• Home
  • »
  • News
  • »
  • trend
  • »
  • Viral Video: ಟ್ರೈನಿನಲ್ಲಿ ಕೂತು ಹಿಂದಿ ಹಾಡು ಹಾಡಿದ ವಯಸ್ಸಾದ ವ್ಯಕ್ತಿ! ವಿಡಿಯೋ ವೈರಲ್​

Viral Video: ಟ್ರೈನಿನಲ್ಲಿ ಕೂತು ಹಿಂದಿ ಹಾಡು ಹಾಡಿದ ವಯಸ್ಸಾದ ವ್ಯಕ್ತಿ! ವಿಡಿಯೋ ವೈರಲ್​

ಟ್ರೈನ್​ನಲ್ಲಿ ಹಾಡುತ್ತಿರುವ ತಾತ

ಟ್ರೈನ್​ನಲ್ಲಿ ಹಾಡುತ್ತಿರುವ ತಾತ

ದಣಿದ ದೇಹಕ್ಕೆ ಮತ್ತು ಮನಸ್ಸಿಗೆ ಸಂಗೀತ ಒಂದು ಅದ್ಭುತವಾದ ಚೈತನ್ಯವನ್ನು ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಯಾಣದಲ್ಲಿ ನಾವು ಹೆಚ್ಚಾಗಿ ಈ ಸಂಗೀತವನ್ನು ಕೇಳುವವರನ್ನು ನೋಡುತ್ತೇವೆ.

  • Share this:

ಸಾಮಾನ್ಯವಾಗಿ ನಾವು ಯಾವುದೇ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತಿರುವಾಗ ನಮಗೆ ದಣಿವು ಆದಾಗ ಅಥವಾ ಕೂತು ಕೂತು ಬೋರ್ ಆದಾಗ, ನಮಗೆ ಇಷ್ಟವಾದ ಚಿತ್ರದ ಗೀತೆಗಳನ್ನ( Film Song) ಹಾಗೆ ಮೆಲ್ಲಗೆ ಬಾಯಿಯಲ್ಲಿ ಗುನುಗುನಿಸುತ್ತೇವೆ. ಹೌದು, ದಣಿದ ದೇಹಕ್ಕೆ ಮತ್ತು ಮನಸ್ಸಿಗೆ ಸಂಗೀತ ಒಂದು ಅದ್ಭುತವಾದ ಚೈತನ್ಯವನ್ನು ನೀಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಯಾಣದಲ್ಲಿ ನಾವು ಹೆಚ್ಚಾಗಿ ಈ ಸಂಗೀತವನ್ನು(Music) ಕೇಳುವವರನ್ನು ನೋಡುತ್ತೇವೆ. ತಮ್ಮ ಮೊಬೈಲ್ ನಲ್ಲಿ ಹಾಕಿಕೊಂಡ ಹಾಡುಗಳನ್ನು ಕೇಳುತ್ತಾ ಪ್ರಯಾಣವನ್ನು ಆನಂದಿಸುವವರು ತುಂಬಾನೇ ಇದ್ದಾರೆ ಅಂತ ಹೇಳಬಹುದು. ಇದು ನಮ್ಮ ದಣಿವನ್ನು ನಿವಾರಿಸುವುದಲ್ಲದೆ, ನಮ್ಮ ಮನಸ್ಸಿಗೂ ಸಹ ಇದು ಮುದ ನೀಡುತ್ತದೆ ಮತ್ತು ನಮ್ಮ ಮನಸ್ಥಿತಿಯನ್ನು ಉತ್ತಮವಾದ ಸ್ಥಿತಿಯಲ್ಲಿರುಸುತ್ತದೆ.


ನೀವು ಸಂಗೀತವನ್ನು ತುಂಬಾನೇ ಇಷ್ಟಪಡುವವರಾಗಿದ್ದರೆ, ಆನ್ಲೈನ್ ನಲ್ಲಿ ತ್ವರಿತವಾಗಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ನೀವು ತುಂಬಾನೇ ಇಷ್ಟ ಪಡಬಹುದು. ಈ ಸಣ್ಣ ಕ್ಲಿಪ್ ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ರೈಲಿನಲ್ಲಿ ಜುಬಿನ್ ನೌಟಿಯಾಲ್ ಅವರ ‘ತುಮ್ ಹಿ ಆನಾ’ ಹಾಡನ್ನು ಹಾಡುವುದನ್ನು ನಾವು ನೋಡಬಹುದು.


ಇದನ್ನು ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ನಿಮ್ಮ ಮುಖದ ಮೇಲೆ ಈ ಹಾಡು ನಗು ತರಿಸುವುದು ಗ್ಯಾರೆಂಟಿ.


ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಈ ವ್ಯಕ್ತಿ ಹೇಗೆ ಹಾಡಿದ್ದಾರೆ ನೋಡಿ!


ಈಗ ವೈರಲ್ ಆಗಿರುವ ಈ ವೀಡಿಯೋವನ್ನು ಸ್ನೇಹಾ ಗಂಗಾರಾಮ್ ಘರತ್ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ.


ಸಣ್ಣ ಕ್ಲಿಪ್ ನಲ್ಲಿ, ವಯಸ್ಸಾದ ವ್ಯಕ್ತಿಯು ರೈಲಿನಲ್ಲಿ ಪ್ರಯಾಣಿಸುತ್ತಿರುವುದು ವೀಡಿಯೋ ಆರಂಭದಲ್ಲಿ ನೋಡಬಹುದು ಮತ್ತು ಆರಾಮಾಗಿ ಕಾಲಿನ ಮೇಲೆ ಕಾಲನ್ನು ಹಾಕಿಕೊಂಡು ಕೂತು ‘ತುಮ್ ಹಿ ಆನಾ’ ಎಂಬ ಹಾಡು ಅಲ್ಲೇ ಯಾರೋ ಕೂತವರು ತಮ್ಮ ಮೊಬೈಲ್ ನಲ್ಲಿ ಹಾಕಿರುವುದನ್ನು ನಾವು ಕೇಳಬಹುದು.


ಆ ಹಾಡು ಹಿನ್ನೆಲೆಯಲ್ಲಿ ಬರುತ್ತಿರುವಾಗ ಆ ವ್ಯಕ್ತಿ ಅದನ್ನು ಹಾಡುವುದರಲ್ಲಿ ಮಗ್ನನಾಗಿದ್ದರು. ಅವರು ಹಾಡಿನ ಸಾಲುಗಳನ್ನು ತುಂಬಾನೇ ಚೆನ್ನಾಗಿ ನೆನಪಿಟ್ಟುಕೊಂಡು ಮತ್ತು ತಮ್ಮ ಚೀಲದ ಮೇಲೆ ತಮ್ಮ ಕೈ ಬೆರಳುಗಳನ್ನು ಡ್ರಮ್ ರೀತಿಯಲ್ಲಿ ಮೆಲ್ಲಗೆ ಬಾರಿಸುತ್ತಾ ಟ್ರ್ಯಾಕ್ ಅನ್ನು ತುಂಬಾನೇ ಚೆನ್ನಾಗಿ ಹಾಡಿದ್ದನ್ನು ಇಲ್ಲಿ ನೋಡಬಹುದು.


"ಅವರು ಈ ಹಾಡನ್ನು ಮತ್ತು ಅವರ ಸಹ-ಪ್ರಯಾಣಿಕರು ಸಹ ಇವರ ಹಾಡುಗಾರಿಕೆಯನ್ನು ಆನಂದಿಸುತ್ತಿರುವ ರೀತಿ" ಎಂದು ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.


ತುಂಬಾನೇ ವೈರಲ್ ಆಗುತ್ತಿದೆ ಈ ವೀಡಿಯೋ


ಈ ವೀಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಇದು ಗಳಿಸಿದೆ. ಕ್ಲಿಪ್ ನೋಡಿದ ನಂತರ ನೆಟ್ಟಿಗರು ತುಂಬಾನೇ ಸಂತೋಷಪಟ್ಟರು ಮತ್ತು ಕಾಮೆಂಟ್ಸ್ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.


"ಅವರು ಹಾಡಿನಲ್ಲಿರುವ ಸಾಲುಗಳ ಬಗ್ಗೆ ಹೆಚ್ಚು ಇಷ್ಟ ಪಡುತ್ತಿದ್ದಾರೆ, ಹಾಡು ಯಾವ ಸಮಯದ್ದು ಅಂತ ಅವರಿಗೆ ಯಾವುದೇ ಚಿಂತೆಯಿಲ್ಲ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಬರೆದಿದ್ದಾರೆ.
ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಇದನ್ನು ಕೇಳಿ ನನ್ನ ಹೃದಯ ಸಂತೋಷಗೊಂಡಿದೆ" ಎಂದು ಕಾಮೆಂಟ್ ಮಾಡಿದ್ದಾರೆ.


‘ತುಮ್ ಹಿ ಆನಾ’ ಹಾಡು 2019 ರ ಚಲನಚಿತ್ರ ‘ಮಾರ್ಜಾವಾ’ ಚಿತ್ರದ ಒಂದು ಹಾಡು. ಹಾಡಿನ ಗೀತರಚನೆಕಾರ ಕುನಾಲ್ ವರ್ಮಾ ಕೂಡ ಈ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ "ನನ್ನ ಹಾಡಿನ ಬಗ್ಗೆ ತುಂಬಾ ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.

First published: