Viral Story: 6 ಅಡಿ ಎತ್ತರದ ಹುಡುಗನ ಪ್ರೀತಿಗೆ ಬಿದ್ದ 3 ಅಡಿ ಉದ್ದದ ಹುಡುಗಿ.. ಇದು ಮೂರು ವರ್ಷದ ಲವ್ ಸ್ಟೋರಿ!

ಕೋರಿ ಮೆಕ್‌ಗುಯಿರ್ ಗುರಿಯೊಂದನ್ನು ಇಟ್ಟುಕೊಂಡಿದ್ದಾಳೆ. ಸಾಯುವ ಮೊದಲು ಜನರು ಆಕೆಯನ್ನು ಗುರುತಿಸುವಂತೆ ಮಾಡುವುದು ಏಕೈಕ ಉದ್ದೇಶವಾಗಿದೆ. ಕೋರಿಯ 20 ವರ್ಷದ ಗೆಳೆಯ ಅವಳ ಆ ಆಸೆಯನ್ನು ಪೂರೈಸಲು ಸಹಾಯ ಮಾಡುತ್ತಿದ್ದಾನೆ.

ಜೇಮಿ ಟೇಲರ್- ಕೋರಿ ಮೆಕ್‌ಗುಯಿರ್

ಜೇಮಿ ಟೇಲರ್- ಕೋರಿ ಮೆಕ್‌ಗುಯಿರ್

  • Share this:
    ಪ್ರೀತಿ (Love) ಯಾವಾಗ ಬೇಕಾದ್ರು ಹುಟ್ಟಬಹುದು. ಮನಸ್ಸುಗಳು (Mind) ಒಂದಾಗಿ ನಂತರ ಅದು ಪ್ರೀತಿಯಾಗಿ ಚಿಗುರೊಡೆಯುತ್ತದೆ. ಎಷ್ಟೋ ಜನರು ಪ್ರೀತಿಯಲ್ಲಿ ಬಿದ್ದವರಿದ್ದಾರೆ. ಅದರೆ ಅದರಲ್ಲಿ ಕೆಲವೇ ಪ್ರೀತಿಗಳು ಮಾತ್ರ  ಒಂದಾಗಿ ಸುಖವಾಗಿ (Happily) ಬಾಳುತ್ತಾರೆ. ಇನ್ನು ಕೆಲವು ಸುಖ ಸುಮ್ಮನೆಯಂತೆಯೇ ನಾಟಕವಾಡಿ (Drama) ದೂರ ದೂರವಾಗುತ್ತಾರೆ. ಅಂದಹಾಗೆಯೇ ಇಲ್ಲೊಂದು ಜೋಡಿಯ ಪ್ರೀತಿಯ ಬಗ್ಗೆ ಹೇಳಲೇ ಬೇಕು. ಆಕೆಯ ಎತ್ತರ 3 ಅಡಿಯಾದರೆ ಆತನ ಎತ್ತರ 6 ಅಡಿ. ಆದರೂ ಈ ಜೋಡಿಗಳಿಗೆ (Couples) ತಮ್ಮ ಎತ್ತರ ಮುಖ್ಯವಾಗಲಿಲ್ಲ. ಪ್ರೀತಿಯೇ ಮುಖ್ಯವೆನ್ನುತ್ತಿದ್ದಾರೆ.

    ಸ್ಕಾಟ್ಲೆಂಡ್​ನ ಪೆಬಲ್ಸ್‌ ಮೂಲದ ಕೋರಿ ಮೆಕ್‌ಗುಯಿರ್ ಎಂಬಾಕೆಗೆ ಅಂಟಿಕೊಂಡಿದ್ದ ವಿಚಿತ್ರ ಕಾಯಿಲೆಯು ಆಕೆಯ ಎತ್ತರವನ್ನು ಕೇವಲ 3 ಅಡಿಗಳಿಗೆ ಇಳಿಸಿತು. 28ರ ಹರೆಯದ ಕೋರಿ ಮೆಕ್‌ಗುಯಿರ್ ಚಿಕ್ಕವಳಾಗಿ ಕಾಣಿಸಿಕೊಂಡಿದ್ದರು, ಆಕೆಗೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಲು ಬಯಸುತ್ತಾಳೆ. ಅದಕ್ಕಾಗಿ ಟಿಕ್‌ಟಾಕ್ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸುತ್ತಿದ್ದಾಳೆ.

    ಕೋರಿ ಮೆಕ್‌ಗುಯಿರ್ ಗುರಿಯೊಂದನ್ನು ಇಟ್ಟುಕೊಂಡಿದ್ದಾಳೆ. ಸಾಯುವ ಮೊದಲು ಜನರು ಆಕೆಯನ್ನು ಗುರುತಿಸುವಂತೆ ಮಾಡುವುದು ಏಕೈಕ ಉದ್ದೇಶವಾಗಿದೆ. ಕೋರಿಯ 20 ವರ್ಷದ ಗೆಳೆಯ ಅವಳ ಆ ಆಸೆಯನ್ನು ಪೂರೈಸಲು ಸಹಾಯ ಮಾಡುತ್ತಿದ್ದಾನೆ.

    3 ಅಡಿ ಹುಡುಗಿಯ 6 ಅಡಿ ಗೆಳೆಯ

    ಕೋರೆ ಮೆಕ್‌ಗುಯಿರ್ ಗೆಳೆಯ ಜೇಮಿ ಟೇಲರ್ ವಯಸ್ಸಿನಲ್ಲಿ ಚಿಕ್ಕವನು. ಆದರೆ ಎತ್ತರದಲ್ಲಿ ದೊಡ್ಡವನು. 6 ಅಡಿ ಎತ್ತರವನ್ನು ಆತ ಹೊಂದಿದ್ದಾನೆ. ಅಂದಹಾಗೆಯೇ  ಈ ಕೋರಿ ಮೆಕ್‌ಗುಯಿರ್ 3 ವರ್ಷಗಳ ಹಿಂದೆ ಡೇಟಿಂಗ್ ಸೈಟ್‌ನಲ್ಲಿ 20 ವರ್ಷದ ಜೇಮಿಯನ್ನು ಭೇಟಿಯಾದಳು. ನಂತರ ಇಬ್ಬರ ಒಡನಾಟ ಪ್ರಾರಂಭವಾಯಿತು. ಪರಸ್ಪರ ಪ್ರೀತಿಯಲ್ಲಿ ಸಿಲುಕಿದರು.

    ಇದನ್ನು ಓದಿ: ಮರದ ಮೇಲೆ ಕನಸಿನ ಮನೆ: ಇಲ್ಲಿದೆ Green Tree Hutನ ವಿಶೇಷ ಫೋಟೋಗಳು

    ಜೇಮಿ ಕೋರಿ ಮೆಕ್‌ಗುಯಿರ್ ಗಿಂತ 8 ವರ್ಷ ಚಿಕ್ಕವನು ಆದರೆ ಅವನು ಅವಳನ್ನು ತುಂಬಾ ಪ್ರೀತಿಸುತ್ತಾನೆ. ಕೋರಿಯ ಪ್ರತಿಯೊಂದು ಅಗತ್ಯವನ್ನು ಆತ ನೋಡಿಕೊಳ್ಳುತ್ತಾನೆ ಮತ್ತು ಪ್ರತಿದಿನ ಆಕೆಯ ಸ್ನಾನ ಮತ್ತು ಔಷಧಿ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಒಟ್ಟಿನಲ್ಲಿ ಸಂಗಾತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಜೇಮಿ. ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    ಕೋರಿ ಏಕೆ ಕುಬ್ಜ?

    ವಾಸ್ತವವಾಗಿ, ಕೋರೆ ಮೆಕ್‌ಗುಯಿರ್ ಅವರ ಬೆನ್ನುಹುರಿಯು ವಕ್ರವಾಗಲು ಕಾರಣವಾಗುವ ಅಸ್ವಸ್ಥತೆಯನ್ನು ಹೊಂದಿದೆ. ಈ ಪರಿಸ್ಥಿತಿ ಆಕೆಯ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಆಕೆಗೆ ಅಕೋಂಡ್ರೊಪ್ಲಾಸಿಯಾ ಎಂಬ ಕಾಯಿಲೆಯೂ ಇದೆ, ಇದರಿಂದ ಆಕೆಗೆ ಕೈಕಾಲುಗಳು ನಡೆಯಲು ಕಷ್ಟವಾಗುತ್ತದೆ. ಇದರಿಂದಾಗಿ ಆಕೆಗೆ ಸಮಸ್ಯೆಯಾಗಿದೆ.

    ಇದನ್ನು ಓದಿ: Viral News: ಡ್ಯಾನ್ಸ್​ ಮಾಡಿದ್ದಕ್ಕೆ ವಧುವಿಗೆ ಕಪಾಳಮೋಕ್ಷ ಮಾಡಿದ ವರ; ಅದೇ ಮಂಟಪದಲ್ಲಿ ಮತ್ತೊಬ್ಬನನ್ನು ಮದುವೆಯಾದ ವಧು

    ಕೋರಿಯ ತಲೆ ಗಾತ್ರದಲ್ಲಿ ಸಾಮಾನ್ಯವಾಗಿದೆ, ಆದರೆ ದೇಹದ ಉಳಿದ ಭಾಗವು ಸರಾಸರಿಗಿಂತ ಚಿಕ್ಕದಾಗಿದೆ. ಒಂದು ವೇಳೆ ಸರ್ಜರಿಗೆ ಒಳಪಡಿಸಿದರೆ  12-14 ಗಂಟೆಗಳ ಅರಿವಳಿಕೆ ಅಗತ್ಯವಿರುತ್ತದೆ . ಇದರಿಂದ ಕೋರೆಯ ಜೀವಕ್ಕೆ ಅಪಾಯವಿದೆ ಎಂಬ ಕಾರಣಕ್ಕೆ ವೈದ್ಯರು ಸಹ ಆಪರೇಷನ್​ ಮಾಡಲು ಕಷ್ಟಸಾಧ್ಯ ಎಂದಿದ್ದಾರೆ.
    Published by:Harshith AS
    First published: