Viral Photo: ರಿವರ್ಸ್ ಹೊಡೆಯಲು ಹೋಗಿ ಆಕ್ಸಿಲರೇಟರ್ ಒತ್ತಿದ.. 24 ಲಕ್ಷದ ಕಾರು ಡಸ್ಟ್​ಬಿನ್ ಸೇರಿತು!

Viral Story: ಕೆಲವು ಕಾರು ಮಾಲೀಕರಿಗಂತೂ ಇಂತಹ ಆ್ಯಕ್ಸಿಡೆಂಟ್ ಗಳಲ್ಲಿ ತಮಗೆ ಆದ ನೋವಿಗಿಂತ ತಮ್ಮ ಕಾರಿಗೆ ಆದ ಡೆಂಟ್ ಹೆಚ್ಚು ನೋವು ಕೊಡುತ್ತದೆ. ಕಾರು ದುಬಾರಿಯಾಗಿದ್ದರೆ ಈ ನೋವು ಇನ್ನೂ ಗಾಢವಾಗಿರುತ್ತದೆ.

ಮರ್ಸಿಡಿಸ್ ಎ-ಕ್ಲಾಸ್

ಮರ್ಸಿಡಿಸ್ ಎ-ಕ್ಲಾಸ್

 • Share this:
  ಕಾರಿನ ಚಾಲಕ (Car Driver)  ಆಕಸ್ಮಿಕವಾಗಿ ಅದರ ವೇಗವನ್ನು ಹೆಚ್ಚಿಸಿ, ತನ್ನ ಹೊಚ್ಚ ಹೊಸ 24 ಲಕ್ಷ ರೂ.ಗಳ ಸ್ವಯಂಚಾಲಿತ ಕಾರನ್ನು (Automatic Car) ಡಸ್ಟ್ ಬಿನ್‌ಗೆ (Dustbin) ಡಿಕ್ಕಿ ಹೊಡೆಸಿರುವ ಸುದ್ದಿ ಇದು. ಹೊಸ ಕಾರುಗಳ ಡೆಲಿವರಿ ಕೊಳ್ಳುವಾಗ ಇಂತಹ ಅವಘಡಗಳು ಆಗೋದು ಸಾಮಾನ್ಯ. ಇದೇನೂ ಹೊಸ ಸಂಗತಿ ಅಲ್ಲ. ಆದರೆ ಈ ವಿಷಯದಲ್ಲಿ ಆತನ ಹೊಸ ಮರ್ಸಿಡಿಸ್ ಎ-ಕ್ಲಾಸ್ (Mercedes A-Class) £ 25,000 (ರೂ. 24 ಲಕ್ಷ) ಮೌಲ್ಯದ್ದಾಗಿದೆ ಎಂದು ಪೊಲೀಸರು ಹೇಳಿರುವುದು ಪ್ರಕರಣದ ಹೈಲೈಟ್. ಇದರ ಜೊತೆಗೆ ಡ್ರೈವರ್ ರಿವರ್ಸ್ (Reverse) ಮಾಡುವ ಬದಲು ಆಕ್ಸಿಲರೇಟರ್ ಮೇಲೆ ಕಾಲು ಇಟ್ಟಿರುವ ಈ ಚಾಲಕನನ್ನು ನೆಟ್ಟಿಗರು ಎಂದಿನಂತೆ ಗೇಲಿ ಮಾಡಿದ್ದಾರೆ.

  ಮುಂಭಾಗದ ಸೀಟಿನಲ್ಲಿ ಸಹಾಯ ಮಾಡಲು ಯಾರೂ ಇಲ್ಲದಿದ್ದಾಗ, ಚಾಲಕ ಬ್ರೇಕ್ ಪೆಡಲ್ ಬದಲಿಗೆ ಆಕ್ಸಿಲರೇಟರ್ ಪೆಡಲ್ ಒತ್ತೋದು ನಮ್ಮ ದೇಶದ ಚಾಲಕರು ಮಾಡುವ ಸಾಮಾನ್ಯದ ತಪ್ಪು. ಈಗೀಗ ಡ್ರೈವಿಂಗ್ ಕಲಿಯುತ್ತಿರುವವರು ಇಂತಹ ತಪ್ಪು ಮಾಡೋದು ಕಾಮನ್. ಆದರೆ ಇದು ತೀರಾ ಅಪಾಯಕಾರಿ ಕೂಡಾ. ಚಾಲಕನ ಜೀವಕ್ಕೂ ಅಪಾಯಕಾರಿ. ಹಾಗೂ ಇದು ಕಾರನ್ನೂ ಹಾನಿಗೊಳಿಸಬಹುದು.

  ಕೆಲವು ಕಾರು ಮಾಲೀಕರಿಗಂತೂ ಇಂತಹ ಆ್ಯಕ್ಸಿಡೆಂಟ್ ಗಳಲ್ಲಿ ತಮಗೆ ಆದ ನೋವಿಗಿಂತ ತಮ್ಮ ಕಾರಿಗೆ ಆದ ಡೆಂಟ್ ಹೆಚ್ಚು ನೋವು ಕೊಡುತ್ತದೆ. ಕಾರು ದುಬಾರಿಯಾಗಿದ್ದರೆ ಈ ನೋವು ಇನ್ನೂ ಗಾಢವಾಗಿರುತ್ತದೆ.

  ಈ ಮರ್ಸಿಡಿಸ್ ಕಾರಿನ ಮಾಲೀಕ ಕೂಡಾ ಆಕಸ್ಮಿಕವಾಗಿ ರಿವರ್ಸ್ ಬದಲು ಆಕ್ಸಿಲರೇಟರ್ ಪೆಡಲ್ ತುಳಿದ ಪರಿಣಾಮ ಆತನ ಕಾರು ಅಲ್ಲಿಯೇ ಇದ್ದ ದೊಡ್ಡ ಡಸ್ಟ್ ಬಿನ್‌ನ ಹಾದಿ ತುಳಿದಿದೆ. ಈ ತಪ್ಪಿನಿಂದಾಗಿ, £25,000 (Rs 24 ಲಕ್ಷ) ಮೌಲ್ಯದ ಹೊಚ್ಚಹೊಸ A-ಕ್ಲಾಸ್ ಸ್ವಯಂಚಾಲಿತ ಕಾರು ಡಸ್ಟ್ ಬಿನ್ ಅನ್ನು ಹತ್ತಿ ಕುಳಿತಿದೆ. ಅದನ್ನು ಸ್ಥಳಾಂತರಿಸುವ ಮೊದಲು ಆ ಕಾರಿನ ಚಿತ್ರಗಳನ್ನು ತೆಗೆಯಲಾಗಿದ್ದು ಅವು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

  ಇದನ್ನು ಓದಿ: Viral Photo: ಕೇಕ್ ತಿನ್ನೋ ಬದ್ಲು ಇವಳನ್ನು ನೋಡೋದು ಹೆಚ್ಚು ಟೇಸ್ಟಿ ಅಂತೆ!

  ಕಾರಿನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಅನೇಕ ನೆಟ್ಟಿಗರು ಚಾಲಕನ ದುಬಾರಿ ತಪ್ಪಿಗೆ ಅಪಹಾಸ್ಯ ಮಾಡಿದ್ದಾರೆ. ಡೇರ್ಸ್‌ಬರಿ ಮತ್ತು ವಿಂಡ್‌ಮಿಲ್ ಪೋಲೀಸ್ ಪ್ರಕಾರ, ಸ್ವಯಂಚಾಲಿತ ಕಾರನ್ನು ಚಾಲಕ ಇತ್ತೀಚೆಗೆ ಖರೀದಿಸಿದ್ದಾನೆ. ಪೊಲೀಸ್ ಇಲಾಖೆಯು ವಾಹನದ ಎರಡು ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ ಮತ್ತು ಚಾಲಕನು ಆಕ್ಸಿಲರೇಟರ್ ಅನ್ನು ರಿವರ್ಸ್ ಪೆಡಲ್ ಎಂದು ತಪ್ಪಾಗಿ ಭಾವಿಸಿದ್ದಾನೆ ಎಂದು ವಿವರಿಸಿದೆ.

  ಅಂದಹಾಗೆ, ಈ ಪೋಸ್ಟ್‌ನಲ್ಲಿರುವ ಫೋಟೋಗಳನ್ನು ನೋಡಿ, ನೆಟ್ಟಿಗರು ಸಹಜ ಎಂಬಂತೆ ಘಟನೆಯ ಬಗ್ಗೆ ಹಾಸ್ಯ ಮಾಡಲು ಪ್ರಾರಂಭಿಸಿದ್ದಾರೆ. ಒಬ್ಬ ನೆಟ್ಟಿಗ ಅಂತೂ, ಡಸ್ಟ್ ಬಿನ್‌ಗೆ ಹೊಡೆದಿರುವ ಚಾಲಕನ ವಿಷಯದಲ್ಲಿ Did you ask the driver where they had bin? ಎಂದು ಕೇಳುವ ಮೂಲಕ ತನ್ನ ಕ್ರಿಯೇಟಿವಿಟಿ ಮೆರಿದಿದ್ದಾನೆ. ಇನ್ನೊಬ್ಬರು "His parking is rubbish ಎಂದು ಬರೆದಿದ್ದಾರೆ.  ಇದನ್ನು ಓದಿ: Twitter​ ನೂತನ ಸಿಇಒ ಪರಾಗ್​ ಅಗ್ರವಾಲ್ ಅವರ ವಾರ್ಷಿಕ​ ಸಂಬಳ ಎಷ್ಟು? ಇಲ್ಲಿದೆ ಮಾಹಿತಿ

  ಇನ್ನೊಂದು ಘಟನೆಯಲ್ಲಿ, ಇಂಡಿಯಾನಾದ ಇಂಡಿಯಾನಾ ಪೊಲಿಸ್‌ನಲ್ಲಿ SUV ಒಂದು ಮತ್ತೊಂದು SUVಗೆ ಡಿಕ್ಕಿ ಹೊಡೆದ ನಂತರ ಜಾಗ್ವಾರ್‌ನ ಕಾರಿನ ಛಾವಣಿಯ ಮೇಲೆ ಹತ್ತಿ ಕೂತಿದೆ. ಕನಿಷ್ಠ ಮೂರು ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (SUV) ಗಳನ್ನು ಒಳಗೊಂಡ ಈ ವಿಲಕ್ಷಣ ಅಪಘಾತ ತೋರಿಸುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆ ಅಕ್ಟೋಬರ್ 17ರಂದು ನಡೆದಿದ್ದು, ಅಪಘಾತದಲ್ಲಿ ಒಟ್ಟು ಆರು ವಾಹನಗಳು ಜಖಂಗೊಂಡಿವೆ. ಯೂಟ್ಯೂಬ್‌ನಲ್ಲಿನ ಹೇಳುವಂತೆ ಪ್ರಕಾರ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
  Published by:Harshith AS
  First published: