ಅನ್ನ ತಿಂದರೆ ನಿದ್ರೆ ಬರುತ್ತದೆಯೇ? ಈ ಲೇಖನ ಓದಿದರೆ ಸಿಗುತ್ತದೆ ಸಮಸ್ಯೆಗೆ ಪರಿಹಾರ

ಊಟಕ್ಕೆ ಅನ್ನವನ್ನು ಸೇವಿಸುವುದು ಖಂಡಿತವಾಗಿಯೂ ಕೆಟ್ಟ ಆಲೋಚನೆ ಎಂದು ನೀವು ಯೋಚಿಸುತ್ತಿರಬೇಕು. ಆದರೆ ಅದನ್ನು ನಿರ್ವಹಿಸಲು ಒಂದು ಮಾರ್ಗವಿದೆ, ಮತ್ತು ನೀವು ಇದರಿಂದ ದೂರ ಇರುವ ಅಗತ್ಯವಿಲ್ಲ. ಅಕ್ಕಿಯಿಂದ ಉಂಟಾಗುವ ಅರೆನಿದ್ರಾವಸ್ಥೆಯನ್ನು ತಡೆಯಲು ಪೂಜಾ ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ದಕ್ಷಿಣ ಭಾರತೀಯರಿಗೂ ಅಕ್ಕಿಗೂ ಬಹಳ ಅವಿನಾಭಾವ ನಂಟು. ಅನ್ನ ಸೇವಿಸದೇ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ನಂಟು ಹೊಂದಿದ್ದಾರೆ. ಆದರೆ ಕೆಲವರು ಅನ್ನ ಸೇವನೆಯನ್ನು ಹೆಚ್ಚು ಮಾಡಬಾರದು ಎಂದು ಹೇಳುತ್ತಾರೆ. ಅನ್ನ ತಿಂದರೆ ದೇಹದ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಎಂಬುದು ಹಲವರ ನಂಬಿಕೆಯಾಗಿದೆ.


  ಆದರೆ ಪ್ರತೀ ದಿನ ಅನ್ನ ಸೇವಿಸುವವರಿಗೆ ಒಂದು ದಿನ ಅನ್ನ ಸೇವಿಸದೇ ಇರಲು ಸಾಧ್ಯವೇ ಇಲ್ಲ. ಇನ್ನು ಕೆಲವರಿಗೆ ಅನ್ನ ಇಲ್ಲವೇ ಅಕ್ಕಿಯಿಂದ ಮಾಡಿದ ತಿಂಡಿಗಳನ್ನು ಸೇವಿಸಿದಲ್ಲಿ ನಿದ್ದೆ ಬಂದಂತಾಗುತ್ತದೆ. ಹೀಗೆ ಅನ್ನದ ಖಾದ್ಯ ಸೇವಿಸುವವರಿಗೆ ಹಾಗೂ ಅನ್ನ ಊಟ ಮಾಡಲೇಬೇಕು ಎಂಬ ಹಂಬಲವಿರುವವರಿಗೆ ಸೆಲೆಬ್ರಿಟಿ ಪೌಷ್ಟಿಕತಜ್ಞೆ ಪೂಜಾ ಮಖಿಜಾ ಕೆಲವೊಂದು ಸಲಹೆಗಳನ್ನು ನೀಡಿದ್ದು ಅದೇನು ಎಂಬುದನ್ನು ತಿಳಿದುಕೊಳ್ಳೊಣ ಬನ್ನಿ.


  ನಿಮ್ಮ ಕೆಲಸದ ಸಮಯದಲ್ಲಿ ಅನ್ನ ಸೇವಿಸಿದೊಡನೆಯೇ, ನಿಮ್ಮ ಕಣ್ಣುಗಳು ನಿದ್ದೆಯತ್ತ ಎಳೆಯಲು ಶುರುವಿಡುತ್ತದೆ ಅಲ್ಲವೇ? ಇದರಿಂದ ಹೊರಬರಲು ನೀವು ಕಷ್ಟಪಡುತ್ತೀರಾ? ನೀವು ಸೋಮಾರಿತನ ಮತ್ತು ಆಲಸ್ಯ ಅನುಭವಿಸುತ್ತಿರುವಿರಾ?


  ಇದಕ್ಕಾಗಿ ಸೆಲೆಬ್ರಿಟಿ ಪೌಷ್ಟಿಕತಜ್ಞೆ ಪೂಜಾ ಮಖಿಜಾ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಅಕ್ಕಿ ಹೇಗೆ ಅರೆನಿದ್ರಾವಸ್ಥೆಯನ್ನು ಉಂಟುಮಾಡುತ್ತದೆ ಮತ್ತು ಅನಗತ್ಯ ನಿದ್ರೆ, ದಣಿದ ಮತ್ತು ಜಡ ಭಾವನೆಯನ್ನು ತಪ್ಪಿಸಲು ಪರಿಹಾರವೇನು ಎಂದು ಹಂಚಿಕೊಂಡಿದ್ದಾರೆ.


  ಅಕ್ಕಿ ಮತ್ತು ನಿದ್ರೆಯ ನಡುವಿನ ಸಂಬಂಧ
  ಜಾಗತಿಕವಾಗಿ, ಬಹಳಷ್ಟು ಜನರು ತಮ್ಮ ಮುಖ್ಯ ಆಹಾರದ ಭಾಗವಾಗಿ ಅನ್ನವನ್ನು ಸೇವಿಸುತ್ತಾರೆ. ಅಕ್ಕಿಯ ವೈವಿಧ್ಯತೆ ಅಥವಾ ಗುಣಮಟ್ಟವು ನಿದ್ರೆಗೆ ಕಾರಣವಾಗಿತ್ತದೆ ಎಂದು ಪ್ರತಿಯೊಬ್ಬರೂ ಆಶ್ಚರ್ಯಪಡುತ್ತಾರೆ. ಪೂಜಾ ಮಖಿಜಾ ಹೇಳುವಂತೆ ಅನ್ನವು ಆರಾಮದಾಯಕ ಆಹಾರವಾಗಿದೆ ಮತ್ತು ಕಾರ್ಬೋಹೈಡ್ರೇಟ್‍ಗಳು ಅಧಿಕವಾಗಿರುವುದರಿಂದ ಆರೋಗ್ಯಕರ ಆಹಾರದಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.


  ಪೂಜಾ ವಿವರಿಸುವುದು ಹೀಗೆ
  "ಕಾರ್ಬೋಹೈಡ್ರೇಟ್‍ಗಳು ಗ್ಲೂಕೋಸ್‍ಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ಕಾರ್ಬೋಹೈಡ್ರೇಟ್‍ಗಳಿಗೆ ಇನ್ಸುಲಿನ್ ಅಗತ್ಯವಿರುತ್ತದೆ. ಇನ್ಸುಲಿನ್ ಹೆಚ್ಚಾದಾಗ, ಮೆದುಳಿಗೆ ಟ್ರಿಪ್ಟೊಫಾನ್ ನ ಅಗತ್ಯ ಕೊಬ್ಬಿನಾಮ್ಲಗಳು ಪ್ರವೇಶಿಸಲು ಪ್ರೇರೇಪಿಸುತ್ತದೆ. ಆ ಪ್ರಕ್ರಿಯೆಯು ಮೆಲಟೋನಿನ್ ಮತ್ತು ಸಿರೊಟೋನಿನ್ ಅನ್ನು ಹೆಚ್ಚಿಸುತ್ತದೆ, ಇದು ನಿದ್ರೆಗೆ ಕಾರಣವಾಗುವ ಶಾಂತಗೊಳಿಸುವ ಹಾರ್ಮೋನುಗಳು ಎಂದು ಅವರು ಹೇಳುತ್ತಾರೆ. ಇದು ತುಂಬಾ ಸಾಮಾನ್ಯವಾದ ನರ ಪ್ರತಿಕ್ರಿಯೆಯೆಂದು ಪೂಜಾ ಉಲ್ಲೇಖಿಸಿದ್ದಾರೆ. ಇದರಿಂದ ದೇಹವು ಏನು ಮಾಡುತ್ತಿದೆಯೋ ಅದನ್ನು ನಿಧಾನಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಯ ಮೇಲೆ ಕೇಂದ್ರೀಕರಿಸುತ್ತದೆ.


  ಊಟಕ್ಕೆ ಅನ್ನವನ್ನು ಸೇವಿಸುವುದು ಖಂಡಿತವಾಗಿಯೂ ಕೆಟ್ಟ ಆಲೋಚನೆ ಎಂದು ನೀವು ಯೋಚಿಸುತ್ತಿರಬೇಕು. ಆದರೆ ಅದನ್ನು ನಿರ್ವಹಿಸಲು ಒಂದು ಮಾರ್ಗವಿದೆ, ಮತ್ತು ನೀವು ಇದರಿಂದ ದೂರ ಇರುವ ಅಗತ್ಯವಿಲ್ಲ. ಅಕ್ಕಿಯಿಂದ ಉಂಟಾಗುವ ಅರೆನಿದ್ರಾವಸ್ಥೆಯನ್ನು ತಡೆಯಲು ಪೂಜಾ ಕೆಲವೊಂದು ಸಲಹೆಗಳನ್ನು ನೀಡುತ್ತಾರೆ.


  1. ಊಟದ ಪ್ರಮಾಣದ ಸಣ್ಣದಾಗಿರಲಿ
  ಅನ್ನ ತಿನ್ನುವುದರಲ್ಲಿರುವ ಮೂಲ ಸಮಸ್ಯೆ ಚಪಾತಿಗಳಿಗೆ ಹೋಲಿಸಿದರೆ ಅನ್ನವನ್ನು ಹೆಚ್ಚು ತಿನ್ನುತ್ತಾರೆ. ಪೂಜಾ ಪ್ರಕಾರ ಅನ್ನದ ಪ್ರಮಾಣವನ್ನು ನಿಯಂತ್ರಿಸುವುದು ಮೊದಲ ಪರಿಹಾರವಾಗಿದೆ. ಊಟದ ಪ್ರಮಾಣವು ತುಂಬಾ ದೊಡ್ಡದಾಗಿರಬಾರದು. ಅನ್ನದ ಸೇವನೆಯನ್ನು ಕಡಿಮೆ ಮಾಡುವುದು ಆಯಾಸಕ್ಕೆ ಕಾರಣವಾಗುವ ಹಾರ್ಮೋನುಗಳು ರಕ್ತಪ್ರವಾಹದಲ್ಲಿ ಬಿಡುಗಡೆಯಾಗದಂತೆ ತಡೆಯುತ್ತದೆ.


  ಇದನ್ನೂ ಓದಿ: SSLC: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ದಿನಾಂಕ ಪ್ರಕಟ ಸೆ. 27 , 29 ರಂದು ನಡೆಯಲಿದೆ ಎಕ್ಸಾಮ್​​

  2. ಕಡಿಮೆ ಕಾರ್ಬ್‍ಗಳನ್ನು ಸೇವಿಸಿ
  ನಿಮ್ಮ ಊಟದಲ್ಲಿ ನೀವು ಎಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್‍ಗಳನ್ನು ತಿನ್ನುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪೂಜಾ ಸಲಹೆ ನೀಡುತ್ತಾ, "ನಿಮ್ಮ ಮಧ್ಯಾಹ್ನದ ಊಟದಲ್ಲಿ 50% ತರಕಾರಿಗಳು, 25% ಪ್ರೋಟೀನ್ ಮತ್ತು 25% ಕಾರ್ಬೋಹೈಡ್ರೇಟ್‍ಗಳು ಇರಬೇಕು." ಪ್ರೋಟೀನ್‌ಗಳು ಕಡಿಮೆ ಇರಲಿ ಎಂದು ಹೇಳುತ್ತಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: