Eco-Friendly House: ಮನೆ ನಿರ್ಮಿಸಲು ಟೆನ್ಷನ್​ ಯಾಕೆ? ಬಿಯರ್‌ ಬಾಟಲಿ ಮತ್ತು ಬಿದಿರು ಬಳಸಿ ಸಿದ್ಧವಾಗಿದೆ ಈ ಪರಿಸರ ಸ್ನೇಹಿ ವಸತಿ

ನಗರ ಜೀವನದಿಂದ ಬೇಸತ್ತಿರುವ ಜನರು ಇಂದು ನಗರದಲ್ಲಿಯೇ ಮನೆ ನಿರ್ಮಾಣ ಮಾಡಿದರೂ ಅದು ಪರಿಸರ ಸ್ನೇಹಿ ಮನೆಯನ್ನಾಗಿ ನಿರ್ಮಿಸುವಲ್ಲಿ ಬಹಳ ಕಾಳಜಿ ವಹಿಸುತ್ತಾರೆ. ಅಂತಹ ವ್ಯಕ್ತಿಗಳ ಪೈಕಿ ಇಲ್ಲೊಬ್ಬರು ತಮ್ಮ ಸುಂದರ ಇಟ್ಟಿಗೆ ಮನೆಗೆ ಈಗಾಗಲೇ ಬಳಸಿದ ಬಿಯರ್‌ ಬಾಟಲಿಗಳು ಮತ್ತು ಬಿದಿರಿನಿಂದ ಆ ಮನೆಯ ಮಹಡಿಯ ವಿನ್ಯಾಸವನ್ನು ಮಾಡಿದ್ದಾರೆ. ಇದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿಂದು ನಾವು ನೋಡೊಣ ಬನ್ನಿ.

ಪರಿಸರ ಸ್ನೇಹಿ ಮನೆ

ಪರಿಸರ ಸ್ನೇಹಿ ಮನೆ

  • Share this:
ಇಂದಿನ ಆಧುನಿಕ ಜನರು ತಮ್ಮ ಮನೆಯನ್ನು (House) ಸುಂದರವಾಗಿ ಮತ್ತು ಪರಿಸರತ್ಮಾಕವಾಗಿ ನಿರ್ಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎನ್ನಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ನಗರ ಜೀವನದಿಂದ ಬೇಸತ್ತಿರುವ ಜನರು (People) ಇಂದು ನಗರದಲ್ಲಿಯೇ ಮನೆ ನಿರ್ಮಾಣ ಮಾಡಿದರೂ (House Construction) ಅದು ಪರಿಸರ ಸ್ನೇಹಿ ಮನೆಯನ್ನಾಗಿ ನಿರ್ಮಿಸುವಲ್ಲಿ ಬಹಳ ಕಾಳಜಿ ವಹಿಸುತ್ತಾರೆ. ಅಂತಹ ವ್ಯಕ್ತಿಗಳ ಪೈಕಿ ಇಲ್ಲೊಬ್ಬರು ತಮ್ಮ ಸುಂದರ ಇಟ್ಟಿಗೆ ಮನೆಗೆ ಈಗಾಗಲೇ ಬಳಸಿದ ಬಿಯರ್‌ ಬಾಟಲಿಗಳು (Beer Bottle) ಮತ್ತು ಬಿದಿರಿನಿಂದ (Bamboo) ಆ ಮನೆಯ ಮಹಡಿಯ ವಿನ್ಯಾಸವನ್ನು ಮಾಡಿದ್ದಾರೆ. ಇದರ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿಂದು ನಾವು ನೋಡೊಣ ಬನ್ನಿ.

ಈ ಪರಿಸರ ಸ್ನೇಹಿ ಮನೆ ಎಲ್ಲಿ ಇರುವುದು?
ಈ ಪರಿಸರ ಸ್ನೇಹಿ ಮನೆ ಇರುವುದು ಕೇರಳದ ತಿರುವನಂತಪುರಂ ನಗರದಲ್ಲಿದೆ. ಈ ಮನೆಯು ಆರ್ಕಿಟೆಕ್ಟ್ ಆಶಮ್ಸ್ ರವಿ ಅವರ ಮನೆಯಾಗಿದೆ. ಈ ಮನೆಯ ಇನ್ನೊಂದು ವಿಶೇಷತೆ ಎಂದರೆ ಕಡಿಮೆ ಕಾರ್ಬನ್‌ ಪುಟ್‌ಪ್ರಿಂಟ್‌ ಅನ್ನು ಹೊಂದಿದ್ದರೂ ಸಹ ಮನೆ ನೋಡಲು ಅತ್ಯಂತ ಸುಂದರವಾಗಿದೆ ಎಂದು ಹೇಳಬಹುದು.

ಇದು ತಿರುವನಂತಪುರಂನಲ್ಲಿರುವ ಸುಂದರವಾದ ಇಟ್ಟಿಗೆ ಮನೆಯಾಗಿದ್ದು, ಸಾಂಪ್ರದಾಯಿಕ ಕೇರಳದ ವಾಸ್ತುಶಿಲ್ಪ ಶೈಲಿಗಳಿಂದ ಈ ಮನೆಯ ವಿನ್ಯಾಸ ಪ್ರಭಾವಿತವಾಗಿದೆ. ಈ ಮನೆಯು ತನ್ನದೇ ಆದ ವಿಶಿಷ್ಟಗಳನ್ನು ಹೊಂದಿದ್ದು, ಮನೆಯ ಅಂಗಳದಲ್ಲಿರುವ ಗಿಡ-ಮರಗಳು, ಮನೆಯೊಂದಿಗೆ ಹೊಂದಿಕೊಂಡಿರುವ ದೊಡ್ಡ ಚಕ್ರವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ.

ಹಣ ಉಳಿತಾಯದ ಜೊತೆ ಉತ್ತಮ ಮನೆ ನಿರ್ಮಾಣ
ಈ ಮನೆಯು ನಿಸರ್ಗ ಸೌಂದರ್ಯದ ಕಣಿಯಾಗಿದ್ದರೂ ಸಹ ಕಡಿಮೆ ಕಾರ್ಬನ್‌ ಪುಟ್‌ಪ್ರಿಂಟ್‌ ಹೊಂದಿದೆ ಹಾಗೂ ಇದರ ನಿರ್ಮಾಣದ ವೆಚ್ಚ ತುಂಬಾ ಕಡಿಮೆ ಇರುವುದರಿಂದ, ನಿಮ್ಮ ಹಣದ ಉಳಿತಾಯವೂ ಕೂಡ ಈ ಮನೆಯ ನಿರ್ಮಾಣದಿಂದ ಖಂಡಿತ ಆಗುತ್ತದೆ.

ಇದನ್ನೂ ಓದಿ: Satta Dada Temple: ಇದು ಅಣ್ಣನಿಗಾಗಿ ಸತ್ತ ತಮ್ಮನ ದೇವಸ್ಥಾನ! ಇಲ್ಲಿ ಹರಕೆಗೆಂದು ಪೊರಕೆ ನೀಡುತ್ತಾರೆ ಭಕ್ತರುಈ ಮನೆಯ ಒಡೆಯ ತಿರುವನಂತಪುರಂ ಮೂಲದ ವಾಸ್ತುಶಿಲ್ಪಿ ಆಶಮ್ಸ್ ರವಿ ಆಗಿದ್ದಾರೆ. ಇವರು ತಮ್ಮನ್ನು ತಾವೇ ʼಲಾರೆನ್ಸ್ ಲೌರಿ ಬೇಕರ್ʼ ವಿನ್ಯಾಸಕ ಮತ್ತು ಭಾರತದಲ್ಲಿ ಸುಸ್ಥಿರ ಕಟ್ಟಡ ವಿಧಾನಗಳ ಪ್ರವರ್ತಕ ಎಂದು ಗುರುತಿಸಿಕೊಂಡಿದ್ದಾರೆ. ಇವರು ಪರಿಸರ ಸ್ನೇಹಿ ಯೋಜನೆಗಳನ್ನು ಬಹಳಷ್ಟು ಕೈಗೊಂಡಿದ್ದಾರೆ. ಆದ್ದರಿಂದ, ಅವರ ಮನೆಯ ಹೆಸರನ್ನು ಕೆನಾನ್‌ ಎಂದು ನಾಮಕರಣ ಮಾಡಲಾಗಿದೆ. ಕೆನಾನ್‌ ಎನ್ನುವುದು ಒಂದು ಸುಂದರ ನಿಸರ್ಗ ಸ್ಥಳವೆಂದು ಹೇಳಲಾಗುವುದರ ಕುರಿತು ಈ ಹೆಸರನ್ನು ತಮ್ಮ ಮನೆಗೆ ಇಟ್ಟಿದ್ದಾರೆ.

ಈ ಬಗ್ಗೆ ಆಶಮ್ಸ್‌ ರವಿ ಏನು ಹೇಳಿದ್ದಾರೆ?
ಆಶಮ್ಸ್‌ ರವಿ ಅವರು ನಾಗಪಟ್ಟಿನಂನ ಪ್ರೈಮ್ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ ಎಂಬ ಪದವಿ ಕಾಲೇಜ್‌ನಲ್ಲಿ ಪದವಿ ಪಡೆದ ವಾಸ್ತುಶಿಲ್ಪಿ ಆಗಿದ್ದಾರೆ. ಇವರು ನಗರದಿಂದ ಸ್ವಲ್ಪ ದೂರದಲ್ಲಿ 40 ಚದರ ಮೀಟರ್‌ ನಲ್ಲಿ ಮನೆ ನಿರ್ಮಾಣಕ್ಕಾಗಿ ಈ ಹಿಂದೆ ಪ್ಲಾನ್‌ ಮಾಡಿದ್ದರು. ಆದರೆ ಜಾಗ ಎಲ್ಲೂ ಸಿಕ್ಕಿರಲಿಲ್ಲ. ಜಾಗವನ್ನು ಹುಡುಕುವಷ್ಟರಲ್ಲಿ ಬರೋಬ್ಬರಿ 5 ರಿಂದ 6 ವರ್ಷಗಳು ಕಳೆದಿವೆ. ನಂತರ ಈ ಜಾಗ ಸಿಕ್ಕಿತು ಆದರೆ ಈ ಭೂಪ್ರದೇಶವು ಇಳಿಜಾರಿನಲ್ಲಿತ್ತು.ಆಗ ರವಿಯು “ಈ ಭೂಪ್ರದೇಶವನ್ನು ಸಮತಟ್ಟಾಗಿಸಲು ನಾನು ಬಹಳ ಹಿಂಜರಿದ್ದೇನೆ. ಏಕೆಂದರೆ ಭೂಪ್ರದೇಶ ಹೇಗಿದೆಯೋ ಹಾಗೆ ಒಪ್ಪಿ ಅಲ್ಲಿ ನಾವು ವಾಸ ಮಾಡಬೇಕು. ಇಲ್ಲದಿದ್ದರೆ ಅದು ನಾವು ಪ್ರಕೃತಿ ವಿರುದ್ಧ ಹೋದ ಹಾಗೆ ಆಗುತ್ತದೆ. ಆದ್ದರಿಂದ ಆಗ ನಾನು ಪರಿಸರ ಸ್ನೇಹಿ ಮನೆ ಮಾಡಬೇಕೆಂದು ನಿರ್ಧಾರ ಮಾಡಿದೆ. ಆ ಮನೆ ಈಗ ಜಗತ್ತಿನ ಮುಂದೆ ತನ್ನ ಕತೆಯನ್ನು ತಾನೇ ಹೇಳುವ ಹಾಗೆ ಮಾಡಿದ್ದೇನೆ “ ಎಂದು ಹೇಳಿದರು.

ಮರಗಳನ್ನು ಕಡಿಯದೆ ಮನೆ ನಿರ್ಮಾಣ
ರವಿಯು ಮತ್ತೆ ತಮ್ಮ ಮಾತನ್ನು ಮುಂದುವರಿಸುತ್ತಾ “ ನಾನು ಮತ್ತು ನನ್ನ ಸಹೋದರ ಈ ಇಳಿಜಾರಿನ ಪ್ರದೇಶದೊಂದಿಗೆ ಮನೆ ನಿರ್ಮಾಣ ಮಾಡಬೇಕೆಂದು ಅಂತಿಮ ನೀಲನಕ್ಷೆಯನ್ನು ರಚಿಸಿದೆವು. ಅದಕ್ಕೆ ತಕ್ಕದಾಗಿ ಎರಡು ಮಹಡಿಗಳಲ್ಲಿ ಎರಡು ಹಂತಗಳನ್ನು ಒಳಗೊಂಡ ಮನೆ ಇದಾಗಿದ್ದು, ಈ ಮನೆಯ ಮಹಡಿಯನ್ನು ಬಿದಿರು ಮತ್ತು ಈಗಾಗಲೇ ಬಳಸಿದ ಬಿಯರ್‌ ಬಾಟಲಿಗಳಿಂದ ನಿರ್ಮಿಸಲಾಗಿದೆ. ಆ ಪ್ರದೇಶದಲ್ಲಿ ಈಗಾಗಲೇ ಇದ್ದ ಮರಗಳು ಮತ್ತು ಸಸ್ಯಗಳನ್ನು ಹಾಗೇ ಬಿಡಲಾಯಿತು. ಮಣ್ಣಿನ ಸವೆತ ಆಗಬಾರದೆಂದು ಸ್ಥಳಿಯ ಮರಗಳು ಮತ್ತು ವಿಶೇಷ ಹುಲ್ಲನ್ನು ನೆಡಲಾಯಿತು. ಮನೆಯ ಮಧ್ಯದಲ್ಲಿ ಒಂದು ಮರವಿದೆ ಅದನ್ನು ಕಡಿಯದೇ ಅದರ ಅನುಗುಣವಾಗಿ ಈ ಮನೆಯ ನಿರ್ಮಾಣವನ್ನು ಮಾಡಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  Dog Rescue: ಅಬ್ಬಾ, ಬದುಕಿತು ಬಡ ಜೀವ! 2 ತಿಂಗಳಿನಿಂದ ಗುಹೆಯೊಂದರಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಈ ಮನೆಯ ಪ್ರವೇಶದ್ವಾರವು ನೆಲ ಅಂತಸ್ತಿನಲ್ಲಿರುವುದರಿಂದ ಇದು ಮೇಲ್ಮಹಡಿಗೆ ಹೊಂದಿಕೊಂಡಿದೆ. ಇದು ವರಾಂಡಾ ಮತ್ತು ಲಿವಿಂಗ್ ರೂಮ್, ಪ್ರಾರ್ಥನಾ ಕೊಠಡಿ ಮತ್ತು ಬೆಡ್ ರೂಮ್‌ಗೆ ಹೊಂದಿಕೊಂಡಿರುವ ಶೌಚಾಲಯವನ್ನು ಹೊಂದಿದೆ. ಆದರೆ ಮಲಗುವ ಕೋಣೆಗಳು ಬೇರೆ ಮನೆಗಳಿಗೆ ಹೋಲಿಸಿದರೆ ಸ್ವಲ್ಪ ಚಿಕ್ಕದಾಗಿವೆ. ಇದಕ್ಕೆ ಕಾರಣ ಮಲಗುವ ಕೋಣೆಗಳನ್ನು ಮಲಗಲು ಅಥವಾ ಬಟ್ಟೆ ಬದಲಿಸಲು ಮಾತ್ರ ಹೆಚ್ಚಾಗಿ ಬಳಕೆ ಮಾಡುವುದರಿಂದ ಅವುಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ವಾಸ್ತುಶಿಲ್ಪಿ ಮತ್ತು ಮನೆಯ ಒಡೆಯ ರವಿಯು ಇಲ್ಲಿ ನೀಡಿಲ್ಲ.

ಒಟ್ಟಾರೆಯಾಗಿ ಈ ಮನೆಯು ಸಂಪೂರ್ಣ ಪರಿಸರ ಸ್ನೇಹಿ ಮನೆ ಎಂದು ಹೇಳಬಹುದು. ಇಂತಹ ಮನೆ ನಿಮ್ಮ ಕನಸಿನ ಮನೆಯಾಗಿದ್ದರೆ ನೀವು ಈ ತರದ ಮನೆ ನಿರ್ಮಾಣವನ್ನು ಮಾಡಬಹುದು.
Published by:Ashwini Prabhu
First published: