ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ ರದ್ಧಾಂತ ಸೃಷ್ಟಿಸಿದ ಹೈದ್ರಾಬಾದ್ ಯುವತಿ ವಿಡಿಯೋ ವೈರಲ್

news18
Updated:April 9, 2018, 11:21 AM IST
ಕುಡಿದ ಮತ್ತಿನಲ್ಲಿ ಪೊಲೀಸರೊಂದಿಗೆ  ರದ್ಧಾಂತ ಸೃಷ್ಟಿಸಿದ ಹೈದ್ರಾಬಾದ್ ಯುವತಿ ವಿಡಿಯೋ ವೈರಲ್
news18
Updated: April 9, 2018, 11:21 AM IST
ನ್ಯೂಸ್ 18 ಕನ್ನಡ

ಹೈದ್ರಾಬಾದ್ (ಏ.9)​: ಕುಡಿದು ಕಾರ್​ ಓಡಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಮಹಿಳೆಯೊಬ್ಬಳು ಮುಗಿ ಬಿದ್ದು ರದ್ಧಾಂತ ಸೃಷ್ಟಿಸಿದ ಪ್ರಕರಣ ನಡೆದಿದೆ.

ಭಾನುವಾರ ಮಧ್ಯರಾತ್ರಿ ಹೈದ್ರಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ಕುಡಿದ ಯುವತಿಯ ರದ್ದಾಂತದ ವಿಡಿಯೋ ವೈರಲ್ ಆಗಿದೆ.ಕಂಠಮಟ್ಟ ಕುಡಿದ ಯುವತಿಯರಿಬ್ಬರ ವಾಹನವನ್ನು ಮಧ್ಯರಾತ್ರಿ 1ಗಂಟೆ ಸುಮಾರಿಗೆ ಪೊಲೀಸರು ತಡೆದು ಮದ್ಯಪರೀಕ್ಷೆ ನಡೆಸಿದ್ದಾರೆ.

ಈ ವೇಳೆ ಕಾರ್ ಚಲಾಯಿಸುತ್ತಿದ್ದ ಮಹಿಳಾ ಚಾಲಕಿ ಕೂಡ ಮಿತಿ ಮೀರಿ ಕುಡಿದಿರುವುದು ಪರೀಕ್ಷೆಯಲ್ಲಿ ಸಾಬೀತಾಗಿದೆ. ಇನ್ನ ಈಕೆ ಪಕ್ಕದಲ್ಲಿ ಕುಳಿತ ಯುವತಿಯಂತೂ ಕುಡಿದು ಸಂಪೂರ್ಣ ನಿಯಂತ್ರಣ ತಪ್ಪಿದ್ದಳು. ಕಾರ್ ತಡೆದಿದ್ದನ್ನು ಪ್ರಶ್ನಿಸಿ ಆಕೆ ರಸ್ತೆಯಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾಳೆ.

ಕುಡಿದು ನಿಯಂತ್ರಣ ತಪ್ಪಿದ್ದ ಯುವತಿಯನ್ನು ಸಂಬಳಿಸುವಲ್ಲಿ ಪೊಲೀಸರು ಸುಸ್ತಾಗಿದ್ದಾರೆ. ಇದನ್ನು ಚಿತ್ರೀಕರಣ ಮಾಡಲು ಮುಂದಾಗಿದ್ದ ಸ್ಥಳೀಯ ಟಿವಿ ಕ್ಯಾಮರಮಾನ್​ನ್ನು ಕೂಡ ಹಲ್ಲೆ ಮಾಡಲು ಆಕೆ ಮುಂದಾಗಿದ್ದಾಳೆ.ಕಾರ್​ ಚಾಲಾನೆ ಮಾಡುತ್ತಿದ್ದ ಮಹಿಳಾ ಚಾಲಕಿ ಮೇಲೆ ಪೊಲೀಸರು ದೂರು ದಾಖಲಿಸಿದ್ದು, ರದ್ಧಾಂತ ಸೃಷ್ಟಿಸಿದ ಯುವತಿ ಮೇಲೆ ಯಾವುದೇ ದೂರು ದಾಖಲಾಗಿಲ್ಲ.

 

First published:April 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ