VIDEO: ಕುಡಿದ ಅಮಲಿನಲ್ಲಿ ಪೊಲೀಸ್​​​ಗೆ ಮುತ್ತುಕೊಟ್ಟ; ಮುಂದೇನಾಯ್ತು ಗೊತ್ತಾ?

ಬೊನಲು ಹಬ್ಬದ ಸಂದರ್ಭದಲ್ಲಿ ಮಾರ್ಗ ಮಧ್ಯೆ ನೃತ್ಯ ಮಾಡುತ್ತಿದ್ದ ವ್ಯಕ್ತಿ ಪೊಲೀಸ್​ ಸಿಬ್ಭಂದಿಯನ್ನು ಕಂಡು ಮುತ್ತುಕೊಟ್ಟಿದ್ದಾನೆ. ತಕ್ಷಣೆವೇ ಫೋಲಿಸ್​ ಅಧಿಕಾರಿ ಆ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾರೆ.

news18
Updated:July 30, 2019, 10:38 PM IST
VIDEO: ಕುಡಿದ ಅಮಲಿನಲ್ಲಿ ಪೊಲೀಸ್​​​ಗೆ ಮುತ್ತುಕೊಟ್ಟ; ಮುಂದೇನಾಯ್ತು ಗೊತ್ತಾ?
.
  • News18
  • Last Updated: July 30, 2019, 10:38 PM IST
  • Share this:
ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ಪೊಲೀಸ್​ಗೆ ಮುತ್ತುಕೊಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಬೊನಲು ಹಬ್ಬದ ಆಚರಣೆಯ ಅಂಗವಾಗಿ ನಗರ​ ಮುಖ್ಯ ರಸ್ತೆಗಳಲ್ಲಿ ಮೆರವಣೆಗೆ ನಡೆಸಲಾಗಿತ್ತು. ಮೆರವಣಿಗೆಯ ವೇಳೆ ಬಿಗಿ ಭದ್ರತೆಗಾಗಿ ಫೊಲಿಸರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಎಣ್ಣೆಯ ನಶೆಯಲ್ಲಿದ್ದ ವ್ಯಕ್ತಿಯೋರ್ವ ಭದ್ರತಾ ನಿರತ ಪೋಲಿಸ್​​ ಸಿಬ್ಬಂದಿಯೊಬ್ಬರಿಗೆ ಮುತ್ತುಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದೆ.

ಬೊನಲು ಹಬ್ಬದ ಸಂದರ್ಭದಲ್ಲಿ ಮಾರ್ಗ ಮಧ್ಯೆ ನೃತ್ಯ ಮಾಡುತ್ತಿದ್ದ ವ್ಯಕ್ತಿ ಪೊಲೀಸ್​ ಸಿಬ್ಭಂದಿಯನ್ನು ಕಂಡು ಕೆನ್ನಗೆ ಮುತ್ತುಕೊಟ್ಟಿದ್ದಾನೆ. ತಕ್ಷಣೆವೇ ಪೊಲೀಸ್​ ಅಧಿಕಾರಿ ಆ ವ್ಯಕ್ತಿಯ ಕಪಾಳಕ್ಕೆ ಬಾರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಫ್​ಲೈನ್​​ ಮಳಿಗೆ ಆರಂಭಿಸಿದ ಫ್ಲಿಪ್​ಕಾರ್ಟ್

ಕರ್ತವ್ಯದಲ್ಲಿದ್ದ ಪೊಲೀಸ್​ ಸಿಬ್ಭಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಭಾನು ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 28 ವರ್ಷದ ಆರೋಪಿ ಭಾನು ಖಾಸಗಿ ಬ್ಯಾಂಕ್​ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸದ್ಯ ನಲ್ಲುಕುಂಟ ಪೊಲೀಸ್​ ಠಾಣೆಯಲ್ಲಿ ಸೆಕ್ಷನ್​ 353ರ ಅಡಿ ಕೇಸು ದಾಖಲಿಸಲಾಗಿದೆ

First published:July 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...