Map of Universe: ಬ್ರಹ್ಮಾಂಡದಲ್ಲಿ ಎಷ್ಟು ಗ್ಯಾಲಕ್ಸಿಗಳಿವೆ? ಬಾಲ್ಯದ ಪ್ರಶ್ನೆಗೆ ಉತ್ತರ ಸಿಕ್ಕೇಬಿಡ್ತು!

ಬೃಹತ್ ಕಪ್ಪು ಕುಳಿಗಳನ್ನು ಹೊಂದಿರುವ ಗ್ಯಾಲಕ್ಸಿಗಳು ಅಥವಾ ವೇಗವಾಗಿ ಬೆಳೆಯುತ್ತಿರುವ ಹೊಸ ನಕ್ಷತ್ರಗಳು ಎನ್ನಲಾಗಿದೆ.

ಬ್ರಹ್ಮಾಂಡ (ಪ್ರಾತಿನಿಧಿಕ ಚಿತ್ರ)

ಬ್ರಹ್ಮಾಂಡ (ಪ್ರಾತಿನಿಧಿಕ ಚಿತ್ರ)

  • Share this:
ಸೌರಮಂಡಲ ಮತ್ತು ಖಗೋಳ ವಿಸ್ಮಯಗಳ ತಾಣ. ಇಲ್ಲಿ ಬಗೆದಷ್ಟು ಕುತೂಹಲಕಾರಿ ವಿಚಾರಗಳು ಸಿಗುತ್ತವೆ. ನಮ್ಮ ಬ್ರಹ್ಮಾಂಡವು (Universe) ದೊಡ್ಡ ಆಯಾಮಗಳನ್ನು ಹೊಂದಿದೆ. ಮತ್ತು ನಾವು ವಾಸಿಸುವ ನಕ್ಷತ್ರಪುಂಜ (Milky way Galaxy  ಮಾತ್ರವಲ್ಲ ಅಲ್ಲಿ ಹಲವಾರು ಗ್ಯಾಲಕ್ಸಿಗಳಿವೆ ಮತ್ತು ಎಲ್ಲವೂ ಒಂದೇ ರೀತಿ ಆಗಿಲ್ಲ. ದೈತ್ಯರಿಂದ ಹಿಡಿದು ಕುಬ್ಜರವರೆಗೆ ವಿವಿಧ ಆಕಾರ ಮತ್ತು ಗಾತ್ರದ ನಕ್ಷತ್ರಪುಂಜಗಳಿವೆ. ಇಂತಹ ಕ್ಷೀರಪಥ ನಕ್ಷತ್ರಪುಂಜದಲ್ಲಿ ಎಷ್ಟು ಗ್ಯಾಲಕ್ಸಿಗಳಿವೆ (New Map of the Universe)  ಎಂದು ಕಂಡುಹಿಡಿಯುವುದು ಸಾಧ್ಯವೇ..? ಹೌದು ಸಾಧ್ಯ, ಇದನ್ನು ಡರ್ಹಾಮ್ ವಿಶ್ವವಿದ್ಯಾಲಯದ (Durham University)  ಖಗೋಳಶಾಸ್ತ್ರಜ್ಞರು, ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದೊಂದಿಗೆ (Astronomer) ಸಾಧ್ಯ ಮಾಡಿ ತೋರಿಸಿದ್ದಾರೆ.

ವಿಜ್ಞಾನಿಗಳು ಪ್ರಸ್ತುತ ಹೊಸ ಅಧ್ಯಯನದಲ್ಲಿ 4.4 ಮಿಲಿಯನ್ ಗ್ಯಾಲಕ್ಸಿಗಳ ಇರುವಿಕೆ ಬಗ್ಗೆ ಬಹಿರಂಗಪಡಿಸಿದ್ದಾರೆ. ನಕ್ಷೆಯು 4.4 ಮಿಲಿಯನ್‌ಗಿಂತಲೂ ಹೆಚ್ಚು ವಿಸ್ಮಯಕಾರಿ ವಸ್ತುಗಳ ಇರುವಿಕೆಯ ವಿವರವಾದ ರೇಡಿಯೋ ಚಿತ್ರವನ್ನು ಮತ್ತು ನಮ್ಮ ಬ್ರಹ್ಮಾಂಡದ ಅತ್ಯಂತ ಕ್ರಿಯಾತ್ಮಕ ಚಿತ್ರವನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ನಮ್ಮ ಬ್ರಹ್ಮಾಂಡವು ಬರೋಬ್ಬರಿ 4.4 ಮಿಲಿಯನ್ ಗ್ಯಾಲಕ್ಸಿಗಳನ್ನು ಹೊಂದಿದೆ ಎಂದು ಡರ್ಹಾಮ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞರು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದೊಂದಿಗೆ ಗುರಿತಿಸಿದ್ದಾರೆ. ಇವರು ಪ್ಯಾನ್-ಯುರೋಪಿಯನ್ ರೇಡಿಯೋ ಟೆಲಿಸ್ಕೋಪ್ ಆದ – ಲೋ ಫ್ರೀಕ್ವೆನ್ಸಿ ಅರೇ (LOFAR) ಅನ್ನು ಬಳಸಿಕೊಂಡು ಉತ್ತರದ ಆಕಾಶದವನ್ನು ಮ್ಯಾಪ್ ಮಾಡಿ 4.4 ಮಿಲಿಯನ್ ಗ್ಯಾಲಕ್ಸಿಗಳ ಇರುವಿಕೆ ಬಗ್ಗೆ ಹೇಳಿದ್ದಾರೆ.

ವೇಗವಾಗಿ ಬೆಳೆಯುತ್ತಿವೆ ಹೊಸ ನಕ್ಷತ್ರಗಳು!

'ದಿ LOFAR ಎರಡು-ಮೀಟರ್ ಸ್ಕೈ ಸರ್ವೆ (LoTSS)' ಎಂಬ ಶೀರ್ಷಿಕೆಯ ಈ ಅಧ್ಯಯನವನ್ನು 'ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ'ದಲ್ಲಿ ಪ್ರಕಟಿಸಲಾಗಿದೆ.

ಈ ವಸ್ತುಗಳ ಬಹುಪಾಲು ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿವೆ ಮತ್ತು ಬೃಹತ್ ಕಪ್ಪು ಕುಳಿಗಳನ್ನು ಹೊಂದಿರುವ ಗ್ಯಾಲಕ್ಸಿಗಳು ಅಥವಾ ವೇಗವಾಗಿ ಬೆಳೆಯುತ್ತಿರುವ ಹೊಸ ನಕ್ಷತ್ರಗಳು ಎನ್ನಲಾಗಿದೆ.

ಇದನ್ನೂ ಓದಿ:  Explained: ಉಕ್ರೇನ್ ದೇಶ ಹುಟ್ಟಿದ್ದು ಹೇಗೆ? Russiaಗೇಕೆ ಇದರ ಮೇಲೆ ಅಷ್ಟೊಂದು ಆಸಕ್ತಿ?

ನಕ್ಷೆಯನ್ನು ತಯಾರಿಸಲು, ವಿಜ್ಞಾನಿಗಳು ಯುರೋಪ್‌ನಾದ್ಯಂತ ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟರ್‌ಗಳಲ್ಲಿ ಅತ್ಯಾಧುನಿಕ ಡೇಟಾ ಸಂಸ್ಕರಣಾ ಅಲ್ಗಾರಿದಮ್‌ಗಳನ್ನು ನಿಯೋಜಿಸಿದ್ದರು. ಇದು 8 ಪೆಟಾಬೈಟ್‌ಗಳ ಡಿಸ್ಕ್ ಜಾಗವನ್ನು ಆಕ್ರಮಿಸುವ 3,500 ಗಂಟೆಗಳ ಅವಲೋಕಗಳನ್ನು ಹೊಂದಿದೆ. ಇದು ಸರಿಸುಮಾರು 20,000 ಲ್ಯಾಪ್‌ಟಾಪ್‌ಗಳಿಗೆ ಸಮನಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹಿಂದೆಂದೂ ಕಂಡಿರಲಿಲ್ಲ!

ಈ ದತ್ತಾಂಶ ಬಿಡುಗಡೆಯು “LOFAR ಎರಡು-ಮೀಟರ್ ಸ್ಕೈ ಸರ್ವೆ”ಗಿಂತ ಅತಿ ದೊಡ್ಡದಾಗಿದೆ. ಯಾವುದೇ ದೂರದರ್ಶಕದಿಂದ ಹಿಂದೆಂದೂ ನೋಡಿರದ ಸುಮಾರು ಒಂದು ಮಿಲಿಯನ್ ವಸ್ತುಗಳನ್ನು ಮತ್ತು ರೇಡಿಯೋ ತರಂಗಾಂತರದಲ್ಲಿ ಹೊಸ ಆವಿಷ್ಕಾರಗಳಾಗಿರುವ ಸುಮಾರು 4 ಮಿಲಿಯನ್ ವಸ್ತುಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ASTRON ಮತ್ತು ಲೈಡೆನ್ ವಿಶ್ವವಿದ್ಯಾನಿಲಯದ ಖಗೋಳಶಾಸ್ತ್ರಜ್ಞ ತಿಮೋತಿ ಶಿಮ್‌ವೆಲ್ ಹೇಳುವ ಪ್ರಕಾರ, “ನಾವು ಪ್ರತಿ ಬಾರಿ ನಕ್ಷೆಯನ್ನು ರಚಿಸುತ್ತೇವೆ ಮತ್ತು ಹಿಂದೆಂದೂ ನೋಡಿರದ ಹೊಸ ಆವಿಷ್ಕಾರಗಳು ಮತ್ತು ವಸ್ತುಗಳನ್ನು ನೋಡಲು ಇದರಿಂದ ಸಾಧ್ಯವಾಗುತ್ತದೆ. ಸದ್ಯ ಬಿಡುಗಡೆ ಮಾಡಿರುವ ವಿವರ ಸಂಪೂರ್ಣ ಸಮೀಕ್ಷೆಯ ಕೇವಲ 27 ಪ್ರತಿಶತವಾಗಿದೆ ಮತ್ತು ಭವಿಷ್ಯದಲ್ಲಿ ಇದು ವಿಶ್ವದಲ್ಲಿ ದೊಡ್ಡ ರಚನೆಗಳು ಹೇಗೆ ಬೆಳೆಯುತ್ತವೆ. ಕಪ್ಪು ಕುಳಿಗಳು ಹೇಗೆ ರೂಪುಗೊಳ್ಳುತ್ತವೆ ಮತ್ತು ವಿಕಸನಗೊಳ್ಳುತ್ತವೆ ಎಂಬುದನ್ನು ಪರಿಶೀಲಿಸುವುದು ಸೇರಿದಂತೆ ಇನ್ನೂ ಅನೇಕ ವೈಜ್ಞಾನಿಕ ಪ್ರಗತಿಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಖಗೋಳಶಾಸ್ತ್ರದಲ್ಲೇ ಪ್ರಮುಖ ಹೆಜ್ಜೆ

ಡರ್ಹಾಮ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಲಿಯಾ ಮೊರಾಬಿಟೊ, "ನಾವು ಈ ಯೋಜನೆಯೊಂದಿಗೆ ಖಗೋಳಶಾಸ್ತ್ರದಲ್ಲಿ ಹೊಸ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತವೆ'' ಎಂದಿದ್ದಾರೆ. ನಾವು ಇಲ್ಲಿ ಡರ್ಹಾಮ್‌ನಲ್ಲಿ ಕೆಲಸ ಮಾಡುವಾಗ 20 ಪಟ್ಟು ಉತ್ತಮ ರೆಸಲ್ಯೂಶನ್‌ನೊಂದಿಗೆ ಡೇಟಾವನ್ನು ಪೋಸ್ಟ್-ಪ್ರೊಸೆಸ್ ಮಾಡಲು LOFAR-UK ಸಹಯೋಗವನ್ನು ಪಡೆದುಕೊಂಡೆವು ಎಂದಿದ್ದಾರೆ.

ಇದನ್ನೂ ಓದಿ: Nuclear Bomb Alert: ರಷ್ಯಾ ಉಕ್ರೇನ್ ಯುದ್ಧದಲ್ಲಿ ಪರಮಾಣು ಬಾಂಬ್ ಭೀತಿ; ಹೈ ಅಲರ್ಟ್​ನಲ್ಲಿರಲು ಸೂಚಿಸಿದ ಪುಟಿನ್

ಭೌತಶಾಸ್ತ್ರವು ದೂರದ ಗ್ಯಾಲಕ್ಸಿಗಳಲ್ಲಿ ನಕ್ಷತ್ರಗಳ ರಚನೆಯನ್ನು ನಿಯಂತ್ರಿಸುತ್ತದೆ ಮತ್ತು ನಮ್ಮ ಸ್ವಂತ ಗ್ಯಾಲಕ್ಸಿಯಲ್ಲಿನ ನಕ್ಷತ್ರಗಳ ಜೀವನದಲ್ಲಿ ಅತ್ಯಂತ ಅದ್ಭುತವಾದ ಹಂತಗಳನ್ನು ವಿವರಿಸುತ್ತದೆ. ಒಟ್ಟಾರೆ ಈ ಡೇಟಾವು ಖಗೋಳ ಭೌತಶಾಸ್ತ್ರದಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಪ್ರಸ್ತುತಪಡಿಸಿದೆ ಮತ್ತು ದೂರದ ಬ್ರಹ್ಮಾಂಡದಲ್ಲಿ ಮಸುಕಾದ ಸಹಿಗಳ ಮೂಲಕ ಹತ್ತಿರದ ಗ್ರಹಗಳು ಅಥವಾ ಗ್ಯಾಲಕ್ಸಿಗಳಂತಹ ವ್ಯಾಪಕ ಶ್ರೇಣಿಯ ಸಂಕೇತಗಳನ್ನು ಹುಡುಕಲು ಸಹಾಯವಾಗುತ್ತದೆ.
Published by:guruganesh bhat
First published: