• Home
  • »
  • News
  • »
  • trend
  • »
  • Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ

Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಿಜ್ಞಾನಿಯು ತಮ್ಮ ಪ್ರಯೋಗವನ್ನು ವಿವರಿಸುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಈ ಯೋಜನೆಯನ್ನು ಅವರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.  ಆರಂಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡದಿಂದ ಮೊಟ್ಟೆಯನ್ನು ಬೀಳಿಸಬೇಕು ಎಂದು ಯೋಚಿಸಿದ್ದರು.

  • Share this:

    ನೀವು ಮೊಟ್ಟೆ(Egg) ಪ್ರಿಯರಾಗಿದ್ದರೆ, ಮೊಟ್ಟೆಯನ್ನು ಹೇಗೆಲ್ಲ ಬಳಕೆ ಮಾಡಬಹುದು ಅಂತ ತಿಳಿದುಕೊಂಡೇ ಇರ್ತೀರಿ. ಆದರೆ ಮೊಟ್ಟೆಯನ್ನು ಮೇಲಿಂದ ಕೆಳಗೆ ಎಂದಾದರೂ ಬಿಟ್ಟು ನೋಡಿದ್ದೀರಾ? ಏನಾಗುತ್ತೆ ಹೇಳಿ..ಮೊಟ್ಟೆ ಒಡೆದು ಹೋಗುತ್ತೆ. ಹೌದು ತಾನೇ..! ಆದರೆ ವಿಜ್ಞಾನಿಯೊಬ್ಬರು(Scientist) ಬಾಹ್ಯಾಕಾಶದಿಂದ ಮೊಟ್ಟೆಗಳನ್ನು(Eggs) ಬಿಟ್ಟರೂ ಅವು ಒಡೆಯುವುದಿಲ್ಲ. ಈ ವಿಷಯ ಕೇಳಿದ್ರೇನೆ ವಾಹ್‌ ಅನಿಸುತ್ತೆ ಅಲ್ವಾ. ಈ ಪ್ರಯೋಗವನ್ನು ಹೇಗೆಲ್ಲ ಮಾಡಿದ್ರು ಅಂತ ಈ ಲೇಖನದಲ್ಲಿ ತಿಳಿಯೋಣ. ಈ ವಿಡಿಯೋ ಈಗ ಎಲ್ಲ ಕಡೆ ಸಖತ್‌ ವೈರಲ್‌ ಆಗ್ತಿದೆ. ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ಮುಂದೆ ಓದಿ.


    ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಮೊಟ್ಟೆಗಳನ್ನು ಬಿಟ್ಟರೂ ಸಹ ಅವು ಒಡೆಯದೇ ಭೂಮಿಗೆ ಬಂದು ಬೀಳುತ್ತಿರುವ ವಿಡಿಯೋ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಅದೇನು ಅಂತ ನೋಡೋಣ ಬನ್ನಿ.


    ಮಾಜಿ ನಾಸಾ ವಿಜ್ಞಾನಿ ಮತ್ತು ಯೂಟ್ಯೂಬರ್‌ ಮಾರ್ಕ್‌ ರಾಬರ್‌ನ ಹೊಸ ಪ್ರಯೋಗ


    ಮಾಜಿ ನಾಸಾ ವಿಜ್ಞಾನಿ ಮತ್ತು ಯೂಟ್ಯೂಬರ್ ಮಾರ್ಕ್ ರಾಬರ್ ಆಗಾಗ ಹೊಸ ಹೊಸ ವಿಜ್ಞಾನದ ಪ್ರಯೋಗದ ವಿಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇವರ ವಿಡಿಯೋಗಳು ಜನರನ್ನು ಬೆರಗುಗೊಳಿಸುತ್ತವೆ. ಇವರ ಯೂಟ್ಯೂಬ್‌ ಚಾನೆಲ್‌ನಲ್ಲಿ ನಂಬಲಾಗದ ವಿಡಿಯೋಗಳು ಇವೆ. ಇವರ ಯೂಟ್ಯೂಬ್‌ ಚಾನೆಲ್‌ ವಿಭಿನ್ನ ವಿಷಯಗಳನ್ನು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಬಾಹ್ಯಾಕಾಶದಿಂದ ಮೊಟ್ಟೆಗಳನ್ನು ಬಿಡುವುದನ್ನು ತೋರಿಸುವ ಕ್ಲಿಪ್‌ ಈಗ ಎಲ್ಲ ಕಡೆ ವೈರಲ್‌ ಆಗ್ತಿದೆ.


    ವಿಡಿಯೋದಲ್ಲಿ ಏನಿದೆ?


    ವಿಜ್ಞಾನಿಯು ತಮ್ಮ ಪ್ರಯೋಗವನ್ನು ವಿವರಿಸುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ಈ ಯೋಜನೆಯನ್ನು ಅವರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು.  ಆರಂಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡದಿಂದ ಮೊಟ್ಟೆಯನ್ನು ಬೀಳಿಸಬೇಕು ಎಂದು ಯೋಚಿಸಿದ್ದರು ಎಂದು ಅವರೇ ವಿಡಿಯೋದಲ್ಲಿ ಹೇಳಿದ್ದಾರೆ.


    ಬಳಿಕ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಿ, ಮೊಟ್ಟೆಯನ್ನು ಬಾಹ್ಯಾಕಾಶದಿಂದ ಬೀಳಿಸಬೇಕು ಎಂದು ನಿರ್ಧರಿಸಿದರು. ಈ ವಿಡಿಯೊದಲ್ಲಿ, ಅವರು ಈ ಸಾಧನೆಯನ್ನು ಹೇಗೆಲ್ಲ ಸಾಧಿಸಬಹುದು ಎಂದು ಅಂದಾಜಿಸಿದ ಮಾರ್ಗಗಳನ್ನು ವಿವರಿಸಿದ್ದಾರೆ.


    ಈ ವೇಳೆ ಅವರು “ಈ ಪ್ರಯೋಗವು ನಾನು ಇದುವರೆಗೆ ಪ್ರಯತ್ನಿಸಿದ ಅತ್ಯಂತ ದೈಹಿಕ, ಆರ್ಥಿಕ ಮತ್ತು ಮಾನಸಿಕವಾಗಿ ಎಲ್ಲವನ್ನು ಖಾಲಿ ಮಾಡುವ ಪ್ರಯೋಗವಾಗಿದೆ” ಎಂದು ಉಲ್ಲೇಖಿಸಿ ವಿವರಿಸುತ್ತಾರೆ.


    ವಿಡಿಯೋ ಮುಂದುವರೆದಂತೆ, ಅಂತಿಮ ಭಾಗಕ್ಕೆ ಹೋಗುವ ಮೊದಲು ಅವರು ಅನೇಕ ಪ್ರಯೋಗಗಳನ್ನು ನಡೆಸುತ್ತಿರುವುದು ಕಂಡುಬರುತ್ತದೆ. ಅದರ ಜೊತೆಗೆ, ಆರಂಭದಲ್ಲಿ, ಅವೆಲ್ಲ ಪ್ರಯೋಗಗಳು ವಿಫಲಗೊಳ್ಳುತ್ತವೆ. ಅಂದರೆ ಮೊಟ್ಟೆಗಳು ಒಡೆಯುತ್ತಲೇ ಇರುತ್ತವೆ. ಮತ್ತೆ ಮತ್ತೆ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ತಮ್ಮ ಪ್ರಯೋಗದ ವಿಧಾನವನ್ನು ರಾಬರ್ಟ್‌ ಬದಲಾಯಿಸಲು ನಿರ್ಧರಿಸುತ್ತಾರೆ.


    ಆ ಹೊಸ ಪ್ರಯೋಗದಲ್ಲಿ ರಾಬರ್ಟ್‌ ಯಶಸ್ವಿಯಾಗ್ತಾರಾ ಅಥವಾ ವಿಫಲವಾಗ್ತಾರಾ? ಬಾಹ್ಯಾಕಾಶದಿಂದ ಬೀಳಿಸುವ ಮೊಟ್ಟೆ ನಿಜವಾಗಲೂ ಒಡೆಯುವುದಿಲ್ಲವೇ? ಎಂಬುದನ್ನು ನೋಡಲು ನೀವು ಈ ವಿಡಿಯೋವನ್ನು ವೀಕ್ಷಿಸಿ.




    ಎರಡು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿತ್ತು. ಪೋಸ್ಟ್ ಮಾಡಿದ ನಂತರ, ಈ ವಿಡಿಯೋ ವೈರಲ್ ಆಗಿದೆ ಮತ್ತು 14 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಕ್ಲಿಪ್ ಸೋಷಿಯಲ್‌ ಮೀಡಿಯಾ ಬಳಕೆದಾರರಿಂದ ಅನೇಕ ಕಮೆಂಟ್‌ಗಳನ್ನು ಸಹ ಪಡೆದಿದೆ.


    ಬಳಕೆದಾರರ ಕಮೆಂಟ್‌ಗಳು


    "ನೀವು ನಿಖರವಾದ ಮಾರ್ಗದರ್ಶಿ ಕ್ಷಿಪಣಿಯ ಪ್ರಯೋಗವನ್ನು ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ನೀವು ತಿಳಿದುಕೊಳ್ಳುವ ಭಾಗವನ್ನು ನಾವು ಹೆಚ್ಚು ಇಷ್ಟಪಡುತ್ತೇವೆ. ಇದು ನಿಜಕ್ಕೂ ಉತ್ತಮವಾಗಿದೆ” ಎಂದು YouTube ಬಳಕೆದಾರರು ಪೋಸ್ಟ್ ಮಾಡಿದ್ದಾರೆ.


    "ಮಾರ್ಕ್ ತನ್ನ ಸ್ವಂತ ಬಾಹ್ಯಾಕಾಶ ಕಾರ್ಯಕ್ರಮವನ್ನು ತಾಂತ್ರಿಕವಾಗಿ ಹೇಗೆ ಪ್ರವರ್ತಿಸಿದನು ಎಂಬುದು ಹುಚ್ಚುತನವಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡುವ ಮೂಲಕ ಕಮೆಂಟ್‌ ಮಾಡಿದ್ದಾರೆ.


    “ನಮ್ಮನ್ನು ರಂಜಿಸಲು ನೀವು ಅದೆಷ್ಟು ಕಷ್ಟ ಪಟ್ಟಿದೀರಿ. ಅದಕ್ಕೆ ನಿಜಕ್ಕೂ ಧನ್ಯವಾದಗಳು! ನಾವು YouTube ನಲ್ಲಿ ಸುರಕ್ಷಿತರಾಗಿದ್ದೇವೆ!” ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್‌ ಮಾಡಿದ್ದಾರೆ. 

    Published by:Latha CG
    First published: