ಬೆಳಕನ್ನೇ ನುಂಗುವ ಬ್ಲಾಕ್​ಹೋಲ್​: ಮತ್ತೊಮ್ಮೆ ಜೈ ಎನ್ನಿಸಿಕೊಂಡ ಐನ್​ಸ್ಟೈನ್​


Updated:July 28, 2018, 8:03 AM IST
ಬೆಳಕನ್ನೇ ನುಂಗುವ ಬ್ಲಾಕ್​ಹೋಲ್​: ಮತ್ತೊಮ್ಮೆ ಜೈ ಎನ್ನಿಸಿಕೊಂಡ ಐನ್​ಸ್ಟೈನ್​

Updated: July 28, 2018, 8:03 AM IST
ರಾಜಶೇಖರ್​ ಬಂಡೆ, ನ್ಯೂಸ್​ 18 ಕನ್ನಡ

ಬೆಂಗಳೂರು (ಜುಲೈ 27): ಐನ್​ಸ್ಟೈನ್​ ಮಂಡಿಸಿದ ಸಾಪೇಕ್ಷತಾ ಸಿದ್ಧಾಂತದ ಕೆಲವು ಅಂಶಗಳು ಇವತ್ತಿಗೂ ಸಹ ಪರೀಕ್ಷೆಗೊಳಪಡುತ್ತಿವೆ, ಐನ್​ಸ್ಟೈನ್​ ಮತ್ತೆ ಮತ್ತೆ ತನ್ನ ಸಿದ್ಧಾಂತದ ಮೂಲಕ ಜಗತ್ತನ್ನು ಬೆಚ್ಚಿಬೀಳಿಸುತ್ತಲೇ ಇದ್ದಾನೆ. ಇತ್ತೀಚೆಗೆ ನಡೆದ ಘಟನೆಯೊಂದು ಐನ್​ಸ್ಟೈನ್​ ತನ್ನ ಸಿದ್ಧಾಂತದಲ್ಲಿ ಮಂಡಿಸಿದ್ದ ವಾದ ಸರಿ ಎನ್ನುವುದನ್ನ ಮತ್ತೊಮ್ಮೆ ಪ್ರೂವ್ ಮಾಡಿದೆ.

ಐನ್​ಸ್ಟೈನ್​ನ ಸಾಪೇಕ್ಷತಾ ಸಿದ್ಧಾಂತ(ರಿಲೇಟಿವಿಟಿ) ಥಿಯರಿ ಪ್ರಕಾರ ಗುರುತ್ವಾಕರ್ಷಣ ಬಲಕ್ಕೆ ಬೆಳಕನ್ನು ಹಾಗೂ ಶಬ್ದದ ಅಲೆಗಳನ್ನೂ ಕೂಡ ಬಾಗಿಸುವ ಅಥವಾ ತಿರುಗಿಸುವ ಸಾಮರ್ಥ್ಯವಿದೆಯಂತೆ. ಈ ವಾದವನ್ನ ಆಗಾಗ ಇತರ ವಿಜ್ಞಾನಿಗಳು ಪರೀಕ್ಷೆಗೊಳಪಡಿಸುತ್ತಲೇ ಇದ್ದಾರೆ. ಮತ್ತು ಐನ್​ಸ್ಟೈನ್​ ವಾದ ಪ್ರತಿ ಬಾರಿಯೂ ಗೆಲ್ಲುತ್ತಲೇ ಇದೆ. ಆ ಮೂಲಕ ನೂರು ವರ್ಷಗಳ(1905) ಹಿಂದೆ ಐನ್​ಸ್ಟೈನ್​ ಮಂಡಿಸಿದ ಸಿದ್ಧಾಂತದ ಮಹತ್ವ ಮತ್ತೆ ಮತ್ತೆ ಜಗತ್ತಿಗೆ ಗೊತ್ತಾಗುತ್ತಲೇ ಇದೆ.

ಇದೇ ಮೇ 19ರಂದು ಆಗಸದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಗಂಟೆಗೆ 250 ಲಕ್ಷ ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದ ‘S2’ ಹೆಸರಿನ ಭಾರೀಗಾತ್ರದ ನಕ್ಷತ್ರವೊಂದು ‘ಸ್ಯಾಗಿಟ್ಟೇರಿಯಸ್ ಎ’ ಹೆಸರಿನ ಬ್ಲಾಕ್ ಹೋಲ್ ನ ಸಮೀಪದಲ್ಲಿ ಸಾಗಿದಾಗ ನಕ್ಷತ್ರದ ಬೆಳಕನ್ನೇ ಬ್ಲಾಕ್ಹೋಲ್ ನುಂಗಿಹಾಕಿದ್ದನ್ನ ಯುರೋಪಿಯನ್ ಬಾಹ್ಯಾಕಾಶ ವಿಜ್ಞಾನಿಗಳು ಗಮನಿಸಿದ್ದಾರೆ. ಕಪ್ಪುಕುಳಿಯಲ್ಲಿರುವ ಪ್ರಬಲ ಗುರುತ್ವಾಕರ್ಷಣ ಬಲಕ್ಕೆ ಬೆಳಕನ್ನೂ ಬಾಗಿಸುವ ಅಥವಾ ನುಂಗಿಹಾಕುವ ಶಕ್ತಿ ಇದೆ ಎನ್ನುವ ಐನ್​ಸ್ಟೈನ್​ ವಾದವನ್ನ ಒಪ್ಪಿಕೊಂಡಿದ್ದಾರೆ. ಆ ಮೂಲಕ ಕಪ್ಪುಕುಳಿಗಳು ಕೇವಲ ನಿಶ್ಚಿತ ಪ್ರದೇಶಗಳಲ್ಲಿ ಇರುವುದಿಲ್ಲ, ಬದಲಿಗೆ ಆಗಸದ ಹಾದಿಯ ಮಧ್ಯೆಯೂ ಕೂಡ ಅಸ್ತಿತ್ವ ಪಡೆದುಕೊಂಡಿರುತ್ತವೆ ಅನ್ನುವ ಐನ್​ಸ್ಟೈನ್​ನದ್ದೇ ಮತ್ತೊಂದು ವಾದಕ್ಕೂ ಆಧುನಿಕ ಬಾಹ್ಯಾಕಾಶ ಸಂಶೋಧಕರು ಜೈ ಎಂದಿದ್ದಾರೆ.

ನಕ್ಷತ್ರದ ಬೆಳಕನ್ನೇ ನುಂಗಿದ ಕಪ್ಪುಕುಳಿಯ ಗಾತ್ರ ಎಷ್ಟು ಗೊತ್ತಾ?

‘S2’ ಹೆಸರಿನ ನಕ್ಷತ್ರದ ಬೆಳಕನ್ನೇ ನುಂಗಿದ ಸ್ಯಾಗಿಟ್ಟೇರಿಯಸ್ ಎ ಕಪ್ಪುಕುಳಿ ನಿಮ್ಮ ಊಹೆಯನ್ನೂ ಮೀರಿದ ಗಾತ್ರದ್ದು. ಸೂರ್ಯನನ್ನೇ ಭಾರೀ ಗಾತ್ರದ ನಕ್ಷತ್ರವೆಂದು ನಂಬಿದವರಿಗೆ ಬಹುಶಃ ಕಪ್ಪುಕುಳಿಯ ಗಾತ್ರ ದಿಗ್ಭ್ರಮೆಗೊಳಿಸಬಹುದು. ಸೂರ್ಯನಂಥ ಬರೋಬ್ಬರಿ 40 ಲಕ್ಷ ನಕ್ಷತ್ರಗಳಷ್ಟು ಗಾತ್ರ ‘ಸ್ಯಾಗಿಟ್ಟೇರಿಯಸ್ ಎ’ ಕಪ್ಪುಕುಳಿಯದ್ದು.

ಏನಿದು ಬ್ಲಾಕ್ ಹೋಲ್?
Loading...

ಬ್ಲಾಕ್ ಹೋಲ್ ಜಗತ್ತಿನ ಅತ್ಯಂತ ವಿಸ್ಮಯಕಾರಿ ರಚನೆ. ಯಾವುದೇ ನಕ್ಷತ್ರಕ್ಕೂ ಇಂತಿಷ್ಟು ವರ್ಷಗಳ ಜೀವಿತಕಾಲವಿರುತ್ತೆ. ಅದು ಮಿಲಿಯನ್ ವರ್ಷಗಳಾಗಿರಬಹುದು ಅಥವಾ ನೂರಾರು ಬಿಲಿಯನ್ ವರ್ಷಗಳಾಗಿರಬಹುದು. ಆಯುಷ್ಯ ಮುಗಿದ ನಕ್ಷತ್ರದ ಗರ್ಭದಲ್ಲಿ ಅತಿಯಾದ ಒತ್ತಡ ಏರ್ಪಟ್ಟಾಗ ಇಡೀ ನಕ್ಷತ್ರದ ಆಕಾರವೇ ಕುಗ್ಗಿ ಕುಳಿಯಾಗಿ ಮಾರ್ಪಾಡಾಗುತ್ತೆ. ಅದರ ಗುರುತ್ವಬಲ ಎಂಥದ್ದು ಅನ್ನೋದನ್ನ ಬಹುಶಃ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಬೆಳಕಿನಂಥ ಬೆಳಕನ್ನೇ ತನ್ನಿಂದಾಚೆಗೆ ಹರಿಯಲು ಬಿಡದ ಕಪ್ಪುಕುಳಿಗಳಿಗೆ ಲಕ್ಷ ಸೂರ್ಯರನ್ನೂ ನುಂಗಿಹಾಕುವ ಸಾಮರ್ಥ್ಯವಿರುತ್ತದೆ. ಹೀಗೆ ರೂಪಗೊಳ್ಳುವ ಕಪ್ಪುಕುಳಿಗಳೂ ಮಿಲಿಯನ್ಗಟ್ಟಲೆ ವರ್ಷಗಳ ನಂತರ ಮತ್ತೆ ನಕ್ಷತ್ರವಾಗಿ ಮಾರ್ಪಾಡಾಗುತ್ತವೆ ಅನ್ನುತ್ತದೆ ವಿಜ್ಞಾನ ಲೋಕ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...