ಹಾಡು ಕಲಿತೋ ನೃತ್ಯ ತರಗತಿಗಳಿಗೆ ಸೇರಿಯೋ ಪರ್ಫೆಕ್ಟ್ ಡ್ಯಾನ್ಸರ್ (Dancer) ಇಲ್ಲವೇ ಹಾಡುಗಾರರು ಆಗಬೇಕಾಗಿಲ್ಲ. ನಿಮ್ಮ ಮನಸ್ಸಿಗೆ ತಕ್ಕಂತೆ ಯಾವುದೇ ನಾಚಿಕೆ ಹಮ್ಮು ಬಿಮ್ಮು ಬಿಟ್ಟು ಕುಣಿದರೂ ಅದೊಂದು ಸುಂದರ ನೃತ್ಯವಾಗುತ್ತದೆ ಎಂಬುದಕ್ಕೆ ವಿವಾಹ (Marriage) ಆರತಕ್ಷತೆಯಲ್ಲಿ ನೃತ್ಯಗೈದ ಮಹಿಳೆ ನಿದರ್ಶನವಾಗಿದ್ದಾರೆ. ಪಂಜಾಬಿ ಹಾಡೊಂದಕ್ಕೆ ಮನಸು ಬಿಚ್ಚಿ ನೃತ್ಯಗೈದಿರುವ ರೇಖಾ ಬಜಾಜ್ ಇದೀಗ ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದು, ವಯಸ್ಸು ಬರೇ ಸಂಖ್ಯೆ ಎಂಬುದನ್ನು ತೋರಿಸಿದ್ದಾರೆ. ರೇಖಾ ಬಜಾಜ್ ಹೆಸರಿನ ಈ ಮಹಿಳೆ
(Women) ತಮ್ಮ ಪರಿಚಿತರ ವಿವಾಹ ಆರತಕ್ಷತೆಯಲ್ಲಿ ಮನಸು ಬಿಚ್ಚಿ ನೃತ್ಯಗೈದಿದ್ದು ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ ಮತ್ತು ಇವರ ನೃತ್ಯದ ನೋಡಿ ಪರವಶರಾಗಿರುವ ನೆಟ್ಟಿಗರು ಇಂತಹ ನೃತ್ಯ ಸಂಗಾತಿ ನಮಗೂ ಬೇಕು ಎಂದು ಬೇಡಿಕೆಯನ್ನಿಟ್ಟಿದ್ದಾರೆ.
ಪಂಜಾಬಿ ಹಾಡಿಗೆ ನೃತ್ಯಗೈದ ಮಹಿಳೆ
ಮಹಿಳೆಯೊಬ್ಬರು ಪಂಜಾಬಿ ಹಾಡಾದ ಢೋಲ್ ಜಗೀರೊ ದ ಹಾಡಿಗೆ ಉತ್ಸಾಹದಿಂದ ಹೆಜ್ಜೆಹಾಕಿದ್ದು ಸಾಮಾಜಿಕ ತಾಣದಲ್ಲಿ ಈ ವಿಡಿಯೋ ಇದೀಗ ಕಾಳ್ಗಿಚ್ಚಿನಂತೆ ಹರಡಿದೆ. ಅಂತರ್ಜಾಲದಲ್ಲಿ ವೈರಲ್ ಆದ ವಿಡಿಯೋಗೆ ಮನಸೋತಿರುವ ಬಳಕೆದಾರರು ಮಹಿಳೆಯ ಕುಣಿತದ ಹೆಜ್ಜೆಗಳು ಹಾಗೂ ಸುಂದರವಾಗಿ ಹಾಡಿಗೆ ತಕ್ಕಂತೆ ನೃತ್ಯಗೈಯ್ಯುತ್ತಿರುವುದು ನೋಡುಗರನ್ನು ಬೆರಗಾಗಿಸುವಂತೆ ಮಾಡಿದೆ.
View this post on Instagram
ಈ ವಿಡಿಯೋವನ್ನು ಶೈಲಾರ್ಮಿ ಹೆಸರಿನ ಇನ್ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿದ್ದು, ಅತೀ ಸುಂದರವಾದ ಶೀರ್ಷಿಕೆಯನ್ನು ನೀಡಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಎಂಬುದಕ್ಕೆ ಇದು ಸೂಕ್ತವಾದ ಉದಾಹರಣೆಯಾಗಿದೆ. ಮ್ಯಾಡಮ್ ನೀವು ನಿಜಕ್ಕೂ ಅದ್ಭುತ ನೃತ್ಯಗಾತಿ ಎಂದು ನೃತ್ಯಗೈದಿರುವ ರೇಖಾ ಬಜಾಜ್ ಎಂಬ ಹೆಸರಿನ ಮಹಿಳೆಯನ್ನು ಕೊಂಡಾಡಿದ್ದು ಅವರನ್ನು ಟ್ಯಾಗ್ ಮಾಡಿದ್ದಾರೆ.
ಈ ವಿಡಿಯೋವು ಎಷ್ಟು ಜನಪ್ರಿಯವಾಗಿದೆ ಎಂದರೆ ಒಂದು ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆ ಹಾಗೂ 117 ಸಾವಿರ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ರೇಖಾ ಅವರ ನೃತ್ಯವನ್ನು ನೋಡಿ ಮೆಚ್ಚುಗೆ ಸೂಚಿಸಿರುವ ಬಳಕೆದಾರರು ಹರೆಯದ ಹುಡುಗಿಯಂತೆ ಹೆಜ್ಜೆಹಾಕಿರುವುದನ್ನು ನೋಡಿ ಮನಸ್ಫೂರ್ತಿಯಾಗಿ ಕಾಮೆಂಟ್ ಮಾಡಿದ್ದಾರೆ.
ಕೆಂಪು ಬಣ್ಣದ ಸೀರೆಯಲ್ಲಿ ಸಖತ್ ಹೆಜ್ಜೆಹಾಕಿದ ಮಹಿಳೆ
ವಿಡಿಯೋ ಕ್ಲಿಪ್ನಲ್ಲಿ ಮಹಿಳೆಯು ಸುಂದರವಾದ ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದು ವಿವಾಹದ ರಿಸೆಪ್ಶನ್ನಲ್ಲಿ ನೃತ್ಯಗೈಯ್ಯುತ್ತಿರುವುದಾಗಿ ಕಂಡುಬಂದಿದೆ. ಢೋಲ್ ಜಗೀರೋ ದಾ ಹಾಡಿಗೆ ಮಹಿಳೆಯು ಮನಸ್ಫೂರ್ತಿಯಾಗಿ ನೃತ್ಯಮಾಡಿದ್ದು ಕಾರ್ಯಕ್ರಮದಲ್ಲಿದ್ದವರನ್ನು ರಂಜಿಸಿದ್ದಾರೆ. ಈ ವಿಡಿಯೋ ನೋಡಿದರೆ ನಿಮ್ಮ ಕಾಲುಗಳು ಕೂಡ ಕುಣಿಯಲು ಆರಂಭಿಸುವುದು ಗ್ಯಾರಂಟಿ ಎಂದು ನೆಟ್ಟಿಗರು ಬರೆದುಕೊಂಡಿದ್ದಾರೆ.
ಮಹಿಳೆಯ ನೃತ್ಯ ನೋಡಿ ನಮಗೂ ಇಂತಹದ್ದೇ ಸಂಗಾತಿ ಬೇಕು ಎಂದು ಬೇಡಿಕೆ ಇಟ್ಟ ಬಳಕೆದಾರರು
ಮಹಿಳೆಯ ಉತ್ಸಾಹ ಹಾಗೂ ಆಕೆಯ ಅದ್ಭುತ ಭಾಂಗ್ರಾ ನೃತ್ಯಕ್ಕೆ ನೆಟ್ಟಿಗರು ಮನಸೋತಿದ್ದು ಕಾಮೆಂಟ್ ವಿಭಾಗದಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಮಹಿಳೆಯ ಆತ್ಮವಿಶ್ವಾಸ, ಉತ್ಸಾಹ ಹಾಗೂ ಜೀವನವನ್ನು ಆಹ್ಲಾದಿಸುವ ಪ್ರೀತಿಗೆ ಹ್ಯಾಟ್ಸಾಫ್ ಎಂದಿದ್ದಾರೆ. ನೃತ್ಯಗೈದಿರುವ ಮಹಿಳೆ ರೇಖಾ ಬಜಾಜ್ ನೆಟ್ಟಿಗರ ಕಾಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಕಾಮೆಂಟ್ಗಳಿಗೆ ಧನ್ಯವಾದಗಳು. ಆದಿಯ ವಿವಾಹ ಸಂಭ್ರಮದಲ್ಲಿ ನಿಮ್ಮೊಂದಿಗೆ ಆಡಿ ನಲಿದಿದ್ದು ನಿಜಕ್ಕೂ ಸಂತೋಷ ಹಾಗೂ ಹರ್ಷದಾಯಕವಾಗಿತ್ತು. ಶೈಲಾರ್ಮಿ ನಿಮ್ಮ ನೃತ್ಯ ಕೂಡ ಅದ್ಭುತವಾಗಿತ್ತು. ಕೊನೆಯ ಹಾಡಿನವರೆಗೆ ಪ್ರತಿಯೊಂದು ಕ್ಷಣವನ್ನು ಆಸ್ವಾದಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ರೇಖಾ ಅವರು ನಿಜಕ್ಕೂ ಸ್ಫೂರ್ತಿದಾಯಕ ನೃತ್ಯಗಾತಿಯಾಗಿದ್ದು ನಾನು ಇಂತಹುದೇ ನೃತ್ಯಗಾತಿಗಾಗಿ ಹುಡುಕಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇಂಟರ್ನೆಟ್ನಲ್ಲಿ ನಾನು ನೋಡಿದ ಅತ್ಯಂತ ಉತ್ತಮ ವಿಡಿಯೋ ಇದಾಗಿದೆ ಎಂದು ಇನ್ನೊಬ್ಬ ಬಳಕೆದಾರರು ಬರೆದುಕೊಂಡಿದ್ದಾರೆ. ಮಹಿಳೆಯ ಶಕ್ತಿ ಹಾಗೂ ಜೀವನ ವಿಧಾನ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ನೃತ್ಯ ಮನಸೋಲುವಂತಿದ್ದು ನಮಗೂ ಕುಣಿಯುವಂತಾಗಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ