Viral Video: ಭತ್ತದ ಹೊಟ್ಟಿನಿಂದ ತಯಾರಾಯ್ತು ತಟ್ಟೆ, ಲೋಟ, ವಿಡಿಯೋ ಹಂಚಿಕೊಂಡ ಶಶಿ ತರೂರ್

ಕಾಂಗ್ರೆಸ್ ನಾಯಕ ಶಶಿ ತರೂರು ರಿಟ್ವೀಟ್ ಮಾಡಿ ದಿನ ನಿತ್ಯದ ಬಳಕೆಗೆ ಪರಿಸರ ಸ್ನೇಹಿ ವಸ್ತುಗಳು ಅಗತ್ಯವಿದ್ದು ಪ್ಲಾಸ್ಟಿಕ್ ನಿಷೇಧಿಸಲು ಕೂಡ ಹೆಚ್ಚು ಸಹಾಯವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರು ರಿಟ್ವೀಟ್ ಮಾಡಿ ದಿನ ನಿತ್ಯದ ಬಳಕೆಗೆ ಪರಿಸರ ಸ್ನೇಹಿ ವಸ್ತುಗಳು ಅಗತ್ಯವಿದ್ದು ಪ್ಲಾಸ್ಟಿಕ್ ನಿಷೇಧಿಸಲು ಕೂಡ ಹೆಚ್ಚು ಸಹಾಯವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ಶಶಿ ತರೂರು ರಿಟ್ವೀಟ್ ಮಾಡಿ ದಿನ ನಿತ್ಯದ ಬಳಕೆಗೆ ಪರಿಸರ ಸ್ನೇಹಿ ವಸ್ತುಗಳು ಅಗತ್ಯವಿದ್ದು ಪ್ಲಾಸ್ಟಿಕ್ ನಿಷೇಧಿಸಲು ಕೂಡ ಹೆಚ್ಚು ಸಹಾಯವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

  • Share this:
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು (IAS officer Supriya Sahu ) ಭತ್ತದ ಹೊಟ್ಟಿನಿಂದ ತಟ್ಟೆ, ಲೋಟ, ಆಹಾರ ತುಂಬುವ ಬಾಕ್ಸ್‌ಗಳನ್ನು ತಯಾರಿಸಿ ತಮ್ಮ ಟ್ವಿಟ್ಟರ್‌ನಲ್ಲಿ(Twitter) ಉತ್ಪನ್ನಗಳ ವಿಡಿಯೋ ಹಂಚಿಕೊಂಡಿದ್ದಾರೆ. ಈ ಟ್ವೀಟನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ (MP Shashi Tharoor) ಕೂಡ ರಿಟ್ವೀಟ್ (Retweeted ) ಮಾಡಿದ್ದು, ಇವುಗಳ ಬಳಕೆ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಈ ಮೂಲಕ ಪ್ಲಾಸ್ಟಿಕ್‌ಗೆ ಗುಡ್ ಬೈ ಹೇಳಿ ಪರಿಸರ ಸ್ನೇಹಿಯಂತಹ (Eco-friendly) ವಸ್ತುಗಳನ್ನು ಬಳಸುವಂತೆ ಕರೆ ನೀಡಿದ್ದಾರೆ. ‌

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ವಿಡಿಯೋ ಶೇರ್
ಮೊದಲಿನಿಂದಲೂ ನಿಸರ್ಗಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ದ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಭತ್ತದ ಮೇಲ್ಭಾಗದ ಹೊಟ್ಟಿನಿಂದ ತಟ್ಟೆ, ಲೋಟ, ಬಾಕ್ಸ್ ತಯಾರಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. 43 ಸೆಕೆಂಡ್ ಇರುವ ವಿಡಿಯೋ ಕ್ಲಿಪ್‌ನಲ್ಲಿ ಭತ್ತದ ಹೊಟ್ಟಿನಿಂದ ತಯಾರಾದ ತಟ್ಟೆ, ಲೋಟ, ಬಾಕ್ಸ್, ಇನ್ನಿತರ ವಿವಿಧ ಗಾತ್ರದ ಉತ್ಪನ್ನಗಳನ್ನು ನೋಡಬಹುದು. ಪರಿಸರ ಸ್ನೇಹಿಯಾದ ಈ ಉತ್ಪನ್ನಗಳು ಬಳಕೆಗೆ ಯೋಗ್ಯವಾಗಿದ್ದು ಹೋಟೆಲ್, ರೆಸ್ಟೋರೆಂಟ್ಗಳು ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ತ್ಯಜಿಸಿ ಇವುಗಳನ್ನು ಬಳಸುವಂತೆ ಸಾಹು ಒತ್ತಾಯಿಸಿದ್ದಾರೆ. ವೀಡಿಯೋದಲ್ಲಿ ಈ ಉತ್ಪನ್ನಗಳನ್ನು ಮರು ಬಳಕೆ ಮಾಡುವಂತಿಲ್ಲ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: ಶೂನ್ಯ ತ್ಯಾಜ್ಯ ಉತ್ಪತ್ತಿಯ ಜತೆ ಸೌರಶಕ್ತಿ ಬಳಸಿ 70% ವಿದ್ಯುತ್‌ ಶಕ್ತಿ ಉಳಿಸುತ್ತಿರುವ ಬೆಂಗಳೂರಿನ ಆರ್ಕಿಟೆಕ್ಟ್‌

ಪರಿಸರ ಸ್ನೇಹಿ ಉತ್ತೇಜನ ಕಾರ್ಯಕ್ರಮ
ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಭತ್ತದ ಹೊಟ್ಟಿನಿಂದ ತಯಾರಾದ ತಟ್ಟೆ, ಲೋಟ, ಕಂಟೇನರ್‌ಗಳು ಎಲ್ಲರ ಕೈಗೆಟಕುವಂತದ್ದು, ಯೂಸ್ ಅಂಡ್ ಥ್ರೋ ಅಲ್ಲದೆ ಯಾವುದೇ ರೀತಿಯ ಸೋರಿಕೆ ಆಗುವುದಿಲ್ಲ ಎಂದು ತಮ್ಮ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಹೋಟೆಲ್, ರೆಸ್ಟೋರೆಂಟ್‌ಗಳು ಪ್ಲಾಸ್ಟಿಕ್ ಬಾಕ್ಸ್‌ಗಳನ್ನು ಬಳಸಿ ಪರಿಸರಕ್ಕೆ ಹಾನಿ ಮಾಡುತ್ತಿವೆ. ಈ ಉತ್ಪನ್ನಗಳು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಬಳಕೆ ತಗ್ಗಿಸುವಲ್ಲಿ ಸಹಾಯಕಾರಿಯಾಗಿದೆ. ಹಾಗಾಗಿ ಇವುಗಳ ಬಳಕೆ ಪರಿಸರ ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ಸಾಹು ಹೇಳಿದ್ದಾರೆ. ತಮಿಳುನಾಡು ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಪರಿಸರ ಸ್ನೇಹಿ ಉತ್ತೇಜನ ಕಾರ್ಯಕ್ರಮವಾದ #meendummanjappai ಹ್ಯಾಶ್‌ ಟ್ಯಾಗ್ ಬಳಸಿ ವೀಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿ:



ಸಾಹು ಅವರ ಕೆಲಸಕ್ಕೂ ಶ್ಲಾಘನೆ
ಸುಪ್ರಿಯಾ ಸಾಹು ಟ್ವೀಟ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದುವರೆಗೂ 25 ಲಕ್ಷ ಜನ ವೀಕ್ಷಿಸಿದ್ದಾರೆ. 13,800ಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 4,000 ಜನ ರಿಟ್ವೀಟ್ ಕೂಡ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕ ಶಶಿ ತರೂರು ರಿಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ದಿನ ನಿತ್ಯದ ಬಳಕೆಗೆ ಪರಿಸರ ಸ್ನೇಹಿ ವಸ್ತುಗಳು ಅಗತ್ಯವಿದ್ದು ಪ್ಲಾಸ್ಟಿಕ್ ನಿಷೇಧಿಸಲು ಕೂಡ ಹೆಚ್ಚು ಸಹಾಯವಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ತಮಿಳುನಾಡಲ್ಲದೇ ದೇಶದಾದ್ಯಂತ ಮರು ಬಳಕೆ ಮಾಡಬಲ್ಲ ಪರಿಸರ ಸ್ನೇಹಿ ವಸ್ತುಳನ್ನು ಜನ ಬಳಸಬೇಕು. ಅಲ್ಲದೇ ಈ ರೀತಿಯ ಕೆಲಸಗಳಿಗೆ ಪ್ರೋತ್ಸಾಹಿಸಲು ಧನ ಸಹಾಯ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸುಪ್ರಿಯಾ ಸಾಹು ಅವರ ಕೆಲಸಕ್ಕೂ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೆಣಬಿನಿಂದ ಪರಿಸರ ಸ್ನೇಹಿ ಹೋಮ್‌ಸ್ಟೇ ನಿರ್ಮಾಣವಾಗಿದ್ದು ಹೀಗೆ..

ಪರಿಸರ ಸ್ನೇಹಿ ಕೆಲಸಕ್ಕೆ ಸಾಥ್
ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಮೊದಲಿನಿಂದಲೂ ಈ ರೀತಿಯ ಪರಿಸರ ಸ್ನೇಹಿ ಕೆಲಸಗಳನ್ನು ಉತ್ತೇಜಿಸುತ್ತಾ ಬಂದಿದ್ದು ತಮ್ಮ ಖಾತೆಯಲ್ಲಿ ಹಲವು ಮಾಹಿತಿ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಭತ್ತದ ಹೊಟ್ಟಿನಿಂದ ತಯಾರಿಸಿದ ತಟ್ಟೆ, ಲೋಟ, ಆಹಾರ ತುಂಬುವ ಬಾಕ್ಸ್‌ಗಳ ಉತ್ಪಾದನೆಯನ್ನು ತಮಿಳುನಾಡಿನಲ್ಲಿ ಹೆಚ್ಚಿಸುವ ಯೋಜನೆ ಹಾಕಿಕೊಂಡಿದ್ದಾರೆ. ಎಲ್ಲ ಕಡೆಯಲ್ಲಿ ಈ ಪರಿಸರ ಸ್ನೇಹಿ ತಟ್ಟೆ, ಲೋಟ, ಆಹಾರ ತುಂಬುವ ಬಾಕ್ಸ್‌ಗಳು ಬಳಕೆಯಾಗ ಬೇಕೆಂಬುವುದು ಅವರ ಕನಸಾಗಿದೆ.
Published by:vanithasanjevani vanithasanjevani
First published: