Weight Loss Diet: ಖಾರ ಖಾರವಾಗಿ ತಿಂಡಿ, ಊಟ ತಿನ್ನೋದರಿಂದ ಸುಲಭವಾಗಿ ಸಣ್ಣಗಾಗಬಹುದು!

Weight loss tips: ಮಸಾಲೆಯುಕ್ತ ಆಹಾರಗಳು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಣಸಿನಕಾಯಿ, ಕರಿ ಮೆಣಸನ್ನು ತಿನ್ನುವವರು ತಮ್ಮ ಊಟದ ಆಸೆ ಕಡಿಮೆಯಾಗಿರುವುದನ್ನು ಗಮನಿಸಿದ್ದಾರೆ. ಪದೇ ಪದೇ ಕುರುಕಲು ತಿಂಡಿಗಳತ್ತ, ಎಣ್ಣೆಯಲ್ಲಿ ಕರಿದ ಪದಾರ್ಥಗಳತ್ತ ಮುಖ ಮಾಡೋದಿಲ್ಲವಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶದ ತೂಕ ಇಳಿಸಿಕೊಂಡು ಸಣ್ಣಗಾಗಲು ಹತ್ತಾರು ಡಯಟ್​​, ವ್ಯಾಯಾಮಗಳ ಮೊರೆ ಹೋಗಿದ್ದೀರಾ? ನಿಮ್ಮ ತೂಕ ಇಳಿಸಿಕೊಳ್ಳುವ ಕನಸು ನನಸಾಗಲು ಕೆಲವೊಂದಷ್ಟು ಸ್ಮಾರ್ಟ್​​ ವಿಧಾನಗಳನ್ನು ಅನುಸರಿಸಿ. ಸಣ್ಣಗಾಗುವುದು ಯಾವಾಗಲೂ ಕಷ್ಟದ ಕೆಲಸವೇ ಆಗಿರಬೇಕಿಲ್ಲ. ಕೆಲವೊಂದು ಜಾಣ ಉಪಾಯಗಳಿಂದಲೂ ದೇಹದ ತೂಕವನ್ನು ಇಳಿಸಬಹುದು. ಖಾರ ಖಾರವಾಗಿ ತಿಂಡಿ, ಊಟ ಮಾಡುವುದು ನಾಲಿಗೆಗೆ ರುಚಿ ಜೊತೆ ನಿಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ. ಕೆಂಪು ಮೆಣಸಿನ ಪುಡಿ, ಕರಿಮೆಣಸನ್ನು ಊಟಕ್ಕೆ, ಅಡುಗೆ ಹಾಕುವ ಮಸಾಲೆಗಳಲ್ಲಿ ಬಳಸುವುದು ಉತ್ತಮ. ಇದು ನಿಮ್ಮ ದೇಹದ ತೂಕ ಇಳಿಯಲು ಸಹಾಯಕಾರಿ.

ಮಸಾಲೆಯುಕ್ತ ಆಹಾರಗಳು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಮಿಕಲ್ ಸೆನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ 2012 ರ ಲೇಖನದಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಮಸಾಲೆ ಪದಾರ್ಥಗಳಾದ  ಮೆಣಸಿನಕಾಯಿ, ಕರಿ ಮೆಣಸನ್ನು ತಿನ್ನುವವರು ತಮ್ಮ ಊಟದ ಆಸೆ ಕಡಿಮೆಯಾಗಿರುವುದನ್ನು ಗಮನಿಸಿದ್ದಾರೆ. 2014 ರ ಅಧ್ಯಯನದಲ್ಲೂ ಇದು ಸಾಬೀತಾಗಿದೆ. ಖಾರದ ಊಟ ಮಾಡುವವರು ಪದೇ ಪದೇ ಕುರುಕಲು ತಿಂಡಿಗಳತ್ತ, ಎಣ್ಣೆಯಲ್ಲಿ ಕರಿದ ಪದಾರ್ಥಗಳತ್ತ ಮುಖ ಮಾಡೋದಿಲ್ಲವಂತೆ.

ಮಸಾಲೆಯುಕ್ತ ಆಹಾರಗಳು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.  ಬ್ರಿಟಿಷ್ ಮೆಡಿಕಲ್ ಜರ್ನಲ್‌ಗಾಗಿ ಮಾರ್ಕ್ ಎಫ್ ಮೆಕ್ಕಾರ್ಟಿ, ಜೇಮ್ಸ್ ಜೆ ಡಿಕೊಲಾಂಟೋನಿಯೊ ಮತ್ತು ಜೇಮ್ಸ್ ಎಚ್ ಒಕೀಫ್ ಬರೆದ ಲೇಖನದಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಮೆಣಸಿನಕಾಯಿಯಂತಹ ಮಸಾಲೆಯುಕ್ತ ಆಹಾರಗಳು ಕ್ಯಾಪ್ಸೈಸಿನ್ ಎಂದು ಕರೆಯಲ್ಪಡುವ ನೈಸರ್ಗಿಕ ರಾಸಾಯನಿಕವನ್ನು ಹೊಂದಿರುತ್ತವೆ. ನಾವು ಕ್ಯಾಪ್ಸೈಸಿನ್ ಅನ್ನು ಸೇವಿಸಿದಾಗ, ಜೀರ್ಣಾಂಗವು ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಕೊಬ್ಬಿನ ಸುಡುವಿಕೆಗೆ ಕಾರಣವಾಗಿರುವ ದೇಹದ ನರಕೋಶಗಳನ್ನು ಸಕ್ರಿಯಗೊಳಿಸುತ್ತದೆ.

ಇದನ್ನೂ ಓದಿ: Oily Skin Problem: ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ ಯಾವುದೇ ಕಾರಣಕ್ಕೂ ಈ 4 ಆಹಾರಗಳನ್ನು ತಿನ್ನಬೇಡಿ..

ಮಸಾಲೆಯುಕ್ತ ಆಹಾರವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಮಸಾಲೆಯುಕ್ತ ಆಹಾರದ ಪ್ರಯೋಜನವೆಂದರೆ ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ. ಹೆಚ್ಚುವರಿ ಕ್ಯಾಲೋರಿಗಳನ್ನು ಸುಡುತ್ತದೆ. ಮಸಾಲೆಯುಕ್ತ ಆಹಾರವನ್ನು ನಿಮ್ಮ ಡಯಟ್​​ನ ಒಂದು ಭಾಗವನ್ನು ತಿನ್ನುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ತಾತ್ಕಾಲಿಕವಾಗಿ ಶೇ.8ರಷ್ಟು ಹೆಚ್ಚಿಸಬಹುದು.

ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ನೀಮ್ಮ ದೇಹದ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ.  ಯಾವುದೇ ಅತಿಯಾದರೆ ಅದು ತೊಂದರೆಗಳನ್ನು ಆಹ್ವಾನಿಸುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಈ ನಿಯಮಕ್ಕೆ ಹೊರತಾಗಿಲ್ಲ. ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಹುಣ್ಣುಗಳಂತಹ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಎಲ್ಲವೂ ಹಿತಮಿತವಾಗಿದ್ದರೆ ಉತ್ತಮ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: