• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral Video: ಅಪರಿಚಿತರಿಂದ ತಿಂಡಿ ತೆಗೆದುಕೊಳ್ಳಬಾರದು, ತನ್ನ ಮಗುವಿಗೆ ಪಾಠ ಕಲಿಸಿದ ತಾಯಿ ಕೋತಿ: ವಿಡಿಯೋ ವೈರಲ್

Viral Video: ಅಪರಿಚಿತರಿಂದ ತಿಂಡಿ ತೆಗೆದುಕೊಳ್ಳಬಾರದು, ತನ್ನ ಮಗುವಿಗೆ ಪಾಠ ಕಲಿಸಿದ ತಾಯಿ ಕೋತಿ: ವಿಡಿಯೋ ವೈರಲ್

ವೈರಲ್ ಆದ ತಾಯಿ ಮಂಗ ಮತ್ತು ಮಗು

ವೈರಲ್ ಆದ ತಾಯಿ ಮಂಗ ಮತ್ತು ಮಗು

ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಮಂಗ ಮತ್ತು ತನ್ನ ಮಗುವಿನ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ತನ್ನ ಮಗುವಿಗೆ ಅಪರಿಚಿತರಿಂದ ತಿಂಡಿ, ಆಹಾರಗಳನ್ನು ತೆಗೆದುಕೊಳ್ಳದಂತೆ ಹೇಳಿಕೊಂಡುವುದನ್ನು ನೋಡಬಹುದಾಗಿದೆ.

 • Share this:

  ಸೋಶಿಯಲ್​ ಮೀಡಿಯಾದಲ್ಲಿ (Social Media) ನಾವು ಹಲವಾರು ಪ್ರಾಣಿ-ಪಕ್ಷಿಗಳು ಮಾಡುವಂತಹ ತುಂಟಾಟದ ವಿಡಿಯೋಗಳನ್ನು ನೋಡಿರುತ್ತೇವೆ. ಮಂಗನಿಂದ ಮಾನವ ಎಂಬ ಮಾತು ನಾವೆಲ್ಲರೂ ಕೇಳಿರುತ್ತೇವೆ. ಯಾಕೆಂದರೆ ಕೆಲವೊಂದು ಬಾರಿ ಮನುಷ್ಯರಂತೆಯೇ ಮಂಗಗಳು ಸಹ ವರ್ತಿಸುವುದರಿಂದ ಈ ಮಾತು ಹೇಳಿದ್ದಾರೆ ಎನ್ನಬಹುದು. ಈ ಮಾತಿಗೆ ಅನುಗುಣವಾಗಿ ಇಲ್ಲೊಂದು ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​ (Viral Video) ಆಗ್ತಿದೆ. ಸೋಶಿಯಲ್​ ಮೀಡಿಯಾಗಳು ಇತ್ತೀಚೆಗೆ ಯಾವುದೇ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಗೋಚರಿಸುವಂತೆ ಮಾಡುವಂತಹ ಒಂದು ಮಾಧ್ಯಮ ಅಂತಾನೇ ಹೇಳ್ಬಹುದು. ನಾವು ಈ ರೀತಿಯ ವಿಡಿಯೋಗಳನ್ನು ಹಲವಾರು ನೋಡಿರುತ್ತೇವೆ. ಅದೇ ರೀತಿಯಲ್ಲಿ ಈ ವಿಡಿಯೋವನ್ನು ನೋಡುವಾಗ ಅವುಗಳ ಜೊತೆಗೆ ಇನ್ನೊಬ್ಬರಿಗೂ ಪಾಠವನ್ನು ಕಲಿತುಕೊಳ್ಳಬಹುದಾಗಿದೆ.


  ಹೌದು, ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಮಂಗ ಮತ್ತು ತನ್ನ ಮಗುವಿನ ವಿಡಿಯೋ ವೈರಲ್ ಆಗುತ್ತಿದ್ದು, ಇದರಲ್ಲಿ ತನ್ನ ಮಗುವಿಗೆ ಅಪರಿಚಿತರಿಂದ ತಿಂಡಿ, ಆಹಾರಗಳನ್ನು ತೆಗೆದುಕೊಳ್ಳದಂತೆ ಹೇಳಿಕೊಂಡುವುದನ್ನು ನೋಡಬಹುದಾಗಿದೆ.


  ವಿಡಿಯೋದಲ್ಲಿ ಏನಿದೆ?


  ಈ ವೈರಲ್ ಆದ ವಿಡಿಯೋದಲ್ಲಿ ಒಬ್ಬರು ಹಸಿರು ಬಣ್ಣದ ಹಣ್ಣನ್ನು ಹಿಡಿದುಕೊಂಡು ಕೋತಿಮರಿಗೆ ತೋರಿಸುತ್ತಾರೆ. ಆದರೆ ಮರಿಕೋತಿ ತೆಗೆದುಕೊಳ್ಳು ಹೋದಾಗ ಅದರ ತಾಯಿ ಬಂದು ಅದನ್ನು ತಡೆಯುತ್ತದೆ. ನಂತರ ಮತ್ತೆ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ತಾಯಿ ಕೂಡ ಮತ್ತೆ ತಡೆಯುತ್ತದೆ. ನಂತರ ಹೀಗೇ ಪ್ರಯತ್ನಿಸುತ್ತಿರಬೇಕಾದರೆ ಕೋಪಗೊಂಡ ತಾಯಿ ತನ್ನ ಮರಿಯನ್ನು ಹಿಡಿದುಕೊಂಡು ಹೋಗುತ್ತಾಳೆ. ಮತ್ತು ತನ್ನ ಮಗುವಿಗೆ ಹಣ್ಣನ್ನು ನೀಡಬಾರದಾಗಿ ಜೋರಾಗಿ ಗೊಣಗುತ್ತದೆ.
  ಯಾವಾಗದಿಂದ ವೈರಲ್​?


  ಮೊದಲಬಾರಿಗೆ ಈ ವಿಡಿಯೋವನ್ನು ಟ್ವಿಟರ್​​ನಲ್ಲಿ ಜನವರಿ 22 ರಂದು ಶೇರ್​ ಮಾಡಲಾಯಿತು. ಅಂದಿನಿಂದ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ. ಇದು ಕೇವಲ 13 ಸೆಕೆಂಡುಗಳ ವಿಡಿಯೋ ಆಗಿದ್ದು, ಇದರಲ್ಲಿ ತಾಯಿ ಕೋತಿ ಹಣ್ಣನ್ನು ತನ್ನ ಮಗುವಿಗೆ ನೀಡದಂತೆ ಮನುಷ್ಯರಿಗೆ ಗೊಣಗುತ್ತಿರುವ ಮತ್ತು ತನ್ನ ಮಗುವನ್ನು ತಡೆಯುವ ದೃಶ್ಯವನ್ನು ಕಾಣಬಹುದಾಗಿದೆ.


  ಮಂಗ ತನ್ನ ಮಗುವಿಗೆ ಅಪರಿಚಿತರಿಂದ ಹಣ್ಣನ್ನು  ಸ್ವೀಕರಿಸದಂತೆ ಕಲಿಸುತ್ತಿದೆ ಎಂಬ ಟೈಟಲ್​ ಅನ್ನು ನೀಡುವ ಮೂಲಕ ಟ್ವಿಟರ್​ನಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ.


  ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಹಾಗೆಯೇ ಇದಕ್ಕೆ ಸಾಕಷ್ಟು ಕಮೆಂಟ್​ಗಳು, ಲೈಕ್​ಗಳು ಸಹ ಬಂದಿವೆ.
  ನೋಡುಗರ ಪ್ರತಿಕ್ರಿಯೆ ಹೇಗಿತ್ತು?


  ಈ ಮಂಗ ಮತ್ತು ತನ್ನ ಮಗುವಿಗೆ ಅಪರಿಚಿತರಿಂದ ಹಣ್ಣನ್ನು ಸ್ವೀಕರಿಸದಂತೆ ಕಲಿಸುವ ವಿಡಿಯೋವನ್ನು ಟ್ವಿಟರ್​ನಲ್ಲಿ 1.4 ಮಿಲಿಯನ್​ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಹಾಗೂ 7 ಲಕ್ಷದ 26 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.  ಜೊತೆಗೆ ಈ ವಿಡಿಯೋಗೆ ಕೆಲವೊಂದು ತಮಾಷೆಯ ಕಮೆಂಟ್​ಗಳನ್ನೂ ಮಾಡಿದ್ದಾರೆ.


  ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 400 ಸೆಲ್ಫಿಗಳನ್ನ ಕ್ಲಿಕ್ಕಿಸಿಕೊಂಡ ಕರಡಿ! ಹೇಗಿದೆ ನೋಡಿ ಫೋಟೋಸ್​  • ಅದರಲ್ಲಿ ಒಬ್ಬರು, ಮಗುವಿನ ಕುತೂಹಲ, ತಾಯಿಯ ಪ್ರೀತಿ ಮತ್ತು ವ್ಯಕ್ತಿಯ ಕರುಣೆ ಉತ್ತಮವಾಗಿ ಕಾಣುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ.

  • "ಮಂಗ ಮರಿ ಅಪರಿಚಿತರಿಂದ ಆಹಾರವನ್ನು ಸ್ವೀಕರಿಸಲು ನೀವು ಬಯಸದಿದ್ದರೆ ನಿಮ್ಮ ಸ್ವಂತ ಆಹಾರವನ್ನು ಕೊಡಿ" ಎಂದು ಮತ್ತೊಂದು ಕಮೆಂಟ್​ ಮಾಡಿದ್ದಾರೆ.

  • ಇನ್ನೊಬ್ಬರು ‘ಸ್ಟ್ರೇಂಜರ್ ಡೇಂಜರ್‘​ ಎಂದು ಕಮೆಂಟ್​​ನಲ್ಲಿ ಹೇಳಿದ್ದಾರೆ.

  • ಹಾಗೆಯೇ ಇನ್ನೊಬ್ಬರು ‘ಸೋ ಕ್ಯೂಟ್​‘ ಎಂದು ಹೇಳಿದ್ದಾರೆ.

  • ಒಬ್ಬ ವ್ಯಕ್ತಿ "ನಾನು ಇದನ್ನು ನೋಡಿದಾಗ, ನಾವು ಅಪರಿಚಿತರಿಂದ ಆಹಾರವನ್ನು ತೆಗೆದುಕೊಳ್ಳುವಾಗ ನನ್ನ ತಾಯಿ ದ್ವೇಷಿಸುತ್ತಿದ್ದುದನ್ನು ನೆನಪಿಸಿಕೊಂಡೆ" ಎಂದು ಟ್ವೀಟ್ ಮಾಡಿದ್ದಾರೆ.

  Published by:Prajwal B
  First published: