ದೇಶದಾದ್ಯಂತ ಬಕ್ರೀದ್ ಹಬ್ಬದ ಆಚರಣೆಗೆ ಒಂದೇ ದಿನ ಬಾಕಿ ಇದೆ. ಜುಲೈ 21ರಂದು ದೇಶದ ಪತಿಯೊಬ್ಬ ಮುಸಲ್ಮಾನನು ಈ ಹಬ್ಬವನ್ನು ಸಡಗರದಿಂದ ಸಂಭ್ರಮಿಸಲು ಕಾಯುತ್ತಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಕೊನೆಯ ತಿಂಗಳಾದ ಧು ಅಲ್-ಹಿಜ್ಜಾದ ಇಸ್ಲಾಮಿಕ್ ತಿಂಗಳ 10ನೇ ದಿನದಂದು ಆಚರಿಸಲಾಗುತ್ತದೆ. ಭಾರತದಲ್ಲಿ ಈ ವರ್ಷ ಈ ತಿಂಗಳ ಚಂದ್ರನನ್ನು ಜುಲೈ 11ರಂದು ನೋಡಲಾಯಿತು. ಹಾಗಾಗಿ ಜುಲೈ 12ರಿಂದ ಧು ಅಲ್–ಹಿಜ್ಜಾ ಅಥವಾ ಜುಲ್ ಹಿಜ್ಜಾ ಭಾರತದಲ್ಲಿ ಪ್ರಾರಂಭವಾಯಿತು. ಹೀಗಾಗಿ ಜುಲೈ 21, ಧು ಅಲ್-ಹಿಜ್ಜಾದ 10ನೇ ದಿನವನ್ನು ಈದ್ ಅಲ್-ಅಧಾ ಎಂದು ಆಚರಿಸಲಾಗುತ್ತದೆ.
ಮುಸಲ್ಮಾನರ ಹಜ್ ತೀರ್ಥಯಾತ್ರೆಯನ್ನು ಆಯೋಜಿಸುವ ಸೌದಿ ಅರೇಬಿಯಾದಲ್ಲಿ ಬಕ್ರಿದ್ ಹಬ್ಬವನ್ನು ಜುಲೈ 20ರಂದು ಆಚರಿಸಲಾಗುತ್ತದೆ.
ಬಕ್ರೀದ್ ಹಬ್ಬದ ಮಹತ್ವ
ಮುಸಲ್ಮಾನರ ಪವಿತ್ರ ಪುಸ್ತಕ ಕುರಾನ್ನಲ್ಲಿ ಬರುವ ಪ್ರವಾದಿ ಇಬ್ರಾಹಿಂ ಅವರ ಕಥೆಯನ್ನು ವಿವರಿಸುತ್ತದೆ. ದೇವರ ಮೇಲಿನ ಭಕ್ತಿಯನ್ನು ಸಾಬೀತುಪಡಿಸಲು ಅಲ್ಲಾಹನು ತನ್ನ ಮಗನನ್ನು ತ್ಯಾಗ ಮಾಡುವಂತೆ ಪ್ರವಾದಿ ಇಬ್ರಾಹಿಂನನ್ನು ಕೇಳಿದನೆಂದು ಈ ಕಥೆ ವಿವರಿಸುತ್ತದೆ.
ಈದ್ ಅಲ್-ಅಧಾ ಆಚರಣೆ
ಮುಸ್ಲಿಂಮರು ಆಡುಗಳನ್ನು ಬಲಿ ನೀಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಆರ್ಥಿಕವಾಗಿ ಸಮರ್ಥರಾದವರು ಆಡುಗಳನ್ನು ಖರೀದಿಸಿ ಬಲಿ ನೀಡುತ್ತಾರೆ. ಅಗತ್ಯವಿರುವವರಿಗೆ, ಸಮುದಾಯದ ಸದಸ್ಯರಿಗೆ, ಕುಟುಂಬಸ್ಥರಿಗೆ ಮಾಂಸವನ್ನು ವಿತರಿಸುತ್ತಾರೆ. ಮನೆಯಲ್ಲಿ ಅಥವಾ ಮಸೀದಿಯಲ್ಲಿ ಈದ್ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ.
ಬಕ್ರೀದ್ ಹಬ್ಬದ ವಿಶೇಷ ದಿನದಂದು ಮುಸಲ್ಮಾನರ ಮನೆಯಲ್ಲಿ ಭಕ್ಷ್ಯಬೋಜನಗಳನ್ನು ತಯಾರು ಮಾಡುತ್ತಾರೆ. ಬಿರಿಯಾನಿ, ಸೆವಾಯಿನ್ ಸೇರಿದಂತೆ ವಿಶೇಷ ಅಡುಗೆ ತಯಾರಿಸಲಾಗುತ್ತದೆ. ಜುಲೈ 22ರಂದು ಹಜ್ ತೀರ್ಥಯಾತ್ರೆ ಮುಕ್ತಾಯಗೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ