ಅತಿ ವೇಗದ ಕಾರು ಚಾಲನೆಗೆ ದುಬೈ ಪೊಲೀಸ್ ವಿಧಿಸಿದ ದಂಡವೆಷ್ಟು ಗೊತ್ತೆ?

news18
Updated:August 13, 2018, 3:30 PM IST
ಅತಿ ವೇಗದ ಕಾರು ಚಾಲನೆಗೆ ದುಬೈ ಪೊಲೀಸ್ ವಿಧಿಸಿದ ದಂಡವೆಷ್ಟು ಗೊತ್ತೆ?
news18
Updated: August 13, 2018, 3:30 PM IST
-ನ್ಯೂಸ್ 18 ಕನ್ನಡ

ವೇಗದ ಚಾಲನೆ, ಸಿಗ್ನಲ್ ಜಂಪ್, ನೋ ಎಂಟ್ರಿಯಲ್ಲಿ ಗಾಡಿ ಓಡಿಸುವುದು, ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸುವುದು...ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಐನೂರು, ಸಾವಿರ ದಂಡ ಕಟ್ಟಿದ ಬಗ್ಗೆ ಕೇಳಿರುತ್ತೀರಿ. ಆದರೆ ದುಬೈನಲ್ಲಿ ವ್ಯಕ್ತಿಯೊಬ್ಬರು ಅತಿ ವೇಗದಲ್ಲಿ ಕಾರು ಚಲಾಯಿಸಿ ಸುದ್ದಿಯಾಗಿದ್ದಾರೆ. ಅದು ಅವರ ಕಾರು ಚಾಲನೆಯ ಚಾಲಾಕಿತನದಿಂದಲ್ಲ ಎಂಬುದು ವಾಸ್ತವ. ಕಳೆದ ವಾರ ಬ್ರಿಟಿಷ್ ಪ್ರಜೆ ಫರ್ಹಾ ಹಾಶಿ ದುಬೈನ ಶೇಕ್ ಝಾಯದ್ ರೋಡ್​ನಲ್ಲಿ ಅತಿ ವೇಗದಿಂದ ಕಾರು ಚಾಲಾಯಿಸಿ ಭರ್ಜರಿ ದಂಡ ಕಟ್ಟಬೇಕಾಗಿ ಬಂದಿದೆ.

ಫರ್ಹಾ ಹಾಶಿ 'ಲಂಬೋರ್ಗಿನಿಯ ಹುರಕಾನ್' ಕಾರನ್ನು 347 ಮೈಲಿ ವೇಗದಲ್ಲಿ ಚಲಾಯಿಸಿರುವುದು ಟ್ರಾಫಿಕ್ ಕ್ಯಾಮೆರಾಗಳು ಸೆರೆ ಹಿಡಿದಿದೆ. ದುಬೈನ ಸಂಚಾರಿ ನಿಯಮದ ಪ್ರಕಾರ ಅತಿ ವೇಗದ ಚಾಲನೆ ನಿಯಮದಡಿಯಲ್ಲಿ ಫರ್ಹಾಗೆ 45 ಸಾವಿರ ಡಾಲರ್ ದಂಡ ವಿಧಿಸಿದ್ದಾರೆ. ಅಂದರೆ ಇದರ ಭಾರತೀಯ ಮೌಲ್ಯ ಬರೋಬ್ಬರಿ 30 ಲಕ್ಷ ರೂ.ಕ್ಕಿಂತ ಹೆಚ್ಚು. ಆದರೆ ಕುತೂಹಲಕಾರಿ ವಿಷಯವೆಂದರೆ ಫರ್ಹಾ ಈ ಕಾರನ್ನು 1600 ಡಾಲರ್ ನೀಡಿ ಬಾಡಿಗೆ ಪಡೆದಿದ್ದರು.

ಯುನೈಟೆಡ್​ ಎಮಿರೇಟ್ಸ್​ನ ಅತಿ ಉದ್ದದ ರಸ್ತೆಯಲ್ಲಿ ಕಾರನ್ನು ರಾಕೆಟ್​ನಂತೆ ಚಲಾಯಿಸಿದ್ದ ಫರ್ಹಾಗೆ ದಂಡ ವಿಧಿಸಿರುವುದರಿಂದ ಕಾರು ನೀಡಿದ ಬಾಡಿಗೆ ಕಂಪನಿ ಇಕ್ಕಟಿಗೆ ಸಿಲುಕಿದೆ. ಈ ಮೊತ್ತವನ್ನು ಕಾರಿನ ಮಾಲೀಕರು ಪಾವತಿಸ ಬೇಕಾಗುತ್ತದೆ. ಹೀಗಾಗಿ ಬ್ರಿಟಿಷ್​ ಪ್ರಜೆಯ ಪಾಸ್​ಪೋರ್ಟ್​​ನ್ನು ಹಿಡಿದಿಟ್ಟಿರುವ ಕಾರು ಕಂಪನಿ, ದಂಡ ಕಟ್ಟಿದ ಬಳಿಕ ಮರಳಿ ನೀಡುವುದಾಗಿ ತಿಳಿಸಿದ್ದಾರಂತೆ.

ಫರ್ಹಾ ಸಹೋದರ ಅದ್ನಾನ್ ಹಾಶಿ ತಮ್ಮನ ನೆರವಿಗಾಗಿ ದುಬೈಗೆ ಪ್ರಯಾಣಿಸಿದ್ದಾರೆ. ಆದರೆ ಅಣ್ಣನ ಪ್ರಕಾರ ಕಾರು ಬಾಡಿಗೆ ಶೋ ರೂಂ ಮಾಲೀಕರೇ ಫರ್ಹಾನಿಗೆ ಕಾರು ನೀಡಿ ಚಲಾಯಿಸಲು ತಿಳಿಸಿದ್ದಾರೆ. ಬಳಿಕ ದಂಡ ಕಟ್ಟಬೇಕಾಗಿ ಬಂದಿದ್ದರಿಂದ ಪಾಸ್​ಪೋರ್ಟ್​​ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕಂತು ದುಬೈನಲ್ಲಿ ಹಣ ಹೊಂದಿಸಲು ಫರ್ಹಾನಿಂದ ಸಾಧ್ಯವಿಲ್ಲ ಎಂದು ಸಹೋದರ ತಿಳಿಸಿದ್ದಾರೆ.

ಆದರೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಸಲು ಫರ್ಜಾ ಹಾಶಿಯನ್ನು ಕೇಳಿಕೊಂಡಿದ್ದೇವೆ. ನಮ್ಮದು ಸಣ್ಣದೊಂದು ಉದ್ಯಮ, ಇದರ ಬಹುಪಾಲನ್ನು ದಂಡ ಕಟ್ಟ ಬೇಕಾಗಿ ಬರುವುದು ದುರಾದೃಷ್ಟ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಸರ್ಕಾರ ವಿಧಿಸಿರುವ ಫೈನ್ ಕಟ್ಟಿದ್ದರೆ ಫರ್ಹಾ ಮರಳಬಹುದು ಎಂದು ಕಾರು ಕಂಪನಿ ಮಾಲೀಕ ಮೊಹಮ್ಮದ್ ಇಬ್ರಾಹಿಂ ಖಾಸಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ