ಮೇ ತಿಂಗಳ ಆರಂಭ ಬಿರುಬೇಸಿಗೆ (Summer), ಅದರಲ್ಲೂ ಈ ಬಾರಿ ಜಾಸ್ತಿ ಎನ್ನಿಸುವಷ್ಟು ಉಷ್ಣತೆ (Temperature) ಉಂಟಾಗಿದೆ. ಪ್ರತಿದಿನ ಈ ಬಿಸಿಲಿನ (Sunny) ಬೇಗೆಯಿಂದ ಪಾರಾಗುವುದೇ ಒಂದು ಸವಾಲಾಗಿಬಿಟ್ಟಿದೆ. ಈಗಾಗಲೇ ಅತ್ಯಂತ ಅಪಾಯದ ಮಟ್ಟ ತಲುಪಿರುವ ಉಷ್ಣತೆ ಇನ್ನೆಷ್ಟರ ಮಟ್ಟಿಗೆ ಏರಿಕೆಯಾಗಬಹುದು ಎಂಬ ಆತಂಕವೂ ಶುರುವಾಗಿದೆ. ಅದರೊಂದಿಗೆ ಬಿಸಿಲಿನ ತಾಪಮಾನದಿಂದ ಪಾರಾಗಲು ಜನರು ಪರದಾಡುತ್ತಿದ್ದಾರೆ. ಅಂತಹದರಲ್ಲಿ ಇಲ್ಲೊಬ್ಬರು ಒಂದೊಳ್ಳೆ ಉಪಾಯ ಮಾಡಿದ್ದಾರೆ. ತನ್ನ ಆಟೋ ರಿಕ್ಷಾದ (Auto Rickshaw) ಛಾವಣಿಯ ಮೇಲೆ ಉದ್ಯಾನವನವನ್ನು (Garden) ಬೆಳೆಸಿ ರಿಕ್ಷಾದಲ್ಲಿ ಬರುವ ಪ್ರಯಾಣಿಕರನ್ನು ತಂಪಾಗಿರಿಸಲು ಮುಂದಾಗಿದ್ದಾರೆ.
ಅಷ್ಟಕ್ಕೂ ಉದ್ಯಾನವನ ಹೀಗಿದೆ ಗೊತ್ತಾ?
ಹಳದಿ ಮತ್ತು ಹಸಿರು ಆಟೋರಿಕ್ಷಾಗಳು ನವದೆಹಲಿಯ ಸಾಮಾನ್ಯವಾಗಿ ಕಂಡು ಬರುತ್ತವೆ. ಆದರೆ ಇಲ್ಲೊಬ್ಬರಾ ಆಟೋ ರಿಕ್ಷಾ ಮಾತ್ರ ವಿಭಿನ್ನವಾಗಿದೆ. ತನ್ನ ರಿಕ್ಷಾದ ಮೇಲ್ಛಾವಣಿಯ ಮೇಲೆ ಸಣ್ಣ ಪ್ರಮಾಣದ ಉದ್ಯಾನವನವನ್ನು ನಿರ್ಮಿಸಿದ್ದಾರೆ. ಇದೊಂದು ಚಲಿಸುವ ಉದ್ಯಾನವನವೂ ಆಗಿದೆ.
ಉದ್ಯಾನವನದ ಬಗ್ಗೆ ಮಾಲೀಕರು ಹೇಳಿದ್ದೇನು?
ದೆಹಲಿಯ ಮಹೇಂದ್ರ ಕುಮಾರ್ (Mahendra Kumar) ಅವರಿಗೆ ಸೇರಿದ ಆಟೋ ರಿಕ್ಷಾ ಎದ್ದು ಕಾಣುತ್ತದೆ. ಬೇಸಿಗೆಯ ಸಮಯದಲ್ಲಿ ಪ್ರಯಾಣಿಕರನ್ನು ತಂಪಾಗಿರಿಸಲು ಅದರ ಛಾವಣಿಯ ಮೇಲೆ ಉದ್ಯಾನವನ್ನು ನಿರ್ಮಿಸಿದ್ದಾರೆ. ಹಾಗೂ ಇದು ಬಿಸಿಲಿನ ಧಗೆಯನ್ನು ತಡೆಯಲು ಸಹಾಯಕವಾಗಿದೆ. ವಾಹನವನ್ನು ತಂಪಾಗಿರಿಸುತ್ತದೆ ಎಂದು ವಾಹನ ಮಾಲೀಕ ಹೇಳಿದ್ದಾರೆ .
ಇದನ್ನೂ ಓದಿ:Jupiter: ಗುರು ಗ್ರಹ ಇತರ ಗ್ರಹಗಳಿಗಿಂತ ಎಷ್ಟು ದೊಡ್ಡದು? ನೀವೇ ವಿಡಿಯೋ ನೋಡಿ!
48 ವರ್ಷದ ಮಹೇಂದ್ರ ಕುಮಾರ್ ಅವರು 20 ವಿಧದ ಪೊದೆಗಳು, ಬೆಳೆಗಳು (Crops) ಮತ್ತು ಹೂವುಗಳನ್ನು (Flowers) ಬೆಳೆಸಿದ್ದಾರೆ, ಪ್ರಯಾಣಿಕರು ಮತ್ತು ದಾರಿಹೋಕರನ್ನು ಆಕರ್ಷಿಸುತ್ತಾರೆ, ಅವರು ವಿಶಿಷ್ಟವಾದ "ಚಲಿಸುವ ಉದ್ಯಾನ"ದ (Moving Garden) ಸೆಲ್ಫಿಗಳು ಮತ್ತು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಬೇಸಿಗೆ ಕಾಲದಲ್ಲಿ, ನಾನು ಛಾವಣಿಯ ಮೇಲೆ ಕೆಲವು ಗಿಡಗಳನ್ನು ಬೆಳೆಸಿದರೆ, ಅದು ನನ್ನ ಆಟೋವನ್ನು ತಂಪಾಗಿರಿಸುತ್ತದೆ ಮತ್ತು ನನ್ನ ಪ್ರಯಾಣಿಕರಿಗೆ ಶಾಖದಿಂದ ಪರಿಹಾರವನ್ನು ನೀಡುತ್ತದೆ ಎಂದು ನಾನು ಭಾವಿಸಿ ಗಿಡಗಳನ್ನು ನೆಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಎರಡು ಮಿನಿ ಕೂಲರ್ಗಳು ಮತ್ತು ಫ್ಯಾನ್ಗಳನ್ನು ಸಹ ಅಳವಡಿಸಿದರು. ಇದರಿಂದಲೂ ಸಹ ಬಿಸಿಲನ್ನು ಸಹಿಸಲು ಸಾಧ್ಯವಾಗದೆ ಈ ಉಪಾಯ ಕಂಡು ಕೊಂಡಿದ್ದೇನೆ. “ಇದು ಈಗ ನೈಸರ್ಗಿಕ ಹವಾನಿಯಂತ್ರಣ (AC) ದಂತಿದೆ. ನನ್ನ ಪ್ರಯಾಣಿಕರು ಸವಾರಿಯ ನಂತರ ತುಂಬಾ ಸಂತೋಷವಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ತಾಪಮಾನಕ್ಕಿಂದ ಹೆಚ್ಚಿದ ಬಿಸಿಲು
ದೆಹಲಿ ಪ್ರದೇಶದ ಕೆಲವು ಭಾಗಗಳಲ್ಲಿ ಕಳೆದ ವಾರ ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ಅನ್ನು ದಾಟಿದೆ ಸಾಮಾನ್ಯ ತಾಪಮಾನಕ್ಕಿಂದ ಹೆಚ್ಚಾಗಿದೆ. ಮುನ್ಸೂಚಕರು ಹೇಳುವ ಪ್ರಕಾರ ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಶಾಖದ ಪರಿಸ್ಥಿತಿಗಳು ಕಡಿಮೆಯಾಗುತ್ತವೆ ಆದರೆ ನಂತರ ಅದು ಮತ್ತೆ ಏರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಬಿತ್ತನೆಗೆ ಮೇಲ್ಛಾವಣಿ ಸಿದ್ಧಪಡಿಸಿರುವುದು ಹೇಗೆ
ಕುಮಾರ್ ಅವರು ತಮ್ಮ ಆಟೋರಿಕ್ಷಾದಲ್ಲಿ ಲೆಟಿಸ್ ಸೊಪ್ಪು (Lettuce), ಟೊಮ್ಯಾಟೊ (Toamto) ಮತ್ತು ರಾಗಿಗಳನ್ನು ನೆಡುವ ಮೂಲಕ ಪರಿಸರಕ್ಕಾಗಿ ತಮ್ಮದೇ ಆದ ಸಣ್ಣ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿತ್ತನೆಗೆ ಮೇಲ್ಛಾವಣಿ ಸಿದ್ಧಪಡಿಸುವುದು ಸರಳವಾಗಿತ್ತು ಕುಮಾರ್ ಅವರು ಮೊದಲು ಒಂದು ಚಾಪೆಯನ್ನು ಹಾಕಿದರು ಮತ್ತು ಅದರ ಮೇಲೆ ಸ್ವಲ್ಪ ಮಣ್ಣು ಎರಚಿದರು. ಅವರು ರಸ್ತೆ ಬದಿಯಿಂದ ಹುಲ್ಲು ಮತ್ತು ಸ್ನೇಹಿತರು ಮತ್ತು ಪರಿಚಯಸ್ಥರಿಂದ ತರಕಾರಿ ಬೀಜಗಳನ್ನು ಪಡೆದರು ಮತ್ತು ಕೆಲವೇ ದಿನಗಳಲ್ಲಿ ಬೀಜಗಳು ಹಸಿರು ಚಿಗುರುಗಳಾಗಿ ಮೊಳಕೆಯೊಡೆದವು. "ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿಲ್ಲ. ನಾನು ದಿನಕ್ಕೆ ಎರಡು ಬಾರಿ ಬಾಟಲಿಯನ್ನು ಬಳಸಿ ಗಿಡಗಳಿಗೆ ನೀರು ಹಾಕುತ್ತೇನೆ, ”ಎಂದು ಅವರು ಹೇಳಿದರು.
ಪರಿಸರ ಮಾಲಿನ್ಯವನ್ನು ತಡೆಯಬಲ್ಲ ಉತ್ತಮ ಉಪಾಯ
ಕುಮಾರ್ ಅವರ ಉಪಕ್ರಮವು ಅವರ ಸಹ ಚಾಲಕರಿಗೆ ಟ್ರಿಕ್ಸ್ ಮತ್ತು ಟಿಪ್ಸ್ಗಳನ್ನು ಕೇಳುತ್ತಿರುವವರಿಗೆ ಸ್ಫೂರ್ತಿಯಾಗಿದೆ.
ಪೆಟ್ರೋಲ್ ಅಥವಾ ಡೀಸೆಲ್ಗಿಂತ ಕಡಿಮೆ ಮಾಲಿನ್ಯಕಾರಕವಾದ ಸಂಕುಚಿತ ನೈಸರ್ಗಿಕ ಅನಿಲದಿಂದ ಚಲಿಸುವ ಕುಮಾರ್ ಅವರ ಸ್ವಚ್ಛ ಮತ್ತು ಹಸಿರು ಆಟೋದಿಂದ ದಾರಿಹೋಕ ನಯಿಮಾ ಜಮಾಲ್ ಕೂಡ ಪ್ರಭಾವಿತರಾಗಿದ್ದರು.
ಇದನ್ನೂ ಓದಿ: Snake: ಒಂದು ವರ್ಷದಿಂದ ಬಾಟಲಿಯಲ್ಲೇ ಜೀವಂತವಾಗಿತ್ತು ಹಾವು! ಮುಚ್ಚಳ ತೆರೆದಾಗ ಆಗಿದ್ದು ದುರಂತ
"ಇದು ಒಂದು ಉತ್ತಮ ಉಪಾಯ," ಇದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು. ದೆಹಲಿಯು ಕಾಂಕ್ರೀಟ್ ಕಾಡಾಗಿದೆ. ಯಾವುದೇ ಹಸಿರು ಇಲ್ಲ. "ನಮಗೆ ಅಂತಹ ಹೆಚ್ಚಿನ ಆಟೋರಿಕ್ಷಾಗಳು ರಸ್ತೆಗಳಲ್ಲಿ ಬೇಕು ಅವು ಕಣ್ಣುಗಳಿಗೆ ಮತ್ತು ಆತ್ಮಕ್ಕೆ ಸಂತೋಷವನ್ನು ನೀಡುತ್ತವೆ ಎಂದು ಗೃಹಿಣಿ ಜಮಾಲ್ ಅವರು ಅಭಿಪ್ರಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ