ಡ್ರೈವಿಂಗ್ (Driving) ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ನಾವು ಸರಿಯಾಗಿ ವಾಹನ ಚಲಾಯಿಸುತ್ತಿದ್ರೂ, ಬೇರೆಯವರು ವೆಹಿಕಲ್ ಗಳು ಬಂದು ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ. ಇದರಲ್ಲಿ ನಮ್ಮ ತಪ್ಪಿರಲ್ಲ. ಆದರೂ ನಮ್ಮ ವಾಹನ ಅಪಘಾತಕ್ಕೆ (Road Accident) ಒಳಗಾಗುತ್ತದೆ. ಇದರಿಂದ ವಾಹನ ಚಾಲನೆ ಮಾಡುವವರು ಎಲ್ಲ ನಿಯಮಗಳನ್ನ ತಿಳಿದುಕೊಂಡಿರಬೇಕು. ಕೆಲವೊಮ್ಮೆ ಚಾಲಕನ (Driver) ನಿದ್ದೆಯಿಂದಾಗಿ ಎಷ್ಟೋ ವಾಹನಗಳು ಅಪಘಾತಕ್ಕೆ ಒಳಗಾಗಿರುವ ವರದಿಗಳನ್ನು ನೋಡಿರುತ್ತೀವಿ. ಚಾಲಕ ಚೆನ್ನಾಗಿ ನಿದ್ದೆ (Sleep) ಮಾಡಿದ ನಂತರ ಚೆನ್ನಾಗಿ ಚಾಲನೆ ಮಾಡಲು ಸಾಧ್ಯ. ಒಂದು ವೇಳೆ ಮಾರ್ಗ ಮಧ್ಯೆ ನಿದ್ದೆ ಬಂದ್ರೆ ಬಹುತೇಕ ಚಾಲಕರು ವಾಹನಗಳನ್ನು ರಸ್ತೆ ಬದಿ ಹಾಕಿ ನಿದ್ದೆ ಮಾಡುತ್ತಾರೆ. ಆದ್ರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಇಲ್ಲಿ ಚಾಲಕ ಚಲಿಸುತ್ತಿರುವ ಕಾರ್ ನಲ್ಲಿ ನಿದ್ದೆ ಮಾಡುತ್ತಿದ್ದಾನೆ.
ಕಾರ್ ಅಥವಾ ಯಾವುದೇ ವಾಹನ ಚಾಲನೆ ಮಾಡುವ ವೇಳೆ ಒಂದು ಕ್ಷಣ ಎಚ್ಚರ ತಪ್ಪಿದ್ರೂ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಒಳಗಾಗುತ್ತದೆ. ಇಂತಹ ಅಪಘಾತಗಳಲ್ಲಿ ಸಾವು-ನೋವು ಸಹ ಸಂಭವಿಸಬಹುದು. ಈ ವಿಡಿಯೋದಲ್ಲಿ ಕಾರ್ ಮಾತ್ರ ವೇಗವಾಗಿ ಚಲಿಸುತ್ತಿದೆ. ಚಾಲಕ ನಿದ್ದೆ ಮಾಡುತ್ತಿದ್ರೆ, ಪಕ್ಕದ ಆಸನದಲ್ಲಿ ಕುಳಿತ ವ್ಯಕ್ತಿಯೂ ಸಹ ತಲೆ ಕೆಳಗೆ ಹಾಕಿ ನಿದ್ದೆ ಮಾಡುತ್ತಿದ್ದನು.
ಈ ವಿಡಿಯೋವನ್ನ ಯುನಿಲಾಡ್ (unilad) ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೊದಲಿಗೆ ಈ ವಿಡಿಯೋ ನೋಡಿದವರು ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತಾರೆ. ಸದ್ಯ ಈ ವಿಡಿಯೋ ನೋಡಿದ ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದು ತುಂಬಾ ಅಪಾಯಕಾರಿ ಎಂದು ಕಾಣುತ್ತದೆ ಎಂದು ಬರೆದು ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಬಿಳಿ ಬಣ್ಣದ ಕಾರ್ ವೇಗವಾಗಿ ಹೋಗುತ್ತಿರುತ್ತದೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಕಾರ್ ಓವರ್ ಟೇಕ್ ಮಾಡುತ್ತಾನೆ. ಆದ್ರೆ ಚಾಲಕ ಗಾಢವಾದ ನಿದ್ದೆಗೆ ಜಾರಿದ್ದನು. ಪಕ್ಕದಲ್ಲಿ ಕುಳಿತ ವ್ಯಕ್ತಿ ಸಹ ನಿದ್ದೆ ಮಾಡುತ್ತಿದ್ದನು. ಆದರೆ ಕಾರ್ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತಿತ್ತು.
ವಾಸ್ತವವಾಗಿ ಇದು ಸಾಮಾನ್ಯ ಕಾರ್ ಅಲ್ಲ. ಇದು ಟೆಸ್ಲಾ ಕಂಪನಿಯ ಸ್ವಯಂ ಚಾಲಿತ ಟೆಸ್ಲಾ ಕಾರು. ಈ ಕಾರುಗಳಲ್ಲಿ (Driver sleeping in self driven tesla video) ಆಟೋ ಡ್ರೈವ್ ಮೋಡ್ ಹಾಕಿದ ನಂತರ ಚಾಲಕ ಆರಾಮವಾಗಿ ನಿದ್ರಿಸಬಹುದು ಮತ್ತು ಈ ಕಾರುಗಳು ಕಂಪ್ಯೂಟರ್ ಮೂಲಕ ಸ್ವಯಂಚಾಲಿತವಾಗಿ ಚಲಿಸುತ್ತಲೇ ಇರುತ್ತವೆ.
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ. ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಕಾರ್ ನ್ನು ಆಟೋ ಡ್ರೈವ್ ಮೋಡ್ ನಲ್ಲಿಟ್ಟು ಚಾಲಕ ನಿದ್ದೆ ಮಾಡುತ್ತಿರೋದಕ್ಕೆ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಕಾರ್ ಕಂಪ್ಯೂಟರ್ ಮೂಲಕ ಸ್ವಯಂ ಚಾಲಿತವಾಗಿ ಚಲಿಸುತ್ತಿದ್ರೆ, ಇದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ. ಅವನು ಹೀಗೆ ನಿದ್ದೆ ಮಾಡುತ್ತಿದ್ರೆ ಕಣ್ಣು ತೆರೆದಾಗ ಚಾಲಕನಿಗೆ ದೇವರ ದರ್ಶನ ಆಗಬಹುದು ಎಂದು ಗೇಲಿ ಮಾಡಿದ್ದಾರೆ.
ಇನ್ನೂ ಕೆಲವರು ಟೆಸ್ಲಾ ಕಂಪನಿಯ ಉದ್ದೇಶ ಒಳ್ಳೆಯದು ಇರಬಹುದು. ಆದ್ರೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕಾರ್ ನ್ನು ಸೆಲ್ಫ್ ಮೋಡ್ ಗೆ ಹಾಕಿದಾಗ, ಚಾಲಕ ಕೊಂಚ ವಿಶ್ರಾಂತಿ ಪಡೆಯಬಹುದು. ಹಾಗಂತ ಪೂರ್ಣವಾಗಿ ನಿದ್ದೆ ಮಾಡುವಂತಿಲ್ಲ. ಮಾರ್ಗ ಮಧ್ಯೆ ಯಾವುದೇ ರೀತಿ ಅಪಾಯಗಳು ಎದುರಾಗಬಹುದು ಎಂದು ಸಲಹೆ ನೀಡಿದ್ದಾರೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ