Dulquer Salman: ಹೊಸಾ ಮರ್ಸಿಡಿಸ್ ಕಾರ್ ಕೊಂಡ ದುಲ್ಕರ್, 2.5 ಕೋಟಿ ರೂ ಬೆಲೆಯ ಈ ಕಾರಿನ ವಿಶೇಷತೆಗಳೇನು?

ದಕ್ಷಿಣ ಭಾರತದ ಪ್ರಖ್ಯಾತ ನಟ ದುಲ್ಕರ್ ಸಲ್ಮಾನ್ ಹೊಚ್ಚಹೊಸ ಮರ್ಸಿಡಿಸ್- AMG G63 SUV ಖರೀದಿಸಿ ಸುದ್ದಿಯಾಗಿದ್ದಾರೆ. ಇನ್ನು ಈ ಕಾರಿಗೆ ತೆರಿಗೆಯನ್ನು ಹೊರತು ಪಡಿಸಿ 2.45 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಹಾಗೆಯೇ ಈ ಕಾರು ಜರ್ಮನ್ ಕಾರು ತಯಾರಕರ ಜಿ-ಕ್ಲಾಸ್ ಶ್ರೇಣಿಯ ಅಗ್ರಸ್ಥಾನದಲ್ಲಿ ಬರುತ್ತದೆ.

ಹೊಸಾ ಮರ್ಸಿಡಿಸ್ ಜೊತೆ ದುಲ್ಕರ್ ಸಲ್ಮಾನ್

ಹೊಸಾ ಮರ್ಸಿಡಿಸ್ ಜೊತೆ ದುಲ್ಕರ್ ಸಲ್ಮಾನ್

 • Share this:
  ಬಾಲಿವುಡ್ ಇರಲಿ ಸ್ಯಾಂಡಲ್ ವುಡ್ ಇರಲಿ ಸೆಲೆಬ್ರಿಟಿಗಳು ಏನೇ ಮಾಡಿದರೂ ಸುದ್ದಿಯಲ್ಲಿರುತ್ತಾರೆ. ಇದೀಗ ದಕ್ಷಿಣ ಭಾರತದ ಪ್ರಖ್ಯಾತ ನಟ ದುಲ್ಕರ್ ಸಲ್ಮಾನ್ ಹೊಚ್ಚಹೊಸ ಮರ್ಸಿಡಿಸ್- AMG G63 SUV ಖರೀದಿಸಿ ಸುದ್ದಿಯಾಗಿದ್ದಾರೆ. ಇನ್ನು ಈ ಕಾರಿಗೆ ತೆರಿಗೆಯನ್ನು ಹೊರತು ಪಡಿಸಿ 2.45 ಕೋಟಿ ರುಪಾಯಿ ವೆಚ್ಚವಾಗುತ್ತದೆ. ಹಾಗೆಯೇ ಈ ಕಾರು ಜರ್ಮನ್ ಕಾರು ತಯಾರಕರ ಜಿ-ಕ್ಲಾಸ್ ಶ್ರೇಣಿಯ ಅಗ್ರಸ್ಥಾನದಲ್ಲಿ ಬರುತ್ತದೆ. ಈ ಕಾರು ತನ್ನದ ಆದ ಫ್ಯಾನ್ಸ್ಗಳನ್ನು( ಅಭಿಮಾನಿ) ಹೊಂದಿದೆ. ಈ ಕಾರು ಆಫ್-ರೋಡ್ ವೈಶಿಷ್ಟ್ಯತೆಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ.ಭಾರತ ಸೇರಿದಂತೆ ವಿಶ್ವದ ಹಲವಾರು ಸೆಲೆಬ್ರೆಟಿಗಳು ಈ ಕಾರನ್ನು ಖರೀದಿಸಿದ್ದಾರೆ. ಇನ್ನು ಭಾರತದಲ್ಲಿ ಎಸ್ಯುವಿ ಖರೀದಿಸಿದ ಸೆಲೆಬ್ರಿಟಿಗಳ ಜೊತೆ ಇದೀಗ ದುಲ್ಕರ್ ಸಲ್ಮಾನ್ ಸಹ ಸೇರಿದ್ದಾರೆ.

  2021 ರ ಈ ಮರ್ಸಿಡಿಸ್- AMG G63 ಅವಳಿ-ಟರ್ಬೋಚಾರ್ಜ್ಡ್ 4.0-ಲೀಟರ್ V-8 ಎಂಜಿನ್ ಹೊಂದಿದೆ. ಇನ್ನು ಆ ಎಂಜಿನ್ 577hp ಪವರ್ ಮತ್ತು 850Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಎಂಜಿನ್ ಅನ್ನು ಒಂಬತ್ತು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಸ್ಟೀರಿಂಗ್-ವೀಲ್-ಮೌಂಟೆಡ್ ಪ್ಯಾಡಲ್ ಶಿಫ್ಟರ್ಗಳ ಜೊತೆ ಸೇರಿಸಲಾಗಿರುತ್ತದೆ. ಅವರೆಡು ಜೊತೆಯಾಗಿ ಆಲ್-ವೀಲ್-ಡ್ರೈವ್ ಸಿಸ್ಟಮ್ಗೆ ಪವರ್ ಕಳುಹಿಸುತ್ತದೆ. ಇನ್ನು ಇದರಲ್ಲಿ G63 AMG- ನಿರ್ದಿಷ್ಟವಾದ ಟ್ಯೂನಿಂಗ್ ವ್ಯವಸ್ಥೆ ಇದೆ. ಹಾಗೆ ಈ ಕಾರನ್ನು ಸರಿಯಾದ ರೀತಿಯಲ್ಲಿ ಜೋಡಿಸಿದ್ದರೇ, ಸುಮಾರು 2948 ಕೆಜಿ ಎಳೆಯಬಲ್ಲ ಸಾಮಾರ್ಥ್ಯವನ್ನು ಹೊಂದಿದೆ.

  ಕ್ಯಾಬಿನ್ ಬಹುಶಃ ಹಳೆಯ ಜಿ-ವರ್ಗದಿಂದ ಸ್ಫೂರ್ತಿ ಪಡೆದಿದೆ ಆದರೆ ಈಗ ಸಂಪೂರ್ಣವಾಗಿ ಆಧುನಿಕ ರೀತಿಯಲ್ಲಿ ತಯಾರು ಮಾಡಲಾಗಿದೆ. 12.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್, ಉತ್ತಮ-ಗುಣಮಟ್ಟದ ವಸ್ತುಗಳು, ಮತ್ತು ಹೆಚ್ಚಿನ ಸೌಕರ್ಯಗಳಾದ ಕಪ್ಹೋಲ್ಡರ್ಗಳು ಮತ್ತು ಸರೌಂಡ್-ವ್ಯೂ ಕ್ಯಾಮೆರಾ ಸಿಸ್ಟಮ್. ಹೀಗೆ ವಿವಿಧ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ. ಚಾಲಕರು ಎತ್ತರವಾಗಿದ್ದಲ್ಲಿ ಅವರಿಗೆ ಆರಾಮದಾಯಕವೆನಿಸುವ ವ್ಯವಸ್ಥೆ ಇದೆ. ಜೊತೆಗೆ ಪ್ರಯಾಣಿಕರು ಮುಂದೆ ಮತ್ತು ಹಿಂದಿನ ಭಾಗದಲ್ಲಿ ತಲೆ ಮತ್ತು ಕಾಲಿನ ಬಳಿ ಹೆಚ್ಚಿನ ಸ್ಥಳ ಕೂಡ ಇದೆ. . ಜಿ-ವರ್ಗದ ಈ ಕಾರಿನ ಹಿಂಭಾಗದಲ್ಲಿ, ಸಧ್ಯಕ್ಕೆ ಪವರ್ ಲಿಫ್ಟ್ ಗೇಟ್ ಇಲ್ಲ ಆದರೆ ಸೈಡ್-ಹಿಂಗ್ಡ್ ಗೇಟ್ ಇದೆ. ಇದರ ಇನ್ನೊಂದು ವಿಶೇಷತೆ ಎಂದರೆ ಹಿಂಭಾಗ ಸೀಟ್ ತೆಗೆದರೆ , 38 ಕ್ಯೂಬಿಗ್ ಹೆಚ್ಚಿನ ಸ್ಥಳ ಲಭ್ಯವಾಗುತ್ತದೆ.

  ಇದನ್ನೂ ಓದಿ: ಈ ಊರಿಗೆ ನೆಂಟರು ಬಂದ್ರೆ ಮಧ್ಯರಾತ್ರಿಗೇ ಜಾಗ ಖಾಲಿ ಮಾಡ್ತಾರೆ, ದನಗಳಿಗೂ ಇಲ್ಲಿ ಫ್ಯಾನ್ ಬೇಕೇ ಬೇಕು...ಏನಿದು ವಿಚಿತ್ರ?

  ಇವೆಲ್ಲ ವಿಶೇಷತೆಗಳ ಜೊತೆಗೆ ಈ ಕಾರಿನ ಮುಂದಿನ ಭಾಗದಲ್ಲಿ ಎರಡು ಯುಎಸ್ಬಿ ಪೋರ್ಟ್ಗಳಿವೆ. ಜೊತೆಗೆ ಎಸ್ಡಿ ಕಾರ್ಡ್ ರೀಡರ್. ಇಷ್ಟೇ ಅಲ್ಲದೇ ಮರ್ಸಿಡಿಸ್ ಬೆನ್ಜ್ ಸಂಬಂಧಿತ ಕಾರ್ ಸರ್ವಿಸ್ಗಳಿಗೆ ಮೂರು ವರ್ಷಗಳ ವ್ಯಾರೆಂಟಿ ನೀಡಲಾಗಿದೆ. ಇದರ ಮೂಲ ವೈಶಿಷ್ಟ್ಯಗಳೆಂದರೆ ರಿಮೋಟ್ ಇಂಜಿನ್ ಸ್ಟಾರ್ಟ್ ಮತ್ತು ವಾಹನ ಕಳುವಾದಲ್ಲಿ ಅದನ್ನು ಟ್ರ್ಯಾಕ್ ಮಾಡುವ ಸೇವೆಯನ್ನು ಇದು ಒದಗಿಸುತ್ತದೆ. ಹಾಗೆಯೇ ಇದರಲ್ಲಿ ವೈ-ಫೈ ಮತ್ತು ಸ್ಪೀಕರ್ ಸೇರಿದಂತೆ ಮನರಂಜನೆ ಬೇಕಾಗಿರುವ ವಸ್ತುಗಳು ಸಹ ಇದೆ. ಇದರಲ್ಲಿ ಡ್ಯುಯಲ್ 10.0 ಇಂಚಿನ ಟಚ್ಸ್ಕ್ರೀನ್ಗಳಿದ್ದು, ಪ್ರತಿಯೊಂದೂ ತನ್ನದೇ ಆದ ಯುಎಸ್ಬಿ, ಆಕ್ಸಿಲಿಯರಿ ಮತ್ತು ಎಚ್ಡಿಎಂಐ ಪೋರ್ಟ್ಗಳನ್ನು ಹೊಂದಿದೆ.

  ಮರ್ಸಿಡಿಸ್- AMG G63 ಕಾರಿನಲ್ಲಿ ಜೊತೆಗೆ ಕ್ರಾಸ್ ಓವರ್ SUV ತರಹ
  ಚಾಲಕರಿಗೆ ಸಹಾಯವಾಗುವ ಹೆಚ್ಚಿನ ವ್ಯವಸ್ಥೆಗಳಿಲ್ಲ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ G63 ಹೊಂದಾಣಿಕೆಯ ಕ್ರೂಸ್ ಕಂಟ್ರೋಲ್ನೊಂದಿಗೆ ಬರುತ್ತದೆ, ಆದರೆ ಸಿಸ್ಟಮ್ ಸ್ಟಾಪ್-ಅಂಡ್-ಗೋ ವ್ಯವಸ್ಥೆ ಇಲ್ಲ ಎನ್ನಲಾಗುತ್ತಿದೆ.

  (ಸಂಧ್ಯಾ ಎಂ)
  Published by:Soumya KN
  First published: