Tiger and Duck: ಹುಲಿಗೇ ಚಳ್ಳೆ ಹಣ್ಣು ತಿನ್ನಿಸಿದ ಪುಟ್ಟ ಬಾತುಕೋಳಿ! ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ

Viral Video: ಈ ದೈತ್ಯ ಪ್ರಾಣಿಗಳು ಎಷ್ಟೇ ಸಾಮರ್ಥ್ಯವುಳ್ಳವುಗಳಾಗಿದ್ದರೂ ಸಹ ಕೆಲವೊಮ್ಮೆ ಈ ಚಿಕ್ಕ ಪ್ರಾಣಿಗಳು ಅವುಗಳಿಗೆ ಚಳ್ಳೆ ಹಣ್ಣು ತಿನ್ನಿಸಬಹುದು ಎಂಬುದನ್ನು ಇಲ್ಲಿರುವ ವೀಡಿಯೋ ಮತ್ತೊಮ್ಮೆ ಸಾಬೀತು ಪಡಿಸಿದೆ ನೋಡಿ. ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡುತ್ತಿರುವ ವೀಡಿಯೋ ನೋಡಿದರೆ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ.

ಹುಲಿ ಮತ್ತು ಪುಟ್ಟ ಬಾತುಕೋಳಿ

ಹುಲಿ ಮತ್ತು ಪುಟ್ಟ ಬಾತುಕೋಳಿ

  • Share this:
ನಾವು ಚಿಕ್ಕವರಾಗಿದ್ದಾಗ ಶಾಲೆಯಲ್ಲಿ ಈ ಪ್ರಾಣಿಗಳ (Animal) ಅನೇಕ ಕಥೆಗಳನ್ನು ಕೇಳಿರುತ್ತೇವೆ. ಅದರಲ್ಲಿ ಆನೆಯೊಂದು ಕಾಡಿನಲ್ಲಿ ನಾನೇ ದೈತ್ಯ ಪ್ರಾಣಿ ಎಂಬ ಜಂಬದಲ್ಲಿ ಬೀಗುತ್ತಾ ಚಿಕ್ಕ ಪುಟ್ಟ ಪ್ರಾಣಿಗಳಿಗೆಲ್ಲಾ ತೊಂದರೆ ಕೊಡುತ್ತಾ ಇರಬೇಕಾದರೆ ಒಂದು ಸಣ್ಣ ಇರುವೆ ಅದಕ್ಕೆ ತಕ್ಕ ಪಾಠ (Lesson) ಕಲಿಸುತ್ತದೆ. ಆ ಇರುವೆ ಆನೆಯ (Elephant) ಸೊಂಡಿಲಿನಲ್ಲಿ ಹೋಗಿ ಕುಳಿತು ಕಚ್ಚಲು ಪ್ರಾರಂಭಿಸುತ್ತದೆ. ಆ ನೋವನ್ನು (Pain) ತಾಳಲಾರದೇ ಆನೆಯು ಜೋರಾಗಿ ಕೂಗಿ ಕೊಳ್ಳಲು ಪ್ರಾರಂಭಿಸುತ್ತದೆ. ಈ ಕಥೆ ಈವಾಗ ಇಲ್ಲೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಆಶ್ಚರ್ಯವಾಗಬಹುದು ಅಲ್ಲವೇ? ಎಂದರೆ ಈ ದೈತ್ಯ ಪ್ರಾಣಿಗಳು ಎಷ್ಟೇ ಸಾಮರ್ಥ್ಯವುಳ್ಳವುಗಳಾಗಿದ್ದರೂ ಸಹ ಕೆಲವೊಮ್ಮೆ ಈ ಚಿಕ್ಕ ಪ್ರಾಣಿಗಳು ಅವುಗಳಿಗೆ ಚಳ್ಳೆ ಹಣ್ಣು ತಿನ್ನಿಸಬಹುದು ಎಂಬುದನ್ನು ಇಲ್ಲಿರುವ ವೀಡಿಯೋ (Video) ಮತ್ತೊಮ್ಮೆ ಸಾಬೀತು ಪಡಿಸಿದೆ ನೋಡಿ.

ಈಗ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ಹರಿದಾಡುತ್ತಿರುವ ವೀಡಿಯೋ ನೋಡಿದರೆ ನಿಮಗೆ ಆಶ್ಚರ್ಯವಾಗುವುದಂತೂ ಗ್ಯಾರಂಟಿ. ಏಕೆಂದರೆ ಇಲ್ಲಿ ನಡೆದಿರುವ ಜಟಾಪಟಿ ಹುಲಿ ಮತ್ತು ಒಂದು ಸಣ್ಣ ಬಾತುಕೋಳಿ ನಡುವೆ.

ಬಾತುಕೋಳಿಗೆ ಹೊಂಚು ಹಾಕಿದ ಹುಲಿ
ಹೌದು.. ವೀಡಿಯೋ ಶುರುವಾದಂತೆ ಹಸಿದ ಹುಲಿಯೊಂದು ನೀರಿನಲ್ಲಿ ಬಾತುಕೋಳಿಯೊಂದು ಮೆಲ್ಲನೆ ಈಜಿಕೊಂಡು ಹೋಗುವುದನ್ನು ನೋಡಿ ಅದನ್ನು ಹೇಗಾದರೂ ಮಾಡಿ ಹಿಡಿದು ತನ್ನ ಹೊಟ್ಟೆ ತುಂಬಿಸಿಕೊಳ್ಳಬೇಕೆಂಬ ಯೋಚನೆಯಲ್ಲಿ ಅದರ ಹಿಂದೆಯೇ ಮೆಲ್ಲನೆ ನೀರಿನಲ್ಲಿ ಹೆಜ್ಜೆ ಇಡುತ್ತಾ ಹೋಗುತ್ತಿರುವುದನ್ನು ವೀಡಿಯೋದ ಪ್ರಾರಂಭದಲ್ಲಿ ನೋಡಬಹುದು.

ಇದನ್ನೂ ಓದಿ:  Pet Dogs: ಪುಟ್ಟ ಮಗುವಿಗೆ ಹೊಸ ಟ್ರಿಕ್ಸ್ ಹೇಳ್ಕೊಡ್ತಿದೆ ಈ ನಾಯಿ, ತುಂಟರಿಬ್ಬರ ತರಲೆ ನೋಡಿ

ನಂತರ ಆ ಬಾತುಕೋಳಿ ಹೇಗೆ ಹುಲಿಯ ಕಣ್ಣನ್ನು ತಪ್ಪಿಸಿ ಅದರ ಜೊತೆಗೆ ಕಣ್ಣಾ ಮುಚ್ಚಾಲೆ ಆಟವಾಡಿದೆ ನೋಡಿ. ಈ 10 ಸೆಕೆಂಡಿನ ಅವಧಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ 2.5 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?
ಈ ವೀಡಿಯೋ ಇಷ್ಟೊಂದು ವೈರಲ್ ಆಗುವುದಕ್ಕೆ ಮುಖ್ಯವಾದ ಕಾರಣವೆಂದರೆ ಅದು ಆ ಪುಟ್ಟ ಬಾತುಕೋಳಿ ಹುಲಿ ಹಿಂದೆಯಿಂದ ದಾಳಿ ಮಾಡಲು ಸಿದ್ಧವಾದ ತಕ್ಷಣ, ನೀರಿನಲ್ಲಿ ಮುಳುಗಿ ಕಣ್ಮರೆಯಾಗುತ್ತದೆ. ಅದನ್ನು ನೋಡಿ ‘ಅರೇ..ಎಲ್ಲಿ ಮಾಯವಾಯ್ತು ಈ ಬಾತುಕೋಳಿ’ ಅಂತ ಅಂದುಕೊಂಡ ಹುಲಿ ಆಶ್ಚರ್ಯಚಕಿತವಾಗಿ ಸುತ್ತಮುತ್ತಲೂ ನೋಡುತ್ತದೆ, ಆದರೆ ಆ ಬಾತುಕೋಳಿ ಎಲ್ಲಿ ಹೋಯಿತು ಎಂಬುದು ಮಾತ್ರ ಹುಲಿಗೆ ಗೊತ್ತಾಗಲೇ ಇಲ್ಲ.ನೋಡು ನೋಡುತ್ತಿದ್ದಂತೆಯೇ ಹುಲಿಯ ಹಿಂದೆ ಸ್ವಲ್ಪ ದೂರದಲ್ಲಿ ನೀರಿನಿಂದ ಹೊರಬರುವ ಬಾತುಕೋಳಿಯನ್ನು ಮತ್ತೆ ನಾವು ಈ ವೀಡಿಯೋದಲ್ಲಿ ನೋಡಬಹುದು. ನೋಡಿದ್ರಾ ಹೇಗೆ ಚಾಣಾಕ್ಷತನದಿಂದ ಹುಲಿಯ ಬಾಯಿಯಿಂದ ತಪ್ಪಿಸಿಕೊಂಡಿದೆ ಈ ಬಾತುಕೋಳಿ ಅಂತ.

ಟ್ವಿಟ್ಟರ್ ಅಲ್ಲಿ ವೈರಲ್ಈ ಆದ ವಿಡಿಯೋ
ವೀಡಿಯೋವನ್ನು ಬ್ಯೂಟೆಂಗೆಬಿಡೆನ್ ಎಂಬ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ, ಆದರೆ ಇಲ್ಲಿ ಸ್ಥಳವನ್ನು ಬಹಿರಂಗಪಡಿಸಲಾಗಿಲ್ಲ. "ಬಾತುಕೋಳಿಗಳು ಸಾಮಾನ್ಯವಾಗಿ ಹುಲಿಗಳಿಗಿಂತ ಚುರುಕಾಗಿರುತ್ತವೆ ಎಂದು ತೋರುತ್ತದೆ" ಎಂದು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. "ಬಾತುಕೋಳಿ ಎಷ್ಟು ಆತ್ಮವಿಶ್ವಾಸದಿಂದ ಕೂಡಿತ್ತೆಂದರೆ ಅದು ಹಾರಿ ಹೋಗುವ ಗೋಜಿಗೆ ಹೋಗಲಿಲ್ಲ. ಸುಮ್ಮನೆ ಆರಾಮವಾಗಿ ಪ್ಯಾಡ್ಲಿಂಗ್ ಮಾಡುತ್ತಾ ಹೋಗಿ ತಕ್ಷಣವೇ ಮಾಯವಾಗುತ್ತದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಬಾಲ್ಕನಿ ಮೇಲೆ ಚಿಲ್ ಮಾಡ್ತಿದೆ ನವಿಲು, ವಿಡಿಯೋ ನೋಡಿ ನೆಟ್ಟಿಗರು ಫಿದಾ

ಆದಾಗ್ಯೂ, ಬಾತುಕೋಳಿಗಳ ರೆಕ್ಕೆಗಳನ್ನು ಕೆಲವು ಮೃಗಾಲಯಗಳು ಕತ್ತರಿಸಿ ಹುಲಿಗಳಿಗಾಗಿ ಮತ್ತು ಸಂದರ್ಶಕರ ಮನರಂಜನೆಗಾಗಿ ಕೊಳದಲ್ಲಿ ಬಿಡುತ್ತಾರೆ ಎಂದು ಕೆಲವರು ಕೋಪಗೊಂಡರು. ಈ ಬಳಕೆದಾರರು ಕೆಲವು ಯೂಟ್ಯೂಬ್ ವೀಡಿಯೋಗಳ ಲಿಂಕ್ ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಚೀನಾದ ಮೃಗಾಲಯದಲ್ಲಿರುವ ಬಾತುಕೋಳಿಯೊಂದು ಒಂದಲ್ಲ, ಎರಡಲ್ಲ ಮೂರು ಹುಲಿಗಳಿಗೆ ಹೀಗೆ ಚೆಳ್ಳೆ ಹಣ್ಣು ತಿನ್ನಿಸಿದೆ ಎಂದು ತೋರಿಸುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಮತ್ತೊಂದು ವಿಡಿಯೋ
ಈ ವಾರದ ಆರಂಭದಲ್ಲಿ, ಆಮೆಗಳ ಗುಂಪು ನದಿಯಲ್ಲಿ ಅಸ್ಥಿರ ದಿಮ್ಮಿಯ ಮೇಲೆ ಸಮತೋಲನ ಸಾಧಿಸುವುದನ್ನು ತೋರಿಸುವ ಮತ್ತೊಂದು ವೀಡಿಯೋ ಅಂತರ್ಜಾಲದಲ್ಲಿ ನೋಡುಗರ ಗಮನವನ್ನು ಸೆಳೆಯಿತು. ದಿಮ್ಮಿಯು ಹಿಂದೆ ಮುಂದೆ ಉರುಳುತ್ತಿದ್ದಂತೆ, ಆಮೆಗಳು ಜಾರುತ್ತಿರುವುದು ಮತ್ತು ನೀರಿಗೆ ಬೀಳುವುದು ಕಂಡು ಬಂದಿತು. ಈ ವೀಡಿಯೋ 5.4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
Published by:Ashwini Prabhu
First published: