news18-kannada Updated:February 18, 2021, 4:39 PM IST
Photo:twitter
ಪ್ರಾಣಿಗಳ ಮುದ್ದಾದ ಅಥವಾ ತಮಾಷೆಯ ವಿಡಿಯೋಗಳನ್ನು ನೋಡಿದಾಗ ಯಾರು ನಗುವುದಿಲ್ಲ ಹೇಳಿ. ಬಹುತೇಕರು ಅಂತಹ ವಿಡಿಯೋವನ್ನು ಇಷ್ಟಪಡುತ್ತಾರೆ. ನಾಯಿಮರಿಗಳು, ಬೆಕ್ಕಿನ ಮರಿ ಆಡುವ ಕ್ಯೂಟ್ ವಿಡಿಯೋಗಳು. ಮರಿ ಆನೆಯ ವಿಡಿಯೋಗಳು. ಅವೆಲ್ಲವೂ ನೋಡಿದಾಗ ಮುಖದಲ್ಲಿ ನಗು ಮೂಡುತ್ತದೆ. ಮಾತ್ರವಲ್ಲದೆ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರಂತೆ ಇಲ್ಲೊಂದು ವಿಡಿಯೋವಿದೆ. ಈ ವಿಡಿಯೋ ಮತ್ತೆ ಮುಖದಲ್ಲಿ ನಗು ಬೀರುವುದರಲ್ಲಿ ಅನುಮಾನವೇ ಇಲ್ಲ.
ಇತ್ತೀಚೆಗೆ, ಕತ್ತೆ ಸಂತೋಷದಿಂದ ಜೋಕಾಲಿ ಮೇಲೆ ಕುಳಿತು ಸ್ವಿಂಗ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರನ್ನು ರಂಜಿಸುತ್ತದೆ. ಈ ವಿಡಿಯೋವನ್ನು ಯಾರು ತೆಗೆದಿದ್ದಾರೆ ಮತ್ತು ಯಾವಾಗ ತೆಗೆದಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಈ ವಿಡಿಯೋದಲ್ಲಿ ಕತ್ತೆ ಆರಾಮವಾಗಿ ಸ್ವಿಂಗ್ ಮೇಲೆ ಕುಳಿತು ಅದನ್ನು ಸಂಪೂರ್ಣವಾಗಿ ಆನಂದಿಸುತ್ತಿದೆ ಎಂದು ತೋರಿಸುತ್ತದೆ. 2017 ರಲ್ಲಿ ಸಹ, ಇದೇ ರೀತಿಯ ವಿಡಿಯೋ ಯೂಟ್ಯೂಬ್ನಲ್ಲಿ ಕಾಣಿಸಿಕೊಂಡಿದೆ. ಆದ್ದರಿಂದ ಈ ವಿಡಿಯೋ ಹೊಸದೋ ಅಥವಾ ಹಳೆಯದೋ ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಕತ್ತೆಯ ಈ ಕೂಲ್ ವರ್ತನೆ ಜನರನ್ನು ನಗಿಸುತ್ತದೆ.
ಕರುವೊಂದು ಅದರ ಮಾಲೀಕರೊಂದಿಗೆ ಆಟವಾಡುವ ಮತ್ತೊಂದು ವಿಡಿಯೋ ಕೂಡ ಇತ್ತೀಚೆಗೆ ವೈರಲ್ ಆಗುತ್ತಿದ್ದನ್ನು ನೀವು ನೋಡಿದ್ದೀರಿ ಅಂದುಕೊಂಡಿದ್ದೇವೆ.
ಅಂತಹ ಪ್ರಾಣಿಗಳ ವಿಡಿಯೋಗಳನ್ನು ನೋಡುವುದು ಮನಸ್ಸಿಗೆ ಖುಷಿ ಕೊಡುವುದಲ್ಲದೆ, ಅನೇಕ ಅಧ್ಯಯನಗಳ ಪ್ರಕಾರ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ವಿಡಿಯೋಗಳು ಕೆಲವೊಮ್ಮೆ ಸಿಲ್ಲಿ ಎಂದು ತೋರುತ್ತದೆಯಾದರೂ, ಈ ರೀತಿಯ ಹಗುರವಾದ ಸ್ವಭಾವದ ವಿಷಯಗಳು ನಿಮ್ಮನ್ನು ಉಲ್ಲಾಸಿತರಾಗುವಂತೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
First published:
February 18, 2021, 4:37 PM IST