Celesti Bairagey: ಆಲಿಯಾ ಹೆಸರೇಳಿದ್ದಕ್ಕೆ ಮುನಿಸಿಕೊಂಡ್ರಾ ಸೆಲೆಸ್ಟಿ ಬೈರಾಗೆ? ಇದಕ್ಕೆ ಈಕೆ ಹೇಳಿದ್ದೇನು ನೋಡಿ

ಸುಮಾರು ದಿನಗಳಿಂದ ಬಾಲಿವುಡ್ ನ ಕ್ಯೂಟ್ ಬೆಡಗಿ ಆಲಿಯಾ ಭಟ್ ಳನ್ನೇ ಹೋಲುವ ಮತ್ತೊಬ್ಬಳು ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿದ್ಲು. ಅನೇಕರು ಇವಳನ್ನು ನೋಡಿದ ಮೇಲೆ ಆಲಿಯಾಳೇ ಅಂತಾ ಒಂದು ಕ್ಷಣ ಶಾಕ್ ಆಗುತ್ತಿದ್ದರು. ಸಿಕ್ಕಾಪಟ್ಟೆ ಹವಾ ಮಾಡಿದ ಕೆಲ ವೀಡಿಯೋದಲ್ಲಿ ನಟಿ ಆಲಿಯಾ ಭಟ್ ಅವರಂತೆ ಕಾಣುವ ಸೆಲೆಸ್ಟಿ ಬೈರಾಗೆ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಹೊಂದಿರುವ ಯುವತಿ ಇತ್ತೀಚೆಗೆ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.

ಆಲಿಯಾ ಭಟ್ ಳನ್ನೇ ಹೋಲುವ ಸೆಲೆಸ್ಟಿ ಬೈರಾಗೆ

ಆಲಿಯಾ ಭಟ್ ಳನ್ನೇ ಹೋಲುವ ಸೆಲೆಸ್ಟಿ ಬೈರಾಗೆ

  • Share this:
ಒಬ್ಬರಂತೆಯೇ ಜಗತ್ತಿನಲ್ಲಿ ಏಳು ಜನ ಇರುತ್ತಾರೆ ಅನ್ನೋ ಮಾತು ಕೆಲವರನ್ನು ನೋಡಿದ ಮೇಲೆ ನಿಜ ಅನ್ನಿಸುತ್ತದೆ. ಅದರಲ್ಲೂ ಈ ಸಾಮಾಜಿಕ ಜಾಲತಾಣಗಳ (Social Media) ಹಾವಳಿಯಿಂದಾಗಿ ಇಂತಹ ವಿಚಾರಗಳು ಬೇಗ ಗೊತ್ತಾಗಿ ಬಿಡುತ್ತವೆ. ಸುಮಾರು ದಿನಗಳಿಂದ ಬಾಲಿವುಡ್ ನ ಕ್ಯೂಟ್ ಬೆಡಗಿ ಆಲಿಯಾ ಭಟ್ (Alia Bhatt) ಳನ್ನೇ ಹೋಲುವ ಮತ್ತೊಬ್ಬಳು ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಎಬ್ಬಿಸಿದ್ಲು. ಅನೇಕರು ಇವಳನ್ನು ನೋಡಿದ ಮೇಲೆ ಆಲಿಯಾಳೇ ಅಂತಾ ಒಂದು ಕ್ಷಣ ಶಾಕ್ ಆಗುತ್ತಿದ್ದರು. ಸಿಕ್ಕಾಪಟ್ಟೆ ಹವಾ ಮಾಡಿದ ಕೆಲ ವಿಡಿಯೋದಲ್ಲಿ (Video) ನಟಿ ಆಲಿಯಾ ಭಟ್ ಅವರಂತೆ ಕಾಣುವ ಸೆಲೆಸ್ಟಿ ಬೈರಾಗೆ (Celesti Bairagey )ಎಂಬ ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಹೊಂದಿರುವ ಯುವತಿ ಇತ್ತೀಚೆಗೆ ಸಾಕಷ್ಟು ಹೆಸರು ಮಾಡುತ್ತಿದ್ದಾರೆ.

ಆಲಿಯಾ ಭಟ್‌ನ ಡೋಪೆಲ್ ಗ್ಯಾಂಗರ್ ಸೆಲೆಸ್ಟಿ ಬೈರಾಗೆ
ಆಲಿಯಾ ಭಟ್‌ನ ಡೋಪೆಲ್ ಗ್ಯಾಂಗರ್ ಎಂದು ಹೇಳಲಾಗುತ್ತಿರುವ ಸೆಲೆಸ್ಟಿ ಬೈರಾಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಸೆಲೆಸ್ಟಿ ಬೈರಾಗೆ ಎಲ್ಲಾ ವಿಡಿಯೋಗಳಿಗೂ ನೆಟ್ಟಿಗರು ನೀವು ಆಲಿಯಾ ಭಟ್ ರೀತಿ ಇದ್ದೀರಾ ಎಂಬ ಕಾಮೆಂಟ್ ಗಳನ್ನು ಹಾಕುತ್ತಲೇ ಇರುತ್ತಾರೆ. ಈ ಯುವತಿ ನಟಿ ಆಲಿಯಾ ಭಟ್ ಅವರ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರದ ಲುಕ್ ಅನ್ನು ಮರು ಸೃಷ್ಟಿಸಿ ಮಾಡಿದ ವಿಡಿಯೋವಂತೂ ಸಾಕಷ್ಟು ವೈರಲ್ ಆಗಿತ್ತು,. ಆಲಿಯಾಳ ಹಲವಾರು ಸ್ಟೈಲ್ ಗಳನ್ನು ಮರುಸೃಷ್ಟಿಸಿ ವಿಡಿಯೋ ಪೋಸ್ಟ್ ಮಾಡುತ್ತಿದ್ದ ಸೆಲೆಸ್ಟಿ ಬೈರಾಗೆಳನ್ನು ಆಲಿಯಾ ಭಟ್ ತದ್ರೂಪಿ ಎನ್ನಲಾಗುತ್ತಿತ್ತು.

ಈ ಬಗ್ಗೆ ಸೆಲೆಸ್ಟಿ ಹೇಳಿದ್ದೇನು ನೋಡಿ
ಈ ಎಲ್ಲಾ ಕಾಮೆಂಟ್ ಗಳನ್ನು ಕೇಳಿದ ಮೇಲೆ ಅದ್ಯಾಕೋ ಈ ಯುವತಿ ಸಿಟ್ಟಾಗಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಒಂದು ರೀಲ್ಸ್ ಮಾಡಿರುವ ಸೆಲೆಸ್ಟಿ ಬೈರಾಗೆ ನನಗೆ ನನ್ನದೇ ಆದ ಐಡೆಂಟಿ ಇದೆ, ನಾನು ಆಲಿಯಾ ಭಟ್ ಅಲ್ಲ ಎಂದಿದ್ದಾಳೆ. ಹ್ಯೂಮನ್ಸ್ ಆಫ್ ಬಾಂಬೆ ಸೆಲೆಸ್ಟಿ ಈ ಬಗ್ಗೆ ಹೇಳುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ: PHOTOS: ಗೂಗಲ್​ನಲ್ಲಿ ಅತಿ ಹೆಚ್ಚು ಹುಡುಕಲಾದ ಏಷ್ಯಾದ ಟಾಪ್ 10 ಸೆಲೆಬ್ರಿಟಿಗಳಿವರು!

ಸೆಲೆಸ್ಟಿಯ ಇತ್ತೀಚಿನ ರೀಲ್ಸ್ ಸೀರೆಯಲ್ಲಿ ನೃತ್ಯ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. "ನೀವು ನಟಿ ಆಲಿಯಾ ಭಟ್ ಅವರನ್ನು ನೋಡುತ್ತಿದ್ದೀರಿ ಎಂದು ಭಾವಿಸುತ್ತೀರಾ? ಹತ್ತಿರದಿಂದ ನೋಡಿ. ನಾನು ಆಲಿಯಾ ಭಟ್ ಅಲ್ಲ ಸೆಲೆಸ್ಟಿ ಬೈರಾಗೆ. ನನ್ನನ್ನು ಅಲಿಯಾಸ್ ಡೋಪೆಲ್ ಗ್ಯಾಂಗರ್ ಎಂದು ಕರೆಯಲಾಗುತ್ತದೆ ಎಂದು ವಿಡಿಯೋದ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.




"ಯಾವಾಗಲೂ ನಗುತ್ತಿರುವ ಮತ್ತು ಅವಳಾಗಿರುವುದಕ್ಕಾಗಿ ನಾನು ಆಲಿಯಾ ಭಟ್ ಅವರನ್ನು ಮೆಚ್ಚಿಕೊಳ್ಳುತ್ತೇನೆ. ನಾನು ಅವಳಂತೆ ಕಾಣುವ ಜೊತೆಗೆ ನನ್ನ ಸ್ವಂತ ಗುರುತನ್ನು ಉಳಿಸಿಕೊಳ್ಳಲು ನಾನು ಬಯಸುತ್ತೇನೆ. ತಾನು ಟಿವಿ ಉದ್ಯಮದಲ್ಲಿ ಗುರುತಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ ಮತ್ತು ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಆಶಿಸುತ್ತಿದ್ದೇನೆ. ಆದ್ದರಿಂದ ನಾನು ನನ್ನ ನೆಚ್ಚಿನ ನಟಿಯೊಂದಿಗೆ ಪರದೆಯನ್ನು ಹಂಚಿಕೊಳ್ಳಬಹುದು ಎಂದು ಆಲಿಯಾಳನ್ನು ಹೋಲುವ ಸೆಲೆಸ್ಟಿ ಬೈರಗಿ ಬರೆದುಕೊಂಡಿದ್ದಾಳೆ.

ಈ ವಿಡಿಯೋ ಪ್ರತಿಕ್ರಿಯೆಗಳು ಹೇಗಿವೆ ನೋಡಿ
ಈ ವಿಡಿಯೋಗೆ ಸಹ ಕಾಮೆಂಟ್ ಮಾಡಿದ ನೆಟ್ಟಿಗರು ನೀವು ಥೇಟ್ ಆಲಿಯಾ ರೀತಿ ಇದ್ದೀರಾ. ನೀವು ಆಲಿಯಾಳನ್ನೇ ಮೀರಿಸುವಷ್ಟು ಆಲಿಯಾ ರೀತಿ ಇದ್ದೀರಾ, ನಾನು ಎರೆಡೆರೆಡು ಭಾರಿ ನೋಡಿ ಪರೀಕ್ಷಿಸಿಕೊಂಡೆ, ಇದು ಆಲಿಯಾ ಹೌದೋ, ಅಲ್ಲೋವೋ ಅಂತಾ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಆಲಿಯಾಳ ರೀತಿ ಡ್ರೆಸ್, ಸ್ಟೈಲ್ ಮಾಡಿಕೊಂಡರೆ ನೀವು ಆಲಿಯಾ ಆಗುವುದಿಲ್ಲ. ತಪ್ಪಾಗಿ ಜನ ಅರ್ಥೈಸಿಕೊಂಡಿದ್ದಾರೆ, ನೀವು ಖಂಡಿತ ಆಲಿಯಾಳಂತೆ ಇಲ್ಲ ಎಂಬ ಮಿಶ್ರ ಪ್ರತಿಕ್ರಿಯೆಗಳೂ ಸಹ ಬಂದಿವೆ.

ಇದನ್ನೂ ಓದಿ: Viral Video: ಮಲಾಲಾ ಯೂಸುಫಾಯ್‌ಗೆ 'ಮಿಸ್ ಯೂ' ಎಂದ ಗೆಳತಿಯ ವೀಡಿಯೋ ಈಗ ಫುಲ್ ವೈರಲ್

ಒಟ್ಟಾರೆ ಈ ಯುವತಿ ಆಲಿಯಾ ಭಟ್ ಅವರ ಡೋಪೆಲ್ ಗ್ಯಾಂಗರ್ ಆಗಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅವರು ಅಸ್ಸಾಂ ಮೂಲದವರಾಗಿದ್ದು, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ನಿಯಮಿತವಾಗಿ ತಮ್ಮ ಈ ರೀತಿಯ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಸೆಲೆಸ್ಟಿ ಬೈರಗೆ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ 379k ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ.
Published by:Ashwini Prabhu
First published: