ಡ್ರೋನ್ ಹಾರಾಟದಿಂದ ಭಯಗೊಂಡ ಹಕ್ಕಿಗಳು: ಸಮುದ್ರ ತೀರಲ್ಲಿ 3,000 ಮೊಟ್ಟೆಗಳು ಅನಾಥ

ದಾಳಿಗೊಳಪಡುವ ಭೀತಿಯಲ್ಲಿ ಸಾವಿರಾರು ಪಕ್ಷಿಗಳು ನೆಲದ ಮೇಲಿನ ತಮ್ಮ ಗೂಡುಗಳಲ್ಲಿರುವ ಮೊಟ್ಟೆಗಳನ್ನು ಹಾಗೆಯೇ ಬಿಟ್ಟು ಹಾರಿ ಹೋಗಿವೆ.

ಅನಾಥ ಮೊಟ್ಟೆಗಳು

ಅನಾಥ ಮೊಟ್ಟೆಗಳು

 • Share this:
  ದಕ್ಷಿಣ ಕ್ಯಾಲಿಫೋರ್ನಿಯಾದ ಹಂಟಿಂಗ್ಟನ್ ಬೀಚ್ನಲ್ಲಿ ಡ್ರೋನ್‍ಗಳು ಅಪ್ಪಳಿಸಿದ್ದರಿಂದ ಹಕ್ಕಿಗಳು ಹೆದರಿ ಓಡಿಹೋಗಿದ್ದು ಎಲಿಗೆಂಟ್ ಟರ್ನ್ ಎಂಬ ಹಕ್ಕಿಗಳ ಸುಮಾರು 3,000ಕ್ಕೂ ಮೊಟ್ಟೆಗಳು ಅನಾಥವಾಗಿವೆ. ಹಂಟಿಗ್ಟನ್ ಬೀಚ್‍ನಲ್ಲಿರುವ ಬೋಸ್ಲಾ ಚಿಕಾ ಇಕಲಾಜಿಕಲ್ ರಿಸರ್ವ್‍ನಲ್ಲಿ ಎರಡು ಡ್ರೋನ್‍ಗಳನ್ನು ಕಾನೂನುಬಾಹಿರವಾಗಿ ಹಾರಿಸಲಾಗಿದ್ದು,ಅವುಗಳಲ್ಲಿ ಒಂದು ಅಲ್ಲಿನ ಜೌಗು ನೆಲದ ಮೇಲೆ ಬಿದ್ದಿತ್ತು ಎಂದು ಆರೆಂಜ್ ಕಂಟ್ರಿ ರಿಜಿಸ್ಟರ್ ತಿಳಿಸಿದೆ.

  ದಾಳಿಗೊಳಪಡುವ ಭೀತಿಯಲ್ಲಿ ಸಾವಿರಾರು ಪಕ್ಷಿಗಳು ನೆಲದ ಮೇಲಿನ ತಮ್ಮ ಗೂಡುಗಳಲ್ಲಿರುವ ಮೊಟ್ಟೆಗಳನ್ನು ಹಾಗೆಯೇ ಬಿಟ್ಟು ಹಾರಿ ಹೋಗಿವೆ ಎಂದು ರಾಜ್ಯದ ಮೀನು ಮತ್ತು ವನ್ಯಜೀವಿ ವಿಭಾಗ ತಿಳಿಸಿದೆ.ಎಲಿಗೆಂಟ್ ಟರ್ನ್ ಎಂಬ ಬಿಳಿ ಹಕ್ಕಿಗಳು ಮೊಟ್ಟೆಗೆ ಕಾವು ಕೊಡುವ ಈ ತಿಂಗಳಲ್ಲಿ ಕಡಲತಡಿ ಮೊಟ್ಟೆ ಕವಚಗಳ ಕಸದಿಂದ ತುಂಬಿ ಹೋಗಿದೆ. ರಿಸರ್ವ್‍ನ ಮ್ಯಾನೇಜರ್ ಮೆಲಿಸ್ಸಾ ಲೋಯೆಬ್ಲ್ ಹೇಳುವ ಪ್ರಕಾರ, ಸ್ಯಾನ್ ಡಿಯೆಗೋದ ಉತ್ತರಕ್ಕೆ ಸುಮಾರು 100 ಮೈಲಿ ಕರಾವಳಿ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳನ್ನು ತ್ಯಜಿಸಲಾಗಿದೆ.

  ಇದನ್ನೂ ಓದಿ: Parking Place: ಮನೆ, ಕಾರಿಗಿಂತ ಪಾರ್ಕಿಂಗ್ ಸ್ಥಳವೇ ದುಬಾರಿ; ದಾಖಲೆಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರ!

  ಸಾಂಕ್ರಾಮಿಕ ರೋಗದ ಹಾವಳಿ ಹೆಚ್ಚಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಹೊರ ವಲಯದ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಕಳೆದ ವರ್ಷ 100,000 ಪ್ರವಾಸಿಗರು ಬೋಸ್ಲಾ ಚಿಕಾ ರಿಸರ್ವ್‍ಗೆ ಭೇಟಿ ನೀಡಿದ್ದರು. ಅದಕ್ಕಿಂತಲೂ ಹಿಂದಿನ ವರ್ಷ ಆ ಸಂಖ್ಯೆ 60,000 ಇತ್ತು ಎಂದು ಲಿಯೋಬ್ಲ್ ಪತ್ರಿಕೆಗೆ ತಿಳಿಸಿದ್ದಾರೆ.ಇದು ರಿಸರ್ವ್‍ನಲ್ಲಿ ಡ್ರೋನ್‍ಗಳ ಹಾರಾಟ ಜೊತೆಗೆ ನಾಯಿಗಳು ಮತ್ತು ದ್ವಿಚಕ್ರವಾಹನಗಳ ಸಂಖ್ಯೆ ಹೆಚ್ಚಲು ಕಾರಣವಾಯಿತು.
  ಮೀಸಲು ಜೌಗು ಪ್ರದೇಶವನ್ನು ಕಡೆಗಣಿಸಿ, ಉತ್ತರ ತುದಿಯಲ್ಲಿರುವ ಬೆಟ್ಟ ಪ್ರದೇಶಗಳಲ್ಲಿ ಬಹು ಮಿಲಿಯನ್ ಡಾಲರ್ ಮೊತ್ತದ ಮನೆಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಕೂಡ ಸಮಸ್ಯೆ ಆಗಿದೆ ಎಂದು ಮೀನು ಮತ್ತು ವನ್ಯಜೀವಿ ವಿಭಾಗದ ಮೇಲ್ವಿಚಾರಕ ನಿಕ್ ಮೋಲ್ಸ್‌ಬೆರಿ ಹೇಳಿದ್ದಾರೆ.

  ಅಲ್ಲಿನ ನಿವಾಸಿಗಳ ತಮಗಿಷ್ಟ ಬಂದಂತೆ ಆ ಭೂಮಿಯನ್ನು ಬಳಸಿಕೊಳ್ಳಬಹುದು ಎಂದು ಭಾವಿಸಿದ್ದಾರೆ ಎಂದಿರುವ ಮೋಲ್ಸ್‌ಬೆರಿ, ಅಧಿಕಾರಿಗಳು ನಿಯಮಗಳನ್ನ ಜಾರಿಗೊಳಿಸಿದ್ದಾರೆ ಮತ್ತು ಅದನ್ನು ಉಲ್ಲಂಘಿಸಿದವರನ್ನು ಗುರುತಿಸುತ್ತಿದ್ದಾರೆ.
  ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣದಲ್ಲಿರುವ ಮೋಂಟೆರೆ ಕೊಲ್ಲಿ ಮತ್ತು ಮೆಕ್ಸಿಕೋದ ಟಿಜುವಾನ ನದಿ ಮುಖದ ನಡುವಿನ ಅತ್ಯಂತ ದೊಡ್ಡ ಉಪ್ಪುನೀರಿನ ಜೌಗು ಪ್ರದೇಶ ಇದಾಗಿದ್ದು, ಸುಮಾರು 1,500 ಎಕರೆ ವಿಸ್ತಾರವನ್ನು ಹೊಂದಿದೆ. ಸುಮಾರು 800 ಪ್ರಭೇದದ ಗಿಡಗಳು ಮತ್ತು ಪ್ರಾಣಿಗಳು ಇಲ್ಲಿ ವಾಸಿಸುತ್ತದೆ ಅಥವಾ ವಲಸೆ ಬರುತ್ತವೆ.
  First published: