ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್.. ವೈರಲ್ ವಿಡಿಯೋ ಅಸಲಿಯತ್ತೇನು..?

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತ ಬಳಿಕ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದಲ್ಲಿ ಐಸ್‍ಕ್ರೀಂ ಮಾರುತ್ತಿದ್ದಾರೆ ಎಂದು ಒಬ್ಬ ನೆಟ್ಟಿಗ ಹಾಸ್ಯ ಮಾಡಿದ್ದಾರೆ.

ಟ್ರಂಪ್​ ತದ್ರೂಪಿ

ಟ್ರಂಪ್​ ತದ್ರೂಪಿ

 • Share this:

  ಒಬ್ಬರಂತೆ ಕಾಣುವ ಏಳು ಜನರು  ಪ್ರಪಂಚದಲ್ಲಿ ಇರುತ್ತಾರಂತೆ. ಇದು ಎಲ್ಲರೂ ಕೇಳಿರುವ ಮಾತು. ಏಳೋ, ಐದೋ, ಮೂರೋ ಗೊತ್ತಿಲ್ಲ, ಆದರೆ ತದ್ರೂಪುಗಳಂತು ಇರುವುದು ಸತ್ಯ ಎಂಬುವುದನ್ನು ಇಂಟರ್‌ನೆಟ್‌ ಜಗತ್ತು ನಮಗೆ ತೋರಿಸಿಕೊಟ್ಟಿದೆ. ಇಂಟರ್‌ನೆಟ್‌ ಅನ್ನು ಒಮ್ಮೆ ಜಾಲಾಡಿ ಬಂದರೆ ಸಾಕು, ಒಂದೇ ರೀತಿಯ ರೂಪ ಹೊಂದಿರುವ ಬಹಳಷ್ಟು ಮಂದಿಯನ್ನು ಕಾಣಬಹುದು. ಅದರಲ್ಲೂ ಸೆಲೆಬ್ರಿಟಿಗಳನ್ನು ಹೋಲುವ ಮಂದಿಯಂತು ಇಂಟರ್‌ನೆಟ್‌ನಲ್ಲಿ ಬೇಗ ಜನಪ್ರಿಯರಾಗುತ್ತಾರೆ. ಈಗ ಅಂತಹ ವ್ಯಕ್ತಿಗಳ ಪಾಲಿಗೆ ಮತ್ತೊಬ್ಬ ಸೇರ್ಪಡೆ ಡೋನಾಲ್ಡ್ ಟ್ರಂಪ್ ತದ್ರೂಪಿ. ಈ ತದ್ರೂಪಿ ಕಂಡು ಬಂದಿರುವುದು ಪಾಕಿಸ್ತಾನದಲ್ಲಿ. ಅಮೆರಿಕದ ಮಾಜಿ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೆ ಕಾಣುವ  ಐಸ್‍ಕ್ರೀಂ ಮಾರಾಟಗಾರನೊಬ್ಬನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


  ಟ್ರಂಪ್ ತದ್ರೂಪಿ ಪಾಕಿಸ್ತಾನದ ಪಂಜಾಬ್ ಪ್ರಾತ್ಯದಲ್ಲಿರುವ ಸಹಿವಾಲ್ ಮೂಲದ ವ್ಯಕ್ತಿಯಾಗಿದ್ದು, ವೃತ್ತಿಯಲ್ಲಿ ಕುಲ್ಫಿ ಮಾರಾಟಗಾರ. ವೈರಲ್ ಆಗಿರುವ ವಿಡಿಯೋದಲ್ಲಿ ಟ್ರಂಪ್‍ನಂತೆ ಕಾಣುವ , ಕುರ್ತಾ ಪೈಜಾಮ ಧರಿಸಿರುವ , ಬಿಳಿ ಕೂದಲಿನ (ತೊನ್ನು ರೋಗದಿಂದಾಗಿ) ಆ ವ್ಯಕ್ತಿಯನ್ನು ಕಾಣಬಹುದು. ಆ ವ್ಯಕ್ತಿ ಟ್ರಂಪ್‍ನಂತೆ ಕಾಣುವುದು ಒಂದು ವಿಶೇಷ. ಜೊತೆಗೆ ಆತ ತನ್ನ ವಿಶಿಷ್ಟ ಧ್ವನಿಯಿಂದ ಕೂಡ ಸಾಮಾಜಿಕ ಮಾಧ್ಯಮ ಬಳಕೆದಾರರ ಮನ ಗೆದ್ದಿದ್ದಾರೆ.


  ಇದನ್ನೂ ಓದಿ: ಒಬ್ಬ ವ್ಯಕ್ತಿ ಸತ್ತರೆ ಬರೋಬ್ಬರಿ 38 ಮಹಿಳೆಯರು ವಿಧವೆಯರಾದರು.. 60ರಲ್ಲೂ ಮದುವೆಯಾದ ಭೂಪ ಈತ!

  ಪಾಕಿಸ್ತಾನಿ ಗಾಯಕ, ಶೆಹದ್ ರಾಯ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಆ ಕ್ಷಣದಿಂದ ವಿಡಿಯೋ ವೈರಲ್ ಆಯಿತು. “ವಾಹ್ , ಕುಲ್ಫಿವಾಲೆ ಬಾಯ್ ಕ್ಯಾ ಬಾತ್ ಹೈ” ಎಂಬ ಶೀರ್ಷಿಕೆಯನ್ನು ಕೂಡ ಅವರು ಆ ವಿಡಿಯೋಗೆ ನೀಡಿದ್ದರು. ಹಾಗೆನ್ನಲು ಕಾರಣವೇನು ಗೊತ್ತೇ? ಆ ವಿಡಿಯೋದಲ್ಲಿ ತನ್ನ ಐಸ್‍ಕ್ರೀಂ ಗಾಡಿಯತ್ತ ಸೆಳೆಯಲು, ಆ ವ್ಯಕ್ತಿ ಆಕರ್ಷಕ ಧ್ವನಿಯಲ್ಲಿ ಹಾಡುವ ದೃಶ್ಯವಿದೆ. ಈ ವಿಡಿಯೋ ಪ್ರಪಂಚದಾದ್ಯಂತ ಜನರನ್ನು ಸೆಳೆಯುವ ಮಟ್ಟಿಗೆ ವೈರಲ್ ಆಯಿತು. ಕೆಲವರಂತೂ ಆ ಕುಲ್ಫಿ ಮಾರಾಟಗಾರನನ್ನು, ‘ಅಬಿನೋ ಡೋನಾಲ್ಡ್ ಟ್ರಂಪ್’ ಎಂದು ಕೂಡ ಕರೆಯಲು ಆರಂಭಿಸಿದರು.

  ಟ್ರಂಪ್ ಜೊತೆಗಿನ ಈ ಹೋಲಿಕೆಯಿಂದ ಹಲವಾರು ಮೀಮ್ಸ್‌ ಮತ್ತು ಜೋಕುಗಳು ಕೂಡ ಹುಟ್ಟಿಕೊಂಡಿವೆ. ಚುನಾವಣೆಯಲ್ಲಿ ಸೋತ ಬಳಿಕ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದಲ್ಲಿ ಐಸ್‍ಕ್ರೀಂ ಮಾರುತ್ತಿದ್ದಾರೆ ಎಂದು ಒಬ್ಬ ನೆಟ್ಟಿಗ ಹಾಸ್ಯ ಮಾಡಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರ ರೂಪ ಡೊನಾಲ್ಡ್ ಟ್ರಪ್‍ದು, ಆತ್ಮ ನಸೀಬೋ ಲಾಲ್‍ದು ಎಂದು ಬರೆದಿದ್ದಾರೆ.


  ಈ ವಿಡಿಯೋ ವೈರಲ್ ಆಗಿದ್ದರಿಂದ ಕೇವಲ ಆತ ಜನಪ್ರಿಯನಾಗಿರುವುದು ಮಾತ್ರವಲ್ಲ, ಆತನ ಕಷ್ಟವನ್ನು ಜನ ಅರ್ಥ ಮಾಡಿಕೊಳ್ಳುವಂತಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಆತನ ಸ್ಥಿತಿಗೆ ಮರುಕಪಡುತ್ತಾ, “ತೊನ್ನು ರೋಗದಿಂದ ಬಳಲುತ್ತಿದ್ದರೂ, ಆತ ಈ ಬಿಸಿಲಿನಲ್ಲಿ ಹೇಗೆ ಐಸ್ ಕ್ರೀಂ ಮಾರುತ್ತಿದ್ದಾರೆ- ಅದು ರೋಗಿಯ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತದೆ” ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಲವರು, ಆ ಕುಲ್ಫಿ ಮಾರಾಟಗಾರನನ್ನು ‘ಚಾಚಾ ಬಗ್ಗಾ’ ಎಂದು ಕರೆಯುತ್ತಾರೆ , ಹಾಗೂ ತಾವು ಬಹಳ ವರ್ಷಗಳಿಂದ ಆತನಿಂದ ಐಸ್‍ಕ್ರೀಂ ಖರೀದಿಸಿ ತಿಂದಿದ್ದೇವೆ ಎಂದು ತಿಳಿಸಿದ್ದಾರೆ. ಅವರು ಆ ಐಸ್‍ಕ್ರೀಂ ಮಾರಾಟಗಾರನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

  Published by:Kavya V
  First published: