Egypt Teacher: ಈಜಿಪ್ಟ್‌ನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಶಿಕ್ಷಕಿಯೇ ವಜಾ, ಅಷ್ಟೇ ಅಲ್ಲ ಪತಿಯಿಂದ ವಿಚ್ಛೇದನ..!

ಅನುಮತಿಯಿಲ್ಲದೆ ತನ್ನನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಲು ಯೂಸೆಫ್ ಯೋಜಿಸುತ್ತಿದ್ದಾಳೆ ಎಂದು ವರದಿಗಳು ಹೇಳುತ್ತಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಜಿಪ್ಟ್‌ನ ಶಿಕ್ಷಕಿಯೊಬ್ಬರು(Egyptian teacher) ಬೆಲ್ಲಿ ಡ್ಯಾನ್ಸ್ (Belly Dance) ಮಾಡಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಹೊರಹೊಮ್ಮಿ ಆಕೆಯನ್ನು ಶಾಲೆಯಿಂದ(School) ವಜಾಗೊಳಿಸಲಾಗಿರುವುದಲ್ಲದೆ (Dismissed) ಆಕೆಯ ಪತಿ ಆಕೆಗೆ ವಿಚ್ಛೇದನ ನೀಡುವುದಕ್ಕೂ ಕಾರಣವಾಯಿತು.ಬಿಬಿಸಿ ಪ್ರಕಾರ, ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಆಕೆಯದು ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರೆ ಮತ್ತೆ ಕೆಲವರು ಆಕೆಯ "ಜೀವನ ಮೌಲ್ಯಗಳನ್ನು" (Questioned) ಪ್ರಶ್ನಿಸಿದ್ದಾರೆ .

ಶಿಕ್ಷಕರ ಮುಂದೆ ಡ್ಯಾನ್ಸ್

ಆಯಾ ಯೂಸೆಫ್” ನೈಲ್ ನದಿಯ ದೋಣಿಯಲ್ಲಿ ನೃತ್ಯ ಮಾಡುತ್ತಾ ತಲ್ಲೀನರಾಗಿದ್ದಾಗ ದೋಣಿಯಲ್ಲಿದ್ದ ಅವರ ಸಹದ್ಯೋಗಿಯೊಬ್ಬರು ಆಕೆಯ ವಿಡಿಯೋವನ್ನು ತೆಗೆದಿದ್ದಾರೆ ಎಂದು ವರದಿ ಹೇಳುತ್ತದೆ. ಸಹೋದ್ಯೋಗಿ ತನ್ನ ಅನುಮತಿಯಿಲ್ಲದೆ ತನ್ನನ್ನು ಚಿತ್ರೀಕರಿಸಿದ್ದಾನೆ ಎಂದು ಶಿಕ್ಷಕಿ ಹೇಳಿಕೊಂಡಿದ್ದಾಳೆ. ವರದಿಯ ಪ್ರಕಾರ, ಯೂಸೆಫ್ ತಲೆಗೆ ಸ್ಕಾರ್ಫ್ ಮತ್ತು ಉದ್ದ ತೋಳಿನ ಉಡುಪನ್ನು ಧರಿಸಿ ಪುರುಷ ಶಿಕ್ಷಕರ ಮುಂದೆ ಡ್ಯಾನ್ಸ್ ಮಾಡುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ.

ನೃತ್ಯ ನಿಷೇಧ

ಬೆಲ್ಲಿ ಡಾನ್ಸ್ ಪ್ರಾಚೀನ ಈಜಿಪ್ಟ್‌ನ ಸಂಪ್ರದಾಯದ ಒಂದು ಭಾಗವಾಗಿದ್ದರೂ, ಆಧುನಿಕ ಈಜಿಪ್ಟ್‌ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ನೃತ್ಯ ಮಾಡುವುದನ್ನು ವಿರೋಧಿಸಲಾಗುತ್ತದೆ. ನೈಲ್ ನದಿಯ ದೋಣಿಯಲ್ಲಿನ ಸಂತಸದ ಹತ್ತು ನಿಮಿಷಗಳು ನನ್ನ ಜೀವನಕ್ಕೆ ಮುಳುವಾಯಿತು” ಎಂದು ಯೂಸೆಫ್ ದುಃಖ ಹಂಚಿಕೊಂಡರು. ವರದಿಯ ಪ್ರಕಾರ, ವಜಾ ಮತ್ತು ವಿಚ್ಛೇದನದ ನಂತರ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಕೂಡಾ ಯೋಚಿಸಿದ್ದರು.

ಇದನ್ನೂ ಓದಿ: Egypt: ಈಜಿಪ್ಟ್‌ನಲ್ಲಿ 2500 ವರ್ಷಗಳಷ್ಟು ಹಳೆಯದಾದ 3 ಚಿನ್ನದ ನಾಲಿಗೆ, 2 ಗೋರಿಗಳು ಪತ್ತೆ!

ಕೆಟ್ಟ ಉದಾಹರಣೆ

ಆಕೆಯ ವಿಡಿಯೋವನ್ನು ಈಜಿಪ್ಟ್ ಸಂಪ್ರದಾಯವಾದಿಗಳು ತೀವ್ರವಾಗಿ ಟೀಕಿಸಿದ್ದಾರೆ. "ನಾವು ಎಷ್ಟು ಕೆಟ್ಟ ಕಾಲದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ..! ಯಾವುದಕ್ಕೂ ಇಲ್ಲಿ ಅನುಮತಿ ಇದೆ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ. "ಈಜಿಪ್ಟಿನ ಶಿಕ್ಷಣ ಮಟ್ಟವು ಕುಸಿದಿದೆ” ಎಂದು ವ್ಯಕ್ತಿಯೊಬ್ಬ ಕಾಮೆಂಟ್‌ ಮಾಡಿದರೆ ಇನ್ನೊಬ್ಬರು ಟ್ವಿಟ್ಟರ್‌ ಬಳಕೆದಾರರು, "ಶಿಕ್ಷಕರು ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗಿರಬೇಕು. ಈಕೆ ಕೆಟ್ಟ ಉದಾಹರಣೆಯಾಗಿದ್ದಾರೆ" ಎಂದು ಬರೆದಿದ್ದಾರೆ.

ವಿಡಿಯೋ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೆ

ಇದು ದುಃಖದಾಯಕ ಪರಿಸ್ಥಿತಿ, ಈ ದ್ವಂದ್ವ ನೀತಿಗೆ ಅರ್ಥಾನೇ ಇಲ್ಲ. ಮಾನವ ಹಕ್ಕುಗಳಂತಹ ಸರಳ ವಿಷಯಗಳು ಇನ್ನು ಕೆಲವು ಸ್ಥಳಗಳಲ್ಲಿ ಅಪರೂಪವೆಂದು ತಿಳಿಯಲು ನನಗೆ ಭಯವಾಗುತ್ತದೆ" ಎಂದು ಮತ್ತೊಬ್ಬ ಯೂಟ್ಯೂಬ್ ಬಳಕೆದಾರರು ಬರೆದಿದ್ದಾರೆ. ಬಿಬಿಸಿ ವರದಿಯ ಪ್ರಕಾರ, ಯೂಸೆಫ್ ಸಾರ್ವಜನಿಕ ಸಮಾರಂಭದಲ್ಲಿ ಅಥವಾ ತನ್ನ ವಿದ್ಯಾರ್ಥಿಗಳ ಮುಂದೆ ನೃತ್ಯ ಮಾಡಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ. ಆಕೆ ನೈಲ್ ಡೆಲ್ಟಾದ ಡಕಾಹ್ಲಿಯಾ ಗವರ್ನರೇಟ್‌ನಲ್ಲಿ ಅರೇಬಿಕ್ ಕಲಿಸುತ್ತಿದ್ದರು ಎಂದು ವರದಿ ಹೇಳುತ್ತದೆ.

ಆಕೆಯನ್ನು ಕೆಲಸದಿಂದ ವಜಾಗೊಳಿಸಿದ ನಂತರ, ಈಜಿಪ್ಟ್‌ನಲ್ಲಿನ ಮಹಿಳಾ ಹಕ್ಕುಗಳ ಕಾರ್ಯಕರ್ತರು ಆಕೆಯ ರಕ್ಷಣೆಗೆ ಬಂದಿದ್ದಾರೆ.” ಈ ಶಿಕ್ಷಕಿ ಕೇವಲ , ಮಾಟಗಾತಿ ಬೇಟೆಯ ಬಲಿಪಶು“ ಎಂದು ಅವರು ಹೇಳುತ್ತಾರೆ. ಇತರ ಮಹಿಳೆಯರೂ ಯೂಸೆಫ್ ಅವರನ್ನು ಬೆಂಬಲಿಸುವ ಸಲುವಾಗಿ ತಾವು ನೃತ್ಯ ಮಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಲೈವ್​ನಲ್ಲಿದ್ದ ರಿಪೋರ್ಟರ್ ಮೊಬೈಲ್​​ ಕದ್ದ ಕಳ್ಳ: ಖತರ್ನಾಕ್​ ಖದೀಮನನ್ನು ಸೆರೆ ಹಿಡಿದ ವೀಕ್ಷಕರು!

BBC ವರದಿಯ ಪ್ರಕಾರ, ಈಜಿಪ್ಟಿನ ಮಹಿಳಾ ಹಕ್ಕುಗಳ ಕೇಂದ್ರದ ಮುಖ್ಯಸ್ಥ ನಿಹಾದ್ ಅಬು ಕುಮ್ಸಾನ್ ಆಕೆಗೆ ಉದ್ಯೋಗ ನೀಡುವುದರ ಜೊತೆಗೆ ಆಕೆಯನ್ನು ವಜಾಗೊಳಿಸಿರುವುದರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಲುವಾಗಿ ಶಿಕ್ಷಣ ಸಚಿವಾಲಯದೊಂದಿಗಿನ ಆಕೆಯ ಒಪ್ಪಂದ ತರುವಂತೆ ಕೋರಿದರು. ಇದು ಪರಿಸ್ಥಿತಿಯನ್ನು ಅವಲೋಕಿಸುವಂತೆ ಅಧಿಕಾರಿಗಳನ್ನು ಪ್ರೇರೇಪಿಸಿತು ಎಂದು ವರದಿಗಳು ಸೂಚಿಸುತ್ತವೆ, ಇದೀಗ ಹೊಸ ಶಾಲೆಗೆ ಯೂಸೆಫ್ ಅವರನ್ನು ನೇಮಿಸಲಾಗಿದೆ. ಯೂಸೆಫ್ ಪ್ರಕಾರ, ದಖಾಲಿಯಾದಲ್ಲಿನ ಶಿಕ್ಷಣ ನಿರ್ದೇಶನಾಲಯದಿಂದ ಅವಳು ಪಡೆದ ಸಹಾಯವು ಅವಳ ಘನತೆಯನ್ನು ಪುನಃಸ್ಥಾಪಿಸಿತು.

ಅನುಮತಿಯಿಲ್ಲದೆ ತನ್ನನ್ನು ಚಿತ್ರೀಕರಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ಕಾರಣವಾದ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಲು ಯೂಸೆಫ್ ಯೋಜಿಸುತ್ತಿದ್ದಾಳೆ ಎಂದು ವರದಿಗಳು ಹೇಳುತ್ತವೆ.
Published by:vanithasanjevani vanithasanjevani
First published: