HOME » NEWS » Trend » EID AL FITR 2021 DATE IN INDIA WHEN IS THE MOON SIGHTING STG HG

Eid ul Fitr 2021: ಭಾರತದಲ್ಲಿ ಈದ್ ಅಲ್-ಫಿತರ್ 2021 ಆಚರಣೆ ಯಾವಾಗ? ಇಲ್ಲಿದೆ ಮಾಹಿತಿ

ಭಾರತದಲ್ಲಿ, ರಂಜಾನ್ ಮಾಸ ಏಪ್ರಿಲ್ 14 ರಂದು ಪ್ರಾರಂಭವಾಯಿತು. ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ, ಹತ್ತನೇ ತಿಂಗಳು ಆಕಾಶದಲ್ಲಿ ಅರ್ಧ ಚಂದ್ರಾಕೃತಿಯನ್ನು ನೋಡುವುದರೊಂದಿಗೆ ಪವಿತ್ರ ಮಾಸ ಪ್ರಾರಂಭವಾಗುತ್ತದೆ.

news18-kannada
Updated:May 12, 2021, 9:56 AM IST
Eid ul Fitr 2021: ಭಾರತದಲ್ಲಿ ಈದ್ ಅಲ್-ಫಿತರ್ 2021 ಆಚರಣೆ ಯಾವಾಗ? ಇಲ್ಲಿದೆ ಮಾಹಿತಿ
Eid ul Fitr
  • Share this:
ಪವಿತ್ರ ರಂಜಾನ್ ತಿಂಗಳ ಅಂತ್ಯದ ವೇಳೆಗೆ, ಇಸ್ಲಾಂ ಧರ್ಮದ ಅನುಯಾಯಿಗಳು ಆಚರಿಸುವ ಈದ್ ಅಲ್-ಫಿತರ್ ಹಬ್ಬವು ಮೇ 13 ರಂದು ಅಂದರೆ ನಾಳೆ ನಡೆಯಲಿದೆ. ಈ ಹಬ್ಬವು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ ಮತ್ತು ಇಸ್ಲಾಮಿಕ್ ಕ್ಯಾಲೆಂಡರ್ ಹಿಜ್ರಿಯ ಹತ್ತನೇ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆ, ಪ್ರಾಮುಖ್ಯತೆಯ ಬಗ್ಗೆ ಇಲ್ಲಿ ಕೆಲ ವಿವರಗಳನ್ನು ನೀಡಲಾಗಿದೆ.

ಈದ್ ಅಲ್-ಫಿತರ್ ದಿನಾಂಕ:

ಭಾರತದಲ್ಲಿ, ರಂಜಾನ್ ಮಾಸ ಏಪ್ರಿಲ್ 14 ರಂದು ಪ್ರಾರಂಭವಾಯಿತು. ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ, ಹತ್ತನೇ ತಿಂಗಳು ಆಕಾಶದಲ್ಲಿ ಅರ್ಧ ಚಂದ್ರಾಕೃತಿಯನ್ನು ನೋಡುವುದರೊಂದಿಗೆ ಪವಿತ್ರ ಮಾಸ ಪ್ರಾರಂಭವಾಗುತ್ತದೆ. ರಂಜಾನ್‌ನ ಕೊನೆಯ ದಿನದಂದು ಚಂದ್ರನನ್ನು ನೋಡುವುದು ಮರುದಿನ ಈದ್ ಅಲ್-ಫಿತರ್ ಆಗಮನವನ್ನು ಖಚಿತಪಡಿಸುತ್ತದೆ.

ಶವ್ವಾಲ್ ಚಂದ್ರನನ್ನು ಮೊದಲ ಬಾರಿಗೆ ಸೌದಿ ಅರೆಬಿಯಾದಲ್ಲಿ ನೋಡಲಾಗುತ್ತದೆ, ಇದು ಧರ್ಮದ ಪವಿತ್ರ ತಾಣವಾದ ಮೆಕ್ಕಾದ ನೆಲೆಯಾಗಿದೆ. ಸೌದಿ ಅರೇಬಿಯಾದಲ್ಲಿ ಚಂದ್ರನನ್ನು ನೋಡಿದ ನಂತರ, ಇದು ಇತರ ದೇಶಗಳಲ್ಲಿ ಈದ್ ದಿನಾಂಕವನ್ನು ಖಚಿತಪಡಿಸುತ್ತದೆ. ಈ ವರ್ಷ, ಮೇಥಿ ಈದ್ ಎಂದೂ ಕರೆಯಲ್ಪಡುವ ಉತ್ಸವವು ಮೇ 13 ರ ಗುರುವಾರ ಬೀಳುವ ನಿರೀಕ್ಷೆಯಿದೆ.

ಕರುಣೆ ಮತ್ತು ಕೃತಜ್ಞತೆಯ ಹಬ್ಬ

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ದೇಶ ಮತ್ತು ವಿಶ್ವದ ಇತರ ಭಾಗಗಳಲ್ಲಿ ಅಬ್ಬರ ಹೆಚ್ಚಾಗಿರುವುದರಿಂದ ಈ ಬಾರಿಯ ಈದ್ ಆಚರಣೆಗಳಲ್ಲಿ ಹೆಚ್ಚು ಜನರು ಒಟ್ಟಿಗೆ ಸೇರುವುದು ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಇನ್ನು, ಈದ್ ಅಲ್-ಫಿತರ್ ಅನ್ನು ದಾನ ಮತ್ತು ಕೃತಜ್ಞತೆಯ ಹಬ್ಬ ಎಂದು ಕರೆಯಲಾಗುತ್ತದೆ, ಅದು ತನ್ನ ಅನುಯಾಯಿಗಳಿಗೆ ಆಳವಾದ ಆಧ್ಯಾತ್ಮಿಕ ಜಾಗೃತಿಯನ್ನು ತರುತ್ತದೆ.

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾದ ಝಕಾತ್ ಎಂದರೆ ದಾನ ಮತ್ತು ಈ ದಿನ ಅನುಯಾಯಿಗಳು ಹಣ, ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಬಡವರಿಗೆ ನೀಡುತ್ತಾರೆ. ವಾಸ್ತವವಾಗಿ, ಅನೇಕ ಮುಸ್ಲಿಮರು ಈದ್ ಪ್ರಾರ್ಥನೆ ಸಲ್ಲಿಸುವ ಮೊದಲು ಜಕಾತ್ ನೀಡುತ್ತಾರೆ. ಮಕ್ಕಳು ಹಿರಿಯರಿಂದ ಈದಿ ಪಡೆಯುತ್ತಾರೆ, ಅದು ಹಣ ಅಥವಾ ಉಡುಗೊರೆಯಾಗಿರಬಹುದು.
Youtube Video

ಈದ್ ಅಲ್-ಫಿತರ್ ದಿನವು ಒಗ್ಗಟ್ಟು, ಸಾಮರಸ್ಯ ಮತ್ತು ಜೀವನದ ಆಚರಣೆಯ ಮೌಲ್ಯವನ್ನು ಸೂಚಿಸುತ್ತದೆ. ಒಂದು ತಿಂಗಳ ಉಪವಾಸದ ನಂತರ, ಈದ್ ಅಲ್-ಫಿತರ್ ತನ್ನ ಅನುಯಾಯಿಗಳಿಗೆ ರುಚಿ ರುಚಿಯಾದ ತಿನಿಸನ್ನು ತರುತ್ತದೆ. ಈ ಹಬ್ಬದ ಮುಖ್ಯ ಖಾದ್ಯವೆಂದರೆ ಸಿಹಿ ಖೀರ್ ಅಥವಾ ಸೆವಿಯನ್. ಇತರ ಆಹಾರ ಪದಾರ್ಥಗಳಲ್ಲಿ ಬಿರಿಯಾನಿ, ಕಬಾಬ್‌ಗಳು ಮತ್ತು ನಿಹಾರಿ ಸೇರಿದೆ.
First published: May 12, 2021, 9:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories