HOME » NEWS » Trend » EAT RICE WITH KNIFE AND FORK FROM ROYAL COOK EXPERT HAS DESIS COOKING UP A STORM ON TWITTER SCT STG

ಅನ್ನವನ್ನು ಕೈಯಲ್ಲಿ ತಿನ್ನಬೇಡಿ, ಫೋರ್ಕ್‌, ಚಾಕುವಿನಲ್ಲಿ ತಿನ್ನಿ!; ರಾಯಲ್ ಎಕ್ಸ್‌ಪರ್ಟ್‌ ಸಲಹೆಗೆ ಟ್ವಿಟ್ಟಿಗರು ಹೇಳಿದ್ದೇನು?

ಬ್ರಿಟಿಷ್ ರಾಯಲ್‌ ವಂಶದಲ್ಲಿ ಅಡುಗೆ ಮಾಡುತ್ತಿದ್ದ ಮಾಜಿ ಬಟ್ಲರ್‌, ಅನ್ನವನ್ನು ಫೋರ್ಕ್‌, ಚಾಕುವಿನಲ್ಲಿ ತಿನ್ನಿ ಎಂದು ಸಲಹೆ ನೀಡಿದ್ದು, ಟ್ವಿಟ್ಟರ್‌ನಲ್ಲಿ ವೈರಲ್‌ ಆಗಲು ಪ್ರಾರಂಭವಾಯ್ತು.

news18-kannada
Updated:March 10, 2021, 11:18 AM IST
ಅನ್ನವನ್ನು ಕೈಯಲ್ಲಿ ತಿನ್ನಬೇಡಿ, ಫೋರ್ಕ್‌, ಚಾಕುವಿನಲ್ಲಿ ತಿನ್ನಿ!; ರಾಯಲ್ ಎಕ್ಸ್‌ಪರ್ಟ್‌ ಸಲಹೆಗೆ ಟ್ವಿಟ್ಟಿಗರು ಹೇಳಿದ್ದೇನು?
ರಾಯಲ್ ಎಕ್ಸ್​ಪರ್ಟ್​ ಟ್ವೀಟ್
  • Share this:
ಭಾರತೀಯರು ಹೆಚ್ಚಾಗಿ ತಮ್ಮ ಕೈಗಳಲ್ಲೇ ಊಟ ತಿನ್ನುವುದು. ಈ ರೀತಿ ತಿಂದರೆ ಮಾತ್ರ ಆಹಾರದ ಸುವಾಸನೆ, ರುಚಿ ಮತ್ತು ಸ್ಪರ್ಶದ ಕೆಲವು ತೀಕ್ಷ್ಣವಾದ ಸಂವೇದನಾ ಅನುಭವಗಳ ಒಗ್ಗೂಡಿಸುವಿಕೆಯಾಗಿದೆ. ಅಲ್ಲದೆ, ತಮ್ಮ ಕೈಗಳಲ್ಲಿ ತಿನ್ನುವುದೇ ಮನುಷ್ಯರ ದೊಡ್ಡ ಸಂತೋಷಗಳಲ್ಲಿ ಒಂದಾಗಿದೆ. ಅನ್ನ ತಿನ್ನುವ ವಿಚಾರದಲ್ಲೂ ಅಷ್ಟೇ, ಅಕ್ಕಿಯನ್ನು ಪ್ರಧಾನವಾಗಿ ಬೆಳೆಯುವ ರಾಜ್ಯಗಳಲ್ಲಿ ತಮ್ಮ ಕೈಗಳಲ್ಲಿ ಊಟ ಮಾಡಲು ಬಯಸುತ್ತಾರೆ. ಅನೇಕ ರುಚಿಗಳನ್ನು ಒಟ್ಟಿಗೆ ಬೆರೆಸಿ ನಂತರ ನಿಮ್ಮ ಬಾಯಿ ಮತ್ತು ಮೂಗಿನ ಹತ್ತಿರ ತೆಗೆದುಕೊಂಡು ಹೋಗಿ ಅದರ ಸುವಾಸನೆ ಕುಡಿದು, ಅಂತಿಮವಾಗಿ ಅದನ್ನು ಸವಿದರೆ, ಆಹಾರವು ಸ್ವತಃ ಉತ್ತಮವಾಗಿರುತ್ತದೆ ಮತ್ತು ರುಚಿಯಾಗಿರುತ್ತದೆ..!

ಈ ವಿಚಾರ ಯಾಕಪ್ಪಾ ಅಂತೀರಾ..? ಇತ್ತೀಚೆಗೆ, ಬ್ರಿಟಿಷ್ ರಾಯಲ್‌ ವಂಶದಲ್ಲಿ ಅಡುಗೆ ಮಾಡುತ್ತಿದ್ದ ಮಾಜಿ ಬಟ್ಲರ್‌, ಅನ್ನವನ್ನು ಫೋರ್ಕ್‌, ಚಾಕುವಿನಲ್ಲಿ ತಿನ್ನಿ ಎಂದು ಸಲಹೆ ನೀಡಿದ್ದು, ಟ್ವಿಟ್ಟರ್‌ನಲ್ಲಿ ವೈರಲ್‌ ಆಗಲು ಪ್ರಾರಂಭವಾಯ್ತು. ಅಡುಗೆ ಮಾಡುವುದರಲ್ಲಿ, ತಿನ್ನುವುದರಲ್ಲಿ ಹಾಗೂ ಹೆಚ್ಚಿನದರಲ್ಲಿ ಅವರು ಪರಿಣಿತರಾದರೂ, ಕೈಗಳಿಂದ ಅನ್ನವನ್ನು ತಿನ್ನುವುದು ಏಕೆ ಉತ್ತಮ ಎಂದು ನೆಟ್ಟಿಗರು ತಮ್ಮ ಕಾರಣಗಳನ್ನು ನೀಡಿದರು.

‘The Royal Butler’ ಟ್ವಿಟ್ಟರ್‌ನಲ್ಲಿ ಜನಪ್ರಿಯ ಎಟಿಕ್ವೆಟ್‌ ತಜ್ಞರಾಗಿದ್ದು, ಅವರು ಬಹುತೇಕ ಖಾಲಿಯಾದ ಪ್ಲೇಟ್‌ನಲ್ಲಿದ್ದ ಅನ್ನದ ಚಿತ್ರವನ್ನು ಪೋಸ್ಟ್‌ ಮಾಡಿದ್ದರು. ಜತೆಗೆ, ಚಾಕು, ಫೋರ್ಕ್ ಅಥವಾ ಚಾಪ್‌ಸ್ಟಿಕ್‌ಗಳೊಂದಿಗೆ ಖಾದ್ಯವನ್ನು ಹೇಗೆ ಉತ್ತಮವಾಗಿ ತಿನ್ನಲಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

''ಲೇಡೀಸ್ ಅಂಡ್‌ ಜೆಂಟಲ್‌ಮೆನ್‌, ನಾವು ಯಾವಾಗಲೂ ಅನ್ನ ತಿನ್ನಲು ಚಾಕು ಮತ್ತು ಫೋರ್ಕ್ ಅಥವಾ ಚಾಪ್‌ಸ್ಟಿಕ್‌ಗಳನ್ನು ಬಳಸಬೇಕೆಂದು ನೆನಪಿಡಿ! ನಾವು ನಮ್ಮ ಕೈ ಅಥವಾ ಬೆರಳುಗಳನ್ನು ಬಳಸುವುದಿಲ್ಲ !!! ” ಎಂದು ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ಅನ್ನದ ಊಟ ಮಾಡಿದಾಗ ಕೈಗಳಿಂದ ತಿನ್ನುವುದು ಏಕೆ ಉತ್ತಮ ಎಂದು ನೆಟ್ಟಿಗರು ವಿವಿಧ ಕಾರಣಗಳನ್ನು ಹೇಳಿ ಆ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೈಗಳಲ್ಲೇ ತಿನ್ನುವುದು ಏಕೆಂದು ನೆಟ್ಟಿಗರು ನೀಡಿರುವ ಪ್ರತಿಕ್ರಿಯೆಗಳು ಹೀಗಿದೆ ನೋಡಿ..ಶೋಭನಾ ಗುಲಾಟಿ ಎಂಬ ಮಹಿಳೆ, ''ನಾನು ನನ್ನ ಕೈಯನ್ನು ಬಳಸುತ್ತೇನೆ - ನನ್ನ ಬಲಗೈ. ಇದು ನನ್ನ ಪೂರ್ವಜರ ಅಭ್ಯಾಸವಾಗಿದೆ ಎಂಬುದು ಸಂತೋಷಕರ ವಿಚಾರ. ನೀವೂ ಇದನ್ನು ಟ್ರೈ ಮಾಡಿ. ವಿಶೇಷವಾಗಿ ಅನ್ನ - ನೀವು ಅದನ್ನು ನಿಮ್ಮ ಬೆರಳುಗಳ ತುದಿಗಳೊಂದಿಗೆ ನಿಜವಾಗಿಯೂ ಬೆರೆಸಬಹುದು. ನಿಮ್ಮ ತಟ್ಟೆಯಲ್ಲಿರುವ ಆಹಾರವನ್ನು ನಿಮ್ಮ ಬಾಯಿಗೆ ಇರಿಸಿ. ರುಚಿಯಾಗಿರುತ್ತದೆ'' ಎಂದು ಟ್ವೀಟ್‌ ಮಾಡಿದ್ದಾಳೆ.‘The Royal Butler’ ತಜ್ಞರ ಟ್ವಿಟ್ಟರ್‌ ಬಯೋನಲ್ಲಿ ಅವರು ರಾಯಲ್ ಕಾಮೆಂಟೇಟರ್ / ಸಹಾಯಕ ಮತ್ತು ರಾಜಕುಮಾರ ಚಾರ್ಲ್ಸ್, ವಿಲಿಯಂ ಮತ್ತು ಹ್ಯಾರಿಗೆ ಮಾಜಿ ಬಟ್ಲರ್ ಎಂದು ಹೇಳಿದ್ದಾರೆ.
Published by: Sushma Chakre
First published: March 10, 2021, 11:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories