ಹಿಂದಿ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕಿಯಾಗಿರುವ ಏಕ್ತಾ ಕಪೂರ್ (Ekta Kapoor) ಹೆಸರು ತಿಳಿಯದವರು ಯಾರೂ ಇರಲಿಕ್ಕಿಲ್ಲ. ಟಿವಿ ಸೀರಿಯಲ್ಗಳ (Daily Serial) ನಿರ್ಮಾಪಕಿ, ಚಲನಚಿತ್ರ ನಿರ್ಮಾಪಕಿ ಏಕ್ತಾ ಕಪೂರ್ ತಮ್ಮ ಟಿವಿ ಸೀರಿಯಲ್ಗಳಲ್ಲಿ ಏನಾದರೊಂದು ಟ್ವಿಸ್ಟ್ ಇಟ್ಟೇ ಇಟ್ಟಿರುತ್ತಾರೆ. ಸುಂದರವಾದ ಸಂಸಾರದಲ್ಲಿ ಹುಳಿ ಹಿಂಡುವ ಪ್ರೇಯಸಿ, ಘಾಟಿ ಅತ್ತೆ, ವಾಚಾಳಿ ಅತ್ತಿಗೆ, ವಿಲನ್ ಪಾತ್ರಧಾರಿ ಸೊಸೆ ಹೀಗೆ ಗೃಹಿಣಿಯರು ತದೇಕಚಿತ್ತದಿಂದ ವೀಕ್ಷಿಸಬೇಕೆಂಬ ನಿಟ್ಟಿನಲ್ಲಿ ಅದಕ್ಕೆ ಹೊಂದುವಂತೆ ಏಕ್ತಾ ತಮ್ಮ ಸೀರಿಯಲ್ಗಳಲ್ಲಿ ಕಥಾವಸ್ತುಗಳನ್ನು ಪಾತ್ರಗಳನ್ನು ಆರಿಸಿಕೊಳ್ಳುತ್ತಾರೆ.
ಏಕ್ತಾ ಸೀರಿಯಲ್ಗಳನ್ನು ಮುಗಿಬಿದ್ದು ನೋಡುವ ಅದೆಷ್ಟೋ ಗೃಹಿಣಿಯರಿದ್ದು ಅದರಲ್ಲಿ ಕೆಲವರ ಮಾಸ್ಟರ್ ಮೈಂಡ್ಗೆ ಈ ಸೀರಿಯಲ್ಗಳೇ ಕಾರಣ ಎಂದು ಹೇಳಿದರೂ ತಪ್ಪಿಲ್ಲ. ಅದಕ್ಕಾಗಿಯೇ ಏಕ್ತಾ ಕಪೂರ್ಗೆ ಏಕ್ತಾ ಕಪೂರೇ ಸಾಟಿ ಎಂದು ಹೇಳುವುದು.
ಏಕ್ತಾ ಕಪೂರ್ ಸೀರಿಯಲ್ ವೈರಲ್ ದೃಶ್ಯ
2005 ರ ಟಿವಿ ಸೀರಿಯಲ್ 'ಕೈಸಾ ಯೇ ಪ್ಯಾರ್ ಹೇ'ಯ ದೃಶ್ಯವೊಂದು ವೈರಲ್ ಆಗಿದ್ದು ಇಂತಹ ಘಟನೆಗಳು ಸೀರಿಯಲ್ಗಳಲ್ಲಿ ಮಾತ್ರವೇ ನಡೆಯಲು ಸಾಧ್ಯ ಎಂದೇ ಸೀರಿಯಲ್ ಪ್ರಿಯರು ಮಾತನಾಡಿಕೊಳ್ಳುತ್ತಿದ್ದಾರೆ. ಕೊಂಚ ಗಲಿಬಿಲಿಯನ್ನುಂಟು ಮಾಡುವ ದೃಶ್ಯವೊಂದು ಈ ಸೀರಿಯಲ್ನಲ್ಲಿ ಬಿತ್ತರವಾಗಿದ್ದು ಇಂತಹ ದೃಶ್ಯಗಳೂ ಕುಟುಂಬಸ್ಥರು ಜೊತೆಯಾಗಿ ಕುಳಿತು ನೋಡುವ ಧಾರವಾಹಿಗಳಲ್ಲಿ ಪ್ರಸ್ತುತಗೊಳ್ಳುವುದು ಸರಿಯೇ ಎಂಬುದು ಕೆಲವರ ಮನದಲ್ಲಿ ಮೂಡುವುದು ಖಂಡಿತ.
ತನ್ನ ಪತ್ನಿಯ ಎದುರೇ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಆಪ್ತನಾಗುವುದನ್ನು ಈ ಧಾರವಾಹಿಯ ದೃಶ್ಯಾವಳಿ ತೋರಿಸಿದೆ. ವಿವಾಹದ ಪ್ರಥಮ ರಾತ್ರಿಯಂದೇ ವಧು ಇನ್ನೂ ವಿವಾಹದ ದಿರಿಸಿನಲ್ಲಿಯೇ ಕಣ್ಣೀರು ಹರಿಸುತ್ತಾ ಕುಳಿತಿದ್ದರೆ ಇತ್ತ ಆಕೆಯ ಪತಿ ತನ್ನ ವಿವಾಹಿತ ಪತ್ನಿಯ ಮುಂದೆಯೇ ಗೆಳತಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ. ಇಬ್ಬರೂ ಬಟ್ಟೆಗಳನ್ನು ಕಳಚಿ ಅದನ್ನು ವಧುವಿನ ಮುಂದೆಯೇ ಎಸೆಯುವುದನ್ನು ಕಾಣಬಹುದಾಗಿದೆ. ವಧು ಹಾಗೂ ವರನ ಪಾತ್ರದಲ್ಲಿ ಅಂಗದ್ ಹಾಗೂ ಕೃಪಾ ತೆರೆಯ ಮೇಲೆ ಕಂಡುಬಂದಿದ್ದಾರೆ.
ಇದನ್ನೂ ಓದಿ: Viral News: ಈ ಚೀನಿ ಹುಡುಗಿ ಹೊಟ್ಟೆಯಲ್ಲಿತ್ತು 3 ಕೆಜಿ ಕೂದಲು! ಆಹಾರಕ್ಕಾಗಿ ಹೊಟ್ಟೆಯಲ್ಲಿ ಜಾಗವೇ ಇರಲಿಲ್ವಂತೆ
ಪತ್ನಿಯ ಎದುರೇ ಇನ್ನೊಬ್ಬಳೊಂದಿಗೆ ಪತಿಯ ರೊಮ್ಯಾನ್ಸ್
ದೃಶ್ಯದಲ್ಲಿ ಅಂಗದ್ ತನ್ನ ಪತ್ನಿ ಹಾಗೂ ನವ ವಧುವಾದ ಕೃಪಾಳಿಗೆ ಇನ್ನೊಬ್ಬ ಮಹಿಳೆಯನ್ನು ಪರಿಚಯಿಸುತ್ತಾ ಏನು ನಡೆಯಬೇಕೋ ಅದು ಇಲ್ಲಿಯೇ ನಡೆಯುತ್ತದೆ ಇದೇ ಕೋಣೆಯಲ್ಲಿಯೇ ನಡೆಯುತ್ತದೆ ಹಾಗೂ ನಿನ್ನ ಕಣ್ಣೆದುರಿಗೆ ನಡೆಯುತ್ತದೆ ಎಂದು ಹೇಳುತ್ತಾನೆ. ಕೃಪಾ ಆ ಕೋಣೆಯನ್ನು ಬಿಟ್ಟು ಹೊರನಡೆದರೆ ಮನೆಯವರು ಏನು ತಿಳಿದುಕೊಳ್ಳುತ್ತಾರೋ ಎಂದು ಭಾವಿಸಿ ಕೃಪಾ ಅಲ್ಲಿಯೇ ಬೆಡ್ ಮೇಲೆಯೇ ರೋಧಿಸುತ್ತಾ ಕುಳಿತುಕೊಳ್ಳುತ್ತಾಳೆ.
ವೈರಲ್ ಆದ ಸೀರಿಯಲ್ ದೃಶ್ಯ; ಬಳಕೆದಾರರ ಕಾಮೆಂಟ್
2005 ರ ಟಿವಿ ಸೀರಿಯಲ್ ಕಥೆ ಇದಾಗಿದ್ದರೂ ಏಕ್ತಾ ಕಪೂರ್ ಇದನ್ನು ಚಲನಚಿತ್ರಗಳಲ್ಲಿ ಇರುವಂತೆ ತೋರಿಸಿದ್ದಾರೆ. ಈ ದೃಶ್ಯ ಇದೀಗ ವೈರಲ್ ಆಗಿದ್ದು ಟ್ವಿಟರ್ ಅಭಿಮಾನಿಗಳು ಈ ದೃಶ್ಯವನ್ನು ವೈರಲ್ ಮಾಡುವುದರ ಜೊತೆಗೆ ತರಾವರಿ ಕಾಮೆಂಟ್ಗಳನ್ನು ಹರಿಬಿಟ್ಟಿದ್ದಾರೆ. ಏಕ್ತಾ 2005 ರಲ್ಲಿಯೇ ಇಂತಹ ದೃಶ್ಯಗಳನ್ನು ತಮ್ಮ ಧಾರವಾಹಿಗಳಲ್ಲಿ ಪ್ರಸ್ತುತಪಡಿಸಿದ್ದರು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದರೆ ಇನ್ನು ಕೆಲವರು ಸೀರಿಯಲ್ಗಳಲ್ಲಿ ಇಂತಹ ದೃಶ್ಯಗಳೂ ಅಗತ್ಯವೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಏಕ್ತಾ ಅಭಿಮಾನಿಯಂತೆ ಕಾಣುವ ಇನ್ನೊಬ್ಬ ಬಳಕೆದಾರರು ಈ ದೃಶ್ಯಾವಳಿಯನ್ನು ಯಾರೂ ಕೆಟ್ಟದಾಗಿ ನೋಡಬೇಡಿ ಎಂಬ ಸಮಜಾಯಿಷಿಕೆ ನೀಡಿದ್ದಾರೆ. ಇದು ಅತ್ಯಂತ ಬೆಸ್ಟ್ ಶೋಗಳಲ್ಲಿ ಒಂದಾಗಿದ್ದು ಬಾಲಾಜಿಯವರ ಉತ್ತಮ ಪ್ರೇಮಕಥೆಯಾಗಿದೆ ಎಂದು ತಿಳಿಸಿದ್ದಾರೆ. ಅಂಗದ್ ರಾಕ್ಸ್ಟಾರ್ ಆಗಿದ್ದು ಕೃಪಾ ಹಾಡುಗಾರ್ತಿಯಾಗಿ ಈ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ. ಕೃಪಾಳ ಮೇಲೆ ಸೇಡು ತೀರಿಸಿಕೊಳ್ಳಲು ಅಂಗದ್ ಈ ರೀತಿ ವರ್ತಿಸಿದ್ದಾನೆ ಎಂದು ಸಮಜಾಯಿಷಿ ಬೇರೆ ನೀಡಿದ್ದಾರೆ.
ಜನರ ಕಣ್ಣಿನಲ್ಲಿ ಹಾಸ್ಯವಾಗುತ್ತಿರುವ ಧಾರವಾಹಿಗಳು
ಒಟ್ಟಿನಲ್ಲಿ ಎಲ್ಲಾ ಧಾರವಾಹಿಗಳೂ ಯಾವುದೇ ದೃಶ್ಯಾವಳಿಗಳನ್ನು ಕೂಡ ಒಂದು ಮಿತಿಗೆ ಕೊಂಡೊಯ್ಯುತ್ತವೆ ಎಂಬುದಕ್ಕೆ ಈ ಧಾರವಾಹಿ ಒಂದು ಉದಾಹರಣೆಯಾಗಿದೆ. ಉದಾಹರಣೆಗೆ ಇಷ್ಕ್ ಕಿ ದಸ್ತಾನ್ ನಾಗಮಣಿ' ಯ ವೈರಲ್ ದೃಶ್ಯವೊಂದರಲ್ಲಿ ಶಂಕರ್ ಮಹಡಿಯಿಂದ ಬಿದ್ದು ಗಾಳಿಯಲ್ಲಿ ಸುತ್ತುತ್ತಿರುವ ಒಂದು ದೃಶ್ಯವಿದೆ.
ಆ ಸಮಯದಲ್ಲಿ ಶಂಕರ್ ಪತ್ನಿ ಪಾರೋ ಆತನಿಗೆ ನೆರವು ನೀಡುತ್ತಾಳೆ. ಸೂಪರ್ ಮ್ಯಾನ್ ಶೈಲಿಯಲ್ಲಿ ಪಾರೋ ತನ್ನ ಪತಿಯನ್ನು ರಕ್ಷಿಸುತ್ತಾಳೆ. ಈ ದೃಶ್ಯ ಕೂಡ ಅದೆಷ್ಟು ವೈರಲ್ ಆಯಿತೆಂದರೆ ಟ್ವಿಟರ್ನಲ್ಲಿ ಬಳಕೆದಾರರು ಹೊಟ್ಟೆ ಹುಣ್ಣಾಗುವಂತೆ ಕಾಮೆಂಟ್ ಮಳೆ ಸುರಿಸಿದ್ದು ಮಾತ್ರವಲ್ಲದೆ ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತನ್ನು ನಿಜಗೊಳಿಸುವಂತೆ ಇಂದಿನ ಧಾರವಾಹಿಗಳು ಮೂಡಿಬರುತ್ತಿವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ