HOME » NEWS » Trend » EGG BREAKS KYLIE JENNER RECORD MOST LIKED PHOTO ON INSTAGRAM

ಇದು ವಿಶ್ವ ದಾಖಲೆ ಬರೆದ ಒಂದು ಮೊಟ್ಟೆಯ ಕಥೆ

ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ನೀಡಿ ಈ ಮೊಟ್ಟೆಯ ಫೋಟೋ ಹಂಚಿಕೊಳ್ಳಲಾಗಿತ್ತು.

zahir | news18
Updated:January 17, 2019, 8:00 PM IST
ಇದು ವಿಶ್ವ ದಾಖಲೆ ಬರೆದ ಒಂದು ಮೊಟ್ಟೆಯ ಕಥೆ
ಮೊಟ್ಟೆ ಫೋಟೋ
  • News18
  • Last Updated: January 17, 2019, 8:00 PM IST
  • Share this:
ಸಾಮಾಜಿಕ ತಾಣದಲ್ಲಿ ಒಂದು ಮೊಟ್ಟೆಗೂ ಫಾಲೋವರ್ಸ್​ ಇರುತ್ತಾರಾ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ? ಖಂಡಿತ ಇದೆ. ಏಕೆಂದರೆ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಮೊಟ್ಟೆಯೊಂದು ವಿಶ್ವ ದಾಖಲೆ ಬರೆಯುವ ಮೂಲಕ ಸಖತ್ ಸುದ್ದಿಯಾಗಿದೆ. ಅದು ಕೂಡ  ಖ್ಯಾತಿಯ ನಟಿಯನ್ನೇ ಹಿಂದಿಕ್ಕಿ ಎಂಬುದು ಮತ್ತೊಂದು ವಿಶೇಷ.

ಇನ್​ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದಿದ್ದ ಹಾಲಿವುಡ್​ ನಟಿ ಕೈಲಿ ಜೆನ್ನರ್​ ಈಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಒಂದು ಮೊಟ್ಟೆ ಅಷ್ಟೇ. ವರ್ಲ್ಡ್​​ ರೆಕಾರ್ಡ್​ ಎಂಬ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಇತ್ತೀಚೆಗೆ ಮೊಟ್ಟೆಯೊಂದರ ಫೋಟೋ ಹಾಕಲಾಗಿತ್ತು. ಈ ಫೋಟೋಗೆ 47 ಕೋಟಿಗಿಂತಲೂ ಹೆಚ್ಚಿನ ಲೈಕ್ ಸಿಕ್ಕಿದೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಲೈಕ್ ಪಡೆದ ಫೋಟೋ ಎಂಬ ದಾಖಲೆ ಮೊಟ್ಟೆಯ ಪಾಲಾಗಿದೆ.

ಈ ಹಿಂದೆ ನಟಿ ಜೆನ್ನರ್ ತನ್ನ ಮಗಳ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ 18 ಮಿಲಿಯನ್ ಲೈಕ್​ ಸಿಕ್ಕಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ಅದ್ಯಾರೋ ಹಾಕಿದ ಒಂದು ಮೊಟ್ಟೆಯ ಫೋಟೋ ಅಳಿಸಿ ಹಾಕಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುನ್ನ ಬದಲಾಗಲಿದೆ ಫೇಸ್​ಬುಕ್​ ನಿಯಮ

ವರ್ಲ್ಡ್​ ರೆಕಾರ್ಡ್​ ಹೆಸರಿನ ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ  ಮೊಟ್ಟೆಯ ಫೋಟೋ ಅವರು ಅಪ್ಲೋಡ್​ ಮಾಡಿದ ಮೊದಲ ಚಿತ್ರವಾಗಿತ್ತು. ಅಲ್ಲದೆ ಅನಂತರ ಕೂಡ ಯಾವುದೇ ಫೋಟೋ ಹಾಕಿಲ್ಲ. ಹಾಕಿದ ಒಂದು ಪೋಸ್ಟ್​ನಿಂದ ಈ ಖಾತೆಯನ್ನು 7.3 ಕೋಟಿ ಜನರು ಫಾಲೋ ಕೂಡ ಮಾಡುತ್ತಿದ್ದಾರೆ.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಂದ ಹೆಡ್​ ಕಾನ್ಸ್ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೈಲಿ ಜೆನ್ನರ್ ದಾಖಲೆಯನ್ನು ಮುರಿದು ಇನ್​ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಸೃಷ್ಟಿಸೋಣ ಎಂಬ ಟ್ಯಾಗ್ ಲೈನ್ ನೀಡಿ ಈ ಮೊಟ್ಟೆಯ ಫೋಟೋ ಹಂಚಿಕೊಳ್ಳಲಾಗಿತ್ತು. ಅದರಂತೆ ಮೊಟ್ಟೆ ಹಾಲಿವುಡ್​ ನಟಿಯ ಸೋಷಿಯಲ್ ನೆಟ್​ವರ್ಕ್​ ದಾಖಲೆಯನ್ನು ಮೂರಾಬಟ್ಟೆಯನ್ನಾಗಿಸಿ ವೈರಲ್ ಆಗುತ್ತಿದೆ.ಒಟ್ಟಿನಲ್ಲಿ ಮೊಟ್ಟೆಯೊಂದಿಗೆ ಯಾರೂ ಊಹಿಸದ ದಾಖಲೆಯನ್ನು ದಾಖಲೆ ಸೃಷ್ಟಿಸಿದ @world_record_egg ಖಾತೆದಾರ ಯಾರೆಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಹಾಗೆಯೇ ಆ ಮೊಟ್ಟೆಯಲ್ಲಿ ಅಂತಹದ್ದೇನಿದೆ ಎಂಬುದಕ್ಕೂ ಉತ್ತರವಿಲ್ಲ.

ಇದನ್ನೂ ಓದಿ: BSNL ಭರ್ಜರಿ ಆಫರ್​: ಪ್ರತಿನಿತ್ಯ 3.21GB ಡೇಟಾ ಉಚಿತ

First published: January 17, 2019, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories