ದರು - ವೃದ್ಧೆ ತಮ್ಮ ಮೊದಲ ಪ್ರೀತಿಯನ್ನು ವಿವರಿಸಿದ್ದು ಹೀಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುತೇಕರಿಗೆ ಅವರು ಶಾಲೆಗೆ ಹೋದ ಮೊದಲ ದಿನ, ಕಾಲೇಜು ಮೆಟ್ಟಿಲು ಹತ್ತಿದ ಮೊದಲ ದಿನ ಮತ್ತು ಹೀಗೆ ಬಾಲ್ಯದಲ್ಲಿ (Childhood) ತಮ್ಮ ಸ್ನೇಹಿತರೊಂದಿಗೆ (Friends) ಕಳೆದಂತಹ ಅನೇಕ ಸುಮಧುರ ಕ್ಷಣಗಳ ನೆನಪುಗಳು ಮನಸ್ಸಿನಲ್ಲಿ ಹಾಗೆ ಉಳಿದಿರುತ್ತವೆಮುಖದಲ್ಲಿ ಮೊದಲ ಬಾರಿಗೆ ಮೀಸೆ ಚಿಗುರಿದಾಗ ಶಾಲೆಯಲ್ಲಿ ಪಕ್ಕದ ಸಾಲಿನ ಬೆಂಚ್ ಮೇಲೆ ಕುಳಿತ ಎರಡು ಜಡೆಗಳನ್ನು ಹಾಕಿಕೊಂಡ ಯಾವುದೋಒಂದು ಹುಡುಗಿಯನ್ನು ನೋಡಿ ಪ್ರೀತಿ (Love) ಆಗಿದ್ದು, ಹೀಗೆ ಎಲ್ಲಾ ರೀತಿಯ ಅನುಭವಗಳು (Experience) ಬಹುತೇಕರ ಜೀವನದಲ್ಲಿ ಆಗಿರುತ್ತವೆ.

ಆದರೆ ಬಹುತೇಕರಿಗೆ ತಮಗೆ ಆದಂತಹ ಮೊದಲ ಪ್ರೀತಿಯ ಬಗ್ಗೆ ಅವರಿಗೆ ನೆನಪು ಸದಾ ಮನಸ್ಸಿನಲ್ಲಿ ಅಳಿಸಿ ಹೋಗದಂತೆ ಹಾಗೆ ಉಳಿದಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಾವು ನಮ್ಮ ಸುತ್ತಮುತ್ತಲೂ ಅನೇಕ ಹಿರಿಯರು ತಮ್ಮ ಕಾಲೇಜಿನ ದಿನಗಳನ್ನು ಜ್ಞಾಪಿಸಿಕೊಂಡು ಅವರು ಮಾಡಿದ ತುಂಟಾಟ ಮತ್ತು ತರಲೆ ಕೆಲಸಗಳ ಬಗ್ಗೆ ಕಿರಿಯರಿಗೆ ಹೇಳುತ್ತಾ ಇರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡುತ್ತೇವೆ.

ಪ್ರೀತಿಯ ಮಧುರ ಕ್ಷಣ

ಯಾರಾದರೂ ತಮ್ಮ ಮೊದಲ ಪ್ರೀತಿಯನ್ನು ನೆನಪಿಸಿಕೊಳ್ಳುವಾಗ ಅದು ಯಾವಾಗಲೂ ಅವರಿಗೆ ಒಂದು ಮಧುರವಾದ ಕ್ಷಣವಾಗಿರುತ್ತದೆ ಎಂದು ಹೇಳಬಹುದು. ಅವರಿಗೆ ಎಷ್ಟೇ ವಯಸ್ಸಾಗಿದ್ದರೂ ಸಹ ನೆನಪು ಮಾತ್ರ ಹಾಗೆ ಇರುತ್ತದೆ. ಜನರು ತಮ್ಮ ಮೊದಲ ಪ್ರೀತಿಯ ಬಗ್ಗೆ ನೆನಪಿಸಿಕೊಂಡಾಗ, ಅವರ ಕಣ್ಣುಗಳಲ್ಲಿ ನೀರು ತುಂಬಿ ಬರುವುದು ಸಹಜ ಮತ್ತು ಅದನ್ನು ನೋಡಿದರೆ ನಿಜವಾಗಿಯೂ ಎಂತಹವರ ಹೃದಯವು ಕರಗುತ್ತದೆ.

ವೈರಲ್ ವಿಡಿಯೋ ನೆಟ್ಟಿಗರ ಮನಸು ಗೆದ್ದಿತು

ಅರೆ ಇವತ್ತೇಕೆ ಮೊದಲ ಪ್ರೀತಿಯ ಬಗ್ಗೆ ಇಷ್ಟೊಂದು ಪೀಠಿಕೆ ಹಾಕುತ್ತಿದ್ದೇವೆ ಎಂದು ನಿಮಗೆ ಅನ್ನಿಸಬಹುದು. ಹೌದು.. ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತನ್ನ ಮೊದಲ ಪ್ರೀತಿಯನ್ನು ನೆನಪಿಸಿಕೊಳ್ಳುವ ವೃದ್ಧ ಮಹಿಳೆಯ ವಿಡಿಯೋವನ್ನು ಒಮ್ಮೆ ನೋಡಿ. ಅವರು ತಮ್ಮ ಮೊದಲ ಪ್ರೀತಿಯನ್ನು ನೆನಪಿಸಿಕೊಳ್ಳುತ್ತಿದ್ದಂತೆ, ಅವರ ಮುಖದಲ್ಲಿ ಮೂಡುವ ಭಾವನೆಗಳು ನಿಮ್ಮ ಹೃದಯವನ್ನು ಬೆಚ್ಚಗಾಗಿಸುತ್ತದೆ ಮತ್ತು ನಿಮ್ಮನ್ನು ಬೆರಗುಗೊಳಿಸದೆ ಇರದು.






2.10 ಲಕ್ಷಕ್ಕೂ ಹೆಚ್ಚು ವೀಕ್ಷಣೆ

ವಿಡಿಯೋವನ್ನು ಮಾರ್ಚ್ 7 ರಂದು ಸದರನ್‌ ಸೀನಿಯರ್‌ ಲಿವಿಂಗ್ನ್ಯೂಸ್ ಎಂಬ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 2.10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ: Kali Temple: ಈ ದೇವಸ್ಥಾನದಲ್ಲಿ ಪ್ರಸಾದದ ರೂಪದಲ್ಲಿ ಸಿಗುತ್ತೆ ನೂಡಲ್ಸ್, ಫ್ರೈಡ್ ರೈಸ್ ನಂತರ ಚೈನಿಸ್ ಫುಡ್​

ಹೊಂಬಣ್ಣದ, ಗುಂಗುರು ಕೂದಲು, ನೀಲಿ ಕಣ್ಣುಗಳು

ವಿಡಿಯೋದಲ್ಲಿ, ವಯಸ್ಸಾದ ಮಹಿಳೆಯನ್ನು "ನಿಮ್ಮ ಮೊದಲ ಪ್ರೀತಿ ಯಾರು" ಎಂದು ಪ್ರಶ್ನೆಯೊಂದನ್ನು ಕೇಳಲಾಗುತ್ತದೆ. ಅದಕ್ಕೆ ಅವರು "ನನ್ನ ಮೊದಲ ಪ್ರೀತಿ ನನ್ನ ಮೊದಲ ಪತಿ" ಎಂದು ಉತ್ತರಿಸುತ್ತಾಳೆ. ನೀವು ಅವರನ್ನು ಏಕೆ ಅಷ್ಟೊಂದು ಪ್ರೀತಿಸಿದಿರಿ ಎಂದು ಕೇಳಿದಾಗ, ಅವರು " ನನ್ನ ದೇವರೇ, ಅವರು ತುಂಬಾನೇ ಮುದ್ದಾಗಿದ್ದರು." "ಅವರು ದೊಡ್ಡ ಫುಟ್ಬಾಲ್ ಆಟಗಾರರಾಗಿದ್ದರು. ಅವರು ಹೊಂಬಣ್ಣದ, ಗುಂಗುರು ಕೂದಲು, ನೀಲಿ ಕಣ್ಣುಗಳು ಮತ್ತು ಯಾರನ್ನಾದರೂ ಸೆಳೆಯುವ ಮುಗುಳ್ನಗೆಯನ್ನು ಹೊಂದಿದ್ದರು ಮತ್ತು ಅವರು ಎಲ್ಲಕ್ಕಿಂತಲೂ ಹೆಚ್ಚಿಗೆ ನನ್ನ ಪ್ರಿಯಕರನಾಗಿದ್ದನು" ಎಂದು ಮಹಿಳೆ ತನ್ನ ಮೊದಲ ಗಂಡನನ್ನು ನೆನಪಿಸಿಕೊಳ್ಳುತ್ತಾರೆ.

ಇದನ್ನೂ ಓದಿ: Woman Married Pet Cat: 5 ವರ್ಷದ ಲವ್, ಸಾಕು ಬೆಕ್ಕನ್ನು ಮದುವೆಯಾದ ಮಹಿಳೆ!

"ನಾನು ಇವರ ಕಥೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವಿಡಿಯೋ ನೋಡಿದ ಮೇಲೆ ಕಾಮೆಂಟ್ ಮಾಡಿದ್ದಾರೆ. "ಇದನ್ನು ನಾನು ತುಂಬಾನೇ ಪ್ರೀತಿಸುತ್ತೇನೆ..! ವಯಸ್ಸಾದವರು ಸಹ ಒಂದು ಕಾಲದಲ್ಲಿ ಚಿಕ್ಕವರಾಗಿದ್ದರು. ಗುಂಗುರು ಕೂದಲಿನ, ನೀಲಿ ಕಣ್ಣುಗಳ, ಪ್ರಕಾಶಮಾನವಾದ ನಗುವ ಫುಟ್ಬಾಲ್ ಆಟಗಾರನನ್ನು ನಾನು ಸಹ ಪ್ರೀತಿಸುತ್ತಿದ್ದೇನೆ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಮೂರನೆಯ ವ್ಯಕ್ತಿಯು "ಅವರು ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. "ಅವರ ಕಣ್ಣುಗಳು..ಅವರ ಜೀವನದ ಇಡೀ ಕಥೆಯನ್ನು ಹೇಳುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Divya D
First published: