ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗಿರುತ್ತೋ ಹಾಗೆ ರಕ್ಷಣೆ ಮಾಡುವ ಪೊಲೀಸರೇ (Police) ಕುಡಿದು ಗಲಾಟೆ ಮಾಡಿದರೆ ಸಾರ್ವಜನಿಕರ ಪರಿಸ್ಥಿತಿ ಏನಾಗಬಾರದು, ಯಾರಿಗೆ ಹೋಗಿ ದೂರು ಕೊಡೋದು ಹೇಳಿ. ಮಧ್ಯಪ್ರದೇಶದಲ್ಲೂ ಇದೇ ರೀತಿ ಘಟನೆ ನಡೆದಿದೆ. ಕಂಠಪೂರ್ತಿ ಕುಡಿದ ಪೊಲೀಸ್ ಪೇದೆಯೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ರಸ್ತೆಯಲ್ಲಿ ಗಲಾಟೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹರ್ದಾ ಜಿಲ್ಲೆಯ ಪೊಲೀಸ್ ಪೇದೆ ಸುಶೀಲ್ ಮಾಂಡ್ವಿ ಕುಡಿದ ಮತ್ತಲ್ಲಿ ರಸ್ತೆಯ (Road) ಮಧ್ಯದಲ್ಲಿಯೇ ಗಲಾಟೆ ಮಾಡಿದ್ದಲ್ಲದೇ ಎಲ್ಲರ ಮುಂದೆ ಸಮವಸ್ತ್ರವನ್ನು ಕಿತ್ತೆಸೆದು ಅಸಭ್ಯವಾಗಿ ವರ್ತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಮತ್ತೊಬ್ಬ ವ್ಯಕ್ತಿಯೊಂದಿಗೆ ಖಾಕಿ ನಡುರೋಡಲ್ಲೇ ವಾಗ್ವಾದ
ಶುಕ್ರವಾರ ಸಂಜೆ ಹೊತ್ತಿಗೆ ರಕ್ಷಿತ್ ಸೆಂಟರ್ ಹರ್ದಾದಲ್ಲಿ ನಿಯೋಜಿಸಲಾದ ಕಾನ್ಸ್ಟೆಬಲ್ ಸುಶೀಲ್ ಮಾಂಡ್ವಿ ಪಾನಮತ್ತರಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ವಾದ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸುಶೀಲ್ ಮಾಂಡ್ವಿ ಮತ್ತು ಆತನ ಇಲಾಖೆಯ ಸ್ನೇಹಿತ ಎನ್ನಲಾಗುತ್ತಿರುವ ಆ ವ್ಯಕ್ತಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದು, ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸ್ ಪೇದೆ ತನ್ನ ಸಮವಸ್ತ್ರ ತೆಗೆದು ಅಸಭ್ಯ ವರ್ತನೆ ತೋರಿದ್ದಾರೆ.
ಘಟನೆ ಏನು?
ಇಬ್ಬರು ವ್ಯಕ್ತಿಗಳು ರೋಡ್ನಲ್ಲಿ ನಿಂತು ಗಲಾಟೆ ಮಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಪೊಲೀಸ್ ಪೇದೆ, ಇನ್ನೋರ್ವ ಆ ಇಲಾಖೆಯ ವ್ಯಕ್ತಿಯ ಸ್ನೇಹಿತ ಎನ್ನಲಾಗುತ್ತಿದೆ. ಇವರಲ್ಲಿ ಒಬ್ಬ ಯುವಕ ಪೊಲೀಸ್ ಸಮವಸ್ತ್ರದಲ್ಲಿದ್ದರೆ, ಮತ್ತೊಬ್ಬ ಯುವಕ ಪೊಲೀಸ್ ಮಾಹಿತಿದಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಇಬ್ಬರ ಹೈಡ್ರಾಮಾಕ್ಕೆ ಸಾಕಷ್ಟು ಸಾರ್ವಜನಿಕರು ಸಾಕ್ಷಿಯಾಗಿದ್ದರು. ಇಬ್ಬರ ವಾದ-ವಿವಾದ ತಾರಕಕ್ಕೇರುತ್ತಿದ್ದಂತೆ ಸುಶೀಲ್ ಮಾಂಡ್ವಿ ಸಮವಸ್ತ್ರ ಕಿತ್ತೊಗೆದು ಡ್ರಾಮಾ ಮಾಡಿದ್ದಾರೆ.
ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಕಾನ್ಸ್ಟೇಬಲ್ಗೆ ವಾರಂಟ್ನೊಂದಿಗೆ ತಿಮರ್ನಿ ಠಾಣೆಗೆ ಕಳುಹಿಸಲಾಗಿದೆ, ಆದರೆ ಅವರು ತಿಮರ್ನಿ ಠಾಣೆಗೆ ಮಾಂಡ್ವಿ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕಣ್ಣಿಂದ ಕಣ್ಣೀರು ಬರುವ ಬದಲು ಕಲ್ಲುಗಳು ಬರುತ್ತಿವೆ! ಈ ಮಹಿಳೆಯ ಪರಿಸ್ಥಿತಿ ಯಾರಿಗೂ ಬೇಡ
ಕರ್ತವ್ಯನಿರತ ವೇಳೆ ಕುಡಿದಿದ್ದಲ್ಲದೇ ಇಲಾಖೆಯ ಬಟ್ಟೆಯಂತನೂ ನೋಡದೇ ಸಮವಸ್ತ್ರ ಕಿತ್ತೆಸೆದಿದ್ದರೆ. ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮತ್ತು ಕರ್ತವ್ಯಲೋಪದನುಸಾರ ಪೇದೆ ಸುಶೀಲ್ ಮಾಂಡ್ವಿ ಅವರನ್ನು ಸದ್ಯ ಅಮಾನತುಗೊಳಿಸಲಾಗಿದೆ.
ಪೇದೆ ಸುಶೀಲ್ ಮಾಂಡ್ವಿ ಅಮಾನತು
ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮನೀಶ್ ಕುಮಾರ್ ಅಗರ್ವಾಲ್ ಅವರು ಕಾನ್ಸ್ಟೇಬಲ್ ಸುಶೀಲ್ ಮಾಂಡ್ವಿ ಅವರನ್ನು ಅಮಾನತುಗೊಳಿಸಿದ್ದಾರೆ. ಇದರೊಂದಿಗೆ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ನಗರದ ರೈಲು ನಿಲ್ದಾಣದ ಬಳಿ ಕುಡಿದ ಮತ್ತಿನಲ್ಲಿದ್ದ ಇಬ್ಬರು ಸಾರ್ವಜನಿಕರ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮುಜಾಹಿದ್ ಅಲಿ ತಿಳಿಸಿದ್ದಾರೆ.
हरदा (नवदुनिया प्रतिनिधि)। शुक्रवार शाम करीब 5 बजे रक्षित केंद्र हरदा में पदस्थ आरक्षक सुशील मांडवी शराब के नशे में दूत होकर वर्दी उतारकर फेंकते हुए दिखे। आरक्षक सुशील अन्य एक युवक के साथ शराब के नशे में नौटंकी करते हुए पाए गए। इसका वीडियो इंटरनेट मीडिया पर खूब वायरल हुआ। pic.twitter.com/IRdOXi5Ge1
— Shadab Khan (@ShadabK56674444) December 23, 2022
ಮದ್ಯ ವ್ಯಸನಿಯಾಗಿದ್ದ ಕಾನ್ಸ್ಟೆಬಲ್ಗೆ ಹಲವು ಬಾರಿ ಕೌನ್ಸೆಲಿಂಗ್ ಮಾಡಲಾಗಿದೆ. ಪೊಲೀಸರಿಂದ ಪಡೆದ ಮಾಹಿತಿಯ ಪ್ರಕಾರ, ಕಾನ್ಸ್ಟೆಬಲ್ ಸುಶೀಲ್ ಮಾಂಡ್ವಿಯನ್ನು ರಕ್ಷಿತ್ ಕೇಂದ್ರದ ಮೊದಲು ಪಕ್ಡಿ ಪಾಬಾದ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದೆ. ಕೊರೋನಾ ಸಮಯದಲ್ಲಿ ಕಾನ್ಸ್ಟೆಬಲ್ ಮಾಂಡ್ವಿ ಅವರ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಮತ್ತೊಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು, ಅಲ್ಲಿ ಅವರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದಾದ ನಂತರ, ಅನೇಕ ಬಾರಿ ಪೊಲೀಸ್ ಅಧೀಕ್ಷಕರು ಮಾಂಡ್ವಿಯವರ ಸಮಾಲೋಚನೆಯನ್ನು ಮಾಡಿದ್ದಾರೆ.
ಇವರಿಬ್ಬರ ಜಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ