• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Shocking News: ಸತ್ತು 6 ವರ್ಷಗಳ ಬಳಿಕ ಮನೆ ಮಾಲೀಕನಿಗೆ ಸಿಕ್ತು ಬಾಡಿಗೆದಾರನ ಶವ! ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು?

Shocking News: ಸತ್ತು 6 ವರ್ಷಗಳ ಬಳಿಕ ಮನೆ ಮಾಲೀಕನಿಗೆ ಸಿಕ್ತು ಬಾಡಿಗೆದಾರನ ಶವ! ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು?

ಅಸ್ಥಿಪಂಜರ

ಅಸ್ಥಿಪಂಜರ

ಇಲ್ಲೊಂದು ಘಟನೆ ನಡೆದಿದೆ ನೋಡಿ, ಇದನ್ನು ಕೇಳಿದರೆ ನಿಜಕ್ಕೂ ಎಂತವರಿಗಾದರೂ ಶಾಕ್ ಆಗುತ್ತೆ.

 • Share this:

ಸಾಮಾನ್ಯವಾಗಿ ಮನೆಯನ್ನು ಬಾಡಿಗೆಗೆ ಅಂತ ಕೊಟ್ಟ ನಂತರದಲ್ಲಿ ಮನೆಯ ಮಾಲೀಕರು ಆ ಮನೆಯಲ್ಲಿ ಏನಾದರೂ ಸಮಸ್ಯೆಗಳು (Problems) ಬಂದರೆ, ಅದನ್ನು ಬಗೆಹರಿಸಲು ಮತ್ತು ಇನ್ನೊಂದು ತಿಂಗಳಿಗೊಮ್ಮೆ ಬಾಡಿಗೆ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಇತ್ತೀಚೆಗೆ ಬಾಡಿಗೆಯನ್ನು ಸಹ ಬಾಡಿಗೆದಾರರು ನೇರವಾಗಿ ಮನೆಯ ಮಾಲೀಕರ ಬ್ಯಾಂಕ್ ಖಾತೆಗೆ (Bank Account) ವರ್ಗಾಯಿಸುವುದರಿಂದ ಹೆಚ್ಚಾಗಿ ಮನೆಯ ಮಾಲೀಕರು ತಮ್ಮ ಬಾಡಿಗೆಗೆ ನೀಡಿದ ಮನೆಗಳ ಹತ್ತಿರ ಸಹ ಬರುವುದಿಲ್ಲ. ಅಲ್ಲದೆ ಅವರಿಗೆ ಅಲ್ಲಿ ಯಾರು ಬರುತ್ತಿದ್ದಾರೆ ಮತ್ತು ಯಾರು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಅಂತ ನೋಡುವುದಂತೂ ದೂರದ ಮಾತು. ಅದರಲ್ಲೂ ಸಮಯಕ್ಕೆ (Time) ಸರಿಯಾಗಿ ಬಾಡಿಗೆ ಪಾವತಿಸುವ ಬಾಡಿಗೆದಾರರನ್ನು ಮತ್ತು ಮನೆಯಲ್ಲಿ ಏನು ತೊಂದರೆಗಳನ್ನು ತಿಳಿಸದೆ ತಾವೇ ರಿಪೇರಿ ಮಾಡಿಕೊಳ್ಳುವವರಿಗೆ ಮನೆಯ ಮಾಲೀಕರು ಸಾಮಾನ್ಯವಾಗಿ ಹೆಚ್ಚು ಭೇಟಿ ಮಾಡುವುದಿಲ್ಲ.


ಬಾಡಿಗೆದಾರ ಸತ್ತು ಆರು ವರ್ಷಗಳ ಬಳಿಕ ಆತನ ಶವ ಮನೆ ಮಾಲೀಕನ ಕಣ್ಣಿಗೆ ಬಿದ್ದಿದೆ!


ಇದೆಲ್ಲದರ ಬಗ್ಗೆ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಂದು ಘಟನೆ ನಡೆದಿದೆ ನೋಡಿ, ಇದನ್ನು ಕೇಳಿದರೆ ನಿಜಕ್ಕೂ ಎಂತವರಿಗಾದರೂ ಶಾಕ್ ಆಗುತ್ತೆ. ಯುನೈಟೆಡ್ ಕಿಂಗ್ಡಮ್ ನಲ್ಲಿ ಒಬ್ಬ ಮನೆಯ ಮಾಲೀಕನಿಗೆ ತನ್ನ ಬಾಡಿಗೆದಾರನ ಶವವನ್ನು ಒಂದಲ್ಲ, ಎರಡಲ್ಲ. ಬರೋಬ್ಬರಿ ಆರು ವರ್ಷಗಳ ನಂತರ ತನ್ನ ಬಾಡಿಗೆಗೆ ಕೊಟ್ಟ ಮನೆಯಲ್ಲಿ ಕಂಡುಕೊಂಡನು. ಮನೆಯಲ್ಲಿ ಗ್ಯಾಸ್ ಸಂಪರ್ಕವನ್ನು ಪರಿಶೀಲಿಸಲು ಭೇಟಿ ನೀಡಿದಾಗ ಮನೆಯ ಮಾಲೀಕನಿಗೆ ತನ್ನ ಬಾಡಿಗೆದಾರನ ಶವ ಕಣ್ಣಿಗೆ ಬಿದ್ದಿದೆ.


ಇದನ್ನೂ ಓದಿ: ಓಲ್ಡೆಸ್ಟ್‌ ಡಾಗ್‌ ಎವರ್‌ ಎಂದು ಗಿನ್ನೆಸ್‌ ದಾಖಲೆ ಬರೆದ ನಾಯಿಗೆ ಈಗ 31 ರ ಹರೆಯ: ಬರ್ತ್​​ಡೇ ಮೂಡ್​ನಲ್ಲಿರೋ ಬೋಬಿ


ರಾಬರ್ಟ್ ಆಲ್ಟನ್ ಅವರು ಮೇ 2017 ರಲ್ಲಿ ನಿಧನರಾದಾಗ ಅವರಿಗೆ 76 ವರ್ಷ ವಯಸ್ಸಾಗಿತ್ತು, ಆದರೆ ಅವರ ದೇಹವು ಈ ವರ್ಷದ ಮಾರ್ಚ್ 9 ರಂದು ಯುಕೆಯ ಮನೆಯ ಮಾಲೀಕರ ಬೋಲ್ಟನ್ ಫ್ಲ್ಯಾಟ್ ನಲ್ಲಿ ಪತ್ತೆಯಾಗಿದೆ. ಮನೆಯ ಮಾಲೀಕರು ಬೋಲ್ಟನ್ ಅಟ್ ಹೋಮ್ ಹೌಸಿಂಗ್ ಕಂಪನಿಗೆ ಸೇರಿದವರು, ಇದು ನಗರದಾದ್ಯಂತ 18 ಸಾವಿರಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ.
ಸಾವನ್ನಪ್ಪಿದ ರಾಬರ್ಟ್ ಗೆ ಸಂಬಂಧಿಕರೆ ಇಲ್ವಂತೆ


ಮ್ಯಾಂಚೆಸ್ಟರ್ ಈವೆನಿಂಗ್ ನ್ಯೂಸ್ ವರದಿಯ ಪ್ರಕಾರ, ಬೋಲ್ಟನ್ ಅಟ್ ಹೋಮ್ ಸಿಇಒ ನೋಯೆಲ್ ಶಾರ್ಪೀ ಅವರು ಈ ಘಟನೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ದುರದೃಷ್ಟವಶಾತ್ ರಾಬರ್ಟ್ ಅವರ ಸಾವಿನ ಸುದ್ದಿ ತಿಳಿಸಲು ಅವರಿಗೆ ಯಾವುದೇ ಸಂಬಂಧಿಕರು ಇಲ್ಲ ಮತ್ತು ಅವರ ಬಾಡಿಗೆಯನ್ನು ವಸತಿ ಪ್ರಯೋಜನಗಳ ಮೂಲಕ ಪಾವತಿಸಲಾಯಿತು, ಹಾಗಾಗಿ ಮನೆಯ ಮಾಲೀಕರಿಗೆ ಇವರ ಸಾವಿನ ವಿಚಾರ ಆರು ವರ್ಷಗಳ ಕಾಲ ತಿಳಿದೇ ಇಲ್ಲ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: 84ನೇ ವಯಸ್ಸಿನಲ್ಲೂ ಯುವಕರನ್ನೇ ನಾಚಿಸುವ ಉತ್ಸಾಹ; 114 ಪದಕಗಳನ್ನು ಗೆದ್ದ ಸಾಹಸಿ ಅಜ್ಜ


"ಬೋಲ್ಟನ್ ಅಟ್ ಹೋಮ್ ನಲ್ಲಿ ಪ್ರತಿಯೊಬ್ಬರೂ ಈ ಸುದ್ದಿ ತಿಳಿದು ತುಂಬಾನೇ ಆಘಾತಕ್ಕೊಳಗಾಗಿದ್ದಾರೆ ಮತ್ತು ಅವರ ದೇಹವು ಇಷ್ಟು ದೀರ್ಘಕಾಲದವರೆಗೆ ಪತ್ತೆಯಾಗದೆ ಉಳಿದಿದೆ ಎಂದು ತಿಳಿದು ಜನರಿಗೆ ತುಂಬಾನೇ ಅಸಮಾಧಾನವಾಗಿದೆ. ಗ್ಯಾಸ್ ಸುರಕ್ಷತಾ ತಪಾಸಣೆಗೆ ವ್ಯವಸ್ಥೆ ಮಾಡಲು ಅವರು ವರ್ಷಗಳಲ್ಲಿ ರಾಬರ್ಟ್ ಅವರನ್ನು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಮನೆ ಮಾಲೀಕರು ಬಹಿರಂಗಪಡಿಸಿದರು.
ಆಲ್ಟನ್ ಅವರ ಸಾವಿನ ಬಗ್ಗೆ ಏನ್ ಹೇಳ್ತಾರೆ ಪೊಲೀಸರು?

top videos


  ಆಲ್ಟನ್ ಅವರ ಸಾವನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅನುಮಾನಾಸ್ಪದವೆಂದು ಪರಿಗಣಿಸಿಲ್ಲ. ಜುಲೈ 2022 ರಲ್ಲಿ ಈ ಕಂಪನಿಯ ಕಾರ್ಯವಿಧಾನಗಳು ಬದಲಾದವು ಮತ್ತು ಅವರು ಮನೆಯಲ್ಲಿ ವಾಸಿಸುವ ಜನರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ವಾರಂಟ್ ಮೂಲಕ ತಮ್ಮ ಮನೆಗಳನ್ನು ಪ್ರವೇಶಿಸಲು ಪ್ರಯತ್ನಿಸುವ ಪ್ರಕ್ರಿಯೆಯನ್ನು ತಕ್ಷಣವೇ ಶುರು ಮಾಡಿದರು ಎಂದು ಶಾರ್ಪೀ ಬಹಿರಂಗಪಡಿಸಿದರು. ಈ ಬದಲಾವಣೆಯಿಂದಾಗಿಯೇ ರಾಬರ್ಟ್ ಅವರ ಮನೆಯಲ್ಲಿ ಗ್ಯಾಸ್ ಸಂಪರ್ಕ ತಪಾಸಣೆಗೆ ಅಂತ ಬಂದಾಗ ಅವರ ದೇಹವು ಕೊಳೆಯುತ್ತಿರುವುದು ಕಂಡು ಬಂದಿದೆ.

  First published: