Tokyo Olympics: ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಮೀರಾಬಾಯಿ ಚಾನುಗೆ ಜೀವನಪರ್ಯಂತ ಉಚಿತ ಪಿಜ್ಜಾ! ಸಾಧಕಿಗೆ Domino's ಗಿಫ್ಟ್, ಇದರ ಹಿಂದಿದೆ ರೋಚಕ ಕತೆ!

Domino's Free Pizza: ಪದವಿ ಗೆದ್ದ ಸಾಧಕಿಗೆ ಪಿಜ್ಜಾ ಇಷ್ಟ ಎಂದು ಗೊತ್ತಾಗಿದ್ದೇ ತಡ, ಖ್ಯಾತ ಪಿಜ್ಜಾ ಮಾರಾಟ ಸಂಸ್ಥೆ ಡಾಮಿನೊಸ್ ಚಾನುಗೆ ವಿಶೇಷ ಆಫರ್ ಕೊಟ್ಟಿದೆ. ಮೀರಾಬಾಯಿ ಚಾನು ಜೀವನ ಪರ್ಯಂತ ಡಾಮಿಸೋಸ್​​ನಿಂದ ಎಷ್ಟು ಬೇಕೋ ಅಷ್ಟು ಪಿಜ್ಜಾ, ಯಾವಾಗ ಬೇಕೋ ಆಗ ತಿನ್ನಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Domino's Free Pizza: ಟೋಕ್ಯೋ ಒಲಿಂಪಿಕ್ಸ್​​ನಲ್ಲಿ ಮೊಟ್ಟಮೊದಲ ಪದಕ ಗೆದ್ದ ಭಾರತೀಯ ಕ್ರೀಡಾಪಟು ಮೀರಾಬಾಯಿ ಚಾನುಗೆ ಜೀವನಪರ್ಯಂತ ಉಚಿತ ಪಿಜ್ಜಾ ನೀಡುವುದಾಗಿ ಖ್ಯಾತ ಪಿಜ್ಜಾ ಸಂಸ್ಥೆ ಡಾಮಿನೋಸ್ ಘೋಷಿಸಿದೆ. ಮಹಿಳೆಯರ ವೇಯ್ಟ್​ಲಿಫ್ಟಿಂಗ್​ನಲ್ಲಿ 26 ವರ್ಷದ ಚಾನು ಬೆಳ್ಳಿ ಪದಕ ಗೆದ್ದರು.. ಇದು ಭಾರತ ಸುಮಾರು 2 ದಶಕಗಳಿಗೂ ಹೆಚ್ಚಿನ ಕಾಲದವರಗೆ ಕಾಯುತ್ತಿದ್ದ ಶುಭಘಳಿಗೆ. ಪದಕ ಗೆದ್ದ ನಂತರ ಏನು ಮಾಡುತ್ತೀರಾ ಎಂದು ಸಂದರ್ಶನವೊಂದರಲ್ಲಿ ಕೇಳಿದ್ದಕ್ಕೆ ನಾನು ಪಿಜ್ಜಾ ತಿನ್ನುತ್ತೇನೆ ಎಂದಿದ್ದಾರೆ ಈ ಸಾಧಕಿ. ಬಹಳ ದಿನಗಳಾದವು ಪಿಜ್ಜಾ ತಿಂದು, ನಂಗೆ ಪಿಜ್ಜಾ ಅಂದ್ರೆ ತುಂಬಾ ಇಷ್ಟ..ಇವತ್ತು ತುಂಬಾ ತಿನ್ತೀನಿ ಎಂದಿದ್ದಾರೆ ಅವ್ರು. ಒಲಿಂಪಿಕ್ಸ್​​ನಲ್ಲಿ ಭಾಗವಹಿಸ್ಬೇಕು ಎಂದು ಅನೇಕ ದಿನಗಳವರಗೆ ಕಟ್ಟುನಿಟ್ಟಾದ ಡಯೆಟ್ ಫಾಲೋ ಮಾಡ್ತಿದ್ರಂತೆ. ಹಾಗಾಗಿ ತನ್ನ ನೆಚ್ಚಿನ ಪಿಜ್ಜಾ ತಿನ್ನೋಕೆ ಆಗದೇ ಬಹಳ ಮಿಸ್ ಮಾಡಿಕೊಂಡಿದ್ರಂತೆ. ಮೀರಾಬಾಯಿ ಚಾನು ಹೇಳಿದ ಈ ಮಾತು ಈಗ ಸಖತ್ ಸುದ್ದಿಯಲ್ಲಿದೆ.

ಪದವಿ ಗೆದ್ದ ಸಾಧಕಿಗೆ ಪಿಜ್ಜಾ ಇಷ್ಟ ಎಂದು ಗೊತ್ತಾಗಿದ್ದೇ ತಡ, ಖ್ಯಾತ ಪಿಜ್ಜಾ ಮಾರಾಟ ಸಂಸ್ಥೆ ಡಾಮಿನೊಸ್ ಚಾನುಗೆ ವಿಶೇಷ ಆಫರ್ ಕೊಟ್ಟಿದೆ. ಮೀರಾಬಾಯಿ ಚಾನು ಜೀವನ ಪರ್ಯಂತ ಡಾಮಿಸೋಸ್​​ನಿಂದ ಎಷ್ಟು ಬೇಕೋ ಅಷ್ಟು ಪಿಜ್ಜಾ, ಯಾವಾಗ ಬೇಕೋ ಆಗ ತಿನ್ನಬಹುದಾಗಿದೆ. ಆಕೆಯ ಸಾಧನೆಗೆ ಇದು ನಮ್ಮ ಸಣ್ಣ ಉಡುಗೊರೆ ಅಷ್ಟೇ ಎಂದಿದೆ ಡಾಮಿನೊಸ್ ಆಡಳಿತ ಮಂಡಳಿ.

“ಭಾರತಕ್ಕೆ ಪದಕ ತಂದಿದ್ದಕ್ಕೆ ಅಭಿನಂದನೆಗಳು ! ಬಿಲಿಯನ್​​ಗಟ್ಟಲೆ ಭಾರತೀಯರ ಕನಸನ್ನು ನೀವು ನನಸು ಮಾಡಿದ್ದೀರಾ.. ಹಾಗಾಗಿ ಇಡೀ ಜೀವನಪರ್ಯಂತ ನಾವು ನಿಮಗೆ ಖುಷಿಯಿಂದ ಉಚಿತ ಪಿಜ್ಜಾ ಕೊಡುತ್ತೇವೆ” ಎಂದು ಡಾಮಿನೋಸ್ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದೆ. ಅಷ್ಟೇ ಅಲ್ಲ, ಮಣಿಪುರದ ಇಂಫಾಲದಲ್ಲಿರುವ ಮೀರಾಬಾಯಿ ಚಾನು ಮನೆಗೆ ಭೇಡಿ ನೀಡಿದ ಇಂಫಾಲ ಡಾಮಿನೋಸ್ ತಂಡ ಆಕೆಯ ಪೋಷಕರು ಮತ್ತು ಕುಟುಂಬಸ್ಥರಿಗೆ ಪಿಜ್ಜಾ ನೀಡಿ ಶುಭಾಷಯ ನೀಡಿದೆ. ಜುಲೈ 24ರಂದು, ಅಂದರೆ ನಿನ್ನೆ ಮೀರಾಬಾಯಿ ಚಾನು ಇತಿಹಾಸ ಬರೆದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: