Viral Video: ವಾವ್! ಈ ವೃದ್ದ ದಂಪತಿಗಳಲ್ಲಿರುವ ಪ್ರೀತಿ ಒಮ್ಮೆ ನೋಡಿ; ಇವರ ಪ್ರೀತಿಗೆ ನೆಟ್ಟಿಗರು ಫಿದಾ

ದಂಪತಿಗಳು ಪರಸ್ಪರರ ಜೊತೆಯಲ್ಲಿ ಸಂಸಾರವನ್ನು ಜೋಡಿ ಎತ್ತುಗಳು ಗಾಡಿಯನ್ನು ಎಳೆದುಕೊಂಡು ಹೋದಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಮತ್ತು ಜೀವನ ಪರ್ಯಂತ ಒಟ್ಟಿಗೆ ಕಳೆಯುವುದರಲ್ಲಿ ಅತ್ಯಂತ ವಿಶೇಷವಾದದ್ದೊಂದಿದೆ. ವೃದ್ಧ ದಂಪತಿಗಳ ನಡುವಿನ ಪ್ರೀತಿ ಮತ್ತು ಕಾಳಜಿಯನ್ನು ಪ್ರದರ್ಶಿಸುವ ಅಂತಹ ಒಂದು ಮುದ್ದಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ.

ವೃದ್ದ ದಂಪತಿಗಳು

ವೃದ್ದ ದಂಪತಿಗಳು

  • Share this:
ಸಾಮಾನ್ಯವಾಗಿ ಈಗೆಲ್ಲಾ ಮದುವೆಯಾಗಿ (Marriage) ಕೆಲವೇ ಕೆಲವು ವರ್ಷಗಳಲ್ಲಿ ಚಿಕ್ಕ ಪುಟ್ಟ ಕಾರಣಕ್ಕೆ ಕಿತ್ತಾಡಿಕೊಂಡು ದಂಪತಿಗಳು (Couple) ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತಹ ದಂಪತಿಗಳನ್ನು ನಾವು ನೋಡಿದಾಗ ಅಥವಾ ಅವರ ಕಥೆ ಕೇಳಿದಾಗ, ನಮಗೆ ಗಂಡ ಮತ್ತು ಹೆಂಡತಿಯ (Husband and Wife) ನಡುವಿನ ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ಹೊಂದಾಣಿಕೆ ಇಷ್ಟೇನಾ? ಇಷ್ಟಕ್ಕೆ ಜಗಳ (Fight) ಆಡಿಕೊಂಡು ಬೇರೆ ಬೇರೆ ಆಗುತ್ತಾರಾ? ಅಂತೆಲ್ಲಾ ಅನ್ನಿಸುತ್ತದೆ. ಆದರೆ ಇಂತಹ ಜೋಡಿಗಳ ನಡುವೆ ಮದುವೆ ಎಂಬ ಮೂರು ಅಕ್ಷರದ ಪದಕ್ಕೆ ನಿಜವಾದ ಅರ್ಥ ನೀಡುವಂತೆ ಬದುಕಿರುವ ಜೀವಗಳು ನಮ್ಮ ಮಧ್ಯೆ ಇರುತ್ತಾರೆ.

ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹೀಗೆ ಯಾವುದೋ ಒಂದು ಕಾರಣಕ್ಕೆ ಕಿತ್ತಾಡಿಕೊಂಡು ಗಂಡ ಹೆಂಡತಿ ಇಬ್ಬರು ಬೇರೆ ಬೇರೆ ಆಗಿರುವ ಅಥವಾ ಗಂಡನು ಹೆಂಡತಿಗೆ ನಂಬಿಕೆ ದ್ರೋಹ ಮಾಡಿದ ಅಥವಾ ಹೆಂಡತಿ ತನ್ನ ಗಂಡನಿಗೆ ಮೋಸ ಮಾಡಿರುವ ಪ್ರಕರಣಗಳ ಪೋಸ್ಟ್ ಗಳನ್ನು ನೋಡುತ್ತಿದ್ದೇವೆ. ಆದರೆ ವಯಸ್ಸಾದ ದಂಪತಿಗಳ ನಡುವಿನ ಪ್ರೀತಿಯನ್ನು ತೋರಿಸುವ ವಿಡಿಯೋಗಳು ನೋಡಲು ಯಾವಾಗಲೂ ಹೃದಯಸ್ಪರ್ಶಿಯಾಗಿರುತ್ತವೆ.

ವೃದ್ದ ದಂಪತಿಗಳಲ್ಲಿರುವ ಪ್ರೀತಿ ಒಮ್ಮೆ ನೋಡಿ
ದಂಪತಿಗಳು ಪರಸ್ಪರರ ಜೊತೆಯಲ್ಲಿ ಸಂಸಾರವನ್ನು ಜೋಡಿ ಎತ್ತುಗಳು ಗಾಡಿಯನ್ನು ಎಳೆದುಕೊಂಡು ಹೋದಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಮತ್ತು ಜೀವನ ಪರ್ಯಂತ ಒಟ್ಟಿಗೆ ಕಳೆಯುವುದರಲ್ಲಿ ಅತ್ಯಂತ ವಿಶೇಷವಾದದ್ದೊಂದಿದೆ. ವೃದ್ಧ ದಂಪತಿಗಳ ನಡುವಿನ ಪ್ರೀತಿ ಮತ್ತು ಕಾಳಜಿಯನ್ನು ಪ್ರದರ್ಶಿಸುವ ಅಂತಹ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನೋಡಿ.ಇದನ್ನೂ ಓದಿ: Teacher and Children: ಶಿಕ್ಷಕಿಯ ಚಿತ್ರ ಬಿಡಿಸಿದ ಪುಟಾಣಿಗಳು; ಮುಗ್ಧ ಮನಸ್ಸಿನ ಕ್ರಿಯಾತ್ಮಕತೆಗೆ ಭೇಷ್ ಎಂದ ನೆಟ್ಟಿಗರು

ಈ 15 ಸೆಕೆಂಡಿನ ವಿಡಿಯೋದಲ್ಲಿ, ವೃದ್ದ ದಂಪತಿಗಳು ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು, ಆದರೆ ಮಹಿಳೆ ತನ್ನ ಗಂಡನಿಗೆ ಪ್ರೀತಿಯಿಂದ ಆಹಾರ ತಿನ್ನಿಸಿ ನಂತರ ನೀರನ್ನು ಕುಡಿಸುತ್ತಿರುವುದನ್ನು ನಾವು ಇಲ್ಲಿ ನೋಡಬಹುದಾಗಿದೆ.

ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಡಾ.ಸುಮಿತಾ ಮಿಶ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹೃದಯಸ್ಪರ್ಶಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ, 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡನ್ನು ಸಹ ಹಾಕಿರುವುದು ಈ ವಿಡಿಯೋದ ಅಂದ ಚೆಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೃದ್ದ ದಂಪತಿಗಳ ನಡುವಿನ ಭಾವನಾತ್ಮಕ ಬಂಧವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ ಮತ್ತು ಪ್ರೇರೇಪಿತರಾಗಿದ್ದಾರೆ. ಕೆಲವರು ಒಬ್ಬರನ್ನೊಬ್ಬರು ಹೀಗೆ ಪ್ರೀತಿ ಮಾಡಲು ತುಂಬಾ ಅದೃಷ್ಟ ಮಾಡಿರಬೇಕು ಎಂದು ಹೇಳಿದರೆ, ಇನ್ನೂ ಕೆಲವು ಜನರು ಇದನ್ನು ನಿಜವಾದ ಪ್ರೀತಿ ಎಂದು ಕರೆದಿದ್ದಾರೆ.

ವಿಡಿಯೋ ಸಿಕ್ಕಾಪಟ್ಟೆ ವೈರಲ್
ಈ ವಿಡಿಯೋವನ್ನು ಲಕ್ಷಾಂತರ ಜನರು ನೋಡಿದ್ದು, 5000 ಕ್ಕೂ ಹೆಚ್ಚು ಬಾರಿ ಈ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ ಮತ್ತು 37,000ಕ್ಕೂ ಹೆಚ್ಚು ಲೈಕ್ ಗಳು ಸಹ ಈ ವಿಡಿಯೋಗೆ ಲಭಿಸಿವೆ.

ಇದನ್ನೂ ಓದಿ:  Girl's Campaign: ಶಾಲೆ ವಿರುದ್ಧವೇ ಸಿಡಿದೆದ್ದ ವಿದ್ಯಾರ್ಥಿನಿ! ಬಾಲಕಿಯರ ಮಾನ ಕಾಪಾಡಲು ಅಭಿಯಾನ

ಈ ವಿಡಿಯೋ ಹಂಚಿಕೊಂಡಿದ್ದಕ್ಕೆ ಒಬ್ಬ ಬಳಕೆದಾರರು ಐಎಎಸ್ ಅಧಿಕಾರಿ ಡಾ.ಸುಮಿತಾ ಮಿಶ್ರಾ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು "ಇದು ನಿಜವಾದ ಪ್ರೀತಿ ಮತ್ತು ವಾತ್ಸಲ್ಯ" ಎಂದು ಹೇಳಿದರು. "ಜೀವನದಲ್ಲಿ, ಸಾಯುವವರೆಗೂ ಒಟ್ಟಿಗೆ ಇರುವ ಇಂತಹ ಸಂಗಾತಿಯನ್ನು ನಾವು ಬಯಸುತ್ತೇವೆ" ಎಂದು ಮೂರನೆಯವರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: