ವಿಶ್ವದ ಅತ್ಯಂತ ದುಬಾರಿ ವಿಚ್ಛೇದನ: 5,500 ಕೋಟಿ ರೂ ಜೀವನಾಂಶ ನೀಡಿದ ದುಬೈ ಶೇಖ್!

ದುಬೈ ರಾಜಕುಮಾರ

ದುಬೈ ರಾಜಕುಮಾರ

Royal Divorce: ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್,ಹಯಾ ಬಿಂಟ್‌ ಅಲ್ ಹುಸೇನ್ ವೀಚ್ಚೆದನದಲ್ಲಿ ರಾಜಕುಮಾರಿಗೆ ಶೇಕ್ ಸುಮಾರು 554 ಮಿಲಿಯನ್ ಪೌಂಡ್ ಅಂದ್ರೆ 5500 ಕೋಟಿ ರೂಪಾಯಿಗಳನ್ನು ಪಾವತಿಸಲು ಬ್ರಿಟನ್‌ ಹೈಕೋರ್ಟ್ ಸೂಚನೆ ನೀಡಿದೆ. ಇನ್ನು 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ.

ಮುಂದೆ ಓದಿ ...
  • Share this:

    ವಿಶ್ವದ ಅತ್ಯಂತ ದುಬಾರಿ (Costly) ವಿಚ್ಛೇದನವನ್ನು(Divorce) ಅಮೆಜಾನ್ (Amazon) ಕಂಪನಿಯ ಜೆಫ್ ಬೆಜೋಸ್ ಪತ್ನಿ ಮೆಕೆಂಜಿ ಬೆಜೋಸ್ ತಮ್ಮ ಪತ್ನಿಗೆ (Wife) ನೀಡಿದ್ದರು. ಈ ವಿಚ್ಛೇದನ ಸಮಯದಲ್ಲಿ ಕಂಪನಿಯ ಶೇ.4 ರಷ್ಟು ಷೇರುಗಳನ್ನು ಅಂದ್ರೆ 48 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ನೀಡಿದ್ರು. ಇದು ಇಲ್ಲಿಯವರೆಗೂ ಅತ್ಯಂತ ಹೆಚ್ಚು ದುಬಾರಿ ವೆಚ್ಚದ ವಿಚ್ಛೇದನ ಮೊತ್ತ ಎನಿಸಿಕೊಂಡಿತು. ಈಗ ಇದನ್ನ ಮೀರಿಸುವಷ್ಟು ಭಾರಿ ಮೊತ್ತದ ವಿಚ್ಛೇದನ ಸೌದಿಯ ರಾಯಲ್ ಕುಟುಂಬದಲ್ಲಿ(Family) ನಡೆದಿದೆ.


    ವಿಶ್ವದ ಅತಿ ದುಬಾರಿ ವಿಚ್ಛೇದನದ ಸಾಲಿಗೆ ದುಬೈ ದೊರೆಯ ವಿಚ್ಛೇದನ


    ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್ ಅವರೊಂದಿಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈಗ ಅರ್ಜಿ ಇತ್ಯರ್ಥವಾಗಿದ್ದು ಬ್ರಿಟನ್‌ ಹೈಕೋರ್ಟ್ ತೀರ್ಪು ನೀಡಿದ್ದು, ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಆರನೇ ಪತ್ನಿ, ಜೋರ್ಡಾನ್‌ ಮಾಜಿ ದೊರೆಯ ಪುತ್ರಿ ಹಯಾ ಬಿಂಟ್‌ ಅಲ್ ಹುಸೇನ್ ಅವರಿಗೆ ದುಬಾರಿ ಮೊತ್ತದ ಜೀವನಾಂಶ ಪಾವತಿ ಮಾಡಲು ತಿಳಿಸಿದೆ..


    ಇದನ್ನೂ ಓದಿ: ಹೆಲಿಕಾಪ್ಟರ್​ ಪತನ! ಸತತ 12 ಗಂಟೆಗಳ ಕಾಲ ಸಮುದ್ರದ ಮಧ್ಯದಲ್ಲಿ ಈಜಿ ದಡ ಸೇರಿ ಬದುಕುಳಿದ ಸಚಿವ!


    5500 ಕೋಟಿ ಜೀವನಾಂಶ ನೀಡಲು ಬ್ರಿಟನ್ ಕೋರ್ಟ್ ಸೂಚನೆ


    ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್,ಹಯಾ ಬಿಂಟ್‌ ಅಲ್ ಹುಸೇನ್ ವೀಚ್ಚೆದನದಲ್ಲಿ ರಾಜಕುಮಾರಿಗೆ ಶೇಕ್ ಸುಮಾರು 554 ಮಿಲಿಯನ್ ಪೌಂಡ್ ಅಂದ್ರೆ 5500 ಕೋಟಿ ರೂಪಾಯಿಗಳನ್ನು ಪಾವತಿಸಲು ಬ್ರಿಟನ್‌ ಹೈಕೋರ್ಟ್ ಸೂಚನೆ ನೀಡಿದೆ. ಇನ್ನು 2,521 ಕೋಟಿ ರೂ.ಗಳನ್ನು ಪೂರ್ಣವಾಗಿ ಒಂದು ಮೊತ್ತದಲ್ಲಿ ಹಯಾಗೆ ಪಾವತಿಸಬೇಕು ಎಂದು ಹೇಳಿದೆ.


    ದುಬೈ ದೊರೆ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪತ್ನಿಯರ ಪೈಕಿ ಹಯಾ ಕಿರಿಯವರಾಗಿದ್ದಾರೆ. ರಾಜಕುಮಾರಿ ಹಯಾ ಶೇಖ್ ಅವರು ಆಕ್ಸ್‌ಫರ್ಡ್‌ನಿಂದ ರಾಜಕೀಯ, ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. 2004 ರಲ್ಲಿ ಅವರು ದುಬೈ ರಾಜ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ವಿವಾಹವಾಗಿದ್ರು. ಈ ದಂಪತಿಗೆ ಅಲ್ ಜಲಿಲಿಯಾ ಜಯದ್ ಎಂಬ ಇಬ್ಬರು ಮಕ್ಕಳಿದ್ದಾರೆ.ಹೀಗಾಗಿ ಮುಂದಿನ ವಿದ್ಯಾಭ್ಯಾಸ ಹಾಗೂ ಭದ್ರತೆಗಾಗಿ ಕೋರ್ಟ್ ಇಷ್ಟೊಂದು ಮೊತ್ತದ ಹಣ ನೀಡಲು ಸೂಚನೆ ನೀಡಿದೆ.


    ಶೇಕ್ ಬಾಡಿಗಾರ್ಡ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ರಾಜಕುಮಾರಿ


    ರಾಜಕುಮಾರಿ ಹಯಾ ತನ್ನ ಪತಿಯಾದ ದುಬೈ ಪ್ರಧಾನಿ ಶೇಖ್ ಮತ್ತು ಆತನ ಬಾಡಿಗಾರ್ಡ್​ ಜೊತೆ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದ ಶೇಖ್ ಕೋಪಗೊಂಡು ದುಬೈನಲ್ಲಿ ರಾಜಕುಮಾರಿ ಹಯಾ ಬದುಕು ನಡೆಸಲು ಕಷ್ಟವಾಗುವಂಥ ಪರಿಸ್ಥಿತಿ ನಿರ್ಮಿಸಿದರು. 2019ರಲ್ಲಿ ಪ್ರಾಣಭೀತಿಯಿಂದ ಜರ್ಮನಿಗೆ ಹಯಾ ವಲಸೆ ಹೋಗಬೇಕಾಯಿತು. ತನ್ನ ಪತ್ನಿಯನ್ನು ಮರಳಿ ಕಳಿಸುವಂತೆ ರಾಜತಾಂತ್ರಿಕ ಮಟ್ಟದಲ್ಲಿ ದುಬೈ ಶೇಖ್ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಹೀಗಾಗಿ ಹಯಾ ಬ್ರಿಟನ್ನಿನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಲ್ಲದೆ ರಾಜಕುಮಾರಿ ಹಯಾ ತನ್ನ ಪತಿಯಿಂದ ಭಯಭೀತರಾಗಿದ್ದು, ನನಗೆ ಪ್ರಾಣ ಬೆದರಿಕೆ ಇದೆ ಎಂದು ಆರೋಪಿಸಿದ್ದರು.


    ಇದನ್ನೂ ಓದಿ: ವಿದೇಶಿ ಜೋಡಿಯ ಭಾರತೀಯ ಪ್ರೀತಿ, ಹಿಂದೂ ಸಂಪ್ರದಾಯದಂತೆ ಗುಜರಾತಿನಲ್ಲಿ ಮದುವೆಯಾದ ವಿದೇಶಿ ಜೋಡಿ


    ಇನ್ನು ಶೇಖ್ ಮೊಹಮ್ಮದ್, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉಪಾಧ್ಯಕ್ಷ ಮತ್ತು ಪ್ರಧಾನಮಂತ್ರಿಯಾಗಿದ್ದಾರೆ. ಪ್ರಮುಖ ಕುದುರೆ ತಳಿಗಳನ್ನು ಹೊಂದಿರುವ ಅವರು ಗೊಡಾಲ್ಫಿನ್ ಕುದುರೆ-ರೇಸಿಂಗ್ ಸ್ಟೇಬಲ್ನ ಸ್ಥಾಪಕರಾಗಿದ್ದಾರೆ. ರಾಣಿ ಎಲಿಜಬೆತ್ IIರೊಂದಿಗೂ ಶೇಖ್‌ ಮೊಹಮ್ಮದ್‌ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.

    Published by:ranjumbkgowda1 ranjumbkgowda1
    First published: