Viral Video: ಟ್ರಕ್‌ ನಿಲ್ಲಿಸಿ ಅಜ್ಜಿಗೆ ರಸ್ತೆ ದಾಟಲು ಸಹಾಯ ಮಾಡಿದ ಚಾಲಕ, ವೈರಲ್‌ ವಿಡಿಯೋ ನೋಡಿ

ಒಬ್ಬ ವ್ಯಕ್ತಿ ವಯಸ್ಸಾದ ಮಹಿಳೆಗೆ ಬ್ಯುಸಿಯಾಗಿರುವ ರಸ್ತೆಯನ್ನು ದಾಟಲು ಸಹಾಯ ಮಾಡುವುದನ್ನು ತೋರಿಸುವ ಮೂಲಕ ಈ ಚಿಕ್ಕ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ಚಿಕ್ಕದಾಗಿದ್ದರೂ, ಈ ವೀಡಿಯೊವನ್ನು ನೀವು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
ಹಲವು ಚಲನಚಿತ್ರಗಳನ್ನು (Movies) ನೋಡಿ ನಾವೂ ಹೀರೋ ಆದ್ರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ ಎಂದು ಹಲವರಿಗೆ ಅನಿಸುವುದು ಸಹಜ. ಆದರೆ, ನೀವು ಹೀರೋ ಅಥವಾ ಹೀರೋಯಿನ್‌ ಆಗಲು ಚಿತ್ರರಂಗಕ್ಕೆ ಹೋಗಬೇಕಿಲ್ಲ. ಅಥವಾ ತೀರಾ ದೊಡ್ಡ ಸಮಾಜಸೇವೆಯನ್ನೂ ಮಾಡಬೇಕೆಂದೇನಿಲ್ಲ. ದುರ್ಬಲರಾದವರಿಗೆ, ಆರೋಗ್ಯ ಸರಿ ಇಲ್ಲದವರಿಗೆ, ವಯಸ್ಸಾದವರನ್ನು ಚೆನ್ನಾಗಿ ನೋಡಿಕೊಂಡರೆ ಸಾಕು. ಹೌದು, ‘’ಕೇರ್‌ ಮಾಡುವ ಸರಳ ಕ್ರಿಯೆಯು ಸಹ ಹೀರೋಯಿಸಂನಂತೆ’’ ಎಂದು ಅಮೆರಿಕದ ನಟ (American Actor) ಎಡ್ವರ್ಡ್ ಆಲ್ಬರ್ಟ್ ಹಲವು ವರ್ಷಗಳ ಹಿಂದೆ ಹೇಳಿಕೆ ನೀಡಿದ್ದರು. ಅದು, ಈಗಲೂ ಸಹ ನಿಜವಾಗಿದೆ.

ಟ್ರಕ್ ಚಾಲಕ (truck Driver) ಮತ್ತು ವಯಸ್ಸಾದ ಮಹಿಳೆಯನ್ನು ಒಳಗೊಂಡಿರುವ ಈ ವಿಡಿಯೋ ಅದನ್ನು ಸಂಪೂರ್ಣವಾಗಿ ಸಾಬೀತುಪಡಿಸುತ್ತದೆ. ವಿಡಿಯೋದಲ್ಲಿ ಕಾಣಿಸುವ ಘಟನೆಯನ್ನು ನೋಡಿದ ಬಳಿಕ ನಿಮಗೆ ಖುಷಿ ಆಗಬಹುದು. ಮಾನವೀಯತೆ (Humanity) ಈಗಲೂ ಉಳಿದಿದೆಯಲ್ಲಪ್ಪಾ ಎಂದೂ ಅನಿಸಬಹುದು.

ಗುಡ್ ನ್ಯೂಸ್ ಮೂವ್‌ಮೆಂಟ್

ಗುಡ್ ನ್ಯೂಸ್ ಮೂವ್‌ಮೆಂಟ್‌ ಎಂಬ ಇನ್‌ಸ್ಟಾಗ್ರಾಮ್ (Instagram) ಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. “ಚಾಲಕ ತನ್ನ ಟ್ರಕ್ ಅನ್ನು ನಿಲ್ಲಿಸುತ್ತಾರೆ ಮತ್ತು ಈ ವಯಸ್ಸಾದ ಮಹಿಳೆಗೆ ರಸ್ತೆ ದಾಟಲು ಸಹಾಯ ಮಾಡುತ್ತಾರೆ’’ ಎಂದು ವಿಡಿಯೋವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. ಹಾಗೂ, #humanity ಎಂಬ ಹ್ಯಾಷ್‌ಟ್ಯಾಗ್‌ ಅನ್ನೂ ಕ್ಯಾಪ್ಷನ್‌ನಲ್ಲಿ ಬರೆಯಲಾಗಿದೆ.

ಚಿಕ್ಕ ವಿಡಿಯೋದಲ್ಲಿ ದೊಡ್ಡ ಸಂದೇಶ

ಒಬ್ಬ ವ್ಯಕ್ತಿ ವಯಸ್ಸಾದ ಮಹಿಳೆಗೆ ಬ್ಯುಸಿಯಾಗಿರುವ ರಸ್ತೆಯನ್ನು ದಾಟಲು ಸಹಾಯ ಮಾಡುವುದನ್ನು ತೋರಿಸುವ ಮೂಲಕ ಈ ಚಿಕ್ಕ ವಿಡಿಯೋ ಕ್ಲಿಪ್ ಆರಂಭವಾಗುತ್ತದೆ. ಚಿಕ್ಕದಾಗಿದ್ದರೂ, ಈ ವೀಡಿಯೊವನ್ನು ನೀವು ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.






ಇನ್ನು, ಸುಮಾರು 1 ದಿನದ ಹಿಂದೆ ಈ ವಿಡಿಯೋವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಪೋಸ್ಟ್‌ ಮಾಡಿದಾಗಿನಿಂದ ಈವರೆಗೆ ಈ ವಿಡಿಯೋ ಕ್ಲಿಪ್‌ಗೆ 47 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದದ್ದು, ಮತ್ತು ಇನ್ನೂ ಹೆಚ್ಚು ಜನರು ಲೈಕ್‌ ಬಟನ್‌ ಅನ್ನು ಒತ್ತುತ್ತಲೇ ಇದ್ದಾರೆ. ಹಾಗೂ, ಈ ವಿಡಿಯೋ ಹಲವರನ್ನು ಪ್ರೇರೇಪಿಸಿದ್ದು, ನೆಟ್ಟಿಗರು ಆ ಟ್ರಕ್‌ ಚಾಲಕನನ್ನು ಮೆಚ್ಚುಗೆ ವ್ಯಕ್ತಪಡಿಸಿ ನಾನಾ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral Video: ಮುದ್ದಾದ ಪುಟ್ಟ ಬೆಕ್ಕು ಎಷ್ಟು ಚಂದ ಹಾಡುತ್ತೆ ನೋಡಿ, ನೆಟ್ಟಿಗರಂತೂ ಫಿದಾ

"ಇನ್ನೂ ಜಗತ್ತಿನಲ್ಲಿ ಬಹಳಷ್ಟು ಒಳ್ಳೆಯದು ಉಳಿದಿದೆ" ಎಂದು Instagram ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನು, "ಎಂತಹ ಅದ್ಭುತ ವ್ಯಕ್ತಿ!" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ. “ಅದ್ಭುತ ವ್ಯಕ್ತಿ. ಈ ಜಗತ್ತಿನಲ್ಲಿ ನಾವು ಇನ್ನೂ ಒಳ್ಳೆಯ ಜನರನ್ನು ಹೊಂದಿದ್ದೇವೆ ಮತ್ತು ಇದು ಭವಿಷ್ಯದ ಬಗ್ಗೆ ನನಗೆ ಭರವಸೆ ನೀಡುತ್ತದೆ’’ ಎಂದು ಮತ್ತೊಬ್ಬ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2019ರಲ್ಲೂ ಇದೇ ರಿತಿಯ ವಿಡಿಯೋವೊಂದು ವೈರಲ್‌ ಆಗಿತ್ತು..

ಇನ್ನು, 2019ರ ಜೂನ್‌ ತಿಂಗಳಲ್ಲೂ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲೂ ಇಂತದ್ದೇ ಘಟನೆಯೊಂದು ವರದಿಯಾಗಿತ್ತು. ಆ ಘಟನೆಯಲ್ಲೂ ಸಹ ಲಾರಿ ಚಾಲಕ ವಯೋವೃದ್ಧೆಯನ್ನು ರಸ್ತೆ ದಾಟಿಸಲು ನೆರವಾಗಿದ್ದರು.

ತನ್ನ ಸಿಮೆಂಟ್‌ ಮಿಕ್ಸರ್‌ ಲಾರಿಯನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಹೆಚ್ಚು ಟ್ರಾಫಿಕ್‌ ಇದ್ದ ಜಂಕ್ಷನ್‌ನಲ್ಲಿ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಅಜ್ಜಿಯನ್ನು ಲಾರಿ ಡ್ರೈವರ್‌ ರಸ್ತೆ ದಾಟಿಸಿದ್ದರು. ಆ ಘಟನೆಯ ವಿಡಿಯೋವನ್ನೂ ಸೆರೆ ಹಿಡಿಯಲಾಗಿತ್ತು. ಈ ಸಂಬಂಧ ಡೈಲಿ ಮೇಲ್‌ ಸುದ್ದಿ ಮಾಧ್ಯಮ ವರದಿ ಮಾಡಿತ್ತು.

ಇದನ್ನೂ ಓದಿ: Viral News: ಈ ಮನೆ ಉಚಿತವಾಗಿ ಸಿಗಲಿದೆಯಂತೆ, ಆದರೆ ಅಲ್ಲಿ ಹೋಗಿ ವಾಸಿಸುವಂತಿಲ್ಲ..!

ಲಾರಿ ಚಾಲಕ ಮ್ಯಾನಿಲೋ ವಿಲ್ಸನ್‌, ತಾನು ಚಲಾಯಿಸುತ್ತಿದ್ದ ವಾಹನದಿಂದ ಇಳಿದು ರಸ್ತೆ ದಾಟಲು ಪರದಾಡುತ್ತಿದ್ದ ಅಜ್ಜಿಯನ್ನು ರಸ್ತೆ ದಾಟಿಸಿದ್ದರು ಎಂದು ಮಾಧ್ಯಮ ವರದಿಗಳ ಮೂಲಕ ತಿಳಿದುಬಂದಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬರು ಭಾರಿ ತೂಕದ ವಾಹನ ಚಾಲಕರಾದ ಡೇವ್‌ ವುಲ್ಲಾಸ್ಟನ್‌ ಎಂಬುವರು ಈ ವಿಡಿಯೋವನ್ನು ಸೆರೆ ಹಿಡಿದು ಶೇರ್‌ ಮಾಡಿದ್ದರು ಎಂದು ತಿಳಿದುಬಂದಿದೆ.
Published by:Divya D
First published: