Balcony: ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಂತಿಲ್ಲ! ನಿಯಮ ಪಾಲಿಸದಿದ್ದರೆ ದಂಡ ತೆರಬೇಕು

ದುಬೈ ಆಡಳಿತವು ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮಗಳನ್ನು ತಂದಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮನೆಯ ಬಾಲ್ಕನಿಯಲ್ಲಿ (Balcony) ಬಟ್ಟೆ ನೇತು ಹಾಕುವ ಅಭ್ಯಾಸವಿದೆಯಾ? ನಗರ ಪ್ರವೇಶಗಳಲ್ಲಿ ಬಹುತೇಕರು ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುತ್ತಾರೆ (Drying Clothes). ಆದರೆ ಕೆಲವು ಅಪಾರ್ಟ್​​ಮೆಂಟ್​​​​  ಗಳಲ್ಲಿ (Apartment) ಬಾಲ್ಕನಿಯಲ್ಲಿ ಬಟ್ಟೆ ಒಣಗಿಸಲು ಬಿಡುವುದಿಲ್ಲ. ಅಷ್ಟು ಮಾತ್ರವಲ್ಲ ಟಿವಿ ಡಿಶ್​ (Tv Dish) ಅಳವಡಿಸುವಂತಿಲ್ಲ. ಇದೀಗ ದುಬೈನಲ್ಲಿ (Dubai) ಈ ವಿಚಾರವಾಗಿ ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಲಾಗಿದೆ. ಒಂದು ವೇಳೆ ನಿಯಮಕ್ಕೆ ವಿರುದ್ಧವಾಗಿ ಬಟ್ಟೆ ಒಣಗಿಸಿದರೆ ಭಾರೀ ದಂಡ ತೆರೆಬೇಕಾಗುತ್ತದೆ.

  ದುಬೈ ಆಡಳಿತವು ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮಗಳನ್ನು ತಂದಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸಬಾರದು ಎಂಬ ನಿಯಮವನ್ನು ಜಾರಿಗೊಳಿಸಿದೆ. ಮಾತ್ರವಲ್ಲದೆ ಬಾಲ್ಕನಿಯಲ್ಲಿ ಪಕ್ಷಿ ಹುಳಗಳನ್ನು ಇಡಬಾರದು ಎಂದು ದುಬೈ ಮುನ್ಸಿಪಾಲಿಟಿ ಹೇಳಿದೆ. ಯಾರಾದರೂ ಹಾಗೆ ಮಾಡಿರುವುದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

  ಸಿಗರೇಟು ಸೇದುವವರು, ಮಧ್ಯ ಸೇವಿಸುವವರಿಗೂ ಈ ನಿಯಮ ಅನ್ವಯ

  ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದುವವರಿಗೂ ದುಬೈ ಮುನ್ಸಿಪಾಲಿಟಿ ಎಚ್ಚರಿಕೆ ನೀಡಿದೆ. ಯಾರಾದರೂ ಬಾಲ್ಕನಿಯಲ್ಲಿ ಸಿಗರೇಟ್ ಸೇದಿದರೆ, ಸಿಗರೇಟ್​ ಬೂದಿ ಕೆಳಗೆ ಬಿದ್ದರೆ, ಅವರು ದಂಡವನ್ನು ಪಾವತಿಸಬೇಕಾಗುತ್ತದೆ. ನಗರವನ್ನು ಸ್ವಚ್ಛ ಮತ್ತು ಸುಂದರವಾಗಿಡಲು ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಹೇಳಿದೆ. ಜನರು ತಮ್ಮ ಅಪಾರ್ಟ್​ಮೆಂಟ್​  ಬಾಲ್ಕನಿಯನ್ನು ದುರುಪಯೋಗಪಡಿಸಿಕೊಳ್ಳದಂತೆ ಆಡಳಿತವು ಜನರನ್ನು ಒತ್ತಾಯಿಸಿದೆ.

  ಬಾಲ್ಕನಿ ಕೊಳಕು ಕಾಣಬಾರದು

  ದುಬೈ ಮುನ್ಸಿಪಾಲಿಟಿ ತನ್ನ ಸೋಷಿಯಲ್​ ಮೀಡಿಯಾದಲ್ಲಿನ ಅಧಿಕೃತ ಖಾತೆಯಲ್ಲಿ ಹೊಸ ಮಾರ್ಗಸೂಚಿಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಇದರಲ್ಲಿ ಜನರು ತಮ್ಮ ಬಾಲ್ಕನಿಯನ್ನು ಅಸಹ್ಯವಾಗಿ ಕಾಣುವಂತಹ ಕೆಲಸವನ್ನು ಮಾಡಬಾರದು. ಒಂದು ವೇಳೆ ನಿಯಮಕ್ಕೆ ವಿರುದ್ಧವಗಿ ವರ್ತಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.

  ಮುನ್ಸಿಪಾಲಿಟಿ ತನ್ನ ಟ್ವೀಟ್‌ಗಳಲ್ಲಿ ಒಂದರಲ್ಲಿ ಹೀಗೆ ಬರೆದಿದೆ, 'ಸಾಮಾಜಿಕ ಅಗತ್ಯತೆಗಳು ಮತ್ತು ಮಾನದಂಡಗಳ ಬಗ್ಗೆ ಸಮುದಾಯದ ಜಾಗೃತಿಯನ್ನು ಹೆಚ್ಚಿಸುವ ಸಲುವಾಗಿ ನಗರದ ಸೌಂದರ್ಯ ಮತ್ತು ಸುಸಂಸ್ಕೃತ ಸ್ವಭಾವವನ್ನು ತೊಂದರೆಗೊಳಿಸುವುದನ್ನು ತಡೆಯಲು ದುಬೈ ಪುರಸಭೆಯು ಎಲ್ಲಾ ಯುಎಇ ನಿವಾಸಿಗಳನ್ನು ಒತ್ತಾಯಿಸುತ್ತದೆ ಎಂದಿದೆ.

  ಇದನ್ನು ಓದಿ: Amazon Alexa: ಪೆನ್ನಿ ಚಾಲೆಂಜ್ ಬಗ್ಗೆ ಮಾಹಿತಿ ನೀಡುತ್ತಿದ್ದ ಅಲೆಕ್ಸಾ! ಈ ಭಯಾನಕ ಚಾಲೆಂಜ್​ಗೆ ಬಿದ್ದಿದ್ದಳು 10 ವರ್ಷದ ಬಾಲಕಿ

  ದುಬೈ ಮುನಿಸಿಪಾಲಿಟಿ ತನ್ನ ಟ್ವೀಟ್‌ನಲ್ಲಿ ಬಾಲ್ಕನಿಯನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಕಟ್ಟುನಿಟ್ಟಿನ ಕಾನೂನು ಜಾರಿಗೆ ತಂದಿದ್ದು, ಇದರ ವಿರುದ್ಧ ವರ್ತಿಸಿದ ವ್ಯಕ್ತಿಗೆ ದಂಡ ವಿಧಿಸಬಹುದು. ಬಾಲ್ಕನಿಯಲ್ಲಿ ಅಥವಾ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸುವುದು, ಉಳಿದ ಸಿಗರೇಟ್ ಅಥವಾ ಸಿಗರೇಟ್ ಬೂದಿಯನ್ನು ಬಾಲ್ಕನಿಯಲ್ಲಿ ಬೀಳಿಸುವುದು, ಕಸವನ್ನು ಬಾಲ್ಕನಿಯಲ್ಲಿ ಎಸೆಯುವುದು, ಕೊಳಕು ನೀರನ್ನು ಬಿಡುವುದು ಅಥವಾ ಬಾಲ್ಕನಿಯನ್ನು ತೊಳೆಯುವಾಗ ನೀರು ತೊಟ್ಟಿಕ್ಕುವುದು, ಪಕ್ಷಿಗಳಿಗೆ ಆಹಾರ ನೀಡುವುದು, ಬಾಲ್ಕನಿಯಲ್ಲಿ ಉಪಹಾರ ಮಾಡುವುದು ಅಥವಾ ಯಾವುದೇ ರೀತಿಯ ಆಂಟೆನಾವನ್ನು ಅಳವಡಿಸದಂತೆ ಸೂಚನೆ ನೀಡಿದೆ.

  ಭಾರೀ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ

  ನಿಯಮ ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸಲಾಗುವುದು ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಅಪರಾಧಿಗಳು 500 ರಿಂದ 1,500 ದಿರ್ಹಮ್ ವರೆಗೆ ಪಾವತಿಸಬೇಕಾಗಬಹುದು, ಅಂದರೆ ನಿಯಮಗಳನ್ನು ಉಲ್ಲಂಘಿಸುವವರು 10 ಸಾವಿರದಿಂದ 30 ಸಾವಿರ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.

  ಇದನ್ನು ಓದಿ: Mahabharata: ಕುರುಕ್ಷೇತ್ರದ ಯುದ್ಧದ ಫಲಿತಾಂಶದ ಬಗ್ಗೆ ಈ 7 ಜನರಿಗೆ ಮೊದಲೇ ತಿಳಿದಿತ್ತಂತೆ

  ಕುವೈತ್​ನಲ್ಲಿ ಈ ನಿಯಮವಿದೆ

  2018 ರಲ್ಲಿ, ಗಲ್ಫ್ ದೇಶ ಕುವೈತ್ ಕೂಡ ತನ್ನ ನಾಗರಿಕರಿಗೆ ಇದೇ ರೀತಿಯ ನಿಯಮವನ್ನು ಹೊರಡಿಸಿತ್ತು. ಅಂತೆಯೇ, ಒಳ ಉಡುಪು ಇತ್ಯಾದಿಗಳನ್ನು ಬಾಲ್ಕನಿಯಲ್ಲಿ ಒಣಗಿಸುವುದು ಪ್ರಚೋದನಕಾರಿ, ಅವಮಾನಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಕೆಲವು ನಿವಾಸಿಗಳ ದೂರಿದ ನಂತರ ದಕ್ಷಿಣ ರಾಜ್ಯ ಬಹ್ರೇನ್ ಅಂತಹ ವಿಷಯದ ಬಗ್ಗೆ ನಿಷೇಧವನ್ನು ವಿಧಿಸಿತು.
  Published by:Harshith AS
  First published: